Tag: ಪಬ್ಲಿಕ್ ಟಿವಿ Odisha

  • ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    ಗೆಳತಿ ಶವವನ್ನು ನಡು ರಸ್ತೆಯಲ್ಲಿ ಎಸೆದ ಪ್ರಿಯಕರ

    – ಸೆಕ್ಸ್ ವೇಳೆ ಸಾವನ್ನಪ್ಪಿದಳಾ ಯುವತಿ?
    – ಹೋಟೆಲ್ ರೂಂ ಬುಕ್ ಮಾಡಿದ್ದ ಇನಿಯ

    ಭುವನೇಶ್ವರ: ಯುವತಿಯೊಬ್ಬಳ ಶವವನ್ನು ಆಕೆಯ ಪ್ರಿಯಕರ ರಸ್ತೆಬದಿಯಲ್ಲಿ ಎಸೆದು ಹೋಗಿರುವ ಘಟನೆ ಒಡಿಶಾದ ಜಾಬ್‍ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರ ಮತ್ತು ಆತನ ಗೆಳೆಯನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವತಿ ಮಯೂರ್‍ಬಂಜ್ ಜಿಲ್ಲೆಯ ನಿವಾಸಿಯಾಗಿದ್ದು, ಜರಾಫುಲಾ ಎಂದು ಗುರುತಿಸಲಾಗಿದೆ. ಅಲ್ಲದೆ ಜರಾಫುಲಾ ಆರ್‍ಡಿ ಮಹಿಳಾ ಯೂನಿವರ್ಸಿಟಿ ವಿದ್ಯಾರ್ಥಿಯಾಗಿದ್ದಾಳೆ.

    ತನಿಖೆ ವೇಳೆ ಜರಾಫುಲಾ ಹಾಗೂ ಪ್ರಿಯಕರ ರಾಕೇಶ್ ಭುವನೇಶ್ವರ್ ಮೂಲದ ಹೋಟೆಲ್‍ವೊಂದರ ರೂಮ್ ನಂ-201ರಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ಕುರಿತಂತೆ ಹೋಟೆಲ್ ಸಿಸಿಟಿವಿ ಕ್ಯಾಮೆರಾ ಫೋಟೇಜ್ ಮತ್ತು ನೋಂದಣಿ ಪುಸ್ತಕದ ವಿವರಗಳನ್ನು ಪೊಲೀಸರು ಇದೀಗ ವಶಪಡಿಸಿಕೊಂಡಿದ್ದಾರೆ.

    ಈ ಕುರಿತಂತೆ ಆರೋಪಿ ರಾಕೇಶ್ ವಿಚಾರಣೆ ವೇಳೆ ಇಬ್ಬರು ಹೋಟೆಲ್‍ನಲ್ಲಿ ದೈಹಿಕ ಸಂಪರ್ಕ ನಡೆಸಿದ್ದೇವು. ಆದರೆ ಮುಂಜಾನೆ ಹೊತ್ತಿಗೆ ಜರಾಫುಲಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಇದನ್ನು ಕಂಡು ಗಾಬರಿಯಿಂದ ನನ್ನ ಸ್ನೇಹಿತ ಶೇಖರ್‍ಗೆ ಕರೆ ಮಾಡಿ ವಿಷಯ ತಿಳಿಸಿದೆ. ಕೂಡಲೇ ಸ್ಥಳಕ್ಕೆ ಬಂದ ಶೇಖರ್ ಜೊತೆ ಜರಾಫುಲಾ ಶವವನ್ನು ಸ್ಕೂಟರ್‍ನಲ್ಲಿ ಕೂರಿಸಿಕೊಂಡು ರಸ್ತೆ ಮಧ್ಯೆ ಎಸೆದು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ.

    ಯುವತಿ ತಂದೆ ರಮಾಕಾಂತ್, ಜನವರಿ 24ರಂದು ಜರಾಫುಲಾ, ಚಕ್ರಧರ್ ಎಂಬ ಟೀಚರ್ ಮಗಳ ಬರ್ತ್‍ಡೇ ಸಮಾರಂಭಕ್ಕೆ ಹೋಗುವುದಾಗಿ ಮನೆಗೆ ತಿಳಿಸಿದ್ದಳು, ಜನವರಿ 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಜನವರಿಗೆ 26 ರಂದು ಬೆಳಗ್ಗೆ 11 ಗಂಟೆಗೆ ಚಕ್ರಧರ್ ಜರಾಫುಲಾಳನ್ನು ಊರಿಗೆ ಮರಳಲು ಜಯದೇವ್ ವಿವಾರ್ ಸ್ಕ್ವೇರ್‍ಗೆ ಡ್ರಾಪ್ ಮಾಡಿದ್ದರು. ಆದರೆ ಹೊಟ್ಟೆನೋವಿದೆ ಆಸ್ಪತ್ರೆಗೆ ಹೋಗಿ, ಫ್ರೆಂಡ್ಸ್ ಮನೆಯಲ್ಲಿ ತಂಗಿದ್ದು ನಾಳೆ ಬರುವುದಾಗಿ ಮಧ್ಯಾಹ್ನ 3 ಗಂಟೆಗೆ ಕರೆ ಮಾಡಿ ತಿಳಿಸದ್ದ ಜಲಾಫುಲಾಗೆ ರಾತ್ರಿ ಎಷ್ಟೇ ಕರೆ ಮಾಡಿದರು ಸ್ವೀಕರಿಸಲಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೆ ಊರಿನಲ್ಲಿ ಪೈಪ್‍ಲೈನ್ ಕೆಲಸ ಮಾಡುತ್ತಿದ್ದ ರಾಕೇಶ್‍ನನ್ನು ಜರಾಫುಲಾ ಪ್ರೀತಿಸುತ್ತಿದ್ದಳು. ಇಬ್ಬರು ವಾಟ್ಸಪ್ ಹಾಗೂ ವೀಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು. ಜೊತೆಗೆ ಜಲಾಫುಲಾ ಹೆಚ್ಚಾಗಿ ರಾಕೇಶ್‍ನೊಂದಿಗೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದಳು. ಜರಾಫುಲಾಳನ್ನು ಆತನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

