Tag: ಪಬ್ಲಿಕ್ ಟಿವಿ Old man

  • ಲಸಿಕಾ ಕೇಂದ್ರಕ್ಕೆ ವೃದ್ಧನನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ – ಕೇಂದ್ರ ಸಚಿವರಿಂದ ಮೆಚ್ಚುಗೆ

    ಲಸಿಕಾ ಕೇಂದ್ರಕ್ಕೆ ವೃದ್ಧನನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ – ಕೇಂದ್ರ ಸಚಿವರಿಂದ ಮೆಚ್ಚುಗೆ

    ಶ್ರೀನಗರ: 72 ವರ್ಷದ ವೃದ್ಧನನ್ನು ಹೆಗಲ ಮೇಲೆ ಹೊತ್ತುಕೊಂಡು ಲಸಿಕಾ ಕೇಂದ್ರಕ್ಕೆ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸಾಗಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ವ್ಯಾಕ್ಸಿನ್ ಪಡೆಯಲು ಗುಡ್ಡಗಾಡು ಪ್ರದೇಶವನ್ನು ಹತ್ತಲು ಸಾಧ್ಯವಾಗದ ಅಬ್ದುಲ್ ಗನಿ ಎಂಬ ವೃದ್ಧನನ್ನು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಗೆ ಪೊಲೀಸ್ ಸಿಬ್ಬಂದಿ ಮೋಹನ್ ಸಿಂಗ್ ತಮ್ಮ ಹೆಗಲ ಮೆಲೆ ಹೊತ್ತುಕೊಂಡು ಹೋಗಿದ್ದಾರೆ.

    ಸದ್ಯ ಈ ವೀಡಿಯೋವನ್ನು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಲಸಿಕಾ ಕೇಂದ್ರಕ್ಕೆ 72 ವರ್ಷದ ಅಬ್ದುಲ್ ಗನಿಯವರು ಹೆಗಲ ಮೇಲೆ ಹೊತ್ತುಕೊಂಡು ಮೋಹನ್ ಸಿಂಗ್ ಪೊಲೀಸ್ ಸಿಬ್ಬಂದಿ ಹೋಗುತ್ತಿರುವುದನ್ನು ನೋಡಿದರೆ ಹೆಮ್ಮೆಯಾಗುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಪೊಲೀಸ್ ಸಿಬ್ಬಂದಿ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ವೀಡಿಯೋಗೆ ಇದುವರೆಗೂ 60ಕ್ಕೂ ಹೆಚ್ಚು ರೀ ಟ್ವೀಟ್, 420 ಲೈಕ್ಸ್ ಹಾಗೂ 6,600ಕ್ಕೂ ಹೆಚ್ಚು ವ್ಯೂವ್ಸ್ ಬಂದಿದೆ. ಇದನ್ನೂ ಓದಿ:ಗ್ರಾಹಕರನ್ನು ಸೆಳೆಯಲು ಸಂಜೀವಿನಿ ಆಫರ್ – ಮಾಲ್‍ನ ನಯಾ ಐಡಿಯಾ

  • ಇಳಿವಯಸ್ಸಿನ ದಂಪತಿಯ ಎನರ್ಜಿಟಿಕ್ ಡ್ಯಾನ್ಸ್ – ವೀಡಿಯೋ ವೈರಲ್

    ಇಳಿವಯಸ್ಸಿನ ದಂಪತಿಯ ಎನರ್ಜಿಟಿಕ್ ಡ್ಯಾನ್ಸ್ – ವೀಡಿಯೋ ವೈರಲ್

    ಯಸ್ಸಾದ ವಿದೇಶಿ ದಂಪತಿ ಸಖತ್ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ವೃದ್ಧ ಹಾಗೂ ವೃದ್ಧೆ ರಸ್ತೆ ಬದಿ ಒಟ್ಟಿಗೆ ನೃತ್ಯ ಮಾಡಿದ್ದಾರೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂಬುವುದಕ್ಕೆ ಈ ದಂಪತಿ ಉದಾಹರಣೆಯಾಗಿದ್ದಾರೆ. ಈ ಜೋಡಿ ಹಿಟ್ ಸಾಂಗ್ ಬಿಟ್‍ಗಳಿಗೆ ತಕ್ಕಂತೆ ಕೂಲ್ ಆಗಿ ನೃತ್ಯಮಾಡುತ್ತಾ ಆನಂದಿಸಿದ್ದಾರೆ.

    ಈ ವೀಡಿಯೋವನ್ನು ಫ್ರೆಡ್ ಷುಲ್ಟ್ಜ್ ಎಂಬಾತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿಕೊಂಡಿದ್ದು, ಅವರು ಇನ್ನೂ ಎನರ್ಜಿ ಹೊಂದಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.

    ವೀಡಿಯೋ ಎಲ್ಲಿಯದು ಎಂಬುವುದರ ಬಗ್ಗೆ ಮಾಹಿತಿಯಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಮತ್ತು ಎಲ್ಲರ ಪ್ರೀತಿ ಗಳಿಸುತ್ತಿದೆ. ಅಲ್ಲದೆ 4000ಕ್ಕೂ ಅಧಿಕ ರೀ ಟ್ವೀಟ್ ಬಂದಿದ್ದು, 600ಕ್ಕೂ ಹೆಚ್ಚು ವ್ಯೂವ್ಸ್ ಪಡೆದುಕೊಂಡಿದೆ.

