Tag: ಪಬ್ಲಿಕ್ ಟಿವಿ mumbai

  • ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ವ್ಯಕ್ತಿಯ ಫೋಟೋ ವೈರಲ್

    ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ವ್ಯಕ್ತಿಯ ಫೋಟೋ ವೈರಲ್

    ಮುಂಬೈ: ವ್ಯಕ್ತಿಯೊಬ್ಬ ರೈಲಿನ ಬಾಗಿಲಿಗೆ ತಲೆಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಹೌದು. ಮಹಾಮಾರಿ ಕೊರೊನಾದಿಂದ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿತ್ತು. ಕೆಲ ತಿಂಗಳ ಬಳಿಕ ಲಾಕ್‍ಡೌನ್ ತೆರವಾದರೂ ಕೆಲವೊಂದು ನಿಯಮಗಳು ಜಾರಿಯಲ್ಲಿದ್ದವು. ಅಂತೆಯೇ ಸ್ಥಳೀಯ ರೈಲುಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಬರೋಬ್ಬರಿ 10 ತಿಂಗಳ ಬಳಿಕ ಮುಂಬೈನಲ್ಲಿ ಲೋಕ್ ಟ್ರೈನ್ ಸಂಚಾರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹತ್ತುವ ಮುನ್ನ ರೈಲಿನ ಬಾಗಿಲಿಗೆ ತಲೆಯಿಟ್ಟು ನಮಸ್ಕರಿಸಿದ್ದಾರೆ. ಇದನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ವೈರಲ್ ಆದ ಫೋಟೋದಲ್ಲಿ ವ್ಯಕ್ತಿ ಹಳಿಯಲ್ಲಿ ನಿಂತಿದ್ದ ಮುಂಬೈ ಸ್ಥಳೀಯ ರೈಲಿನ ಬಾಗಿಲ ಬಳಿ ಕುಳಿತು, ತನ್ನ ಕೈಗಳನ್ನು ಕೆಳಗಿರಿಸಿ ತಲೆ ಬಾಗಿ ನಮಸ್ಕರಿಸಿ ಗೌರವ ನೀಡಿದ್ದಾನೆ. ಈ ಫೋಟೋವನ್ನು ಹಿಮಾಂಶು ಪರ್ಮಾರ್(@ಮದನ್-ಚಿಕ್ನಾ) ಎಂಬವರು ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 10 ತಿಂಗಳ ನಂತರ ರೈಲನ್ನು ಹತ್ತುವ ಮೊದಲು ಪ್ರಯಾಣಿಕ ನಮಸ್ಕರಿಸುತ್ತಿರುವ ಈ ಫೋಟೋ ನನ್ನ ಮನ ಮುಟ್ಟಿದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಲೈಕ್ಸ್ ಮತ್ತು ಕಾಮೆಂಟ್‍ಗಳು ಹರಿದು ಬರುತ್ತಿದೆ. ಅಲ್ಲದೆ ವ್ಯಕ್ತಿಯೊಬ್ಬರು ಈ ಫೋಟೋ ಮೂಲಕ ಭಾರತೀಯ ನಾಗರಿಕತೆ ಮತ್ತು ಭಾರತೀಯ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

    ಒಟ್ಟಿನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಕಳೆದ ವರ್ಷ ಮಾರ್ಚ್ 22ರ ಮಧ್ಯರಾತ್ರಿಯಿಂದ ಸ್ಥಗಿತಗೊಂಡಿದ್ದ ಮುಂಬೈ ಸ್ಥಳೀಯ ರೈಲುಗಳಲ್ಲಿ ಮತ್ತೆ ಸಾರ್ವಜನಿಕರು ಪ್ರಯಾಣಿಸಲು ಸೋಮವಾರದಿಂದ ಅವಕಾಶ ನೀಡಲಾಗಿದೆ. ಹೀಗಾಗಿ 10 ತಿಂಗಳ ನಂತರ ಲೋಕಲ್ ಟ್ರೈನ್ ಸಂಚಾರ ಆರಂಭಗೊಂಡಿದ್ದರಿಂದ ಮುಂಬೈ ಮಂದಿಗೆ ಮತ್ತೆ ಜೀವ ಬಂದಂತಾಗಿದೆ.

  • ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ಮುಂಬೈ: ಬಾಲಿವುಡ್ ಎವರ್ ಗ್ರೀನ್ ನಟಿ ಮಾಧುರಿ ದೀಕ್ಷಿತ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಕ್ಕಳು, ಮೊಮ್ಮಕ್ಕಳಿದ್ದರೂ ಕೂಡ ಮಾಧುರಿ ದೀಕ್ಷಿತ್ ಇಂದಿನ ನಟಿಯರಿಗೆ ಪೈಪೋಟಿ ನೀಡುವಂತ ಸುಂದರ ನಟಿ. ಅಲ್ಲದೆ ಮಾಧುರಿ ದೀಕ್ಷಿತ್ ಫಿಟ್ ನೆಸ್ ಬಗ್ಗೆ ಹೇಳುವುದಾದರೆ ಇಂದಿನ ಯುವತಿಯರು ನಾಚುವಂತೆ ಮೆಂಟೇನ್ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಅಷ್ಟಾಗಿ ಹೆಚ್ಚು ಸುದ್ದಿಯಲ್ಲಿರದಿದ್ದರೂ, ಮಾಧುರಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಕುರಿತಂತೆ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಇನ್‍ಸ್ಟಾಗ್ರಾಮ್ ಮೂಲಕ ಉತ್ತರಿಸಿದ್ದಾರೆ. ಈ ಕುರಿತಂತೆ ನನ್ನ ಬಗ್ಗೆ ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊಡಾಕ್‍ನಿಂದ ಸಬುದಾನ ಕಿ ಖಿಚ್ಡಿವರೆಗೂ ನಿಮ್ಮ ಫೇವರಿಟ್ ಫುಡ್ ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ ಮೊದಲ ಪ್ರಶ್ನೆಗೆ, ನಾನು ಮಹಾರಾಷ್ಟ್ರಿಯನ್ ಫುಡ್‍ನನ್ನು ಬಹಳ ಪ್ರೀತಿಸುತ್ತೇನೆ ಎಂದು ಉತ್ತರಿಸಿದ್ದಾರೆ. ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಎಂದು ಕೇಳಿದ ಎರಡನೇ ಪ್ರಶ್ನೆಗೆ, ನಾನು ನೆಟ್‍ಫ್ಲಿಕ್ಸ್ ಸಿರಿಸ್‍ನಲ್ಲಿ ಬರುವ ಕ್ವೀನ್ಸ್ ಗ್ಯಾಂಬಿಟ್‍ನನ್ನು ನೋಡಿದೆ ಅದು ನನಗೆ ತುಂಬಾ ಇಷ್ಟವಾಯಿತು ಎಂದರು.

    ಕೊನೆಯದಾಗಿ ನಿಮ್ಮ ಪತಿ ಶ್ರೀರಾಮ್‍ರಲ್ಲಿ ನೀವು ಬಹಳ ಇಷ್ಟಪಡುವ ವಿಚಾರ ಯಾವುದು ಎಂದು ಕೇಳಿದ ಕೊನೆಯ ಪ್ರಶ್ನೆಗೆ, ಮಾಧುರಿ ನಾಚಿ ನಗುತ್ತಾ ನನಗೆ ಅವರಲ್ಲಿರುವ ಪ್ರಾಮಾಣಿಕತೆ ಬಹಳ ಇಷ್ಟ ಎಂದು ಪ್ರತಿಕ್ರಿಯಿಸಿದರು. ಇನ್ನೂ ಏನಾದರೂ ತಿಳಿದುಕೊಳ್ಳಬೇಕಾ? ಎಂದು ಪ್ರಶ್ನಿಸುವ ಮೂಲಕ ಕ್ಯಾಪ್ಷನ್ ಹಾಕಿ ಮಾಧುರಿ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ನಟಿ ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ರಾಮ್ ಲಖಾನ್ ಸಿನಿಮಾ ಬಿಡುಗೆಡೆಯಾಗಿ ಜನವರಿ 27ಕ್ಕೆ 32 ವರ್ಷ ತುಂಬಿದ್ದು, ಹಿಂದೆ ಚಿತ್ರತಂಡದೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಅನುಪಮ್ ಖೇರ್, ಸತೀಶ್ ಕೌಶಿಕ್, ಗುಲ್ಶನ್ ಗ್ರೋವರ್, ಮಾಧುರಿ ಮತ್ತು ರಾಮ್ ಲಖನ್ ಸೇರಿದಂತೆ ನಿರ್ದೇಶಕ ಸುಭಾಷ್ ಘೈ ಕಾಣಿಸಿಕೊಂಡಿದ್ದರು.

     

    View this post on Instagram

     

    A post shared by Madhuri Dixit (@madhuridixitnene)

    ಜೊತೆಗೆ 32 ವರ್ಷ ಪೂರೈಸಿರುವ ಹಿನ್ನೆಲೆ ಪಾರ್ಟಿ ಮಾಡಿರುವ ರಾಮ್ ಲಖನ್ ಸಿನಿಮಾ ತಂಡ, ಈ ಫೋಟೋವನ್ನು ಹಿಂದಿನ ಫೋಟೋ ಜೊತೆ ಕೊಲಾಜ್ ಮಾಡಿ ಶೇರ್ ಮಾಡಿಕೊಂಡಿದೆ.

  • ಆಕರ್ಷಕ ಕಣ್ಣುಗಳಿಗೆ ಮಸ್ಕರಾ ಎಷ್ಟು ಮುಖ್ಯ?

    ಆಕರ್ಷಕ ಕಣ್ಣುಗಳಿಗೆ ಮಸ್ಕರಾ ಎಷ್ಟು ಮುಖ್ಯ?

