Tag: ಪಬ್ಲಿಕ್ ಟಿವಿ Nikhil Kumaraswamy

  • ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ತಾತ ಆಗಲಿದ್ದಾರೆ ಎಚ್‍ಡಿಕೆ – ಸಂಭ್ರಮದಲ್ಲಿ ಗೌಡರ ಕುಟುಂಬ

    ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರ ನಿವಾಸಕ್ಕೆ ಶೀಘ್ರವೇ ಹೊಸ ಅತಿಥಿಯೊಬ್ಬರು ಬರಲಿದ್ದಾರೆ. ಅಷ್ಟಕ್ಕೂ ಯಾರಪ್ಪಾ ಅದು ಅಂತ ಯೋಚಿಸ್ತಿದ್ದೀರಾ? ಹೌದು ನಟ ನಿಖಿಲ್ ಕುಮಾರ್ ಸ್ವಾಮಿಯವರು ತಂದೆಯಾಗಲಿದ್ದಾರೆ.

    ಇಂದು ನಿಖಿಲ್ ಮನದರಸಿ ರೇವತಿಯವರ ಹುಟ್ಟುಹಬ್ಬವಿದ್ದು, ಪ್ರೀತಿಯ ಪತ್ನಿಗೆ ನಿಖಿಲ್ ಸೋಶಿಯಲ್ ಮೀಡಿಯಾ ಮೂಲಕ ವಿಶ್ ಮಾಡಿದ್ದರು. ಇದೀಗ ಮಾಜಿ ಸಿಎಂ ಕುಮಾರ ಸ್ವಾಮಿಯವರ ಸೊಸೆ ರೇವತಿಯವರು 5 ತಿಂಗಳ ಗರ್ಭಿಣಿಯಾಗಿದ್ದಾರೆ.

    ನಿಖಿಲ್- ರೇವತಿ ದಂಪತಿಗಳು ಅಪ್ಪ- ಅಮ್ಮ ಆಗುತ್ತಿರುವ ಸಂತಸದಲ್ಲಿದ್ದರೆ, ಈ ಸಿಹಿ ಸುದ್ದಿ ಕೇಳಿ ಇಡೀ ದೇವೇಗೌಡರ ಕುಟುಂಬ ಫುಲ್ ಖುಷ್ ಆಗಿದೆ. ಒಟ್ಟಾರೆ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿಯವರ ಹುಟ್ಟುಹಬ್ಬದ ದಿನದಂದೇ ಈ ವಿಚಾರ ರಿವೀಲ್ ಆಗಿರುವುದು ಅಭಿಮಾನಿಗೆ ಸಂತಸ ತರಿಸಿದೆ. ಇದನ್ನೂ ಓದಿ: ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

  • ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

    ಹುಟ್ಟು ಹಬ್ಬದ ಶುಭಾಶಯಗಳು ಮೈ ಲವ್: ನಿಖಿಲ್ ಕುಮಾರಸ್ವಾಮಿ

    ಬೆಂಗಳೂರು: ಜಾಗ್ವರ್ ನಿಖಿಲ್ ಕುಮಾರ್ ಸ್ವಾಮಿ ಪ್ರೀತಿಯ ಪತ್ನಿ ರೇವತಿಯವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ನಿಖಿಲ್ ಕುಮಾರ್ ಸ್ವಾಮಿಯವರು ಪತ್ನಿ ರೇವತಿಗೆ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

    ನಿಖಿಲ್ ಕುಮಾರಸ್ವಾಮಿಯವರು ತಮ್ಮ ಪತ್ನಿ ರೇವತಿ ಜೊತೆಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಖಿಲ್ ತಮ್ಮ ಮಡದಿ ಜೊತೆ ತುಗುಯ್ಯಲೆ ಮೇಲೆ ಒಟ್ಟಿಗೆ ಕುಳಿತುಕೊಂಡಿದ್ದು, ರೇವತಿಯವರು ತಮ್ಮ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಕುಳಿತುಕೊಂಡಿದ್ದಾರೆ. ಹ್ಯಾಪಿ ಹ್ಯಾಪಿ ಬರ್ತ್‍ಡೇ ಟೂ ಯು ಮೈ ಲವ್ (ನನ್ನ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು) ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್‍ನಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ 2021ರ ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹ ನಂತರ ಪ್ರಣಯ ಪಕ್ಷಿಗಳಂತೆ ಇರುವ ಈ ಮುದ್ದಾದ ಜೋಡಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ.

