Tag: ಪಬ್ಲಿಕ್ ಟಿವಿ Onions

  • ಈರುಳ್ಳಿ ದರ ದಿಢೀರ್ ಕುಸಿತ- ರೈತನಿಂದ ಪ್ರಧಾನಿ ಮೋದಿಗೆ ಟ್ವೀಟ್

    ಈರುಳ್ಳಿ ದರ ದಿಢೀರ್ ಕುಸಿತ- ರೈತನಿಂದ ಪ್ರಧಾನಿ ಮೋದಿಗೆ ಟ್ವೀಟ್

    ಬಾಗಲಕೋಟೆ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ದಿಢೀರ್ ಕುಸಿತವಾಗಿರುವ ವಿಚಾರವಾಗಿ ಬೆನಕಟ್ಟೆ ಗ್ರಾಮದ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಟ್ವೀಟ್ ಮಾಡಿದ್ದಾರೆ.

    ನಾವು ಕನ್ನಡಿಗರು ಎಂಬ ಟ್ವಿಟ್ಟರ್ ಖಾತೆಯಿಂದ ಪ್ರಶಾಂತ್ ಎಂಬವರು ಈ ಟ್ವೀಟ್ ಮಾಡಿದ್ದು, ಇದನ್ನು ಪಿಎಂಒ ಇಂಡಿಯಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದಾರೆ.

    https://twitter.com/Prashanth_83/status/1065429669887889410

    ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ದರ ದಿಢೀರ್ ಕುಸಿತ ಕಂಡಿದೆ. ಇದರಿಂದ ಬೇಸತ್ತ ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಪ್ರಶಾಂತ್, `ಈರುಳ್ಳಿ ಬೆಳೆ ಬಿತ್ತನೆ, ಸಾರಿಗೆ.. ಹೀಗೆ ಬೆಳೆ ಬೆಳೆಯಲು ಖರ್ಚಾದ ಹಣದ ಬಗ್ಗೆ ವಿವರವಾಗಿ ಬರೆದ ಪತ್ರವೊಂದನ್ನು ಟ್ವೀಟ್ ಮಾಡಿದ್ದಾರೆ.

    ಈರುಳ್ಳಿ ಬೆಲೆ ಕುಸಿತ ಕಂಡ ಪರಿಣಾಮ ರೈತರು ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಇದರಿಂದ ರೈತರನ್ನು ಉಳಿಸಿ, ಈರುಳ್ಳಿ ಬೆಲೆ ಕುಸಿತದ ಬಗ್ಗೆ ಗಮನಹರಿಸಿ ಎಂದು ತಮ್ಮ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv