Tag: ಪಬ್ಲಿಕ್ ಟಿವಿ Person

  • ಕುಡಿದ ಅಮಲಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಡ್ಯಾನ್ಸ್

    ಕುಡಿದ ಅಮಲಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಮೇಲೆ ವ್ಯಕ್ತಿ ಡ್ಯಾನ್ಸ್

    ಲಕ್ನೋ: ಕೋವಿಡ್-19 ಭೀತಿಯಿಂದ ಈ ಬಾರಿ ದೇಶಾದ್ಯಂತ ಹೋಳಿ ಹಬ್ಬವನ್ನು ಅಷ್ಟಾಗಿ ಜನರು ಆಚರಿಸಲಾಗಲಿಲ್ಲ. ಆದರೆ ಉತ್ತರ ಪ್ರದೇಶದ ಪ್ರತಾಪ್‍ಗಢದಲ್ಲಿ ಹೋಳಿಹಬ್ಬದಂದು ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ 50 ಅಡಿ ಎತ್ತರದ ವಾಟರ್ ಟ್ಯಾಂಕ್ ಏರಿ ಡ್ಯಾನ್ಸ್ ಮಾಡಿದ್ದಾನೆ.

    ಸೋಮವಾರ ಮಧ್ಯಾಹ್ನ ವ್ಯಕ್ತಿಯೋರ್ವ ಮದ್ಯ ಸೇವಿಸಿ, ನಡೆಯಲು ಸಾಧ್ಯವಾಗದಿದ್ದರೂ ಸಹ ಮೆಟ್ಟಿಲುಗಳನ್ನು ಹತ್ತಿ ವಾಟರ್ ಟ್ಯಾಂಕ್ ಮೇಲಕ್ಕೆ ತಲುಪಿದ್ದಾನೆ.

    ಬಳಿಕ ತನ್ನ ಮೊಬೈಲ್‍ನಲ್ಲಿ ಹಾಡನ್ನು ಪ್ಲೇ ಮಾಡಿ ಕೊಂಚವೂ ಭಯವಿಲ್ಲದೇ ನೃತ್ಯ ಮಾಡಲು ಆರಂಭಿಸಿದ್ದಾನೆ. ಇದನ್ನು ಕಂಡು ಭಯಗೊಂಡ ದಾರಿ ಹೋಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ತಮ್ಮ ಮೊಬೈಲ್‍ನಲ್ಲಿ ವೀಡಿಯೋವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ನಂತರ ಪೊಲೀಸರು ಕೂಡಲೇ ಸ್ಥಳಕ್ಕೆ ತಲುಪಿ ಹಲವಾರು ಹರಸಾಹಸ ಪಟ್ಟು ವ್ಯಕ್ತಿಯನ್ನು ರಕ್ಷಿಸಿದರು. ಅದೃಷ್ಟವಶತ್ ಜರುಗಬೇಕಿದ್ದ ಅನಾಹುತವನ್ನು ತಪ್ಪಿಸಿದರು.

  • ಫ್ಲೈಯಿಂಗ್ ವಡಾಪಾವ್ ನೋಡಿ ನೆಟ್ಟಿಗರು ಫಿದಾ – ವೀಡಿಯೋ ವೈರಲ್

    ಫ್ಲೈಯಿಂಗ್ ವಡಾಪಾವ್ ನೋಡಿ ನೆಟ್ಟಿಗರು ಫಿದಾ – ವೀಡಿಯೋ ವೈರಲ್

    ಮುಂಬೈ: ಇತ್ತೀಚೆಗೆ ಬೀದಿ ಬದಿಯಲ್ಲಿ ದೋಸೆಯನ್ನು ಮೇಲಕ್ಕೆ ಹಾರಿಸಿ ತಯಾರಿಸಿದ ವೀಡಿಯೋವನ್ನು ಎಲ್ಲರು ನೋಡಿರಬಹುದು. ಆದರೆ ಮುಂಬೈನ ಬೋರಾ ಸ್ಟ್ರೀಟ್‍ನಲ್ಲಿ ವ್ಯಕ್ತಿಯೋರ್ವ ವಡಾಪಾವ್‍ನನ್ನು ಮೇಲಕ್ಕೆ ಗಾಳಿಯಲ್ಲಿ ಹಾರಿಸಿ ತಯಾರಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಕಾಣಿಸುವ ರಸ್ತೆ ಬದಿಯ ಈ ಅಂಗಡಿ ಸುಮಾರು 60 ವರ್ಷ ಹಳೆಯದಾಗಿದ್ದು, ದೋಸೆಯನ್ನು ಮಾರುವ ರಘು ಎಂಬವರು ವಡಾಪಾವ್‍ನನ್ನು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ ದೋಸೆ ಜೊತೆ ಇಡ್ಲಿ, ವಡೆ, ಚೀಸ್ ಮತ್ತು ಮಸಾಲ ವಡಾಪಾವ್ ಸೇರಿದಂತೆ ಇತರ ತಿಂಡಿಗಳನ್ನು ಕೂಡ ತಯಾರಿಸುತ್ತಾರೆ.

    ಈ ವೀಡಿಯೋವನ್ನು ಆಮ್ಚಿ ಮುಂಬೈ ಎಂಬ ಆಹಾರ ವ್ಲಾಗ್ಗರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸುಮಾರು 2 ಲಕ್ಷ ವಿವ್ಸ್ ಪಡೆದುಕೊಂಡಿದೆ.

    ವೀಡಿಯೋದಲ್ಲಿ ವ್ಯಕ್ತಿ ಮಸಾಲ ವಡಾಪಾವ್ ಮಾಡುತ್ತಿದ್ದು, ಪ್ಯಾನ್‍ಗೆ ಬೆಣ್ಣೆ ಸವರಿ, ಪಾವ್‍ನನ್ನು ಮಸಾಲ ಜೊತೆ ಪ್ರೈ ಮಾಡುತ್ತಾರೆ. ಬಳಿಕ ಕೆಲವೇ ಸೆಕೆಂಡುಗಳಲ್ಲಿ ಒಂದು ಕೈನಲ್ಲಿ ಉದ್ದದ ಹಳ್ಳೆ ಹಿಡಿದು ಗಾಳಿಯಲ್ಲಿ ವಡೆಯನ್ನು ಹಾರಿಸಿ ಮತ್ತೊಂದು ಕೈನಲ್ಲಿ ಹಿಡಿಯುತ್ತಾನೆ.

    ರಘು ತಯಾರಿಸುವ ಚೀಸ್ ವಡಾಪಾವ್ ಹಾಗೂ ಮಸಾಲ ವಡಾಪಾವ್ ಒಂದರ ಬೆಲೆ 40 ರೂ ಆಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೋಡಲು ವೀಡಿಯೋ ಹಾಸ್ಯಮಯವಾಗಿ ಕಂಡರೂ ವಡಾಪಾವ್ ಸಖತ್ ಟೆಸ್ಟಿಯಾಗಿದೆ ಎಂದು ಕರೆಯಲಾಗಿದೆ.

  • ಯಾರೂ ನನ್ನನ್ನು ಒಪ್ಪುತ್ತಿಲ್ಲ – ಹುಡುಗಿ ಹುಡುಕಿ ಕೊಡುವಂತೆ ಠಾಣೆ ಮೆಟ್ಟಿಲೇರಿದ ವರ

    ಯಾರೂ ನನ್ನನ್ನು ಒಪ್ಪುತ್ತಿಲ್ಲ – ಹುಡುಗಿ ಹುಡುಕಿ ಕೊಡುವಂತೆ ಠಾಣೆ ಮೆಟ್ಟಿಲೇರಿದ ವರ

    ಲಕ್ನೋ: ಮದುವೆ ಸಂಬಂಧ ಬ್ರೋಕರ್​ಗಳನ್ನು ವಧು/ವರರು ಭೇಟಿಯಾಗುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಹುಡುಗಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ.

    ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 26 ವರ್ಷದ ಅಜೀಮ್ ಮನ್ಸೂರಿ ಮದುವೆಯಾಗಲು ಹುಡುಗಿ ಹುಡುಕಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರು ಮಂದಿ ಒಡಹುಟ್ಟಿದವರಲ್ಲಿ ನಾನು ಮೂರನೇಯವನಾಗಿದ್ದು, ಹುಡುಗಿ ಯಾವುದೇ ಜಾತಿ, ಮತ, ಬಣ್ಣ ಅಥವಾ ಧರ್ಮದವಳಾಗಿದ್ದಳು ಪರವಾಗಿಲ್ಲ. ಓದಿರುವ ಹುಡುಗಿ ಬೇಕು ಎಂಬ ಬೇಡಿಕೆಯನ್ನು ಪೊಲೀಸರ ಮುಂದಿಟ್ಟಿದ್ದಾರೆ.

    ಅಜೀಮ್ ಈ ಬೇಡಿಕೆ ಇಡಲು ಕಾರಣವಿದೆ. 3 ಅಡಿ 2 ಇಂಚು ಎತ್ತರ ಹೊಂದಿರುವ ವ್ಯಕ್ತಿಗೆ ತನ್ನ ದೇಹವೇ ಸಮಸ್ಯೆಯಾಗಿದೆ. ಕುಳ್ಳನಾಗಿರುವ ಕಾರಣ ಯಾರೂ ಇತನನ್ನು ಒಪ್ಪುತ್ತಿಲ್ಲ. ನನ್ನ ಕನಸು ಕನಸಾಗಿಯೇ ಉಳಿಯಬಹುದು ಎಂದು ಪೊಲೀಸರನ್ನು ಭೇಟಿಯಾಗಿ ಹುಡುಗಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

    ಅಜೀಮ್ ಮನ್ಸೂರಿ ಬೇಡಿಕೆಗೆ ಸ್ಪಂದಿಸಿದ ಪೊಲೀಸರು ಹೇಗಾದರೂ ಮದುವೆ ಮಾಡಿಸುವುದಾಗಿ ಇದೀಗ ಭರವಸೆ ನೀಡಿದ್ದಾರೆ. ಮನ್ಸೂರಿ ಕೈರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಲ್ಲಾ ಟ್ವಿನ್ ವಾಲ್ ನಿವಾಸಿಯಾಗಿದ್ದು, ಈವರೆಗೂ ಡಿಸಿಎಂ, ಎಸ್‍ಡಿಎಂ, ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ರಂತಹ ಅನೇಕ ಹಿರಿಯ ಅಧಿಕಾರಿಗಳಿಗೆ ಈ ವಿಚಾರವಾಗಿ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಇಲ್ಲಿಯವರೆಗೂ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಕೊನೆಗೆ ಪೊಲೀಸರ ಮೊರೆಹೋಗಿರುವುದಾಗಿ ಹೇಳಿದ್ದಾರೆ.

  • ಎಮ್ಮೆಯನ್ನು ಹೆಗೆಲ ಮೇಲೆ ಎತ್ತಿಕೊಂಡ ವ್ಯಕ್ತಿ- ಆಧುನಿಕ ಭೀಮನ ಹೆಸರಿನಲ್ಲಿ 63 ಗಿನ್ನಿಸ್ ರೆಕಾರ್ಡ್

    ಎಮ್ಮೆಯನ್ನು ಹೆಗೆಲ ಮೇಲೆ ಎತ್ತಿಕೊಂಡ ವ್ಯಕ್ತಿ- ಆಧುನಿಕ ಭೀಮನ ಹೆಸರಿನಲ್ಲಿ 63 ಗಿನ್ನಿಸ್ ರೆಕಾರ್ಡ್

