Tag: ಪಬ್ಲಿಕ್ ಟಿವಿ Mother

  • ತಾಯಿ, ಮಗ SSLC ಪರೀಕ್ಷೆಯಲ್ಲಿ ಉತ್ತೀರ್ಣ

    ತಾಯಿ, ಮಗ SSLC ಪರೀಕ್ಷೆಯಲ್ಲಿ ಉತ್ತೀರ್ಣ

    ಮಡಿಕೇರಿ: ಒಂದೇ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ತಾಯಿ, ಮಗ ಇಬ್ಬರು ಪಾಸ್ ಆಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ಸಮೀಪದ ಕೈಕೇರಿ ನಿವಾಸಿಯಾಗಿರುವ ಸಮಾಜ ಸೇವಕಿ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಹಾಗೂ ಪುತ್ರ ಗೌತಮ್ ಇಬ್ಬರು ಒಟ್ಟಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು.

    ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಈ ಹಿಂದೆ ಪರೀಕ್ಷೆ ಬರೆದು ಗಣಿತದಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಈ ಬಾರಿ ತನ್ನ ತಾಯಿಯೊಂದಿಗೆ ಪರೀಕ್ಷೆ ಕೂರುವ ಅವಕಾಶ ಸಿಕ್ಕಿತು. ಮಡಿಕೇರಿಯಲ್ಲಿ ಕುಸುಮಾರವರು 6 ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರೆ, ಪುತ್ರ ಗೌತಮ್ ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದು ವಿಶೇಷ.

    ಕುಸುಮಾವತಿ 18 ವರ್ಷಗಳ ಹಿಂದೆ ಟಿ.ಶೆಟ್ಟಿಗೇರಿ ಮಾಯಣಮಾಡ ಮಂದಣ್ಣ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರಬೇಕಾದರೆ ವಿವಾಹವಾದ್ದರಿಂದ ವಿದ್ಯಾಭ್ಯಾಸಕ್ಕೆ ಕಡಿವಾಣ ಬಿತ್ತು. ಇದೀಗ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ವಿಶೇಷವೆಂದರೆ ತಾಯಿ, ಮಗ ಇಬ್ಬರೂ ಒಂದೇ ಸಮಯದಲ್ಲಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ಕೊಡಗು ಜಿಲ್ಲೆಯ ಮಟ್ಟಿಗೆ ವಿಭಿನ್ನ ಸಾಧನೆಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

  • ತಾಯಿ ಸಾವಿನ ದುಃಖದ ಮಧ್ಯೆಯೂ ಪದವಿ ಪರೀಕ್ಷೆ ಬರೆದ ಯುವತಿ

    ತಾಯಿ ಸಾವಿನ ದುಃಖದ ಮಧ್ಯೆಯೂ ಪದವಿ ಪರೀಕ್ಷೆ ಬರೆದ ಯುವತಿ

    ರಾಯಚೂರು: ತಾಯಿಯ ಸಾವಿನ ದುಃಖದ ಮಧ್ಯೆಯೂ ಹೆತ್ತಮ್ಮನ ಆಸೆಯಂತೆ ಪದವಿ ಪರೀಕ್ಷೆಗೆ ಯುವತಿ ಹಾಜರಾದ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಅಮಿನಘಡದಲ್ಲಿ ನಡೆದಿದೆ.

    ಮಗಳು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಅಂತ ಕಷ್ಟಪಡುತ್ತಿದ್ದ ತಾಯಿ, ಮಗಳ ಪರೀಕ್ಷೆಯ ಹಿಂದಿನ ದಿನವೇ ಸಾವನ್ನಪ್ಪಿದ್ದಾರೆ. ಯಾವುದೇ ಕಾರಣಕ್ಕೂ ಓದು ನಿಲ್ಲಬಾರದು ಎಂದು ಹೇಳುತ್ತಿದ್ದ ತಾಯಿ ಮಾತಿಗೆ ಬೆಲೆಕೊಟ್ಟು ಯುವತಿ ಬಸಲಿಂಗಮ್ಮ ಪೂಜಾರ ತನ್ನ ಪರೀಕ್ಷೆಯನ್ನು ಬರೆದು ಬಂದು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

    ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದ ಮಧ್ಯೆಯೂ ಹೊಲದ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಏಕಾಏಕೀ ರಕ್ತದೊತ್ತಡ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ತಾಯಿಯ ಸಾವಿನ ಮಧ್ಯೆಯೂ ಅಮೀನಗಢದಿಂದ ಲಿಂಗಸುಗೂರಿಗೆ ಬಂದು ಪದವಿ ಮೂರನೇ ಸೆಮಿಸ್ಟರ್ ಪರೀಕ್ಷೆಯನ್ನು ಯುವತಿ ಬಸಲಿಂಗಮ್ಮ ಪೂಜಾರ ಬರೆದಿದ್ದಾರೆ. ಹೆಣ್ಣು ಮಕ್ಕಳು ಚೆನ್ನಾಗಿ ಓದಬೇಕು ಎನ್ನುವ ಮಾತುಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್

  • ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ

    ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆಯಲ್ಲಿ ಮೂರು ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಜರುಗಿದೆ.

    ಹರ್ಷಿತಾ(3), ಚಂದ್ರಮ್ಮ (25), ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರಾದ ಚಂದ್ರಮ್ಮನ ಪತಿ ಮಂಜಪ್ಪ ಡಿ.ಆರ್ ಪೊಲೀಸ್ ಕಾನ್ಸ್‌ಟೇಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ, ಮಗು ಸಹಿತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪ್ರಕರಣ ಬೆಳಕಿಗೆ ಬಂದಿದೆ.

    ಮೂರು ವರ್ಷದ ಹೆಣ್ಣು ಮಗುವಿನೊಂದಿಗೆ ತಾನು ಆತ್ಮಹತ್ಯೆ ಮಾಡಿಕೊಂಡ ಚಂದ್ರಮ್ಮ ಮೃತ ನೋಡಿ ಪತ್ನಿ ಮಂಜಪ್ಪನಿಗೆ ಸಿಡಿಲು ಹೊಡೆದಂತಾಗಿದೆ. ಪೊಲೀಸ್ ಪೇದೆ ಮಂಜಪ್ಪ ಹಾಗು ಚಂದ್ರಮ್ಮನ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದು, ಅನ್ಯೋನ್ಯವಾಗಿ ಇದ್ದರು ಎನ್ನಲಾಗಿದೆ. ಆದರೆ ಕಳೆದ ದಿನ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು, ಮನನೊಂದು ಈ ರೀತಿಯಾಗಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಈ ಸಂಬಂಧ ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ. ಇದನ್ನೂ ಓದಿ : ಬರ್ತ್ ಡೇ ಪಾರ್ಟಿಗೆ ತೆರಳಿದ್ದ ಯುವಕರು ನೀರುಪಾಲು

  • ಡಿಸ್ಚಾರ್ಜ್ ಆದ ತಾಯಿಯ ಜೊತೆ ಮಗನೂ ಆಸ್ಪತ್ರೆ ಗೇಟ್‍ನಲ್ಲೇ ದುರ್ಮರಣ

    ಡಿಸ್ಚಾರ್ಜ್ ಆದ ತಾಯಿಯ ಜೊತೆ ಮಗನೂ ಆಸ್ಪತ್ರೆ ಗೇಟ್‍ನಲ್ಲೇ ದುರ್ಮರಣ

    ಚಿತ್ರದುರ್ಗ: ಉಸಿರಾಟದ ತೊಂದರೆಯಿಂದ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಗುಣಮುಖವಾಗಿ ಊರಿಗೆ ತೆರಳಲು, ಮಗನ ಬೈಕಲ್ಲಿ ಆಸ್ಪತ್ರೆಯಿಂದ ಹೊರ ಬರುತಿದ್ದಂತೆ ಗೇಟ್ ಬಳಿ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಖಾಸಗಿ ಆಸ್ಪತ್ರೆಯ ಗೇಟ್ ಬಳಿ ನಡೆದಿದೆ.