    ಮಸ್ಕರಾ ಕಣ್ಣಿನ ರೆಪ್ಪೆಗಳನ್ನು ಸುಂದರವಾಗಿ ಕಾಣಿಸಲು ಬಳಸುವ ಸೌಂದರ್ಯ ವರ್ಧಕ (ಮೇಕಪ್) ವಸ್ತುಗಳಲ್ಲಿ ಒಂದು. ಮಸ್ಕರಾದಲ್ಲಿ ಒಂದೇ ವಿಧವಿಲ್ಲ. ವಿಭಿನ್ನ ಟೆಕಶ್ಚರ್, ಉದ್ದ ಮತ್ತು ಬಣ್ಣಗಳ ಮಸ್ಕರಾಗಳಿವೆ. ಮಸ್ಕರಾ ಹಾಕುವ ಮುನ್ನ ನೀವು ಅದನ್ನು ಹೇಗೆ ಹಾಕಿಕೊಳ್ಳಲು ನೀವು ಯಾವತ್ತಾದರೂ ಟ್ರೈ ಮಾಡಿದ್ದರೆ, ನಿಮ್ಮ ಐ ಲ್ಯಾಶ್‍ಗೆ ಸೂಟ್ ಆಗುವಂತಹ ಮಸ್ಕರಾ ಯಾವುದು? ಮಸ್ಕರಾ ಬ್ರಷ್ ಗಾತ್ರ ಮತ್ತು ಆಕಾರ ಹೇಗಿರಬೇಕು ಎಂದು ಕೂಡ ತಿಳಿದುಕೊಂಡಿರುತ್ತೀರಾ. ಮಸ್ಕಾರ್ ಕುರಿತಂತೆ ಹಲವು ಮಂದಿಗೆ ಏನು ತಿಳಿದಿರುವುದಿಲ್ಲ. ಹಾಗಾಗಿ ಮಸ್ಕರಾ ಸಂಬಂಧಸಿದ ಕೆಲವು ಟಿಪ್ಸ್ ಗಳು ಈ ಕೆಳಗಿನಂತಿವೆ.

    ಯಾವ ರೀತಿ ಮಸ್ಕರಾವನ್ನು ಆಯ್ಕೆ ಮಾಡಬೇಕು?
    ನಿಮ್ಮ ಐ ಲ್ಯಾಶ್‍ಗೂ ಇನ್ನೊಬ್ಬರ ಐ ಲ್ಯಾಶ್‍ಗೂ ಬಹಳ ವ್ಯತ್ಯಾಸವಿರುತ್ತದೆ. ಕೆಲವರ ರೆಪ್ಪೆಯ ಕೂದಲು ನೈಸರ್ಗಿಕವಾಗಿ ಕರ್ಲಿಯಾಗಿರುತ್ತದೆ. ಇನ್ನೊಂದಷ್ಟು ಜನ ಸಣ್ಣ, ದಪ್ಪ ಮತ್ತು ಕಡಿಮೆ ರೆಪ್ಪೆ ಕೂದಲುಗಳನ್ನು ಹೊಂದಿರುತ್ತಾರೆ. ಹಾಗಾಗಿ ನಿಮ್ಮ ಐ ಲ್ಯಾಶ್‍ಗೆ ಸರಿ ಹೊಂದುವಂತಹ ಮಸ್ಕರಾಗಳನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಮಸ್ಕರಾ ಐ ಲ್ಯಾಶ್‍ನ್ನು ದಪ್ಪ, ಉದ್ದ, ಕರ್ಲಿಗೊಳಿಸಿ ಐ ಲ್ಯಾಶ್‍ಗೆ ಮತ್ತಷ್ಟು ಬಣ್ಣ ನೀಡುತ್ತದೆ. ಮಸ್ಕರಾಗಳಲ್ಲಿ ವಾಟರ್ ಪ್ರೂಫ್ ಮತ್ತು ವಾಲ್ಯೂನೈಸಿಂಗ್ ನಂತಹ ವಿಭಿನ್ನ ಶೈಲಿಯ ಮಸ್ಕರಾಗಳಿವೆ. ನೀವು ರಚಿಸಲು ಬಯಸುವ ಡಿಸೈನ್ ನೀವು ಆಯ್ಕೆ ಮಾಡಿಕೊಳ್ಳುವ ಮಸ್ಕರಾದ ಮೇಲೆ ಆಧಾರಿತವಾಗಿರುತ್ತದೆ.

     

    ಮಸ್ಕರಾದ ಕಡ್ಡಿ(ಬ್ರಶ್) ಆಕಾರ ಹೇಗಿರಬೇಕು?
    ಮಸ್ಕರಾ ಹಾಕಲು ಕ್ಲಾಸಿಕ್ ಐ ಲ್ಯಾಶ್ ಉತ್ತಮ. ನಿಮ್ಮ ಐ ಲ್ಯಾಶ್ ದಪ್ಪವಾಗಿದ್ದರೆ ಕ್ಲಾಸಿಕ್ ಮಸ್ಕರಾ ಬಳಸಿ. ಅದು ನಿಮ್ಮ ಐ ಲ್ಯಾಶ್ ಸುಂದರಗೊಳಿಸುವುದರ ಜೊತೆಗೆ ನಿಮ್ಮ ಕಣ್ಣಿನ ಒಳ ಮೂಲೆ ಮತ್ತು ಕಣ್ಣಿನ ಮೇಲಿನ ತುದಿಯನ್ನು ತಲುಪಲು ಸಹಾಯ ಮಡುತ್ತದೆ ಹಾಗೂ ಕೇಂದ್ರಿಕರಿಸುತ್ತದೆ. ಅಲ್ಲದೆ ಎರಡು ಮತ್ತು ಮೂರು ಕೋಟ್ ಲೇಯರ್ ಹಾಕಿ ಇದು ಐ ಲ್ಯಾಶ್‍ನನ್ನು ದಟ್ಟವಾಗಿ ಕಾಣಿಸುವಂತೆ ಮಾಡುತ್ತದೆ.