  • ಕೊರೊನಾ ಗೆದ್ದ 103ರ ವೃದ್ಧ

    ಕೊರೊನಾ ಗೆದ್ದ 103ರ ವೃದ್ಧ

    ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಮೂಲದ 103 ವರ್ಷದ ವೃದ್ಧನೋರ್ವ ಇಳಿವಯಸ್ಸಿನಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ವೀರೇಂದ್ರ ನಗರ ಪ್ರದೇಶದ ನಿವಾಸಿಯಾಗಿರುವ ಶಮರಾವ್ ಇಂಗ್ಲೆ ಕೊರೊನಾ ಸೋಂಕಿಗೆ ಒಳಗಾಗಿ ಪಾಲ್ಘರ್ ಗ್ರಾಮೀಣ ಆಸ್ಪತ್ರೆಗೆ ಕೋವಿಡ್-19 ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಕೊರೊನಾದಿಂದ ಚೇತರಿಸಿಕೊಂಡು ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

    ಈ ಬಗ್ಗೆ ಆಸ್ಪತ್ರೆಯ ವೈದ್ಯರು, ಹಿರಿಯರಾದರೂ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ ಮತ್ತು ಸಿಬ್ಬಂದಿಯೊಂದಿಗೆ ಸಹಕರಿಸಿದರು. ಶನಿವಾರ ಅವರು ಆಸ್ಪತ್ರೆಯಿಂದ ಹೊರಹೋಗುವಾಗ ನಗುಮುಖದಿಂದ ತೆರಳಿದರು ಎಂದು ಹೇಳಿದ್ದಾರೆ.

    ಶಮರಾವ್ ಇಂಗ್ಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವೇಳೆ ಪಾಲ್ಘರ್ ಜಿಲ್ಲಾಧಿಕಾರಿ ಡಾ. ಮಣಿಕ್ ಗುರ್ಸಾಲ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಹೂವುಗಳನ್ನು ಹಾಕುವ ಮೂಲಕ ಬೀಳ್ಕೊಟ್ಟಿದ್ದಾರೆ.

  • ಜಾಗರಣೆ ಮಾಡಲು ಹೋದ ವೃದ್ಧ ಆನೆ ದಾಳಿಗೆ ಬಲಿ

    ಜಾಗರಣೆ ಮಾಡಲು ಹೋದ ವೃದ್ಧ ಆನೆ ದಾಳಿಗೆ ಬಲಿ

    ಮಂಡ್ಯ: ಶಿವರಾತ್ರಿ ಹಬ್ಬದ ಹಿನ್ನೆಲೆ ಬಸವೇಶ್ವರ ದೇವಸ್ಥಾನಕ್ಕೆ ಜಾಗರಣೆ ಮಾಡಲು ಹೋಗುತ್ತಿದ್ದ ವೇಳೆ ಕಾಡನೆಯೊಂದು ದಾಳಿ ನಡೆಸಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸೊಲಬದೊಡ್ಡಿ ಗ್ರಾಮದ ಬಳಿ ಜರುಗಿದೆ.

    ಸೊಲಬದೊಡ್ಡಿ ಗ್ರಾಮದ ಮುನಿನಂಜಯ್ಯ(63) ಎಂಬವರು ನಿನ್ನೆ ಶಿವರಾತ್ರಿ ಹಬ್ಬದ ಹಿನ್ನೆಲೆ ಜಾಗರಣೆ ಮಾಡಲೆಂದು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಮನೆಯಿಂದ ತೆರಳಿದ್ದಾರೆ. ಈ ವೇಳೆ ಮಾರ್ಗ ಮಧ್ಯ ಕಾಡಾನೆಯೊಂದು ದಾಳಿ ನಡೆಸಿದೆ. ಈ ವೇಳೆ ಮುನಿನಂಜಯ್ಯ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಓಡಲು ಸಾಧ್ಯವಾಗದ ಕಾರಣ ಆನೆಯ ದಾಳಿಗೆ ತುತ್ತಾಗಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಈ ಭಾಗದಲ್ಲಿ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಪದೇ ಪದೇ ಆನೆಗಳು ದಾಳಿ ನಡೆಸುವುದು ಸಾಮಾನ್ಯ. ಕಾಡಿನಲ್ಲಿ ಆಹಾರ ಹಾಗೂ ನೀರು ಸಿಗದ ಕಾರಣ ಕಾಡಂಚಿನ ಹಳ್ಳಿಗಳಿಗೆ ಆಹಾರ ಹಾಗೂ ನೀರನ್ನು ಹುಡುಕೊಂಡು ಬರುತ್ತವೆ. ಈ ವೇಳೆ ಬೆಳೆ ನಾಶದ ಜೊತೆಗೆ ಜನರ ಮೇಲು ಆನೆಗಳು ದಾಳಿ ನಡೆಸಿತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಇದೀಗ ಜನರು ಆಗ್ರಹಿಸಿದ್ದಾರೆ.