    ಸಾಮಾನ್ಯವಾಗಿ ಮನುಷ್ಯರು ಎಮ್ಮೆ ಮೇಲೆ ಕುಳಿತಿರುವುದನ್ನು ನಾವು ನೋಡಿದ್ದೇವೆ. ಆದರೆ ವ್ಯಕ್ತಿಯೋರ್ವ ತನ್ನ ಎರಡು ಕೈಗಳಿಂದ ಎಮ್ಮೆಯನ್ನು ಮಗುವಿನಂತೆ ಸುಲಭವಾಗಿ ಎತ್ತಿ ತನ್ನ ಭುಜದ ಮೇಲೆ ಇರಿಸಿಕೊಂಡಿರುವ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಮಂದಿ ನಿಬ್ಬೆರಗಾಗುತ್ತಿದ್ದಾರೆ.

    ವೀಡಿಯೋದಲ್ಲಿರುವ ವ್ಯಕ್ತಿಯನ್ನು ಡಿಮಿಟ್ರೋ ಖಲಾಡ್ಜಿ(41) ಎಂದು ಗುರುತಿಸಲಾಗಿದ್ದು, ಈತ ಉಕ್ರೇನ್ ನಿವಾಸಿಯಾಗಿದ್ದಾರೆ. ಅದ್ಬುತ ಶಕ್ತಿ ಹೊಂದಿರುವ ಈತ ಎಮ್ಮೆಯನ್ನು ಸಲೀಸಾಗಿ ತನ್ನ ಭುಜದ ಮೇಲೆ ಮಗುವಿನಂತೆ ಎತ್ತಿಕೊಳ್ಳುತ್ತಾರೆ. ಅಲ್ಲದೆ ಕುದುರೆ, ಒಂಟೆ ಇತರ ತೂಕವಿರುವ ಪ್ರಾಣಿಗಳನ್ನು ಸಹ ತನ್ನ ಹೆಗಲ ಮೇಲೆ ಹೊತ್ತಿಕೊಳ್ಳುತ್ತಾರೆ.

    ಪ್ರಾಣಿಗಳನಷ್ಟೇ ಅಲ್ಲದೆ ಡಿಮಿಟ್ರೋ ಖಲಾಡ್ಜಿ ಒಂದೇ ಬಾರಿ 6 ಮಂದಿಯನ್ನು ಎತ್ತುತ್ತಾರೆ. ಸದ್ಯ ಈತನ ಶಕ್ತಿ ನೋಡಿದವರೆಲ್ಲಾ ಆಶ್ಚರ್ಯಗೊಂಡು ಭೀಮ ಎಂದು ಕರೆಯಲಾರಂಭಿಸಿದ್ದಾರೆ. ಡಿಮಿಟ್ರೋ ಖಲಾಡ್ಜಿ ಸರ್ಕಸ್‍ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಒಂದೇ ಕೈನಲ್ಲಿ 150 ಕೆಜಿ ತೂಕವನ್ನು ಎತ್ತುವಷ್ಟು ಬಲಶಾಲಿಯಾಗಿದ್ದಾರೆ. ಅಲ್ಲದೆ ಈತನ ಇನ್‍ಸ್ಟಾಗ್ರಾಮ್ ಖಾತೆಯ ಪೂರ್ತಿ ಇಂತಹ ಅನೇಕ ವೀಡಿಯೋಗಳಿದ್ದು, 63 ಗಿನ್ನಿಸ್ ದಾಖಲೆ ಮಾಡಿದ್ದಾರೆ.

    ಡಿಮಿಟ್ರೋ ಖಲಾಡ್ಜಿ ಒಬ್ಬ ಪ್ರತಿಭಾನ್ವಿತ ವ್ಯಕ್ತಿಯಾಗಿದ್ದು, 2009ರಲ್ಲಿ ಉಕ್ರೇನ್ ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಿ ಫೈನಲ್‍ವರೆಗೂ ತಲುಪಿದ್ದರು. ಬಳಿಕ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರಾಕರಿಸಿದರು. ಜೊತೆಗೆ ಡಿಮಿಟ್ರೋ ಖಲಾಡ್ಜಿ ಹಲವು ಕ್ರೀಡಾಪಟುಗಳ ಕಥೆಗಳನ್ನು ಬರೆದಿದ್ದಾರೆ ಹಾಗೂ 2010 ರಲ್ಲಿ ರಷ್ಯಾದ ಗೋಲ್ಡನ್ ಪೆನ್ ಎಂಬ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೆ 2013ರಲ್ಲಿ ಇವಾನ್ ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • 32 ವರ್ಷದಿಂದ ತಿನ್ನುತ್ತಿದ್ದಾನೆ ಕಲ್ಲು – 78ರ ವೃದ್ಧನ ಫೋಟೋ ವೈರಲ್

