Tag: ಪಬ್ಲಿಕ್ ಟಿವಿ MasterChef

  • ರಾಮನಗರದಲ್ಲಿ ಕನ್ನಡಾಭಿಮಾನ ಮೆರೆದ ತಮಿಳು ಸ್ಟಾರ್ ವಿಜಯ್ ಸೇತುಪತಿ

    ರಾಮನಗರದಲ್ಲಿ ಕನ್ನಡಾಭಿಮಾನ ಮೆರೆದ ತಮಿಳು ಸ್ಟಾರ್ ವಿಜಯ್ ಸೇತುಪತಿ

    ಬೆಂಗಳೂರು: ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಇಂದು ರಾಮನಗರಕ್ಕೆ ಬಂದಿದ್ದು, ಕನ್ನಡಾಭಿಮಾನ ತೋರಿಸಿದ್ದಾರೆ.

    ತಮಿಳಿನಲ್ಲಿ ಆರಂಭವಾಗುತ್ತಿರುವ ಮಾಸ್ಟರ್ ಶೆಫ್ ಕಾರ್ಯಕ್ರಮವನ್ನು ಉದ್ಘಾಟಿಸಲು ವಿಜಯ್ ಸೇತುಪತಿಯವರು ರಾಮನಗರದ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಆಗಮಿಸಿದ್ದರು. ಈ ವೇಳೆ ಮಾಧ್ಯದವರೊಂದಿಗೆ ಮಾತನಾಡಿದ ಅವರು ಕನ್ನಡದಲ್ಲಿ ಡೈಲಾಂಗ್‍ವೊಂದನ್ನು ಹೊಡೆದಿದ್ದಾರೆ.

    ವಿಶೇಷವೆಂದರೆ ಕರ್ನಾಟಕದಲ್ಲಿ ತಮಗೆ ಮಡಿಕೇರಿ, ಕೂರ್ಗ್ ಸ್ಥಳ ಬಹಳ ಇಷ್ಟ ಎಂದು ಹೇಳಿಕೊಂಡಿದ್ದಾರೆ. ನಾನು ಬೆಂಗಳೂರು ಹಾಗೂ ಮೈಸೂರಿಗೆ ಭೇಟಿ ನೀಡಿದ್ದೇನೆ. ಮೈಸೂರಿನ ಅರಮನೆ ನೋಡಿದ್ದೇನೆ ಬಹಳ ಸುಂದರವಾಗಿದೆ ಎಂದು ಹೇಳುತ್ತಾರೆ.

    ಇಂಗ್ಲೀಷಿನಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ನನನಗೆ ಕನ್ನಡ ಅರ್ಥ ಆಗುತ್ತದೆ ಕನ್ನಡದಲ್ಲಿಯೇ ಪ್ರಶ್ನೆ ಕೇಳಿ ಎಂದು ಹೇಳಿದ್ದಾರೆ. ನಂತರ ತಾವು ನಟಿಸಿರುವ ಡಬ್ಬಿಂಗ್ ಸಿನಿಮಾದ ಕನ್ನಡದ ಡೈಲಾಂಗ್‍ವೊಂದನ್ನು ಹೇಳಿ ರಂಜಿಸಿದ್ದಾರೆ. ಅಲ್ಲದೇ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಮಗ ದರ್ಶನ್ ಪರ ನಿಂತ ಸಂಸದೆ ಸುಮಲತಾ

  • ಕೊರೊನಾ ವಾರಿಯರ್ಸ್‍ಗೆ ಊಟ ವಿತರಿಸಲು ಮುಂದಾದ ಸಂಜೀವ್ ಕಪೂರ್

    ಕೊರೊನಾ ವಾರಿಯರ್ಸ್‍ಗೆ ಊಟ ವಿತರಿಸಲು ಮುಂದಾದ ಸಂಜೀವ್ ಕಪೂರ್

    ಮುಂಬೈ: ಕೋವಿಡ್ ನಮ್ಮೆಲ್ಲರನ್ನು ಆತಂಕಕ್ಕೀಡು ಮಾಡಿದೆ. ಈ ವೇಳೆ ಯಾವುದೇ ಲಾಭವನ್ನು ಬಯಸದೇ ಜನರು ಮತ್ತು ಅನೇಕ ಸಂಸ್ಥೆಗಳು ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರು ತಮ್ಮ ಕೈನಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಲು ಒಟ್ಟಿಗೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇತ್ತೀಚೆಗೆ ಮಾಸ್ಟರ್ ಶೇಫ್ ಸಂಜೀವ್ ಕಪೂರ್ ಕೂಡ ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡಲು ಮುಂದಾಗಿದ್ದಾರೆ.

    ಸಂಜೀವ್ ಕಪೂರ್‍ರವರು ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯ ಆರೋಗ್ಯ ಸಿಬ್ಬಂದಿಗೆ ಉಚಿತವಾಗಿ ಊಟ ಒದಗಿಸಲು ವಲ್ರ್ಡ್ ಸೆಂಟ್ರಲ್ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ಕೈ ಜೋಡಿಸಿರುವುದಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಮುಂಬೈನ ಕೂಪರ್ ಆಸ್ಪತ್ರೆ ಮತ್ತು ಸಿಯಾನ್ ಆಸ್ಪತ್ರೆಯಲ್ಲಿರುವ ಆರೋಗ್ಯ ಸಿಬ್ಬಂದಿಗೆ ಊಟ ಒದಗಿಸಲು @ವೀ ಕಿಚನ್ ಮತ್ತು ತಾಜ್ ಹೋಟೆಲ್ ಜೊತೆ ನಾವು ಸೇರಿಕೊಂಡಿದ್ದೇವೆ. ನಾವು ಶೀಘ್ರವೇ ಇದನ್ನು ಅಹಮದಾಬಾದ್‍ಗೂ ವಿಸ್ತರಿಸಲಿದ್ದೇವೆ ಮತ್ತು ದೆಹಲಿಗೂ ಕಳುಹಿಸಲು ಸಿದ್ಧವಿದ್ದೇವೆ. ದಣಿದವರಿಗಾಗಿ ಕೆಲಸ ಮಾಡುತ್ತಿರುವ ಎಲ್ಲಾ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ಧನ್ಯವಾದ. ಜೊತೆಗೆ ನಾವೆಲ್ಲರೂ ಸಹ ನಮ್ಮ ಪಾತ್ರ ನಿಭಾಯಿಸೋಣ. ಮನೆಯಲ್ಲಿಯೇ ಇರೋಣ ಮತ್ತು ಮಾಸ್ಕ್‌ನನ್ನು ಸರಿಯಾಗಿ ಧರಿಸೋಣ. ಒಟ್ಟಾಗಿ ಇದನ್ನು ಜಯಿಸೋಣ ಎಂದು ಸಂಜೀವ್ ಕಪೂರ್ ಕ್ಯಾಪ್ಷನ್ ಹಾಕಿಕೊಳ್ಳುವ ಮೂಲಕ ಬಾಣಸಿಗರು ಅಡುಗೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Sanjeev Kapoor (@sanjeevkapoor)

    ಈ ಫೋಟೋದಲ್ಲಿ ಬಾಣಸಿಗರು ಅಡುಗೆ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.