Tag: ಪಬ್ಲಿಕ್ ಟಿವಿ mumbai

  • ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ – ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಬಿಗ್ ಬಿ

    ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ – ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ ಬಿಗ್ ಬಿ

    ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅನಾರೋಗ್ಯ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಶನಿವಾರ ಬಹಿರಂಗ ಪಡೆಸಿದ್ದರು. ಇದೀಗ ಅಮಿತಾಬ್ ಬಚ್ಚನ್ ಶಸ್ತ್ರ ಚಿಕಿತ್ಸೆ ಪೂರ್ಣಗೊಂಡಿದ್ದು, ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    78 ವರ್ಷದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು, ನನ್ನ ಮೇಲೆ ನೀವು ತೋರಿಸಿದ ಪ್ರೀತಿ, ಕಾಳಜಿ ಮತ್ತು ಹಾರೈಕೆಗಾಗಿ ಧನ್ಯವಾದಗಳು ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಅಲ್ಲದೆ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಎರಡು ಕೈಗಳನ್ನು ಜೋಡಿಸಿ ನಮಸ್ತೆ ಮಾಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು, ಆರೋಗ್ಯದ ಸ್ಥಿತಿ ಮತ್ತು ಯಾವ ಶಸ್ತ್ರಚಿಕಿತ್ಸೆ ಎಂಬುದರ ಬಗ್ಗೆ ಬರೆಯಲು ಸಾಧ್ಯವಿಲ್ಲ ಎಂದು ಬ್ಲಾಗ್‍ನಲ್ಲಿ ಬರೆದುಕೊಂಡಿದ್ದರು.

    ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್, ನಟ ಅಜಯ್ ದೇವ್‍ಗನ್ ನಿರ್ದೇಶಿಸಿ ಅಭಿನಯಿಸುತ್ತಿರುವ ಮೇ ಡೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಬಣ್ಣಹಚ್ಚಲಿದ್ದಾರೆ. ಅಲ್ಲದೆ ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣರ ಜೊತೆ ಇನ್ನೂ ಹೆಸರಿಡದ ಬಾಲಿವುಡ್ ಸಿನಿಮಾದಲ್ಲಿ ಕೂಡ ಅಭಿನಯಿಸಲಿದ್ದಾರೆ.

  • ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಿಗ್ ಬಿ

    ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಿಗ್ ಬಿ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಶನಿವಾರ ಅನಾರೋಗ್ಯದ ಕಾರಣದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    78 ವರ್ಷದ ಅಮಿತಾಬ್ ಬಚ್ಚನ್ ಶಸ್ತಚಿಕಿತ್ಸೆ ಪೂರ್ಣಗೊಂಡಿದೆಯಾ ಇಲ್ಲವಾ? ಎಂಬ ವಿಚಾರವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಅಲ್ಲದೆ ನಿನ್ನೆ, ಆರೋಗ್ಯದ ಸ್ಥಿತಿ ಮತ್ತು ಶಸ್ತ್ರ ಚಿಕಿತ್ಸೆ ಕುರಿತಂತೆ ಬರೆಯಲು ಸಾಧ್ಯವಿಲ್ಲ ಎಂದು ಬ್ಲಾಗ್‍ನಲ್ಲಿ ಕ್ಯಾಪ್ಷನ್ ಹಾಕಿದ್ದರು.

    ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಅಮಿತಾಬ್ ಬಚ್ಚನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. ಈ ಮುನ್ನ ಜುಲೈನಲ್ಲಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ಮೊಮ್ಮಗಳು ಆರಾಧ್ಯ ಕೋವಿಡ್ ಸೋಂಕಿಗೆ ಒಳಗಾಗಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.

     

    ಸದ್ಯ ಅಮಿತಾಬ್ ಬಚ್ಚನ್ ನಟ ಅಜಯ್ ದೇವ್‍ಗನ್ ಮತ್ತು ರಕುಲ್ ಪ್ರೀತ್ ಸಿಂಗ್ ಅಭಿನಯಿಸುತ್ತಿರುವ ಮೇ ಡೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ನಟ ರಣ್‍ಬೀರ್ ಕಪೂರ್ ಹಾಗೂ ಅಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ.