    32 ವರ್ಷದಿಂದ ತಿನ್ನುತ್ತಿದ್ದಾನೆ ಕಲ್ಲು – 78ರ ವೃದ್ಧನ ಫೋಟೋ ವೈರಲ್

    ಮುಂಬೈ: ಜನರು ಸಾಮಾನ್ಯವಾಗಿ ಭೂಮಿಯ ಮೇಲೆ ಏನೇನೋ ತಿಂದು ಬದುಕುವುದನ್ನು ನೋಡಿದ್ದೇವೆ. ಆದರೆ ಮಹಾರಾಷ್ಟ್ರದಲ್ಲಿ ವ್ಯಕ್ತಿಯೋರ್ವ 32 ವರ್ಷಗಳಿಂದ ಕಲ್ಲು ತಿಂದು ಜೀವಿಸುತ್ತಿದ್ದಾನೆ.

    ಹೌದು. ಮಹಾರಾಷ್ಟ್ರದ ಸತ್ರಾ ಜಿಲ್ಲೆಯ ಅಡಾರ್ಕಿ ಖುರ್ದಾ ಗ್ರಾಮದ ನಿವಾಸಿ ರಾಮ್‍ದಾಸ್ ಬೊಡ್ಕ್(78) ಆಹಾರದ ಬದಲಿಗೆ ಪ್ರತಿ ದಿನ 250 ಗ್ರಾಂ ಕಲ್ಲನ್ನು ಆಹಾರವಾಗಿ ತಿಂದು ಜೀವನ ನಡೆಸುತ್ತಿದ್ದಾನೆ.

    ಹಲವು ವರ್ಷಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಾಮ್‍ದಾಸ್ ಸಾಕಷ್ಟು ಬಾರಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗದಿದ್ದಾಗ ಹಳ್ಳಿಯ ಹಿರಿಯ ಮಹಿಳೆಯೊಬ್ಬರು ಕಲ್ಲು ತಿನ್ನುವಂತೆ ಸಲಹೆ ನೀಡಿದ್ದರು. ಮಹಿಳೆ ಹೇಳಿದ್ದನ್ನು ಆಲಿಸಿ ರಾಮ್‍ದಾಸ್ ಕಲ್ಲು ಸೇವಿಸಲು ಆರಂಭಿಸಿದ್ದಾನೆ.

    ಇತ್ತೀಚಿಗೆ ರಾಮ್‍ದಾಸ್ ಕಲ್ಲು ತಿನ್ನುವ ಫೋಟೋ ವೈರಲ್ ಆಗಿದ್ದು, ಎಲ್ಲಾ ಕಡೆ ಬಾರಿ ಸದ್ದು ಮಾಡುತ್ತಿದೆ. ಅಲ್ಲದೆ ಈತನ ಮನೆಯವರು ಕಲ್ಲು ಸೇವಿಸುವುದನ್ನು ನಿರಾಕರಿಸಿದ್ದರಿಂದ ಅವರಿಗೆ ತಿಳಿಯದಂತೆ ಕಲ್ಲುಗಳನ್ನು ತಿನ್ನುತ್ತಾನೆ. ರಾಮ್‍ದಾಸ್ ಕಲ್ಲು ಸೇವಿಸುವ ಅಭ್ಯಾಸವನ್ನು ವೈದ್ಯರು ಮಾನಸಿಕ ರೋಗ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.