Tag: ಪಬ್ಲಿಕ್ ಟಿವಿ Mask

  • ಮಾಸ್ಕ್ ಇಲ್ಲದೆ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡ ಮಹಾರಾಷ್ಟ್ರ ಸಿಎಂ

    ಮಾಸ್ಕ್ ಇಲ್ಲದೆ ಸಾರ್ವಜನಿಕ ಸಭೆಯಲ್ಲಿ ಕಾಣಿಸಿಕೊಂಡ ಮಹಾರಾಷ್ಟ್ರ ಸಿಎಂ

    ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾಸ್ಕ್ ಧರಿಸದೇ ಕಾಣಿಸಿಕೊಂಡಿದ್ದಾರೆ. 2020ರ ಮಾರ್ಚ್ ವೇಳೆ ಕೊರೊನಾ ವೈರಸ್ ತಡೆಗಟ್ಟುವ ಸಲುವಾಗಿ ಮಾಸ್ಕ್ ಧರಿಸಲು ಆರಂಭಿಸಲಾಯಿತು.

    ನಾಸಿಕ್‍ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಮಾಸ್ಕ್ ಧರಿಸದೇ ಮಾತನಾಡುತ್ತಿರುವ ನನ್ನ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ. ನಾನು ಮೊದಲ ಬಾರಿಗೆ ಮಾಸ್ಕ್ ಧರಿಸದೇ ಮಾತನಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಮುಂಬೈನಿಂದ 200ಕಿಮೀ ದೂರದಲ್ಲಿರುವ ನಾಸಿಕ್ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಲು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಭಾರತದ ವಿಮಾನಗಳ ಮೇಲೆ ಹೇರಿದ್ದ ನಿಷೇಧವನ್ನು ಸೆ.21ರವರೆಗೆ ವಿಸ್ತರಿಸಿದ ಕೆನಡಾ

  • ಮಾಸ್ಕ್ ಧರಿಸಿ ಅಂದಿದ್ದಕ್ಕೆ ಗ್ರಾ.ಪಂ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

    ಮಾಸ್ಕ್ ಧರಿಸಿ ಅಂದಿದ್ದಕ್ಕೆ ಗ್ರಾ.ಪಂ ಸದಸ್ಯನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಹಳ್ಳಿಗಳಲ್ಲಿ ಕೊರೊನಾ ಶರವೇಗದ ಸ್ವರೂಪ ಪಡೆದುಕೊಳ್ಳುತ್ತಿದೆ. ಕೊರೊನಾ ತಡೆಗಟ್ಟುವ ಸಲುವಾಗಿ ಯುವಕರಿಗೆ ಮಾಸ್ಕ್ ಧರಿಸಿ ಅಂತ ಹೇಳಿದ್ದನ್ನೇ ನೆಪವಾಗಿಟ್ಟುಕೊಂಡು ರಾಜಕೀಯ ಜಿದ್ದಿಗೆ ಮಾರಕಾಸ್ತ್ರಗಳಿಂದ ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಚೀಡಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮ ಪಂಚಾಯತ್ ಸದಸ್ಯ ತಮ್ಮೇಗೌಡ ಹಾಗೂ ಈತನನ್ನ ರಕ್ಷಿಸಲು ಹೋದ ಮಂಜು ಶಂಕರ್ ಹಲ್ಲೆಗೊಳಗಾದವರಾಗಿದ್ದಾರೆ. ಇದೇ ಗ್ರಾಮದ ಮರಿಯಪ್ಪರ ಮಗ ಚಾಣಕ್ಯ ಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಹಲ್ಲೆ ಮಾಡಿದ್ದಾರೆ. ಅಂದಹಾಗೆ ಡೈರಿ ಬಳಿ ಇದ್ದ ತಮ್ಮೇಗೌಡ ಹಲ್ಲೆ ಮಾಡಿದ ಚಾಣಕ್ಯ ಹಾಗೂ ಇತರರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳಸಿ ಮಾರಕಾಸ್ತ್ರಗಳಿಂದ ತಮ್ಮೇಗೌಡ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪರಿಣಾಮ ತಮ್ಮೇಗೌಡ ತಲೆಗೆ ಗಂಭೀರ ಗಾಯವಾಗಿದ್ದು, ಈತನ ರಕ್ಷಣೆಗ ಬಂದ ಈತನ ಬಾಮೈದ ಮಂಜು ಶಂಕರ್‍ಗೂ ಹಲ್ಲೆ ಮಾಡಿದ್ದಾರೆ. ಇಬ್ಬರನ್ನು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಘಟನೆಗೆ ಮತ್ತೊಂದು ಹಳೇ ದ್ವೇಷವೂ ಕಾರಣವಾಗಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಾಲಿನ ಡೈರಿ ಅಧ್ಯಕ್ಷರಾಗಿದ್ದ ಡಿ.ಸಿ.ಮರಿಯಪ್ಪ ವಿರುದ್ಧ ಹಾಲಿ ಡೈರಿ ಕಾರ್ಯದರ್ಶಿ ತಮ್ಮೇಗೌಡ ಗೆದ್ದಿದ್ದರು. ಇಬ್ಬರೂ ದಾಯಾದಿಗಳಾಗಿದ್ರೂ ತಮ್ಮೇಗೌಡರ ಗೆಲುವನ್ನು ಮರಿಯಪ್ಪನ ಕಡೆಯವರು ಸಹಿಸಲಾಗದೇ ಹಳೇ ದ್ವೇಷ ಸಾಧಿಸಿ ನಿನ್ನೆ ಸಂಜೆ ಮರಿಯಪ್ಪರ ಮಗ ಚಾಣಕ್ಯಗೌಡ, ಅಕ್ಷಯ್ ಗೌಡ, ಪ್ರಶಾಂತ್, ಶ್ರೇಯಸ್ ಮತ್ತಿತರರು ಮಾರಕಾಸ್ತ್ರಗಳಿಂದ ತಮ್ಮೇಗೌಡ ಮತ್ತವರ ಬಾಮೈದ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಮಾಸ್ಕ್ ಧರಿಸದವರಿಗೆ 1,000 ರೂ. ದಂಡ ವಿಧಿಸಿದ ತೆಲಂಗಾಣ ಸಿಎಂ

    ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಮಧ್ಯೆ ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಜನರು ಕೂಡ ಇದ್ದಾರೆ. ಹೀಗಾಗಿ ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುವ ಜನರಿಗೆ 1,000ರೂ. ದಂಡ ವಿಧಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಗುರುವಾರ ಅಧಿಕಾರಿಗಳಿಗೆ ತಿಳಿಸಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಚಂದ್ರಶೇಖರ್ ನಂತರ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಸ್ತುತ ಕೊರೊನಾ ಸೋಂಕಿನ ಬಗ್ಗೆ ಚರ್ಚೆ ನಡೆಸಿದರು.

    ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಆರೋಗ್ಯ ಸಿಬ್ಬಂದಿಗೂ ಲಸಿಕೆ ನೀಡಬೇಕು ಹಾಗೂ ಈ ಪ್ರಕ್ರಿಯೆ ಈ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

    ಕೊರೊನಾ ತಡೆಗಟ್ಟಲು ಮಾಸ್ಕ್ ಧರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಮಾಸ್ಕ್ ಧರಿಸದಿದ್ದರೆ, ಪ್ರತಿ ವ್ಯಕ್ತಿಗೆ 1000 ರೂ. ದಂಡ ವಿಧಿಸಬೇಕು ಹಾಗೂ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆಯ ಡಿಜಿಪಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ 45 ವರ್ಷಕ್ಕೂ ಮೇಲ್ಪಟ್ಟ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವಂತೆ ಆಗ್ರಹಿಸಿದರು.

  • ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಿವಿಲ್ ವರ್ಕರ್‌ಗೆ ಥಳಿಸಿದ ಮಹಿಳೆ!

    ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಸಿವಿಲ್ ವರ್ಕರ್‌ಗೆ ಥಳಿಸಿದ ಮಹಿಳೆ!

    ಮುಂಬೈ: ದೇಶದಲ್ಲಿ ಮತ್ತೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊರೊನಾ ತನ್ನ ಎರಡನೆ ಅಲೆ ಆರಂಭಿಸಿದೆ. ಕಳೆದ ವರ್ಷ ಕೊರೊನಾ ಆರ್ಭಟಕ್ಕೆ ನಲುಗಿದ ಭಾರತ, ವ್ಯಾಕ್ಸಿನ್ ಬಂದ ನಂತರ ಕೊಂಚ ಸುಧಾರಿಸಿಕೊಂಡಿದೆ. ಆದರೂ ಬೆನ್ನುಬಿಡದ ಕೊರೊನಾ ಮಹಾಮಾರಿ ಇದೀಗ ಪುನಃ ರುದ್ರತಾಂಡವಾಡಲು ಶುರುಮಾಡುತ್ತಿದೆ. ಈ ಮಧ್ಯೆ ಜನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆಯಾ ಸರ್ಕಾರಗಳು ಎಚ್ಚರಿಕೆ ನೀಡುತ್ತಿವೆ.

    ಆದರೆ ಇತ್ತೀಚೆಗೆ ಮಹಿಳೆಯೊಬ್ಬಳು ಮುಂಬೈನ ಕಂಡಿವಲಿ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಹೊರಗೆ ಬಂದಿದ್ದಾಳೆ. ಇದನ್ನು ಗಮನಿಸಿದ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಕಾರ್ಮಿಕರೊಬ್ಬರು ಮಹಿಳೆಯನ್ನು ತಡೆದಿದ್ದಾರೆ. ಈ ವೇಳೆ ಮಹಿಳೆ ನಾಗರಿಕ ಸಂಸ್ಥೆಯ ಕಾರ್ಮಿಕರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವೀಡಿಯೋವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ.

     

    View this post on Instagram

     

    A post shared by Viral Bhayani (@viralbhayani)

    ವೀಡಿಯೋದಲ್ಲಿ ಆಟೋದಲ್ಲಿ ಕುಳಿತಿದ್ದ ಮಹಿಳೆಗೆ ಮಾಸ್ಕ್ ಧರಿಸುವಂತೆ ನಾಗರಿಕ ಸಂಸ್ಥೆಯ ಕಾರ್ಮಿಕ ಮಹಿಳೆ ತಿಳಿಸುತ್ತಾಳೆ. ಈ ವೇಳೆ ಆಟೋದಿಂದ ಕೆಳಗೆ ಇಳಿದ ಮಹಿಳೆ, ನಡು ಬೀದಿಯಲ್ಲಿ ಕಾರ್ಮಿಕ ಮಹಿಳೆಗೆ ಹಿಗ್ಗಾಮುಗ್ಗ ಥಳಿಸುತ್ತಾಳೆ. ಆದರೂ ಬಿಎಂಸಿ ಕಾರ್ಮಿಕ ಮಹಿಳೆ, ಆಕೆಯನ್ನು ಅಲ್ಲಿಂದ ತೆರಳಲು ಬಿಡದೇ ಅಡ್ಡ ಹಾಕುತ್ತಾಳೆ. ಇದರಿಂದ ಮತ್ತಷ್ಟು ಕೋಪಗೊಂಡ ಮಹಿಳೆ ಕಾಲಿನಿಂದ ಆಕೆಗೆ ಮತ್ತಷ್ಟು ಒದೆಯುವುದನ್ನು ನಾವು ಕಾಣಬಹುದಾಗಿದೆ.

  • ನಾನು ದಲಿತ ನಾಯಕ, ದಂಡ ಹಾಕ್ತೀರಾ – ಪತ್ನಿಗೆ ದಂಡ ಹಾಕಿದ್ದಕ್ಕೆ ಡಿಸಿಗೆ ವ್ಯಕ್ತಿ ಅವಾಜ್

    ನಾನು ದಲಿತ ನಾಯಕ, ದಂಡ ಹಾಕ್ತೀರಾ – ಪತ್ನಿಗೆ ದಂಡ ಹಾಕಿದ್ದಕ್ಕೆ ಡಿಸಿಗೆ ವ್ಯಕ್ತಿ ಅವಾಜ್

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತೀವ್ರಗೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೆ ಮುಂದಾಗಿದೆ. ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದೆ.

    ಸ್ವತಃ ಡಿಸಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳು ದಂಡ ಕಾರ್ಯಾಚರಣೆಗೆ ಇಳಿದಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ.

    ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಮಾಸ್ಕ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹುಬ್ಬಳ್ಳಿಯ ಅರ್ಬನ್ ಓಯಾಸಿಸ್ ಮಾಲ್‍ಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳನ್ನು ಕಂಡು ಮಾಸ್ಕ್ ಧರಿಸದ ಜನರು ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಈ ವೇಳೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದಂಡ ವಿಧಿಸಲು ಮುಂದಾದ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿದು ಜಗಳ ಮಾಡಿದ ಘಟನೆ ನಡೆದಿದೆ.