     

    View this post on Instagram

     

    A post shared by Amitabh Bachchan (@amitabhbachchan)

  • ಸುಟ್ಟಗಾಯಗಳಿಂದ ಅನುಮಾನಸ್ಪಾದವಾಗಿ ವ್ಯಕ್ತಿ ಮೃತ ದೇಹ ಮತ್ತೆ

    ಸುಟ್ಟಗಾಯಗಳಿಂದ ಅನುಮಾನಸ್ಪಾದವಾಗಿ ವ್ಯಕ್ತಿ ಮೃತ ದೇಹ ಮತ್ತೆ

    ಮುಂಬೈ: ಅಪಹರಣಕ್ಕೊಳಗಾಗಿದ್ದ ಜಾರ್ಖಂಡ್‍ನ ಸಮುದ್ರ ನೌಕಾಪಡೆಯ ವ್ಯಕ್ತಿಯೊರ್ವ ಬೆಂಕಿಹಚ್ಚಿಕೊಂಡು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

    ಸೂರಜ್‍ಕುಮಾರ್ ಮಿಟಲೇಶ್ ದುಬೆ(27) ಮೃತ ವ್ಯಕ್ತಿ. ಇತ್ತೀಚೆಗಷ್ಟೇ ಷೇರುಮಾರುಕಟ್ಟೆಯಲ್ಲಿನ ನಷ್ಟದಿಂದ ಖಿನ್ನತೆಗೆ ಒಳಗಾಗಿದ್ದರು. ಈ ಮಧ್ಯೆ ಅವರು ಅಪಹರಣಕ್ಕೆ ಒಳಗಾಗಿದ್ದು, ಫೆಬ್ರವರಿ 5ರ ಮುಂಜಾನೆ ಮುಂಬೈನ ಪಾಲ್ಘರ್ ಜಿಲ್ಲೆಯ ಬಳಿ ಸೂರಜ್‍ಕುಮಾರ್ ಮಿಟಲೇಶ್ ದುಬೆ ದೇಹ ಸುಟ್ಟ ಗಾಯಗಳಿಂದ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಾವಿಗೂ ಮುನ್ನ ಜನವರಿ 30ರಂದು ಚೈನ್ನೈ ವಿಮಾನ ನಿಲ್ದಾಣದಲ್ಲಿ ಮೂವರು ಆರೋಪಿಗಳು ಸೂರಜ್‍ಕುಮಾರ್‍ಗೆ ಬಂದೂಕಿನಿಂದ ಬೆದರಿಸಿ ಅಪಹರಿಸಿ ಪಾಲ್ಘರ್‍ಗೆ ಕರೆದೊಯ್ದಿದ್ದಾರೆ. ಆದರೆ ಅಪಹರಣದಿಂದ ಯಾವುದೇ ಹಣ ದೊರೆಯುವುದಿಲ್ಲ ಎಂದು ತಿಳಿದ ಆರೋಪಿಗಳು ಬೆಂಕಿ ಹಚ್ಚಿ ಕೊಂದಿರಬಹುದು. ಅಲ್ಲದೆ ಸೂರಜ್‍ಕುಮಾರ್ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟ ಅನುಭವಿಸಿ ಸಾಕಷ್ಟು ಸಾಲ ಮಾಡಿದ್ದರು. ಇನ್ನೂ ಈ ವಿಚಾರವನ್ನು ಅವರ ಮನೆಯವರಿಂದ ಮುಚ್ಚಿಟ್ಟಿದ್ದರು. ಚೆನ್ನೈನ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಿ ವೆಲ್ಲೂರಿನತ್ತಾ ಪ್ರಯಾಣ ಬೆಳೆಸಿದ್ದಾರೆ. ಫೆಬ್ರವರಿ 5ರಂದು ಬೆಳಿಗ್ಗೆ 5.30ರ ಸುಮಾರಿಗೆ ತಲಸರಿಯಲ್ಲಿರುವ ಪೆಟ್ರೋಲ್ ಬಂಕ್‍ನಿಂದ 2 ಕ್ಯಾನ್ ಡೀಸೆಲ್ ತೆಗೆದುಕೊಂಡು ಹೋಗುತ್ತಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

    ಇದನೆಲ್ಲಾ ಗಮನಿಸುತ್ತಿದ್ದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಹುಟ್ಟುತ್ತಿದ್ದು, ಪ್ರಕರಣ ಸಂಬಂಧಿಸಿದಂತೆ ಸದ್ಯ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • ಮಗ ಬದುಕಿದ್ದಾನೆಂದು ರಾತ್ರಿಯಿಡಿ ಶವದ ಜೊತೆ ಕಾಲ ಕಳೆದ ತಾಯಿ

