Tag: ಪಬ್ಲಿಕ್ ಟಿವಿ Pakistan

  • ಪಾಕಿಸ್ತಾನಕ್ಕೆ 4.5 ಕೋಟಿ ಲಸಿಕೆ ರವಾನಿಸಲಿದೆ ಭಾರತ

    ಪಾಕಿಸ್ತಾನಕ್ಕೆ 4.5 ಕೋಟಿ ಲಸಿಕೆ ರವಾನಿಸಲಿದೆ ಭಾರತ

    ನವದೆಹಲಿ: ಭಾರತ ದೇಶವು ಪಾಕಿಸ್ತಾನಕ್ಕೆ 4.5 ಕೋಟಿ ಕೋವಿಡ್-19 ಲಸಿಕೆಯನ್ನು ರವಾನಿಸಲಿದೆ.

    ಬಡ ದೇಶಗಳಿಗೆ ಆದ್ಯತೆಯ ಮೇಲೆ ಲಸಿಕೆ ಪೂರೈಸಲು ಜಾಗತಿಕ ಮಟ್ಟದಲ್ಲಿ ರಚಿಸಲಾಗಿರುವ ‘ಗವಿ’ (ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸಿನೇಷನ್)ಯೋಜನೆಯಡಿ ಭಾರತ ಲಸಿಕೆ ಪೂರೈಸಲಿದ್ದು, ಪುಣೆಯ ಸೀರಂ ಇನ್‍ಸ್ಟಿಟ್ಯೂಟ್ ಉತ್ಪಾದಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಪಾಕಿಸ್ತಾನಕ್ಕೆ ರವಾನಿಸಲಿದೆ.

    ಜನವರಿ ಮದ್ಯದಲ್ಲಿ ಕೊರೊನಾ ವಿರುದ್ಧ ಲಸಿಕೆ ವಿತರಿಸುತ್ತಿರುವ ವಿಶ್ವದ ಅತಿದೊಡ್ಡ ದೇಶಗಳಲ್ಲಿ ಭಾರತ ಕೂಡ ಒಂದಾಗಿದ್ದು, ಈಗಾಗಲೇ ಭಾರತ ನರೆಹೊರೆಯ ಹಾಗೂ ಮಿತ್ರ ದೇಶಗಳಿಗೆ ಲಸಿಕೆಯನ್ನು ವಿತರಿಸಿದೆ. ಇದೀಗ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೂ ಲಸಿಕೆ ನೀಡುವ ಮೂಲಕ ನೆರವು ನೀಡಲಿದೆ.

    ಕೊರೊನಾ ಲಸಿಕೆಗಾಗಿ ಪಾಕಿಸ್ತಾನ ಸರ್ಕಾರ ಸಂಪೂರ್ಣವಾಗಿ ಚೀನಾವನ್ನೇ ಅವಲಂಬಿಸಿತ್ತು. ಆದರೆ ಇದೀಗ ಪಾಕಿಸ್ತಾನದ ನಾಗರಿಕರು ಭಾರತದ ಲಸಿಕೆ ಮೇಲೆ ಹೆಚ್ಚು ವಿಶ್ವಾಸ ಹೊಂದಿರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹೀಗಾಗಿ ಉಭಯ ದೇಶಗಳು ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡದಂತೆ ಮಾಡಿಕೊಂಡಿದ್ದ ಹಳೆಯ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ಧಾರಿಸಿದ್ದರಿಂದ ಈ ವಿಚಾರ ಬೆಳಕಿಗೆ ಬಂದಿದೆ.

    ಈ ಮುನ್ನ ಲೋಕಸಭೆಯಲ್ಲಿ ಭಾರತಕ್ಕೆ ಈವರೆಗೂ ಕೋವಿಡ್-19 ಲಸಿಕೆ ಪೂರೈಸುವಂತೆ 22 ದೇಶಗಳು ಮನವಿ ಸಲ್ಲಿಸಿತ್ತು. ಈಗಾಗಲೇ 15 ದೇಶಗಳಿಗೆ ಒಪ್ಪಂದದ ಆಧಾರದ ಮೇಲೆ ಲಸಿಕೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದರು.