    ಇತ್ತೀಚೆಗಷ್ಟೇ ನಿಖಿಲ್‍ಕುಮಾರಸ್ವಾಮಿಯರು ಲಾಕ್‍ಡೌನ್ ವೇಳೆ ಸಂಕಷ್ಟದಲ್ಲಿದ್ದ ಅನೇಕ ಮಂದಿಗೆ ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದನ್ನೂ ಓದಿ:ಇದೇ ಬುಧವಾರದಿಂದ ಬಿಗ್‍ಬಾಸ್ ಪ್ರಾರಂಭ

  • ನಿಖಿಲ್ ಕುಮಾರಸ್ವಾಮಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವಧನ ವಿತರಣೆ

    ನಿಖಿಲ್ ಕುಮಾರಸ್ವಾಮಿಯಿಂದ ಕೊರೊನಾ ವಾರಿಯರ್ಸ್‍ಗೆ ಗೌರವಧನ ವಿತರಣೆ

    ಬೆಂಗಳೂರು: ಕೊರೊನಾ ವೈರಸ್‍ನಿಂದ ಸಂಕಷ್ಟದಲ್ಲಿರುವ ಜನರಿಗಾಗಿ ಪ್ರತಿನಿತ್ಯ ಶ್ರಮಪಟ್ಟು ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್ಸ್‍ಗೆ ನಟ ನಿಖಿಲ್ ಕುಮಾರ್ ಸ್ವಾಮಿ ಸಹಾಯ ಮಾಡಿದ್ದಾರೆ.

    ರಾಮನಗರದ ಜಿಲ್ಲಾ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 430 ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು, ಸ್ಟಾಫ್ ನರ್ಸ್‍ಗಳಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿಯವರು ಗೌರವಧನ ನೀಡಿ, ನೆಬ್ಯುಲೈಜೇಷನ್ ಮೆಷಿನ್ ವಿತರಿಸುವ ಮೂಲಕ ನೆರವು ನೀಡಿದ್ದಾರೆ. ಇದನ್ನು ಓದಿ:ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಇತ್ತೀಚೆಗೆ ಲಾಕ್‍ಡೌನ್ ವೇಳೆ ನಿಖಿಲ್ ಕುಮಾರಸ್ವಾಮಿಯವರು ರಾಮನಗರದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಕೆಲವು ದಿನಗಳ ಹಿಂದೆ ನಿಖಿಲ್ ಕುಮಾರ್ ಸ್ವಾಮಿ ಹಾಗೂ ಅವರ ತಂದೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರಿಗೆ ಕೊರೊನಾ ಸೋಂಕು ಧೃಡಪಟ್ಟಿತ್ತು. ಇದೀಗ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಸದ್ಯ ನಿಖಿಲ್ ಕುಮಾರಸ್ವಾಮಿ ಸೀತಾರಾಮ ಕಲ್ಯಾಣ ಸಿನಿಮಾದ ನಂತರ ರೈಡರ್ ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾದ ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಪ್ರತಿ ಚಿತ್ರದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುವ ನಿಖಿಲ್ ಈ ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಇದನ್ನು ಓದಿ: ಸಿಎಂ ಬಿಎಸ್‍ವೈಗೆ ಹೈಕಮಾಂಡ್ ಬಿಗ್ ರಿಲೀಫ್ – ಸಕ್ರಿಯರಲ್ಲದ ಸಚಿವರಿಗೆ ಕೊಕ್ ಸಾಧ್ಯತೆ