    ಮಗ ಬದುಕಿದ್ದಾನೆಂದು ರಾತ್ರಿಯಿಡಿ ಶವದ ಜೊತೆ ಕಾಲ ಕಳೆದ ತಾಯಿ

    ಮುಂಬೈ: 70 ವರ್ಷದ ಮಹಿಳೆಯೊಬ್ಬಳು ಬಾತ್ ರೂಮಿನಲ್ಲಿ ಬಿದ್ದಿದ್ದ ತನ್ನ ಮಗ ಬದುಕಿದ್ದಾನೆ ಎಂದು ಭಾವಿಸಿ ಇಡೀ ರಾತ್ರಿ ಶವದ ಜೊತೆ ಕಾಲ ಕಳೆದಿದ್ದಾಳೆ.

    ಮೃತಪಟ್ಟ 42 ವರ್ಷದ ವ್ಯಕ್ತಿ ಮೇಘಾಲಯದ ಮೂಲದವನಾಗಿದ್ದು, ಕುಡಿತ ಮತ್ತಿನಲ್ಲಿ ಕಲಿನಾ ಪ್ರದೇಶದಲ್ಲಿರುವ ಮನೆಯ ಬಾತ್ ರೂಮ್‍ನಲ್ಲಿ ಸೋಮವಾರ ಬಿದ್ದಿದ್ದಾನೆ. ಬಳಿಕ ಮಗ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಆತನ ತಾಯಿ ಎಳೆದುಕೊಂಡು ಹೋಗಿ ಬೆಡ್ ಮೇಲೆ ಮಲಗಿಸಿ, ಗಾಯಗೊಂಡಿದ್ದ ಆತನಿಗೆ ಅರಿಶಿನದ ಪುಡಿ ಹಚ್ಚಿದ್ದಾಳೆ.

    ಮಾರನೇ ದಿನ ಮುಂಜಾನೆ ಮಗ ಎಚ್ಚರಗೊಳ್ಳದಿರುವುದನ್ನು ಕಂಡು ಗಾಬರಿಯಿಂದ ಮಹಿಳೆ ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ವಿಷಯ ತಿಳಿದ ಸಂಬಂದಿಕರು ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ವ್ಯಕ್ತಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ತನಿಖೆ ವೇಳೆ ಮೃತವ್ಯಕ್ತಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದು, ಆತನ ಕುಟುಂಬವು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಿಚಾರ ತಿಳಿದು ಬಂದಿದೆ. ಸದ್ಯ ಪ್ರಾಥಮಿಕ ಮಾಹಿತಿಯ ಪ್ರಕಾರ, ವ್ಯಕ್ತಿ ಸಾವು ಆಕಸ್ಮಿಕ ಸಾವು ಎಂಬ ಕಾರಣದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ವಿಚಾರವಾಗಿ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ವಕೋಲಾ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಧರ್ಮಧಿಕಾರಿ ತಿಳಿಸಿದ್ದಾರೆ.

  • ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿದ!

    ಮದುವೆಯಾಗಲು ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಚಲಿಸುತ್ತಿದ್ದ ರೈಲಿನ ಮುಂದೆ ತಳ್ಳಿದ!

    – ಮಹಿಳೆಯ ತಲೆಗೆ 12 ಹೊಲಿಗೆ

    ಮುಂಬೈ: ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಹಿಳೆಯನ್ನು ಚಲಿಸುತ್ತಿರುವ ರೈಲಿನ ಮುಂದೆ ದೂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಆಕೆಯ ತಲೆಗೆ ಪೆಟ್ಟಾಗಿದ್ದು, 12 ಹೋಲಿಗೆಗಳನ್ನು ಹಾಕಲಾಗಿದೆ.