    ಚಿತ್ರದುರ್ಗ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ ಶಿವಮ್ಮ(65) ಹಾಗೂ ಮಗ ಸಿದ್ದೇಶ್ ಮೃತ ದುರ್ದೈವಿಗಳು. ಕಳೆದ ಒಂದು ವಾರದಿಂದ ತನ್ನ ತಾಯಿ ಶಿವಮ್ಮಗೆ ಎದುರಾದ ಅನಾರೋಗ್ಯ ಸಮಸ್ಯೆಯಿಂದಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ಸಿದ್ದೇಶ್ ಅವರು, ತನ್ನ ತಾಯಿ ಇಂದು ಸಂಪೂರ್ಣ ಗುಣಮುಖರಾದರೆಂಬ ಸಂತಸದಲ್ಲಿ ಪತ್ನಿಯೊಂದಿಗೆ ಸ್ವಗ್ರಾಮವಾದ ಸೊಲ್ಲಾಪುರಕ್ಕೆ ಹೊರಟಿದ್ದರು.

    ಬಿಡುಗಡೆ ಭಾಗ್ಯ ಸಿಕ್ಕಿದ್ದರಿಂದ ಇಂದು ಹುಟ್ಟೂರಿಗೆ ತೆರಳುವ ಅವಸರದಲ್ಲಿ ಆಸ್ಪತ್ರೆಯಿಂದ ಮೂವರು ಒಂದೇ ಬೈಕಿನಲ್ಲಿ ಹೊರಬಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಲಾರಿಯೊಂದು ಆಸ್ಪತ್ರೆ ಗೇಟ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಇವರ ಬೈಕಿಗೆ ಡಿಕ್ಕಿಹೊಡೆದಿದೆ.

    ಗುದ್ದಿದ ರಭಸಕ್ಕೆ ತಾಯಿ, ಮಗನ ದೇಹಗಳು ಛಿದ್ರವಾಗಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಸಿದ್ದೇಶ್ ಅವರ ಪತ್ನಿಗೆ ಬಲವಾದ ಪೆಟ್ಟಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ಚಾಲನೆ ಮಾಡಿಕೊಂಡು ಬಂದಂತಹ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

     

  • ಕಳೆದ ವಾರ ಅಮ್ಮ, ಇಂದು ಮಗ – ಹಬ್ಬದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

    ಕಳೆದ ವಾರ ಅಮ್ಮ, ಇಂದು ಮಗ – ಹಬ್ಬದ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ

    ಚಿಕ್ಕಮಗಳೂರು: ವಾರದ ಹಿಂದೆ ತಾಯಿಯನ್ನ ಕಳೆದುಕೊಂಡಿದ್ದ ಯುವಕ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನ ಬಿಟ್ಟು ಕೊರೊನಾಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿ ನಡೆದಿದೆ.

    ಮೃತನನ್ನ ಮದೀನ್(30) ಎಂದು ಗುರುತಿಸಲಾಗಿದೆ. ಇಂದು ರಂಜಾನ್ ಹಬ್ಬ. ಸಂಭ್ರಮ-ಸಡಗರ ನೆಲೆಸಬೇಕಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