    ಸಾಮಾನ್ಯ ಜನರಿಗೆ ದಂಡ ವಿಧಿಸುತ್ತೀರಾ? ಅದೇ ರೀತಿ ನಿಮ್ಮ ಪತ್ನಿಗೂ ದಂಡ ಹಾಕುವ ತಾಕತ್ತು ನಿಮಗೆ ಇದ್ಯಾ ಎಂದು ಡಿಸಿ ಸಮ್ಮುಖದಲ್ಲೇ ಅಧಿಕಾರಿಗಳ ಜೊತೆ ವಾಗ್ದಾದ ನಡೆಸಿದರು. ಇದರಿಂದ ಸಿಟ್ಟಾದ ಅಧಿಕಾರಿಗಳು ವ್ಯಕ್ತಿಯನ್ನು ತಡೆದು ಮಹಿಳೆ ಮಾಸ್ಕ್ ಧರಿಸದಿರುವುದಕ್ಕೆ ದಂಡ ಕಟ್ಟಲೇಬೇಕು. ಇಲ್ಲದಿದ್ದರೇ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

    ಈ ವೇಳೆ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ನಾನು ದಲಿತ ನಾಯಕ, ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಅವಾಜ್ ಹಾಕಿದರು. ಇದರಿಂದ ಸಿಟ್ಟಾದ ಡಿಸಿ ಹಾಗೂ ತಹಶೀಲ್ದಾರ್ ಸೇರಿದಂತೆ ಉಳಿದ ಸಿಬ್ಬಂದಿ ಸ್ಥಳದಲ್ಲೇ ದಂಡ ಕಟ್ಟಿ ಎಂದು ಎಚ್ಚರಿಕೆ ನೀಡಿದರು.

    ಆಗ ನನ್ನ ಬಳಿ 150 ರೂಪಾಯಿ ಮಾತ್ರ ಇದೆ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಅಧಿಕಾರಿಗಳು 250 ರೂಪಾಯಿ ದಂಡ ಕಟ್ಟಿಸಿಕೊಂಡು ಸ್ಥಳದಲ್ಲೇ ಬಿಸಿ ಮುಟ್ಟಿಸಿದ್ದಾರೆ.

  • ಮಾಸ್ಕ್ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ ಜನ – ವೀಡಿಯೋ ವೈರಲ್

    ಮಾಸ್ಕ್ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ ಜನ – ವೀಡಿಯೋ ವೈರಲ್

    ವಾಷಿಂಗ್ಟನ್: ಕೊರೊನಾ ಸಾಂಕ್ರಾಮಿಕ ರೋಗದಿಂದ ಜಗತ್ತು ಇದೀಗ ನಿಧನವಾಗಿ ಮುಕ್ತವಾಗುತ್ತಿದೆ. ಕೋವಿಡ್‍ನಿಂದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹೀಗೆ ಹಲವಾರು ನಿಯಮಗಳಿಂದ ಜನರು ತತ್ತರಿಸಿಹೋಗಿದ್ದರು. ಇದೀಗ ಅಮೇರಿಕಾದ ಇಡಾಹೊ ಎಂಬ ರಾಜ್ಯದ ಜನರು ಒಂದೆಡೆ ಗುಂಪು ಸೇರಿ ಬ್ಯಾರೆಲ್‍ವೊಂದರ ಒಳಗೆ ಬೆಂಕಿ ಹಚ್ಚಿ ಮಾಸ್ಕ್‌ ಗಳನ್ನು ಸುಟ್ಟು ಹಾಕುವ ಮೂಲಕ ವಿಭಿನ್ನವಾಗಿ ಕೊರೊನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಕೇವಲ ದೊಡ್ಡವರಷ್ಟೇ ಅಲ್ಲದೆ ಮಕ್ಕಳು ಸಹ ಪೋಷಕರೊಂದಿಗೆ ಒಂದು ಹೆಜ್ಜೆ ಮುಂದೆ ಹಾಕಿ, ತಮ್ಮ ಮಾಸ್ಕ್‌ ಗಳನ್ನು ಕಳಚಿ ಬ್ಯಾರೆಲ್‍ವೊಳಗಿರುವ ಬೆಂಕಿಗೆ ಹಾಕುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ವೀಡಿಯೋವನ್ನು ಸೆರ್ಗಿಯೋ ಓಲ್ಮೋಸ್ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಮೊದಲ ವೀಡಿಯೋ 4 ಮಿಲಿಯನ್(40 ಲಕ್ಷ) ವೀವ್ಸ್ ಪಡೆದುಕೊಂಡಿದ್ದು, ಮತ್ತೊಂದು ವೀಡಿಯೋ 65,000 ವಿವ್ಸ್ ಪಡೆದುಕೊಂಡಿದ್ದು, ಕಮೆಂಟ್‍ಗಳ ಸುರಿ ಮಳೆ ಹರಿದುಬರುತ್ತಿದೆ.