Tag: ಪಬ್ಲಿಕ್ ಟಿವಿ Prashant

  • ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

    ಬಿಗ್‍ಬಾಸ್ ಫಿನಾಲೆಗೆ ಇನ್ನೇನು 2-3 ದಿನವಷ್ಟೇ ಬಾಕಿ ಇದೆ. ಈ ವಾರ ಫಿನಾಲೆ ವೀಕ್ ಆಗಿರುವುದರಿಂದ ಬಿಗ್‍ಬಾಸ್ ಸೀಸನ್-8ರ ಟಾಪ್ 5 ಸ್ಪರ್ಧಿಗಳ ಜರ್ನಿಯನ್ನು ಫೋಟೋ ಫ್ರೇಮ್ ನಿರ್ಮಿಸುವ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಅರವಿಂದ್, ವೈಷ್ಣವಿ, ಮಂಜು ನಂತರ ಇದೀಗ ಪ್ರಶಾಂತ್ ಸಂಬರ್ಗಿ ಫೋಟೋವನ್ನು ಗಾರ್ಡನ್ ಏರಿಯಾದಲ್ಲಿ ವಾಲ್ ಆಫ್ ದಿ ಫ್ರೇಮ್ ಕ್ರಿಯೆಟ್ ಮಾಡಲಾಗಿತ್ತು. ಇದನ್ನು ಕಂಡು ಪ್ರಶಾಂತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿದ ಪ್ರಶಾಂತ್, 115 ದಿನದ ಜರ್ನಿ ಇನ್ನೂ 4 ದಿನದಲ್ಲಿ ಮುಗಿಯುತ್ತದೆ. ಈ ಮನೆಯಲ್ಲಿ ಫ್ರೆಂಡ್ಸ್, ಶತ್ರು ಆದ್ರು ಮತ್ತೆ ಫ್ರೆಂಡ್ಸ್ ಆದ್ರು, ಪ್ರೀತಿ, ಅಣ್ಣ, ತಂಗಿ, ಫ್ರೆಂಡ್ ಎಲ್ಲರೂ ಮನೆಯವರ ರೂಪದಲ್ಲಿ ಸಿಕ್ಕಿದ್ರು. ಮಂಜು ಕಾಮಿಡಿ ಸೆನ್ಸ್ ನನಗೆ ಅರ್ಥ ಆಗಲು ಸಮಯ ಬೇಕಾಯಿತು. ಅವನು ವೈಯಕ್ತಿವಾಗಿ ಯಾವುದೇ ಕೆಟ್ಟವನಲ್ಲ. ಆಟದಲ್ಲಿ ಜಗಳವಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ನಮ್ಮ ಮಧ್ಯೆ ಇಲ್ಲ. ಸದ್ಯ ಈಗ ಮಂಜು ನನಗೆ ಸಹೋದರನಾಗಿದ್ದಾರೆ. ಬಿಗ್‍ಬಾಸ್ ನನ್ನ ಲೈಫ್‍ನಲ್ಲಿ ಒಂದು ಮೈಲಿಗಲ್ಲು. ಬಿಗ್‍ಬಾಸ್ ಜರ್ನಿ ಬಹಳ ಸೂಪರ್, ಧನ್ಯವಾದಗಳು ಬಿಗ್‍ಬಾಸ್ ಎಂದಿದ್ದಾರೆ.

    ಬಳಿಕ ದಿವ್ಯಾ ಉರುಡುಗ, ನನಗೆ ಈ ಮನೆಗೆ ಬಂದ ತಕ್ಷಣ ಪ್ರಶಾಂತ್ ಜೊತೆ ಅಣ್ಣ – ತಂಗಿ ಬಾಂಧವ್ಯ ಬೆಳೆಯಿತು. ಪ್ರಶಾಂತ್ ಅವರಲ್ಲಿ ಒಂದು ರೀತಿಯ ಮಗುವನ್ನು ಕಾಣುತ್ತೇನೆ. ಅವರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ. ಒಂದು ತುಂಬಾ ಮಗ್ಧತನ ಮತ್ತೊಂದು ಕ್ರೂರ ಹುಲಿ. ಅವರು ಖುಷಿಯಾಗಿದ್ದಾಗ ಅವರಂತ ಮನುಷ್ಯ ಇನ್ನೊಬ್ಬರಿಲ್ಲ. ಪ್ರಶಾಂತ್ ನನ್ನ ಜೀವನದ ಅಣ್ಣ. ನಿಮ್ಮ ಲೈಫ್‍ನಲ್ಲಿ ಎಲ್ಲಾ ಒಳ್ಳೆಯದಾಗಲಿ, ಯಾವತ್ತಿಗೂ ನಗುತ್ತೀರಿ ಎಂದಿದ್ದಾರೆ.