    ರೆಪ್ಪೆ ಕೂದಲು ಕರ್ಲಿ ಆಕಾರ ಹೇಗೆ ಮಾಡುವುದು?
    ನಿಮ್ಮ ಐ ಲ್ಯಾಶ್‍ಗೆ ಕರ್ಲ್ ಶೇಪ್ ನೀಡಬೇಕಾದರೆ, ನೀವು ಕರ್ಲ್ ಬ್ರಶ್ ಮಸ್ಕರಾವನ್ನು ಬಳಸಬೇಕಾಗುತ್ತದೆ. ಈ ಮಸ್ಕರಾವು ನಿಮ್ಮ ಐ ಲ್ಯಾಶ್‍ನನ್ನು ಕರ್ಲ್ ಆಕಾರಗೊಳಿಸುತ್ತದೆ. ಕರ್ಲಿಂಗ್ ಆಕಾರವಲ್ಲದ ಮಸ್ಕರಾವನ್ನು ಬಳಸಿದರೆ, ನೀವು ಐ ಲ್ಯಾಶ್ ಕರ್ಲ್ ಮಾಡಿದರೂ ಕೂಡ ಅದು ಮತ್ತೆ ನೇರ ಬಿಡುತ್ತದೆ. ಆದ್ದರಿಂದ ನಿಮ್ಮ ಐ ಲ್ಯಾಶ್‍ನ್ನು ಯಾವ ಮಸ್ಕರಾ ಸುಂದರವಾಗಿಸುತ್ತದೆ ಎಂಬುವುದರ ಕುರಿತು ಹೆಚ್ಚು ಗಮನ ನೀಡಿ.

    ಮಸ್ಕರಾವನ್ನು ಹೇಗೆ ರೆಪ್ಪೆಗೆ ಲೇಪಿಸಬೇಕು?
    ಕಣ್ಣಿನಿಂದ ಮೇಲಕ್ಕೆ ನೋಡುತ್ತಾ ಮಸ್ಕರಾದ ಬ್ರಶ್ ಐ ಲ್ಯಾಶ್ ತುದಿಯವರೆಗೂ ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸಬೇಕು. ನಿಮ್ಮ ಐ ಲ್ಯಾಶ್ ಮೂಲವನ್ನು ಕೋಟ್ ಮಾಡಿ ತುದಿಯವರೆಗೂ ಬ್ರಶ್ ಎಳೆದು, ರೆಪ್ಪೆ ಕೂದಲಿನ ಪ್ರತಿಯೊಂದು ಭಾಗಕ್ಕೂ ಲೇಪಿಸಬೇಕು.

  • ಬಾಗಿಲ ಬಳಿ ನಿಂತು ನಿಲ್ದಾಣ ಬಂದಾಗ ಇಳಿದು ಹೋದ ಶ್ವಾನ – ವೀಡಿಯೋ ವೈರಲ್

    ಬಾಗಿಲ ಬಳಿ ನಿಂತು ನಿಲ್ದಾಣ ಬಂದಾಗ ಇಳಿದು ಹೋದ ಶ್ವಾನ – ವೀಡಿಯೋ ವೈರಲ್

    ಮುಂಬೈ: ಶ್ವಾನವೊಂದು ರೈಲಿನ ಬಾಗಿಲಿನಲ್ಲಿ ನಿಂತುಕೊಂಡು ನಿಲ್ದಾಣ ಬರುವವರೆಗೂ ಕಾದು ಕೊನೆಗೆ ನಿಲ್ದಾಣ ಬಂದಾಗ ಇಳಿದು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ವೀಡಿಯೋವನ್ನು ಭಯಾನಿ ಎಂಬುವವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 2021ನೇ ವರ್ಷ ಬುದ್ಧಿವಂತಿಕೆಯ ವರ್ಷ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇನ್ನೂ ವೀಡಿಯೋದಲ್ಲಿ ಶ್ವಾನವೊಂದು ಮುಂಬೈನಲ್ಲಿ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿ ತಾನು ಇಳಿಯ ಬೇಕಾದ ನಿಲ್ದಾಣ ಬರುವವರೆಗೂ ತಾಳ್ಮೆಯಿಂದ ಕಾದು ನಂತರ ರೈಲಿನಿಂದ ಇಳಿದು ಹೋಗಿದೆ. ಜೊತೆಗೆ ವೀಡಿಯೋದಲ್ಲಿ ರೈಲು ಕಲ್ವಾ ನಿಲ್ದಾಣಕ್ಕೆ ಆಗಮಿಸುತ್ತಿದೆ ಎಂಬ ಹಿನ್ನೆಲೆ ಧ್ವನಿ ಕೇಳಿಸುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ವೀಡಿಯೋದಲ್ಲಿ ಶ್ವಾನ ರೈಲು ಬಾಗಿಲ ತುದಿಯಲ್ಲಿ ನಿಂತು ಅತ್ತ-ಇತ್ತ ಕೆಲವು ಸೆಕೆಂಡ್‍ಗಳ ಕಾಲ ಇಣುಕಿ ನೋಡುತ್ತಾ ರೈಲು ಸಂಪೂರ್ಣವಾಗಿ ನಿಲ್ಲುವವರೆಗೂ ತಾಳ್ಮೆಯಿಂದ ಕಾದು, ನಿಲ್ದಾಣಕ್ಕೆ ರೈಲು ತಲುಪಿದ ನಂತರ ನಿಧಾನವಾಗಿ ರೈಲಿನಿಂದ ಕೆಳಗಿಳಿದಿದೆ. ಶ್ವಾನದ ತಾಳ್ಮೆ ಮತ್ತು ಬುದ್ದಿವಂತಿಕೆ ನಟ್ಟಿಗರ ಗಮನ ಸೆಳೆದಿದೆ. ಅಲ್ಲದೆ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 7 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದ್ದು, ಲೈಕ್ಸ್ ಮತ್ತು ಕಮೆಂಟ್‍ಗಳು ಹರಿದುಬರುತ್ತಿದೆ.

  • ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ನೀನು ವ್ಯಭಿಚಾರಿ, ನಿನ್ನ ಧ್ವನಿ ನಾಯಿಯಂತಿದೆ – ಮಹಿಳೆಗೆ ನೆರೆಮನೆಯರಿಂದ ಕಿರುಕುಳ

    ಮುಂಬೈ: ಮಹಿಳೆಯೊಬ್ಬಳು ತನ್ನ ಕೂದಲನ್ನು ಕತ್ತರಿಸಿದ್ದಕ್ಕೆ ನೆರೆಮನೆಯವರಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ.

    ಸಂತ್ರಸ್ತೆಯು ಖಾಸಗಿ ಸಂಸ್ಥೆಯೊಂದರಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಡಿಸೆಂಬರ್‍ನಲ್ಲಿ ಮನೆ ಬದಲಾಯಿಸಿ ಅಪಾರ್ಟ್‍ಮೆಂಟ್ ನಲ್ಲಿ ವಾಸಿಸಲು ಆರಂಭಿಸಿದ್ದಾಳೆ. ಈ ವೇಳೆ 53 ವರ್ಷದ ಮಹಿಳೆಯೊಬ್ಬಳು ಸಂತ್ರಸ್ತೆ ನೋಡಲು ಮಂಗಳಮುಖಿಯಂತಿದ್ದಾಳೆ. ಆಕೆಯ ಧ್ವನಿ ನಾಯಿಯ ಧ್ವನಿಯಂತೆ ಇದೆ ಎಂದು ಹೇಳಿದ್ದಾಳೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಇದೀಗ ಮಹಿಳೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಈ ವಿಚಾರವಾಗಿ ಸಂತ್ರಸ್ತೆಯ ವಕೀಲರಾದ ಸಿದ್ದೇಶ್ ಬೋರ್ಕರ್, ಮಹಿಳೆ ಸಂತ್ರಸ್ತೆ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಆಕೆಯನ್ನು ಮಂಗಳಮುಖಿ ಎಂದು ಅವಮಾನ ಮಾಡಿದ್ದಾಳೆ. ಸಂತ್ರಸ್ತೆಯು ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನೇ ಗುರಿಯಾಗಿಸಿಕೊಂಡು ಆರೋಪಿ ಆಕೆಗೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

    ಮನೆ ಬದಲಿಸಿ ಸಂತ್ರಸ್ತೆ ಮೊದಲು ಅಪಾರ್ಟ್‍ಮೆಂಟ್ ಗೆ ಬಂದಾಗ ಮಹಿಳೆ ಆಕೆಗೆ ತಿಂಡಿ ನೀಡುತ್ತಿದ್ದಳು. ಆದರೆ ಸಂತ್ರಸ್ತೆ ತಿಂಡಿ ಇಷ್ಟವಾಗುತ್ತಿಲ್ಲ ಎಂದು ತಿಳಿಸಿದಾಗ ಮಹಿಳೆ ಸಂತ್ರಸ್ತೆಗೆ ತಿಂಡಿ ನೀಡುವುದನ್ನು ನಿಲ್ಲಿಸಿ ಅಷ್ಟು ದಿನ ನೀಡಿದ ತಿಂಡಿಗೆ ಹಣ ಪಾವತಿಸುವಂತೆ ತಿಳಿಸಿದ್ದಳು. ಅಲ್ಲದೆ ಡಿಸೆಂಬರ್ 12 ರಂದು ಮಹಿಳೆ ಮನೆಯಲ್ಲಿ ಆಕೆಯ ಮಗ ಪಾರ್ಟಿಯನ್ನು ಆಯೋಜಿಸಿ ಜೋರು ವಾಲ್ಯೂಮ್ ನೀಡಿ ಮುಂಜಾನೆ 3ವರೆಗೂ ಮ್ಯೂಸಿಕ್ ಹಾಕಿದ್ದಾನೆ. ಮುಂಜಾನೆಯಾದರೂ ಮ್ಯೂಸಿಕ್ ನಿಲ್ಲದ ಕಾರಣ ಸಂತ್ರಸ್ತೆ ಮಹಿಳೆ ಮನೆಯ ಬಾಗಿಲು ತಟ್ಟಿ ವಾಲ್ಯೂಮ್ ಕಡಿಮೆ ಮಾಡಲು ವಿನಂತಿಸಿದ್ದಾಳೆ. ಆದರೆ ಸಂತ್ರಸ್ತೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ತದನಂತರ ಸಂತ್ರಸ್ತೆ ಆರೋಪಿ ಕುಟುಂಬದೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ.

    ಈ ಕಾರಣಕ್ಕೆ ಆರೋಪಿ ನನ್ನನ್ನು ಹುಚ್ಚಿ, ಪುರುಷ ಅಥವಾ ಮಹಿಳೆಯೋ ಎಂದು ಪ್ರಶ್ನಿಸಿದ್ದಾಳೆ. ಜೊತೆಗೆ ನನ್ನ ಧ್ವನಿ ನಾಯಿ ಧ್ವನಿಯನ್ನು ಹೋಲುತ್ತದೆ ಎಂದು ಹೇಳಿದ್ದಾಳೆ. ಜೊತೆಗೆ ನನ್ನನ್ನು ವೇಶ್ಯೆ ಎಂಬ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾಳೆ ಎಂದು ಸಂತ್ರಸ್ತೆ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾಳೆ.

