Tag: ಪಬ್ಲಿಕ್ ಟಿವಿ Parrot

  • ಮೊಬೈಲ್ ಫೋನ್ ಕದ್ದು ಟ್ರಿಪ್ ಹೊಡೆದ ಗಿಳಿ

    ಮೊಬೈಲ್ ಫೋನ್ ಕದ್ದು ಟ್ರಿಪ್ ಹೊಡೆದ ಗಿಳಿ

    ಗಿಳಿಯೊಂದು ವ್ಯಕ್ತಿಯ ಬಳಿ ಇದ್ದ ಮೊಬೈಲ್ ಫೋನ್ ಕದ್ದು ಆಕಾಶದಲ್ಲಿ ಹಾರಾಡಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಗಿಳಿಯೊಂದು ವ್ಯಕ್ತಿಯೊಬ್ಬರ ಮೊಬೈಲ್ ಫೋನ್‍ನನ್ನು ಕದ್ದು, ವೇಗವಾಗಿ ಹಾರಾಡಿದೆ. ಈ ವೇಳೆ ಮೊಬೈಲ್ ಫೋನ್ ಕ್ಯಾಮೆರಾ ಆನ್ ಆಗಿದ್ದು, ಗಿಳಿ ಹಾರಾಡುವಾಗ ರಸ್ತೆ, ಮನೆಗಳು ಮತ್ತು ಮೇಲ್ಛಾವಣಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಒಂದು ನಿಮಿಷಗಳ ಕಾಲ ಹಾರಾಡಿದ ಗಿಳಿ ಕೊನೆಗೆ ಬಾಲ್ಕನಿಯ ಅಂಚಿನ ಮೇಲೆ ನಿಂತು ಕೊಳ್ಳುತ್ತದೆ. ಆಗ ಜನರು ಗಿಳಿಯನ್ನು ಓಡಿಸಲು ಪ್ರಯತ್ನಿಸಿದ್ದು, ಭಯದಿಂದ ಗಿಳಿ ಮೊಬೈಲ್‍ನನ್ನು ಅಲ್ಲಿಯೇ ಬಿಟ್ಟು ಹೋಗುತ್ತದೆ. ಇದನ್ನೂ ಓದಿ:ಖ್ಯಾತ ತಬಲ ವಾದ್ಯಕಾರ ಪಂಡಿತ್ ಸುಭಂಕರ್ ಬ್ಯಾನರ್ಜಿ ಕೊರೊನಾಗೆ ಬಲಿ

    ಈ ವೀಡಿಯೋವನ್ನು ಫ್ರೆಡ್ ಎಂಬವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದು, ಗಿಳಿ ಮೊಬೈಲ್ ಹಿಡಿದು ಅದ್ಭುತವಾಗಿ ಟ್ರಿಪ್ ಹೊಡೆದಿದೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಈ ವರೆಗೂ 973 ಸಾವಿರ ಮಂದಿ ವೀಕ್ಷಿಸಿದ್ದು, 7000 ರೀ ಟ್ವೀಟ್‍ಗಳು ಬಂದಿದೆ. ಕೆಲವರು ವೀಡಿಯೋ ನೋಡಿ ಇದೊಂದು ಪರಿಸರ ಸ್ನೇಹಿ ಡ್ರೋನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದ ಅಮ್ಮ – ರಕ್ಷಣೆಗೆ ಮುಂದಾದ ಮಗನೂ ಸಾವು

     

  • ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ಮಾಲೀಕ ಹೇಳಿದ ಕೆಲಸವನ್ನು ಸಾಮಾನ್ಯವಾಗಿ ಗಿಳಿಗಳು ಮಾಡುತ್ತವೆ. ಆದರೆ ಗಿಳಿಯೊಂದು ತನ್ನ ಮಾಲೀಕ ನುಡಿಸುತ್ತಿದ್ದ ಗಿಟಾರ್ ವಾದ್ಯಕ್ಕೆ ಹಾಡನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ‘ಫ್ಲಾಪ್ ಇರಾ ಆರೆಂಜ್ ಕೋಟ್ ಗಾಯ್’ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮಾಲೀಕ ಫ್ರಾಂಕ್ ಗಿಟಾರ್ ನುಡಿಸುವ ಅಭ್ಯಾಸ ಹೊಂದಿದ್ದು, ಅವರು ಗಿಟಾರ್ ನುಡಿಸುವಾಗಲೆಲ್ಲ ಗಿಳಿ ಮೆಲೋಡಿಯಾಗಿ ಹಾಡು ಹೇಳುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್‍ಗೆ ಮಾಡಿದ್ದೇನು ಗೊತ್ತಾ?

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 35 ಲಕ್ಷ ವೀವ್ಸ್ ಆಗಿದ್ದು, 70 ಸಾವಿರ ರೀ ಟ್ವೀಟ್ ಮತ್ತು 262 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಈ ವೀಡಿಯೋ ನೋಡಿ ಅನೇಕ ಮಂದಿ ಇದು ಅದ್ಭುತ ಗಿಳಿ ಇಲ್ಲಿಯವರೆಗೂ ಇಂತಹ ಗಿಳಿಯನ್ನು ನಾನು ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಗಿಳಿಗಾಗಿ ಮಾಲೀಕನ ಪರಾದಾಟ – ಹುಡುಕಿಕೊಟ್ಟರೆ 10 ಸಾವಿರ ಬಹುಮಾನ

    ಲಕ್ನೋ: ಸಾಮಾನ್ಯವಾಗಿ ಮನುಷ್ಯರು ಪ್ರಾಣಿಗಳನ್ನು ಹೆಚ್ಚಾಗಿ ಹಚ್ಚಿಕೊಂಡಿರುವುದನ್ನು ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೋರ್ವ ಕಳೆದು ಹೋಗಿರುವ ಗಿಳಿಯನ್ನು ಹುಡುಕಿಕೊಂಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಗಿಳಿಯನ್ನು ಹುಡುಕಿಕೊಟ್ಟವರಿಗೆ 10,000 ರೂ. ಹಣವನ್ನು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

    ಹೌದ ಸಾಕಿದ್ದ ಗಿಳಿಯೊಂದು ಕಾಣೆಯಾಗಿದ್ದು, ಇದೀಗ ಅಲಿಗಢ ಜಿಲ್ಲೆಯಲ್ಲಿ ಗಿಳಿಯ ವಿಚಾರ ಭಾರೀ ಚರ್ಚೆಯಾಗುತ್ತಿದೆ. ವಿಶೇಷವೆಂದರೆ ಈ ಗಿಳಿ ವಿದೇಶಿ ತಳಿಯದ್ದಾಗಿದೆ. ನಗರದ ಕ್ವಾರ್ಸಿ ಪೊಲೀಸ್ ಠಾಣಾ ಪ್ರದೇಶದಿಂದ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದೆ.

    ಗಿಳಿಯ ಮಾಲೀಕ ಎಸ್.ಸಿ.ವಷ್ರ್ನಿ ಎಂದು ಗುರುತಿಸಲಾಗಿದ್ದು, ಇವರು ದೀಂದಯಾಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗದು ಬಹುಮಾನ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಲ್ಲದೇ, ಗಿಳಿ ಹುಡುಕಲು ಸಹಾಯ ಮಾಡುವಂತೆ ಕರಪತ್ರಗಳನ್ನು ಮುದ್ರಿಸಿ ಸುತ್ತಮುತ್ತಲಿನವರಿಗೆ ಹಂಚಿದ್ದಾರೆ. ಅಲ್ಲದೆ ಗಿಳಿ ಹುಡುಕಲು ಸಹಾಯ ಮಾಡಿದವರಿಗೆ 10,000ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.