Tag: ಪಬ್ಲಿಕ್ ಟಿವಿ Mastan

  • ಕೊರೊನಾಗೆ ಖ್ಯಾತ ಡಿಸೈನರ್, ನಿರ್ದೇಶಕ ಮಸ್ತಾನ್ ಬಲಿ

    ಕೊರೊನಾಗೆ ಖ್ಯಾತ ಡಿಸೈನರ್, ನಿರ್ದೇಶಕ ಮಸ್ತಾನ್ ಬಲಿ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ಡಿಸೈನರ್ ಮತ್ತು ನಿರ್ದೇಶಕ ಮಸ್ತಾನ್ ಇಂದು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

    ಇತ್ತೀಚೆಗಷ್ಟೇ ನಿರ್ದೇಶಕ ಮಸ್ತಾನ್(63)ರವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಚಿಕಿತ್ಸೆಗಾಗಿ ಹೆಸರು ಘಟ್ಟ ಬಳಿ ಇರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಸುಮಾರು 4 ದಶಕಗಳಿಂದ ಪೋಸ್ಟರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಮಸ್ತಾನ್‍ರವರು 2000ಕ್ಕೂ ಅಧಿಕ ಸಿನಿಮಾಗಳೆಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಶುಕ್ಲಂಬರಧರಂ, ಕಲ್ಲೇಶಿ ಮಲ್ಲಿಶಿ ಮತ್ತು ಸಿತಾರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

    ಸದ್ಯ ಎಲ್ಲರನ್ನು ಅಗಲಿರುವ ಮಸ್ತಾನ್ ನಿಧನಕ್ಕೆ ಸ್ನೇಹಿತರು, ಚಿತ್ರರಂಗದ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.