  • ಕಿಡ್ನಾಪ್‍ಗೆ ಕಾರಣವಾಯ್ತು ಪ್ರಸಿದ್ಧ ಕ್ರೈಂ ಶೋ – ಆರೋಪಿಗಳ ಬಂಧನ

    ಕಿಡ್ನಾಪ್‍ಗೆ ಕಾರಣವಾಯ್ತು ಪ್ರಸಿದ್ಧ ಕ್ರೈಂ ಶೋ – ಆರೋಪಿಗಳ ಬಂಧನ

    ಮುಂಬೈ: ಕಿರುತೆರೆಯಲ್ಲಿ ಪ್ರಸಾರವಾಗುವ ಕ್ರೈಂ ಶೋದಿಂದ ಪ್ರೇರಿತರಾಗಿ 13 ವರ್ಷದ ಬಾಲಕನನ್ನು ಇಬ್ಬರು ವ್ಯಕ್ತಿಗಳು ಅಪಹರಿಸಿರುವ ಘಟನೆ ಭಾನುವಾರ ಮುಂಬೈ ಉಪನಗರ ಮಲಾಡ್ ನಲ್ಲಿ ನಡೆದಿದೆ. ಅಲ್ಲದೆ ಮಗು ಹಿಂದಿರುಗಿಸಲು 10 ಲಕ್ಷ ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

     

    ಶೇಖರ್ ವಿಶ್ವಕರ್ಮ(35) ಮತ್ತು ದಿವ್ಯಾಂಶು ವಿಶ್ವಕರ್ಮ(21) ಎಂದು ಆರೋಪಿಗಳನ್ನು ಗುರುತಿಸಲಾಗಿದೆ. ಮನೆಯಿಂದ ಹೊರಗೆ ಆಟೋ ರಿಕ್ಷಾದಲ್ಲಿ ಆಟವಾಡುತ್ತಿರುವ ಬಾಲಕನನ್ನು 2.30 ಗಂಟೆಗಳ ನಂತರ ಆರೋಪಿಗಳು ಅಪಹರಿಸಿದ್ದಾರೆ. ನಂತರ ಬಾಲಕನ ತಂದೆ ಮೊಬೈಲ್‍ಗೆ ಕರೆ ಮಾಡಿ ಹತ್ತು ಲಕ್ಷ ರೂ ನೀಡಿದರೆ ಬಾಲಕನನ್ನು ವಾಪಸ್ ಕಳುಹಿಸುವುದಾಗಿ ಆರೋಪಿ ಬೇಡಿಕೆ ಇಟ್ಟಿದ್ದಾನೆ.

    ಈ ಕುರಿತಂತೆ ಬಾಲಕನ ತಂದೆ ಪೊಲೀಸರ ಮೊರೆ ಹೋಗಿದ್ದಾರೆ. ನಂತರ ಮಲಾಡ್ (ಪಶ್ಚಿಮ)ದ ವಾಲ್ನಾಯ್ ಕಾಲೋನಿಯಲ್ಲಿದ್ದ ಆರೋಪಿಗಳ ಫೋನ್ ಕರೆಯನ್ನು ಟ್ರ್ಯಾಕ್ ಮಾಡಿ ಪತ್ತೆ ಹಚ್ಚಿ ಸುಮಾರು 7.30ಕ್ಕೆ ಬಂಧಿಸಿದ್ದಾರೆ. ಬಾಲಕನಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಕ್ರೈಂ ಶೋದಿಂದ ಪ್ರೇರಿತರಾಗಿ ಬಾಲಕನನ್ನು ಅಪಹರಣ ಮಾಡಲು ಯೋಜಿಸಿದೆವು ಎಂದು ತಿಳಿಸಿದ್ದಾರೆ. ಇದೀಗ ಭಾರತೀಯ ದಂಡ ಸಂಹಿತೆಯ ವಿವಿಧ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಸ್ನೇಹಿತೆಗೆ ದೋಸೆ ತಿನ್ನಿಸುವಾಗ ತಗ್ಲಾಕ್ಕೊಂಡ ಪತಿ – ಪತ್ನಿಯಿಂದ ಕಂಪ್ಲೆಂಟ್

    ಮುಂಬೈ: ವಿವಾಹಿತನೊಬ್ಬ ಕಾರೊನೊಳಗೆ ತನ್ನ ಸ್ನೇಹಿತೆಗೆ ದೋಸೆ ತಿನ್ನಿಸುವ ವೇಳೆ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಅಪರೂಪದ ನಾಟಕೀಯ ದೃಶ್ಯ ಉತ್ತರ ಪ್ರದೇಶದ ಬಂದನಲ್ಲಿ ನಡೆದಿದೆ. ಪತಿಯ ಅನೇಕ ಅಕ್ರಮ ಸಂಬಂಧಗಳಿಗೆ ಬೇಸತ್ತ ಮಹಿಳೆ ಇದೀಗ ಪತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾಳೆ.