    ಪ್ರಶಾಂತ್ ರವರ ಬಗ್ಗೆ ತಿಳಿದುಕೊಳ್ಳಲು ನನಗೆ ಖುಷಿಯಾಗಿದೆ. ಟಿವಿಯಲ್ಲಿ ನೋಡುವುದಕ್ಕೂ, ನಿಜವಾಗಿಯೂ ನೋಡಲು ಪ್ರಶಾಂತ್‍ರವರು ತುಂಬಾ ಡಿಫರೆಂಟ್ ಆಗಿದ್ದಾರೆ. ನೀವು ಫಿನಾಲೆ ತನಕ ಬರಲು ನಿಮ್ಮಲ್ಲಿರುವ ಸಾಮಥ್ರ್ಯ ಕಾರಣ. ಒಂದು ಟಾಸ್ಕ್ ವೇಳೆ ನಾನು ಕೈ ಎತ್ತಿದ್ದು, ನನಗೆ ಈಗಲೂ ಬೇಸರವಾಗುತ್ತದೆ. ಇಂದಿಗೂ ನಾನು ಆ ಬಗ್ಗೆ ಪಶ್ಚಾತಾಪ ಪಡುತ್ತೇನೆ, ಕ್ಷಮಿಸಿ. ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮಗೆ ಒಳ್ಳೆಯದಾಗಲಿ ಎಂದು ವೈಷ್ಣವಿ ಹೇಳಿದ್ದಾರೆ.

    ಬಳಿಕ ಮಂಜು, ಬಿಗ್‍ಬಾಸ್ ಮನೆಯಲ್ಲಿ ನನ್ನ ಹಾಗೂ ಪ್ರಶಾಂತ್‍ರವರದ್ದು ಹಾವು, ಮುಂಗುಸಿ ಸಂಬಂಧ. ಆದರೆ ಬಿಗ್‍ಬಾಸ್ ಮನೆಯಲ್ಲಿ ಪ್ರಶಾಂತ್ ಇಲ್ಲದಿದ್ದರೆ ಈ ಜರ್ನಿ ಬಹಳ ಬೋರಿಂಗ್ ಆಗಿರುತ್ತಿತ್ತು. ಸರಸ, ವಿರಸ ಎಲ್ಲಾ ಇದ್ದರೆನೇ ಮನೆ ಅನಿಸಿಕೊಳ್ಳುವುದು. ಜಗಳ ಆಡಿದರೂ ಅದನ್ನು ತಿದ್ದುಕೊಂಡು ಹೋಗುತ್ತಿದ್ದೇವೆ. ಒಳ್ಳೆಯದಾಗಲಿ ಎಂದಿದ್ದಾರೆ.

    ಇನ್ನೂ ಅರವಿಂದ್, ಪ್ರಶಾಂತ್ ಈ ಜರ್ನಿಯಲ್ಲಿ ಇರಲಿಲ್ಲ ಅಂದರೆ ಒಗ್ಗರಣೆಯಲ್ಲಿ ಮೆಣಸಿನ ಕಾಯಿ ಕಡಿಮೆಯಾದಂತೆ, ಯಾವಗಲೂ ಚಟ-ಪಟ ಅಂತ ಅಂದರೆನೇ ಅದು ಒಗ್ಗರಣೆಯಾಗುತ್ತದೆ. ನಿಮ್ಮಿಂದ ಏನು ಮಾಡಬೇಕು ಏನು ಮಾಡಬಾರದು ಎರಡನ್ನು ಕೂಡ ತಿಳಿದುಕೊಂಡಿದ್ದೇನೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಧನ್ಯವಾದ. ಮುಂದೆ ಕೂಡ ನಾವು ಹೀಗೆ ಫ್ರೆಂಡ್ಸ್ ಆಗಿ ಮುಂದುವರಿಯುತ್ತೇವೆ ಅಂದುಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

  • ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್

    ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್

    ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ವೈಷ್ಣವಿಯವರ ವಿಚಾರವಾಗಿ ದೊಡ್ಮನೆಯಲ್ಲಿ ಜಗಳವಾಡಿದ್ದಾರೆ.

    ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ವೈಷ್ಣವಿ ಖಡಕ್ ಆಗಿ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಚಕ್ರವರ್ತಿ, ಇಂತಹ ಹೊಲಸು ಕೆಲಸ ಮಾಡಬೇಡ. ನಾನು ಕೇಳಬೇಡ ಅಂದ್ರೂ ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ, ನಾಮಕರಮ್ ಎಂದೆಲ್ಲಾ ಪ್ರಶಾಂತ್‍ರವರಿಗೆ ಚಕ್ರವರ್ತಿ ಸಿಕ್ಕಾಪಟ್ಟೆ ಎಲ್ಲರ ಮುಂದೆ ಬೈದಿದ್ದಾರೆ.

    ಈ ಮಧ್ಯೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಸುರೇಶ್, ಪ್ರಿಯಾಂಕ, ರಘು ಕುಳಿತುಕೊಂಡಿರುತ್ತಾರೆ. ಈ ವೇಳೆ ಇವರಿಬ್ಬರ ಜಗಳ ನೋಡುತ್ತಾ ದಿವ್ಯಾ ಸುರೇಶ್, ಇಲ್ಲಿ ಇಬ್ಬರು ಕುಳಿತುಕೊಂಡು ಹೇಗೆ ಎಂದು ಲೆಕ್ಕಾಚಾರ ಹಾಕಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಾರೆ. ನಂತರ ಎಲ್ಲಾ ಒಂದೇ ಬಾರಿಗೆ ಈ ತರಹ ಬ್ಲಾಸ್ಟ್ ಆಗುತ್ತದೆ ಆಗ ಜಗಳವಾಡುತ್ತಾರೆ. ಬಳಿಕ ಎಲ್ಲಾ ಕಾವು ಕಡಿಮೆಯಾದ ಮೇಲೆ ಮತ್ತೆ ಇದೇ ಸೋಫಾ ಮೇಲೆ ಬಂದು ಕುಳಿತುಕೊಳ್ಳುತ್ತಾರೆ. ಹಾಗೇ ಮಾಡೋಣ, ಹೀಗೆ ಮಾಡೋಣ ಎಂದು ಮಾತನಾಡುತ್ತಾರೆ. ಮತ್ತೆ ಸಂಜೆ ಇನ್ನೊಂದು ಯಾವುದಾದರೂ ವಿಚಾರಕ್ಕೆ ಜಗಳ ಆಡುತ್ತಾರೆ. ಜನರಲ್ ಆಗಿ ಹೇಳುತ್ತೇನೆ, ಚಕ್ರವರ್ತಿಯವರು ಸುಳ್ಳು ಹೇಳಿದರೂ ಸತ್ಯ ತಲೆಯ ಮೇಲೆ ಹೊಡೆದಂತೆ ಹೇಳುತ್ತಾರೆ. ನಾನು ಹೇಳುತ್ತಿರುವುದೇ ಸರಿ ಎಂದು ವಾದಿಸುತ್ತಾರೆ ಎಂದು ದಿವ್ಯಾ ಸುರೇಶ್ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

  • ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ದೊಡ್ಮನೆ ಕುಚುಕು ಗೆಳೆಯರ ಮಧ್ಯೆ ಬಿಗ್ ಫೈಟ್

    ಬಿಗ್‍ಬಾಸ್ ಮನೆಯಲ್ಲಿ ಕುಚುಕ ಗೆಳೆಯರು ಅಂದರೆ ಅದು ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್. ದೊಡ್ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟಿಗೆ ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವ ಇವರಿಬ್ಬರ ಮಧ್ಯೆ ಟಾಸ್ಕ್ ವೇಳೆ ಜೋರಾದ ವಾಗ್ವಾದ ನಡೆದಿದೆ.

    ಹೌದು, ಬಿಗ್‍ಬಾಸ್ ಮನೆಯಲ್ಲಿ ಮೈಂಡ್ ಗೇಮ್ ಆಡುತ್ತಿರುವ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಇಬ್ಬರು ಸದಾ ಮನೆಯ ಎಲ್ಲಾ ಸ್ಪರ್ಧಿಗಳ ಕಮೆಂಟ್ ಪಾಸ್ ಮಾಡುತ್ತಾ, ಚುರುಕಾಗಿ ಆಟ ಆಡುತ್ತಿದ್ದಾರೆ. ಇಷ್ಟು ದಿನ ಮನೆಯ ಸ್ಪರ್ಧಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದ ಈ ಜೋಡಿ, ಇದಿಗ ನೀನಾ – ನಾನಾ ಎಂದು ಜಗಳಕ್ಕೆ ನಿಂತಿದ್ದಾರೆ.

    ಎರಡು ತಂಡಗಳು ತಲಾ ಮೂರು ಸ್ಟಾರ್ ಪಡೆದ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‍ಗಾಗಿ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದರು. ಡ್ರಮ್‍ನಲ್ಲಿ ತುಂಬಿಸಿದ್ದ ನೀರನ್ನು ಮಗ್‍ನಲ್ಲಿ ತುಂಬಿಸಿಕೊಂಡು ಹೋಗಿ ಕೊನೆಯಲ್ಲಿ ಇರಿಸಲಾಗಿರುವ ಜಾರ್‍ಗೆ ತುಂಬಿಸಬೇಕು ಎಂದು ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದರು. ಈ ವೇಳೆ ಶಮಂತ್ ಆಟ ಆಡುವಾಗ ಫೌಲ್ ಆಗುತ್ತಾರೆ. ಇದರಿಂದ ಕೋಪಗೊಂಡ ಚಕ್ರವರ್ತಿ ಚಂದ್ರಚೂಡ್, ಶಮಂತ್ ಫಾಲ್ ಮಾಡಬೇಡ್ವೋ, ಫೌಲ್ ಮಾಡ್ಬೇಡಿ ಎಂದು ಕಿರುಚಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಪ್ರಶಾಂತ್ ಸಂಬರಗಿ ಬಜರ್ ಆದ ನಂತರ ಯಾಕೆ ಬೈಯ್ಯಬೇಕು ಎಂದು ಕಿಡಿಕಾರಿದ್ದಾರೆ.

    ಈ ನಡುವೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ಬಿಡಿಸಿ ಸಮಾಧಾನಗೊಳಿಸಲು ಮಧ್ಯೆ ಬಂದ ಅರವಿಂದ್‍ಗೆ ಕೇರ್ ಮಾಡದೇ ಚಕ್ರವರ್ತಿ ಚಂದ್ರಚೂಡ್ ಜಗಳ ಮುಂದುವರೆಸಿದ್ದಾರೆ. ಗೇಮ್ ಮುಗಿದ ನಂತರ ನನಗೆ ಬಂದು ಹೇಳಿದ್ದು ಇಷ್ಟ ಆಗಲಿಲ್ಲ ಎಂದು ಶಮಂತ್ ಹೇಳಿದ್ದಾರೆ.

    ನಂತರ ಗುರುವಾರ ಬಿಗ್‍ಬಾಸ್ ನೀಡಿದ್ದ ನೆನಪಿರಲಿ ಟಾಸ್ಕ್ ವೇಳೆ ನೀವು ಮಾಡಿದ ಯಡವಟ್ಟಿನಿಂದ ನಾವು ಸೋತ್ತಿದ್ವಿ. ಆದರೆ ಯಾರು ಕೂಡ ಏನು ಮಾತನಾಡಲಿಲ್ಲ ಎಂದು ದಿವ್ಯಾ ಉರುಡುಗ ಹರಿಹಾಯ್ದಿದ್ದಾರೆ. ಈ ವೇಳೆ ಬಜರ್ ಆದ ನಂತರ ನಾನು ಸರಿಯಾಗಿ ಆಡಿದ್ದೇನೆ ಎಂದು ತೋರಿಸಿಕೊಳ್ಳುವುದು ಎಂದು ಪ್ರಶಾಂತ್ ಸಂಬರಗಿ ಚಕ್ರವರ್ತಿ ಚಂದ್ರಚೂಡ್‍ಗೆ ಅಣುಕಿಸಿದ್ದಾರೆ.

    ಇದಕ್ಕೆ ರೊಚ್ಚಿಗೆದ್ದ ಚಕ್ರವರ್ತಿಯವರು ಬಜರ್ ಆದ ಮೆಲೆ ಅವನಿಗೆ ಹೇಳುತ್ತೇನೆ. ಏನು ಮಾಡುತ್ತಿಯಾ ತಿರುಗೇಟು ನೀಡಿದ್ದಾರೆ. ನಂತರ ಚಕ್ರವರ್ತಿಯವರನ್ನು ಸಮಾಧಾನಗೊಳಿಸಲು ಹೆಗಲ ಮೇಲೆ ಕೈ ಹಾಕಲು ಬಂದ ಪ್ರಶಾಂತ್ ಸಂಬರಗಿಯನ್ನು ಜೋರಾಗಿ ತಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಡಿಯುಗೆ ಅರೆ..ಅರೆ.. ಮುದ್ದು ಗಿಳಿ ಎಂದ ಅರವಿಂದ್