    ಇದೀಗ ಪ್ರಕರಣ ಕುರಿತಂತೆ ಪೊಲೀಸರು ರಾಕೇಶ್‍ನನ್ನು ಬಂಧಿಸಿದ್ದು, ಆತನ ಸ್ನೇಹಿತ ಶೇಖರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಸಾವಿನ ವಿಚಾರವಾಗಿ ಪೊಲೀಸರಿಗೆ ಯಾವುದೇ ನಿಖರವಾದ ಮಾಹಿತಿ ದೊರೆತಿಲ್ಲ.

  • ಮಗಳನ್ನು ಕೊಲ್ಲಲು 50 ಸಾವಿರ ಸುಪಾರಿ ಕೊಟ್ಟ ತಾಯಿ..!

    ಮಗಳನ್ನು ಕೊಲ್ಲಲು 50 ಸಾವಿರ ಸುಪಾರಿ ಕೊಟ್ಟ ತಾಯಿ..!

    ಭುವನೇಶ್ವರ: ಮಹಿಳೆಯೊಬ್ಬಳು ಕಾಂಟ್ರೆಕ್ಟ್ ಕಿಲ್ಲರ್ಸ್ ಗೆ ಐವತ್ತು ಸಾವಿರ ಸುಪಾರಿ ನೀಡಿ ಮಗಳನ್ನೇ ಕೊಲ್ಲಿಸಿರುವ ವಿಚಿತ್ರ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದಿದೆ.

    ಸ್ವತಃ ಮಗಳನ್ನು ಕೊಲ್ಲಲು 58 ವರ್ಷದ ಸುಕಿರಿ ಗಿರಿ, ಪ್ರಮೋದ್ ಜೀನಾ(32) ಸೇರಿದಂತೆ ಮತ್ತಿಬ್ಬರಿಗೆ 50,000 ರೂ. ಸುಪಾರಿ ನೀಡಿದ್ದಾಳೆ. ಇದೀಗ ಸುಕುರಿ ಗಿರಿ, ಆರೋಪಿ ಪ್ರಮೋದ್ ಜೀನಾ ಸೇರಿದಂತೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ಪೊಲೀಸರು ತನಿಖೆ ನಡೆಸಿದಾಗ ಸುಕಿರಿ ಗಿರಿ ಅವರ ಮಗಳು ಶಿಬಾನಿ ನಾಯಕ್(36), ಅಕ್ರಮವಾಗಿ ಮದ್ಯ ವ್ಯಾಪಾರ ನಡೆಸುತ್ತಿದ್ದ ಕಾರಣ ಅವರ ಸಂಬಂಧದ ಮಧ್ಯೆ ಬಿರುಕು ಮೂಡಿದೆ.

    ಅಕ್ರಮ ಮದ್ಯ ವ್ಯಾಪಾರ ಮಾಡದಂತೆ ಬಹಳಷ್ಟು ಬಾರಿ ಸುಕಿರಿ ತನ್ನ ಮಗಳಿಗೆ ತಿಳಿಸಿದ್ದಾಳೆ. ಆದರೆ ತಾಯಿಯ ಮಾತನ್ನು ಶಿಬಾನಿ ಕೇಳುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ಸುಕುರಿ, ಪ್ರಮೋದ್ ಜಿನಾನನ್ನು ಭೇಟಿ ಮಾಡಿ ಮಗಳನ್ನು ಕೊಲ್ಲಲು 50000 ರೂ. ಸುಪಾರಿ ನೀಡುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಪ್ರವಾಶ್ ಪಲ್ ಹೇಳಿದ್ದಾರೆ. ಜೊತೆಗೆ ಕಾಂಟ್ರೆಕ್ಟರ್ ಕಿಲ್ಲರ್ ಗೆ ಮೊದಲೇ ಅಡ್ವಾನ್ಸ್ ರೂಪದಲ್ಲಿ 8,000 ರೂ. ನೀಡಿದ್ದಾಳೆ.

    ಜನವರಿ 12 ರಂದು ನಾಗ್ರಾಮ್ ಗ್ರಾಮದ ಸೇತುವೆಯ ಬಳಿ ಆರೋಪಿಗಳು ಶಿಬಾನಿ ನಾಯಕ್‍ನನ್ನು ಕಲ್ಲು ಮತ್ತು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.