    ಮಹಿಳೆಯ ಪತಿ ಉತ್ತರ ಪ್ರದೇಶದ ಸರ್ಕಾರಿ ಜೂನಿಯರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆತ ತನ್ನ ಸ್ನೇಹಿತೆಯನ್ನು ದೇವಾಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ನಂತರ ಹತ್ತಿರದ ಹೋಟೆಲ್ ನಿಂದ ದೋಸೆ ತೆಗೆದುಕೊಂಡು ಬಂದು ಕಾರಿನೊಳಗೆ ಆಕೆಗೆ ತಿನ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಸಹೋದರನೊಂದಿಗೆ ಸ್ಥಳಕ್ಕೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದಿದ್ದಾನೆ.

    ಪತಿ ಮಾಡಿದ ದ್ರೋಹಕ್ಕೆ ಕೋಪಗೊಂಡ ಪತ್ನಿ ಮತ್ತು ಆಕೆಯ ಸಹೋದರ ಇಬ್ಬರನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಕಂಪ್ಲೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಭಾರತದಲ್ಲಿ ವ್ಯಭಿಚಾರ ಅಪರಾಧವೇನಲ್ಲ ಎಂದು ತಿಳಿಸಿ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

    ತನಿಖೆ ವೇಳೆ ತನ್ನ ಪತಿ ನನಗೆ ಮೊದಲ ಬಾರಿಗೆ ಮೋಸ ಮಾಡುತ್ತಿಲ್ಲ. ಮೊದಲಿನಿಂದಲೂ ಈತ ಅನೇಕ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ಮಹಿಳೆ ಆರೋಪಿಸಿದ್ದಾಳೆ.

    ವ್ಯಭಿಚಾರವು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 2018ರಂದು ತೀರ್ಪು ನೀಡಿತ್ತು.

  • ಜನವರಿ 27ರಿಂದ ಚಾಲಕ ರಹಿತ ಮೆಟ್ರೋ ಆರಂಭ

    ಜನವರಿ 27ರಿಂದ ಚಾಲಕ ರಹಿತ ಮೆಟ್ರೋ ಆರಂಭ

    ಮುಂಬೈ: ಚಾಲಕ ರಹಿತ ಮೆಟ್ರೋ ಸಂಚಾರವನ್ನು ಜನವರಿ 27 ರಿಂದ ಮೊದಲ ಬಾರಿಗೆ ಮುಂಬೈನಲ್ಲಿ ಆರಂಭಿಸಲಾಗುತ್ತಿದೆ ಎಂದು ಅಲ್ಲಿನ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಘೋಷಿಸುವ ಮೂಲಕ ಮುಂಬೈ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

    ಸ್ವಯಂ ಚಾಲಿತ ಮೆಟ್ರೋ ಟ್ರೈನ್ ಕಾರ್ಯಚರಣೆ ಪರೀಕ್ಷೆ ನಂತರ ಜನವರಿ 27ರಂದು ಮೊದಲ ಚಾರ್ಕೋಪ್ ಮೆಟ್ರೋ ಕಾರ್ಶೆಡ್‍ಗೆ ತಲುಪಲಿದೆ. ಮತ್ತು ಇನ್ನೂ ಎರಡು ಮೆಟ್ರೋ ಟ್ರೈನ್ ಗಳ ಮಾರ್ಗಗಳನ್ನು ಯೋಜಿಸಿ ಈ ವರ್ಷದ ಮೇ ತಿಂಗಳಿನಿಂದ ಆರಂಭಿಸಲಾಗುತ್ತದೆ ಎಂದು ಹೇಳಿದರು.

    ಚಾಲಕ ರಹಿತ ಮೆಟ್ರೋ ಟ್ರೈನ್ ಸ್ವಯಂ ಚಲಿಸುವುದರಿಂದ ಮೊದಲ 6 ತಿಂಗಳವರೆಗೂ ಜನರಿಗೆ ಇದು ಸುರಕ್ಷಿತವಲ್ಲ ಎಂದು ಆತಂಕಗೊಳಿಸಬಹುದು. ಆದರೆ ಟ್ರೈನ್ ನನ್ನು ಮೋಟಾರು ಚಾಲಕ ನಿರ್ವಹಿಸುತ್ತಿರುತ್ತಾನೆ. ಅಲ್ಲದೆ ಟ್ರೈನ್ ಸರಿಸುಮಾರು 80 ಕಿಮೀ ವೇಗದಲ್ಲಿ ಮಾತ್ರ ಚಲಿಸುತ್ತದೆ. ಜೊತೆಗೆ ಚಾಲಕ ರಹಿತ ಮೆಟ್ರೋನ ಒಂದು ಕೋಚ್ ನಲ್ಲಿ 50 ಜನ ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಟ್ರೈನ್ ನಲ್ಲಿ ಸುಮಾರು 2,280 ಮಂದಿ ಪ್ರಯಾಣಿಸಬಹುದು ಎಂದರು.

