Tag: ಪಬ್ಲಿಕ್ ಟಿವಿ Mrs Sri Lanka beauty pageant

  • ವಿಚ್ಛೇದಿತೆಯೆಂದು ವೇದಿಕೆ ಮೇಲೆಯೇ ಮಿಸಸ್ ಶ್ರೀಲಂಕಾ ವಿಜೇತೆ ಕಿರೀಟ ಕಸಿದ್ರು!

    ವಿಚ್ಛೇದಿತೆಯೆಂದು ವೇದಿಕೆ ಮೇಲೆಯೇ ಮಿಸಸ್ ಶ್ರೀಲಂಕಾ ವಿಜೇತೆ ಕಿರೀಟ ಕಸಿದ್ರು!

    ಕೋಲಂಬೋ: ಶ್ರೀಲಂಕಾದ ಫೇಮಸ್ ಮಿಸಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ವಿಜೇತೆ ತಲೆಯ ಮೇಲಿದ್ದ ಕಿರೀಟವನ್ನು ಕಸಿದುಕೊಂಡಿರುವ ಘಟನೆ ನಡೆದಿದೆ.

    ಭಾನುವಾರ ರಾತ್ರಿ ಮಿಸಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯಲ್ಲಿ ವೇದಿಕೆ ಮೇಲೆ ವಾಕ್ ಮಾಡಿ ಪುಷ್ಪಿಕಾ ಡಿ ಸಿಲ್ವಾ ಮಿಸಸ್ ಶ್ರೀಲಂಕಾ ವಿಜೇತೆಯಾಗಿ ಕಿರೀಟ ಧರಿಸಿದರು. ಆದರೆ ಕೆಲವೇ ಕ್ಷಣಗಳಲ್ಲಿ 2019ರ ಶ್ರೀಲಂಕಾದ ವಿಜೇತೆ ವಲ್ರ್ಡ್ ಕರೋಲಿನ್ ಜೂರಿ, ನಿಯಮದ ಪ್ರಕಾರ ವಿಚ್ಛೇದಿತ ಮಹಿಳೆಯರು ಸ್ಪರ್ಧೆ ಭಾಗವಹಿಸುವಂತಿಲ್ಲ. ಎಂದು ಪುಷ್ಪಿಕಾ ಡಿ ಸಿಲ್ವಾ ತಲೆ ಮೇಲೆ ಧರಿಸಿದ್ದ ಕಿರೀಟವನ್ನು ಕಸಿದುಕೊಂಡಿದ್ದಾರೆ.

    ಕೂಡಲೇ ಪುಷ್ಪಿಕಾ ಡಿ ಸಿಲ್ವಾ ಅವರು ಕೂಡಲೇ ಸ್ಥಳದಿಂದ ಹೊರಟು ಹೋದರು. ಆದರೆ ಭಾನುವಾರ ನಡೆದ ಈ ಘಟನೆ ವೇಳೆ ತಲೆಯ ಮೇಲಿದ್ದ ಕಿರೀಟವನ್ನು ಎಳೆದಾಗ ತಮ್ಮ ತಲೆಗೆ ಪೆಟ್ಟಾಗಿರುವುದಾಗಿ ಪುಷ್ಪಿಕಾ ಡಿ ಸಿಲ್ವಾ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಸ್ಪರ್ಧೆಯ ಆಯೋಜಕರು ಕೂಡ ಪುಷ್ಪಿಕಾ ವಿಚ್ಛೇದಿತಾ ಮಹಿಳೆಯಲ್ಲ. ಹಾಗಾಗಿ ಅವರ ಕಿರೀಟವನ್ನು ಹಿಂದಿರುಗಿಸಬೇಕು ಎಂದು ತಿಳಿಸಿದ್ದರು. ಇದೀಗ ಮಂಗಳವಾರ ಕಿರೀಟವನ್ನು ಮತ್ತೆ ಪುಷ್ಪಿಕಾ ಡಿ ಸಿಲ್ವಾರವರಿಗೆ ಹಿಂದಿರುಗಿಸಲಾಗಿದೆ.