    ಆರೋಪಿಯನ್ನು ಸುಮೇಧ್ ಜಾಧವ್ ಎಂದು ಗುರುತಿಸಲಾಗಿದ್ದು, ಈತ ವಡಾಲಾ ನಿವಾಸಿ. ಮಹಿಳೆಯನ್ನು ರೈಲಿನ ಬಳಿಗೆ ದೂಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಘಟನೆ ಶುಕ್ರವಾರ ಸಂಜೆ ಮುಂಬೈನ ಖಾರ್ ರೈಲ್ವೆ ಸ್ಟೇಷನ್‍ನಲ್ಲಿ ಸಂಭವಿಸಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ತಾಂತ್ರಿಕತೆ ಹಾಗೂ ಬುದ್ಧಿವಂತಿಕೆಯ ಮೂಲಕ ಆರೋಪಿಯನ್ನು 12 ಗಂಟೆಗಳ ಒಳಗೆ ಬಂಧಿಸಿದ್ದಾರೆ.

    ಘಟನೆ ವಿಚಾರವಾಗಿ ಮಾತನಾಡಿದ ಇನ್ಸ್ ಪೆಕ್ಟರ್ ವಿಜಯ್ ಚೌಗುಲೆ, ಮಹಿಳೆ ಹಾಗೂ ಆರೋಪಿ ಇಬ್ಬರು ಎರಡು ವರ್ಷಗಳ ಹಿಂದೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಪರಸ್ಪರ ಒಬ್ಬರಿಗೊಬ್ಬರು ತಿಳಿದುಕೊಂಡಿದ್ದರು. ನಂತರ ಅವರ ಪರಿಚಯ ಸ್ನೇಹವಾಗಿ ಬದಲಾಯಿತು. ಆದರೆ ಆರೋಪಿ ಕುಡಿತದ ದಾಸ ಎಂದು ತಿಳಿದ ಮಹಿಳೆ, ಆತನಿಂದ ದೂರವಾಗಿದ್ದಾಳೆ. ಆದರೂ ಮಹಿಳೆಗೆ ಆರೋಪಿ ಕಿರುಕುಳ ನೀಡುತ್ತಿದ್ದನು. ಹಾಗಾಗಿ ಮಹಿಳೆ ಆರೋಪಿ ವಿರುದ್ಧ ಕೆಲವು ದೂರುಗಳನ್ನು ಕೂಡ ನೀಡಿದ್ದಳು. ಆದರೆ ಆರೋಪಿ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದನು ಎಂದು ಹೇಳಿದರು.

    ಶುಕ್ರವಾರ ಸಂಜೆ ಮಹಿಳೆ ಮುಂಬೈನ ಅಂದೇರಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಳೆ. ಅಲ್ಲದೆ ಆಕೆಯ ಸಹಾಯಕ್ಕಾಗಿ ಮಹಿಳೆ ತನ್ನ ಅಮ್ಮನನ್ನು ರೈಲ್ವೆ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದಳು. ಮಹಿಳೆ ನಿಲ್ದಾಣಕ್ಕೆ ಬಂದು ಆಕೆಯ ತಾಯಿಯನ್ನು ಭೇಟಿ ಮಾಡಿದಾಗಲೂ ಆರೋಪಿ ಸುಮೇದ್ ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ ಹಾಗೂ ಆಕೆಯನ್ನು ಅಡ್ಡಗಟ್ಟಿ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾನೆ. ಆದರೆ ಮಹಿಳೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಆರೋಪಿ ತಾನು ಸಾಯುವುದಾಗಿ ಮಹಿಳೆಗೆ ಬೆದರಿಕೆಯೊಡ್ಡಿ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನ ಕಡೆಗೆ ಓಡಲು ಆರಂಭಿಸಿದ್ದಾನೆ. ಬಳಿಕ ಓಡುವುದನ್ನು ನಿಲ್ಲಿಸಿ ಹಿಂದಿರುಗಿ ಮಹಿಳೆಯನ್ನು ಚಲಿಸುತ್ತಿದ್ದ ರೈಲು ಮತ್ತು ಫ್ಲಾಟ್‍ಫಾರ್ಮ್ ನಡುವಿನ ಅಂತರದಲ್ಲಿ ದೂಡಿದ್ದಾನೆ. ಈ ವೇಳೆ ಮಗಳನ್ನು ಉಳಿಸಲು ಆಕೆಯ ತಾಯಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಆದರೂ ಮಹಿಳೆಯನ್ನು ಆರೋಪಿ ರೈಲಿನ ಬಳಿ ದೂಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

    ಘಟನೆಯಲ್ಲಿ ಮಹಿಳೆ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು, ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಆಕೆಯ ತಲೆಗೆ 12 ಹೋಲಿಗೆಯನ್ನು ಹಾಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಚೌಗುಲೆ ಹೇಳಿದ್ದಾರೆ.

  • ಸಿಲಿಂಡರ್ ಸ್ಪೋಟ – ನಾಲ್ವರಿಗೆ ಗಂಭೀರ ಗಾಯ

    ಸಿಲಿಂಡರ್ ಸ್ಪೋಟ – ನಾಲ್ವರಿಗೆ ಗಂಭೀರ ಗಾಯ

    ಮುಂಬೈ: ಎಲ್‍ಪಿಜಿ ಸಿಲಿಂಡರ್ ಗಳನ್ನು ಇರಿಸಲಾಗಿದ್ದ ಗೋಡೌನ್‍ನಲ್ಲಿ ಸಿಲಿಂಡರ್ ಸ್ಪೋಟಗೊಂಡು ನಾಲ್ವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.

    ಈ ಕುರಿತಂತೆ ಪೊಲೀಸರು, ಪಶ್ಚಿಮ ಉಪನಗರ ವರ್ಸೋವಾ ಪ್ರದೇಶದ ಯಾರಿ ರಸ್ತೆಯಲ್ಲಿರುವ ಗೋಡೌನ್‍ನಲ್ಲಿ ಬೆಳಗ್ಗೆ ಸುಮಾರು 9:40ಕ್ಕೆ ಸಿಲಿಂಡರ್ ಸ್ಪೋಟದಿಂದ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಮತ್ತು 7 ನೀರಿನ ಜೆಟ್ಟಿಗಳನ್ನು ಸ್ಥಳಕ್ಕೆ ಕರೆಯಿಸಲಾಗಿದೆ ಎಂದು ತಿಳಿದರು.

    ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಸ್ಥಳೀಯ ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ್ದ ಹರಿಯಾಣ ವ್ಯಕ್ತಿ ಬಂಧನ

    ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ್ದ ಹರಿಯಾಣ ವ್ಯಕ್ತಿ ಬಂಧನ

    ಮುಂಬೈ: ನಗರದ ಕೆಲವು ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ವೀಟ್ ಮಾಡಿದ 19 ವರ್ಷದ ಯುವಕನನ್ನು ಸೋಮವಾರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

    ಆರೋಪಿಯನ್ನು ಬನ್ವಾರಿ ಸಿಂಗ್ ಎಂದು ಗುರುತಿಸಲಾಗಿದ್ದು, ಜನವರಿ 22ರಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬಾಂಬ್ ಸ್ಫೋಟಗೊಳಿಸುವುದಾಗಿ ಟ್ಯಾಗ್ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಮತ್ತು ಆಯುಕ್ತರು ತಿಳಿಸಿದ್ದಾರೆ.

    ಕಮಾಂಡೋ ಸಿಂಗ್ ಎಂಬ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆಯನ್ನು ಯುವಕ ಬಳಕೆ ಮಾಡುತ್ತಿದ್ದು, 7 ಮಲ್ಟಿಪ್ಲೆಕ್ಸ್ ಗಳಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದು ಹೇಳಿಕೊಂಡಿದ್ದಾನೆ.

    ಈ ಕುರಿತಂತೆ ಮಾಹಿತಿ ಬಂದ ಪೊಲೀಸರು ಕೂಡಲೇ ಹಲವು ಮಲ್ಟಿಪ್ಲೆಕ್ಸ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇದು ವಂಚಿಸಲು ಹಾಕಿರುವ ಟ್ವೀಟ್ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿ ತಾನು ಟ್ವೀಟ್ ಮಾಡಿದ್ದನ್ನು ಅಳಿಸಿ ಹಾಕಿದ್ದಾನೆ.

    ಘಟನೆ ವಿಚಾರವಾಗಿ ಸೈಬರ್ ಸೆಲ್ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಹರಿಯಾಣದಲ್ಲಿ ಬಂಧಿಸಲಾಗಿದ್ದು, ಆರೋಪಿ ಟ್ವೀಟ್ ಮಾಡಲು ಬಳಸಿದ್ದ ಮೊಬೈಲ್‍ನನ್ನು ವಶಪಡಿಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತರಾದ ರಶ್ಮಿ ಕರಂದಿಕರ್ ಹೇಳಿದ್ದಾರೆ.

    ಇದೀಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

  • ವ್ಯಕ್ತಿಗೆ 11 ಲಕ್ಷ ರೂ ಪಂಗನಾಮ ಹಾಕಿದ  ಅಮೆರಿಕ ಮಹಿಳೆ

    ವ್ಯಕ್ತಿಗೆ 11 ಲಕ್ಷ ರೂ ಪಂಗನಾಮ ಹಾಕಿದ ಅಮೆರಿಕ ಮಹಿಳೆ

    ಮುಂಬೈ: ಸೋಶಿಯಲ್ ಮೀಡಿಯದಲ್ಲಿ ಪರಿಚಯವಾದ ಅಮೆರಿಕ ಮಹಿಳೆಯ ಮಾತು ಕೇಳಿ  ವ್ಯಕ್ತಿಯೊಬ್ಬ 11 ಲಕ್ಷ ರೂ. ಕಳೆದುಕೊಂಡಿರುವ ಘಟನೆ  ಮುಂಬೈನಲ್ಲಿ ನಡೆದಿದೆ.

    ವಂಚಿತಗೊಂಡ ವ್ಯಕ್ತಿ ಮುಂಬೈ ವಿಮಾನ ನಿಲ್ದಾಣದ ಸಮೀಪವಿರುವ 5 ಸ್ಟಾರ್ ಹೋಟೆಲ್‍ನ ಪರ್ಚೆಸಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಆದರೆ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.

    ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅಮೆರಿಕಾದ ವೈನರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಯಿಂದ ಈತನಿಗೆ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು, ನಂತರ ಇಬ್ಬರು ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡು ವಾಟ್ಸಪ್ ಕಾಲ್ ನಲ್ಲಿ ಮಾತನಾಡಲು ಆರಂಭಿಸಿದ್ದಾರೆ. ಹೀಗೆ ಮಹಿಳೆ ಒಮ್ಮೆ ಭಾರತದಲ್ಲಿ ಮೀನುಗಾರಿಕೆ ವ್ಯಾಪಾರ ಮಾಡಲು ಯೋಚಿಸಿದ್ದು, ಸಹಾಯ ಮಾಡುತ್ತೀರಾ ಎಂದು ವ್ಯಕ್ತಿಗೆ ಕೇಳಿದ್ದಾಳೆ. ಅಲ್ಲದೆ ವ್ಯಾಪಾರ ನಡೆಸಲು ಫಾರ್ಮ್‍ವೊಂದನ್ನು ಖರೀದಿಸುವುದಾಗಿ ಕೂಡ ಮಹಿಳೆ ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದ್ದಳು. ಹೀಗೆ ಕೆಲವು ದಿನಗಳ ನಂತರ ವ್ಯಕ್ತಿಗೆ ಮನೆಯ ವಿಳಾಸವನ್ನು ಕೇಳಿ ಆತನಿಗೆ ವ್ಯಾಪಾರ ನಡೆಸಲು ವ್ಯವಸ್ಥೆಗೊಳಿಸಲು 50,000 ಪೌಂಡ್‍ಗಳನ್ನು ಮತ್ತು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ್ದಾಳೆ.

    ಒಮ್ಮೆ ಮಹಿಳೆಯೇ ಕಸ್ಟಮ್ಸ್ ಅಧಿಕಾರಿಗಳ ಹೆಸರಿನಲ್ಲಿ ವ್ಯಕ್ತಿಗೆ ಕರೆ ಮಾಡಿ ಮಹಿಳೆಯೊಬ್ಬಳು ಅಕ್ರಮವಾಗಿ ವಿದೇಶಿ ಕರೆನ್ಸಿಯನ್ನು ಆಮದು ಮಾಡಿಕೊಂಡಿದ್ದಾಳೆ. ಈ ಚಟುವಟಿಕೆ ಭಾರತೀಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗಾಗಿ ಹಣ ಬೇಕಾದರೆ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ ಇಮೇಲ್ ಐಡಿಯನ್ನು ಕಳುಹಿಸಬೇಕಾಗುತ್ತದೆ ಎಂದು ಹೇಳಿದ್ದಾಳೆ. ನಂತರ ಶೀಘ್ರವೇ ವ್ಯಕ್ತಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣವನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಈ ಕುರಿತ ಕ್ರಮ ಕೈಗೊಳ್ಳಬಾರದಿದ್ದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂಬ ಸಂದೇಶ ಬಂದಿದೆ.

    ಈ ಮೇಲ್‍ನನ್ನು ನಿಜ ಎಂದು ನಂಬಿದ ವ್ಯಕ್ತಿ ಕೂಡಲೇ ಮಹಿಳೆಗೆ ಕರೆ ಮಾಡಿದ್ದಾನೆ. ಆಗ ಮಹಿಳೆ ಭಾರತಕ್ಕೆ ಆಗಮಿಸಿದಾಗ ನಿಮ್ಮ ಹಣವನ್ನು ಹಿಂದಿರುಗಿಸುವುದಾಗಿ ಮಾತು ನೀಡಿ ಸದ್ಯ ದಂಡ ಪಾವತಿಸುವಂತೆ ವ್ಯಕ್ತಿಗೆ ತಿಳಿಸಿದ್ದಾಳೆ. ಹೀಗಾಗಿ ವ್ಯಕ್ತಿ ತನ್ನ ಬಳಿ ಹಣವಿಲ್ಲದಿದ್ದರೂ ತನ್ನ ಸ್ನೇಹಿತರು, ಸಂಬಂಧಿಕರಿಂದ ಹಣ ಪಡೆದಿದ್ದಾನೆ. ಜೊತೆ ತನ್ನ ತಾಯಿ ಮತ್ತು ಪತ್ನಿ ಒಡೆವೆಯನ್ನು ಕೂಡ ಮಾರಾಟ ಮಾಡಿದ್ದಾನೆ.

    ಶುಲ್ಕ ಪಾವತಿಸಿದ ನಂತರವೂ ಪಾರ್ಸೆಲ್ ಬರದಿದ್ದನ್ನು ಕಂಡು ವ್ಯಕ್ತಿಗೆ ಅನುಮಾನ ಬಂದು ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದಾನೆ. ಬಳಿಕ ಪೊಲೀಸರಿಗೆ ಘಟನೆ ಕುರಿತಂತೆ ವಿವರಿಸಿ, ಸಾಲಗಾರರು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದಾರೆ, ಆದರೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನನಗೆ ಉದ್ಯೋಗ ಬೇರೆ ಇಲ್ಲ ನಾನು ಭಾರೀ ಸಾಲ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.

  • ಮುಂಬೈ ಸ್ಥಳೀಯ ರೈಲುಗಳಲ್ಲಿ ಆಡಿಯೋ, ವೀಡಿಯೋ ರೆಕಾರ್ಡಿಂಗ್ ಸಿಸ್ಟಮ್

    ಮುಂಬೈ ಸ್ಥಳೀಯ ರೈಲುಗಳಲ್ಲಿ ಆಡಿಯೋ, ವೀಡಿಯೋ ರೆಕಾರ್ಡಿಂಗ್ ಸಿಸ್ಟಮ್

    ಮುಂಬೈ: ಪ್ರಯಾಣಿಕರ ಸುರಕ್ಷತೆಯ ನಿಟ್ಟಿನಲ್ಲಿ ಮುಂಬೈನ ಸ್ಥಳೀಯ ರೈಲುಗಳಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡ್ ವ್ಯವಸ್ಥೆಯನ್ನು ಅಳವಡಿಸುವುದಾಗಿ ಪಶ್ಚಿಮ ರೈಲ್ವೆ ಘೋಷಿಸಿದೆ.

    ಇತ್ತೀಚೆಗಷ್ಟೇ 2021ರ ಕೇಂದ್ರ ಬಜೆಟ್ ನಡೆದಿದ್ದು, ಈ ವೇಳೆ ರೈಲ್ವೆ ಅಭಿವೃದ್ಧಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ 1.10 ಲಕ್ಷ ಹಣ ಘೋಷಿಸಿದ್ದಾರೆ. ಈ ಹಿನ್ನೆಲೆ ಇದೀಗ 110 ಮುಂಬೈ ಸ್ಥಳೀಯ ರೈಲುಗಳಲ್ಲಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ವ್ಯವಸ್ಥೆಯನ್ನು ಅಳವಡಿಸಲು ಪಶ್ಚಿಮ ರೈಲ್ವೆ ಇಲಾಖೆ ಮುಂದಾಗಿದೆ.