  • ರಿಕ್ಷಾ ಸವಾರಿ ಮಾಡಿದ್ರಾ ಪಾಕ್ ಪ್ರಧಾನಿ..?- ವೈರಲಾದ ವೀಡಿಯೋ ನೋಡಿ

    ರಿಕ್ಷಾ ಸವಾರಿ ಮಾಡಿದ್ರಾ ಪಾಕ್ ಪ್ರಧಾನಿ..?- ವೈರಲಾದ ವೀಡಿಯೋ ನೋಡಿ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕುರಿತಾದ ಸುದ್ದಿಯೊಂದು ಇದೀಗ ಸೋಶಿಯಲ್ ಮೀಡಿಯಾನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಹೌದು. ವ್ಯಕ್ತಿಯೊಬ್ಬ ಆಟೋರಿಕ್ಷಾ ಸವಾರಿಯನ್ನು ಆನಂದಿಸುತ್ತಾ ಹೋಗುತ್ತಿರುವ ವೀಡಿಯೋವೊಂದು ಕೆಲವು ಗಂಟೆಗಳಿಂದ ಸೋಶಿಯಲ್ ಮೀಡಿಯಾನಲ್ಲಿ ವೈರಲ್ ಆಗಿದ್ದು, ಆತ ಈ ವೀಡಿಯೋ ಮೂಲಕ ಈಗ ಬಾರಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದಾನೆ.

    ಈ ವಿಡಿಯೋದಲ್ಲಿರುವ ವ್ಯಕ್ತಿ ನೋಡುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯುವಕರಾಗಿದ್ದಾಗ ಹೇಗಿದ್ದರೂ ಅದೇ ಹೋಲಿಕೆಯನ್ನು ಈತ ಹೊಂದಿದ್ದಾನೆ ಎಂದು ಹಲವು ಅಭಿಮಾನಿಗಳು ಮತ್ತು ಪಾಕ್ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಸೆಲೆಬ್ರಿಟಿ ಹೋಲಿಕೆ ಹೊಂದಿರುವಂತಹ ಹಲವು ಮಂದಿಗಳನ್ನು ಗಮನಿಸಿರಬಹುದು. ಈ ಹಿಂದೆ ಫೇಮಸ್ ನೀಲಿ ಕಣ್ಣಿನ ಚೈವಾಲಾ ಹೋಲಿಕೆ ಹೊಂದುವ ಮತ್ತೊಬ್ಬ ವ್ಯಕ್ತಿ ಕಂಡು ಬಂದಿದ್ದ, ಅದರಂತೆ ಒಬ್ಬರ ಹೋಲಿಕೆಯನ್ನು ಹೊಂದುವಂತೆ ಮತ್ತೊಬ್ಬರು ಇರುವುದು ಹೊಸ ವಿಚಾರವೇನಲ್ಲ ಎಂದು ಸೋಶಿಯಲ್ ಮೀಡಿಯಾ ವರದಿಯಲ್ಲಿ ತಿಳಿಸಲಾಗಿದೆ.

    ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋ ಇಮ್ರಾನ್ ಖಾನ್ ಯುವಕರಾಗಿದ್ದಾಗ ಕ್ರಿಕೆಟ್ ಆಟದ ದಿನಗಳನ್ನು ನೆನಪಿಸುತ್ತಿದೆ.
    ಇಮ್ರಾನ್ ಖಾನ್ 2018ರ ಆಗಸ್ಟ್ 17 ರಂದು 176 ಮತಗಳನ್ನು ಗಳಿಸಿ, 2018ರ ಆಗಸ್ಟ್ 18ರಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಪಾಕಿಸ್ತಾನದ 22ನೇ ಪ್ರಧಾನ ಮಂತ್ರಿಯಾದರು.