    ಈ ನೂತನ ಮೆಟ್ರೋ 2ಎ ಟ್ರೈನ್ ದಹಿಸಾರ್ ನಿಂದ ಡಿಎನ್ ನಗರಕ್ಕೆ ಮತ್ತು ಮೆಟ್ರೋ7 ದಹಿಸಾರ್ ನಿಂದ ಅಧೇರಿ ಪೂರ್ವಕ್ಕೆ ಚಲಿಸುತ್ತದೆ. 7 ವರ್ಷಗಳ ನಂತರ ವರ್ಸೋವಾ-ಅಂಧೇರಿ-ಘಾಟ್ಕೋಪರ್‍ವರೆಗೆ 11 ಕಿಮೀ ವರೆಗೂ ಮೊದಲ ಬಾರಿಗೆ ದೇಶದ ವಾಣಿಜ್ಯ ಬಂಡಾಯವು ಮೆಟ್ರೋ ರೈಲನ್ನು ಆರಂಭಿಸಿದೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈ ಮೆಟ್ರೋ ಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‍ಡಿಎ) ಅಂತಿಮ ಹಂತದಲ್ಲಿದ್ದು, ಮೆಟ್ರೋ ಮಾರ್ಗಗಳು ಮತ್ತು ಮೆಟ್ರೋ ನಿಲ್ದಾಣಗಳ ನಿರ್ಮಾಣ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮಾರ್ಗದರ್ಶನದಲ್ಲಿ ಮತ್ತಷ್ಟು ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು

  • ಗಾಳಿಪಟ  ತೆಗೆದುಕೊಳ್ಳಲು ಹೋಗಿ ಸಗಣಿ ಗುಂಡಿಗೆ ಬಿದ್ದು ಬಾಲಕ ಸಾವು

    ಗಾಳಿಪಟ ತೆಗೆದುಕೊಳ್ಳಲು ಹೋಗಿ ಸಗಣಿ ಗುಂಡಿಗೆ ಬಿದ್ದು ಬಾಲಕ ಸಾವು

    ಮುಂಬೈ: ಗಾಳಿಪಟ ಹಿಡಿಯಲು ಹೋಗಿ ಸಗಣಿ ತುಂಬಿದ್ದ ಗುಂಡಿಗೆ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮೃತ ಬಾಲಕನನ್ನು ಧ್ರುವ ಜಾಧವ್ ಎಂದು ಗುರುತಿಸಲಾಗಿದ್ದು, ಈತ ಪಶ್ಚಿಮದ ಕಂಡಿವಲಿ ಪ್ರದೇಶದ ಶಂಕರ್ ಪಾದ ನಿವಾಸಿ. ಈತ 5 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮಕರ ಸಂಕ್ರಾತಿ ದಿನದಂದು ಆಟವಾಡುತ್ತಿದ್ದ ಬಾಲಕ, ಮಧ್ಯಾಹ್ನ ಗಾಳಿಪಟ ಹಿಡಿಯುವ ಪ್ರಯತ್ನದಲ್ಲಿ ಓಡಿ ಹೋಗಿ ಕಾಲು ಜಾರಿ ಸಗಣಿ ಗುಂಡಿಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಅನೇಕರ ನಿರ್ಲಕ್ಷ್ಯಗಳು ಎದ್ದು ಕಾಣುತ್ತಿದ್ದು, ಸದ್ಯಕ್ಕೆ ಈ ವಿಚಾರವಾಗಿ ಆಕಸ್ಮಿಕ ಘಟನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

     

    ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನವಿಡೀ ಬಾಲಕ ಗಾಳಿಪಟ ಆಡಿಸುತ್ತಿದ್ದನು. ಈತನ ಮನೆಯ ಸಮೀಪ ಖಾಲಿ ಸೈಟ್ ನಲ್ಲಿ ಸಗಣಿರಾಶಿಯ ಹಳ್ಳ ಇದ್ದು, ಗಾಳಿಪಟ ಹಾರಿಸುತ್ತಿದ್ದಾಗ ಅದು ಸಗಣಿರಾಶಿ ಇರುವ ಗುಂಡಿಗೆ ಬಿದ್ದಿದೆ. ಆದರೆ ಆಳವಿದೆ ಎಂದು ತಿಳಿಯದ ಬಾಲಕ ಗಾಳಿಪಟ್ಟ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಆತ ಗುಂಡಿಗೆ ಬಿದ್ದಿದ್ದಾನೆ. ಬಳಿಕ ರಕ್ಷಣೆಗಾಗಿ ಕೂಗಿದ್ದಾನೆ.

     

    ಇತ್ತ ಬಾಲಕನ ದನಿಯನ್ನು ಪಕ್ಕದಲ್ಲಿಯೇ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕೇಳಿಸಿಕೊಂಡಿದ್ದಾರೆ. ಅಲ್ಲದೆ ಸಲ್ಲೇ ಇದ್ದ ಸ್ಥಳೀಯರು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಬಾಲಕ ಸಗಣಿ ಗುಂಡಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.

    ಸಗಣಿ ಹಳ್ಳ ಅಪಾಯಕಾರಿಯಾಗಿರುವ ಕಾರಣ ಯಾರು ಕೂಡ ಕೆಳಗೆ ಇಳಿದು ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಕೂಡ ಹಳ್ಳಕ್ಕೆ ಇಳಿಯಲು ಒಪ್ಪಲಿಲ್ಲ. ಅಷ್ಟೊತ್ತಿಗಾಗಲೇ ಜಾಧವ್ ಸಂಪೂರ್ಣ ಸಗಣಿಯಲ್ಲಿ ಮುಳುಗಿ ಹೋಗಿದ್ದನು. ಕೊನೆಗೆ ಅಧಿಕಾರಿಗಳು ಹತ್ತಿರದ ಕೆಲ ಕಾರ್ಮಿಕರ ಸಹಾಯದಿಂದ ಬಾಲಕನನ್ನು ಮೇಲಕ್ಕೆ ಎತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.