Tag: ಪಬ್ಲಿಕ್ ಟಿವಿ Padmashree

  • ಪದ್ಮಶ್ರೀ, ಮಾಜಿ ಐಎಂಎ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಕೊರೊನಾಗೆ ಬಲಿ

    ಪದ್ಮಶ್ರೀ, ಮಾಜಿ ಐಎಂಎ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಕೊರೊನಾಗೆ ಬಲಿ

    ನವದೆಹಲಿ: ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೊರೊನಾಗೆ ಬಲಿಯಾಗಿದ್ದಾರೆ.

    ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಏಮ್ಸ್)ನಲ್ಲಿ ಸೋಮವಾರ ರಾತ್ರಿ 11.30ಕ್ಕೆ ಡಾ.ಕೆ.ಕೆ ಅಗರ್ವಾಲ್ ಕೊನೆಯುಸಿರೆಳೆದಿದ್ದಾರೆ.

    ಡಾ.ಕೆ.ಕೆ ಅಗರ್ವಾಲ್‍ರವರು(62) ಕಳೆದ ಕೆಲವು ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸೋಮವಾರ ರಾತ್ರಿ ನಿಧನರಾಗಿದ್ದಾರೆ.

    ಡಾ.ಕೆ.ಕೆ ಅಗರ್ವಾಲ್‍ರವರು ವೈದ್ಯರಾಗಿದ್ದಾಗಿನಿಂದಲೂ ತಮ್ಮ ಜೀವನವನ್ನು ಸಾರ್ವಜನಿಕರ ಹಿತಕ್ಕಾಗಿ ಮೀಸಲಿಟ್ಟಿದ್ದರು ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಕೂಡ ಜನ ಸಾಮಾನ್ಯರಿಗೆ ಶಿಕ್ಷಣ ನೀಡುವ ನಿರಂತರ ಪ್ರಯತ್ನಗಳನ್ನು ಮಾಡಿದರು ಮತ್ತು ಹಲವಾರು ವೀಡಿಯೋ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ 100 ಮಿಲಿಯನ್ ಜನರನ್ನು ತಲುಪುವ ಮೂಲಕ ಸಂದೇಶವನ್ನು ಸಾರಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.