    ರೈಲಿನಲ್ಲಿ ಮೋಟಾರ್ ಮ್ಯಾನ್ ಹಾಗೂ ಗಾರ್ಡ್‍ಗಳ ಕ್ಯಾಬಿನ್ ಬಳಿ ಹೊರಗೆ ಮತ್ತು ಒಳಗೆ ಆಡಿಯೋ, ವೀಡಿಯೋ ರೆಕಾರ್ಡಿಂಗ್ ವ್ಯವಸ್ಥೆಯ ಕ್ಯಾಮೆರಾವನ್ನು ಫಿಕ್ಸ್ ಮಾಡಲಾಗುತ್ತದೆ. ಹೀಗೆ ಒಟ್ಟಾರೆಯಾಗಿ 110 ರೈಲುಗಳಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್ ವ್ಯವಸ್ಥೆಗೊಳಿಸಲಾಗುತ್ತಿದೆ.

    ಈ ಕ್ರಮದ ಮೂಲಕ ರೈಲ್ವೆ, ಸ್ಥಳೀಯ ರೈಲುಗಳ ಕಾರ್ಯಾಚರಣೆ ಅಂದರೆ ಚಾಲಕರು ಹಾಗೂ ಗಾರ್ಡ್‍ಗಳ ಕಾರ್ಯನಿರ್ವಹಿಸುವ ರೀತಿ, ರೈಲಿನ ವೇಗದ ನಿರ್ಬಂಧ, ರೈಲ್ವೆ ಅಪಘಾತ ಇತರ ವಿಚಾರಗಳ ತಿಳಿದುಕೊಳ್ಳುವ ಗುರಿ ಹೊಂದಿದೆ. ಜೊತೆಗೆ ಈ ವ್ಯವಸ್ಥೆಯಿಂದ ಪ್ರಯಾಣಿಕರ ಸುರಕ್ಷತೆಯನ್ನು ತಿಳಿಯಲು ಸಹಾಯಕವಾಗಿದೆ ಎಂದು ಡಬ್ಲ್ಯೂ ಆರ್ ಮುಖ್ಯ ಜನಸಂಪರ್ಕ ಅಧಿಕಾರಿ ಸುಮಿತ್ ಠಾಕೂರ್ ಹೇಳಿದ್ದಾರೆ.

  • ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಮುಂಬೈ: ಸತ್ಯ ಇನ್ ಲವ್ ಚಿತ್ರದ ನಾಯಕಿ, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ರಿತೇಶ್ ದೇಶ್ ಮುಖ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋ ಹಂಚಿಕೊಂಡಿರುವ ರಿತೇಶ್ ಮ್ಯಾರೇಜ್ ಅನಿವರ್ಸರಿ ಸೆಲೆಬ್ರೆಷನ್‍ನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ವತಃ ಜೆನಿಲಿಯಾ ಖುದ್ದಾಗಿ ಮಾಡಿದ್ದಾರೆ. ನಮ್ಮ ಅನಿವರ್ಸರಿ ಸೆಲೆಬ್ರೆಷನ್‍ಗೆ ದೆಹಲಿಯಿಂದ ವಿಕ್ರಮ್‍ಜಿತ್ ರಾಯ್ ಬಾಣಸಿಗನಾಗಿ ಆಗಮಿಸಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Riteish Deshmukh (@riteishd)

    ಇದೇ ರೀತಿ ಜೆನಿಲಿಯಾ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನನ್ನ ಜೀವನದ ಅದ್ಭುತ ಕ್ಷಣಗಳನ್ನು ರಿತೇಶ್ ಜೊತೆ ಆಚರಿಸುತ್ತಿದ್ದೇನೆ. ನಮ್ಮ ಈ ಸುಮಧುರವಾದ ದಿನದಂದು ದೆಹಲಿಯಿಂದ ಆಗಮಿಸಿ ನಾವು ಕೇಳಿದ ಎಲ್ಲಾ ವೆಜಿಟೇರಿಯನ್ ಮೆನು ಹಾಗೂ ಸ್ವೀಟ್‍ಗಳನ್ನು ಮಾಡಿಕೊಟ್ಟಿದಕ್ಕೆ ವಿಕ್ರಮ್‍ಜಿತ್ ರಾಯ್‍ರಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೆರಿ ಕಸಮ್ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 2012 ರಂದು ಇಬ್ಬರು ವಿವಾಹವಾದರು. ಇದೀಗ ಈ ಜೋಡಿಗೆ ರಿಯಾನ್ ಹಾಗೂ ರಹೈಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.