    ಮದೀನ್ ತಾಯಿ ಶಾಯಿನ್‍ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮದೀನ್‍ನಲ್ಲೂ ಪಾಸಿಟಿವ್ ಬಂದಿದ್ದರಿಂದ ಅಮ್ಮನನ್ನೂ ನೋಡಿಕೊಂಡಂತೆ ಆಗುತ್ತೆ ಎಂದು ಆತನನ್ನೂ ನಗರದ ಕೆ.ಆರ್.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ವಾರ ಮದೀನ್ ತಾಯಿ ಶಾಯಿನ್ ಸಾವನ್ನಪ್ಪಿದ್ದರು. ಶಾಯಿನ್‍ರ ಅಂತ್ಯ ಸಂಸ್ಕಾರ ಮಾಡಿ ಬರುವಷ್ಟರಲ್ಲಿ ಮದೀನ್ ಸ್ಥಿತಿ ಕೂಡ ಗಂಭೀರವಾಗಿತ್ತು. ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿ ಆಯ್ತು ಎಂದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇಂದು ಮದೀನ್ ಕೂಡ ಸಾವನ್ನಪ್ಪಿದ್ದಾರೆ

    ಆರೋಗ್ಯವಾಗಿದ್ದ ಮದೀನ್ ತಾಯಿ ತೀರಿಕೊಂಡ ಬಳಿಕ ತೀವ್ರ ಅಸ್ವಸ್ಥನಾಗಿದ್ದರು. ಕಳೆದೊಂದು ವಾರದಿಂದ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಮದೀನ್ ಇಂದು ಕೊನೆಯುಸಿರೆಳೆದಿದ್ದಾರೆ. ಆರೋಗ್ಯವಾಗಿದ್ದ ಮಗ ಹೇಗೆ ಸತ್ತ ಎಂದು ಮದೀನ್ ತಂದೆ ಶಫಿವುಲ್ಲಾ ಆತಂಕಕ್ಕೀಡಾಗಿದ್ದಾರೆ. ಒಂದು ಕ್ವಿಂಟಾಲ್ ಅಕ್ಕಿ ಮೂಟೆಯನ್ನ ಎತ್ತಿ ಎಸೆಯುತ್ತಿದ್ದ. ಅಷ್ಟು ಗಟ್ಟಿ ಇದ್ದವನು ಹೇಗೆ ವೀಕ್ ಆದ ಸಾವನ್ನಪ್ಪಿದ ಎಂದು ಕಂಗಾಲಾಗಿದ್ದಾರೆ.

    ನಿನ್ನೆ ರಾತ್ರಿ 1 ಗಂಟೆವರೆಗೆ ಸ್ನೇಹಿತರ ಜೊತೆ ಮಾತನಾಡಿರುವವನು ಇಂದು ಬೆಳಗ್ಗಿನ ಜಾವ ಸತ್ತಿದ್ದಾನೆ ಅಂದರೆ ನಂಬಲು ಅಸಾಧ್ಯ ಎಂದು ತಂದೆ ಶಫಿವುಲ್ಲಾ ನೊಂದಿದ್ದಾರೆ. ನೊಂದ ತಂದೆ ಕೊರೊನಾ ಬಂತು ಅಂತ ಆಸ್ಪತ್ರೆಗೆ ಹೋಗಬೇಡಿ. ಆಸ್ಪತ್ರೆಗೆ ಹೋದರೆ ಕಥೆ ಮುಗಿಯಿತು. ಮನೆಯಲ್ಲೇ ಕಷಾಯ ಕುಡಿದು ಹುಷಾರಾಗಿ. ಆಸ್ಪತ್ರೆಗೆ ಹೋದರೆ ವಾಪಸ್ ಬರಲ್ಲ ಎಂದು ಅಸಮಾಧಾನದ ಹೊರಹಾಕಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌತಳ್ಳಿ ಗ್ರಾಮದ 22 ವರ್ಷದ ಯುವಕ ಶ್ರೇಯಸ್ ಕೂಡ ಇದೇ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಶಿವಗಿರಿ ಸೇವಾ ಯುವಕರ ತಂಡ ಆತನ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಎರಡು ದಿನದಲ್ಲಿ ಮೂವರು ಹದಿಹರೆಯದ ಯುವಕರು ಸಾವನ್ನಪ್ಪಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.