ಮುಂಬೈ: ಕೊರೊನಾ ವೈರಸ್ ಜಗತ್ತಿನಾದ್ಯಂತ ಹಬ್ಬಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸದ್ಯ ಕೊರೊನಾ ಲಾಕ್‍ಡೌನ್ ಇರುವುದರಿಂದ ಎಲ್ಲೆಡೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಡುವೆ ವಿದೇಶದಲ್ಲಿ ನಡೆದ ಮಗನ ಮದುವೆಗೆ ಪೋಷಕರೊಬ್ಬರು ಆನ್‍ಲೈನ್ ಮೂಲಕ ಆಶೀರ್ವಾದ ಮಾಡಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಮೂಲ ಕುಟುಂಬವೊಂದು ಸಾವಿರಾರು ಕಿ.ಲೋ ಮೀಟರ್ ದೂರ ಕೆನಾಡದಲ್ಲಿ ವಾಸಿಸುತ್ತಿರುವ ತಮ್ಮ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ವಿಭಿನ್ನವಾದ ದಾರಿಯನ್ನು ಕಂಡುಕೊಂಡಿದ್ದಾರೆ. ಹೌದು, ಡೊಂಬಿವಿಲಿಯ ದಂಪತಿ ತಮ್ಮ ಪುತ್ರ ಬೂಷಣ್ ಚೌಧರಿ ಹಾಗೂ ವಧು ಮಂದೀಪ್ ಕೌರ್ ಅವರ ವಿವಾಹ ಸಂಭ್ರಮಕ್ಕೆ ಆನ್‍ಲೈನ್ ಮೂಲಕ ಹಾಜರಾಗಿದ್ದಾರೆ.
ಶನಿವಾರ ಮದುವೆ ಸಮಾರಂಭ ನಡೆದಿದ್ದು, ಡೊಂಬಿವಿಲಿಯಿಂದಲೇ ಅರ್ಚಕರು ಮಂತ್ರ ಹೇಳಿದ್ದಾರೆ. ಆಗ ನವ ಜೋಡಿ ಕೆನಡಾದಲ್ಲಿ ವಿವಾಹವಾಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಇಬ್ಬರು ಫೇಸ್‍ಬುಕ್ ಹಾಗೂ ಯೂಟ್ಯೂಬ್‍ನಲ್ಲಿ ಲೈವ್ ಬಂದಿದ್ದಾರೆ. ನಂತರ ಮದುವೆಯಾಗುತ್ತಿರುವ ವೇಳೆ ಸಂಬಂಧಿಕರು ಮತ್ತು ಸ್ನೇಹಿತರು ನವಜೋಡಿಗೆ ಅಕ್ಷತೆಯನ್ನು ಆನ್‍ಲೈನ್‍ನಲ್ಲಿಯೇ ತೋರಿಸಿದ್ದಾರೆ. ಇದನ್ನೂ ಓದಿ:ಜಮ್ಮು ಸೇನಾ ಸ್ಟೇಷನ್ ಬಳಿ ಕಾಣಿಸಿದ ಡ್ರೋನ್ – ಸೇನೆಯಿಂದ 25 ಸುತ್ತು ಫೈರಿಂಗ್
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ವರನ ತಂದೆ ಹಿರಮಾನ್ ಚೌಧರಿ ಎರಡು ಕುಟುಂಬದವರು ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದೇವು. ಸದ್ಯ ಕೊರೊನಾ ಇರುವುದರಿಂದ ಈ ರೀತಿ ವಿವಾಹ ಮಾಡುವುದು ಉತ್ತಮ ಎಂದು ಭಾವಿಸಿದ್ದೇವೆ ಹಾಗೂ ಇದರಿಂದ ಹಣ ಕೂಡ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್‍ರವರು ಜಿಲ್ಲೆಯಲ್ಲಿ ಲಾಕ್‍ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ.
ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶಿಸಲಾಗಿದೆ. ಉಳಿದಂತೆ ರಾಜ್ಯ ಹೊರಡಿಸಿದ ಅನ್‍ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.
ವೀಕೆಂಡ್ ಲಾಕ್‍ಡೌನ್ ನಲ್ಲಿ ಸಹ ಬಸ್ ಸಂಚಾರ: ಜಿಲ್ಲೆಯಲ್ಲಿ ನಾಳೆಯಿಂದ ಆರು ಘಂಟೆಗೆ ಎಂದಿನಂತೆ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತರ್ ಜಿಲ್ಲಾ ಸಂಚಾರದಲ್ಲಿ ಪ್ರಯಾಣಿಕರ ಸಾಂದ್ರತೆಗನುಗುಣವಾಗಿ ಬಸ್ ಗಳನ್ನು ಬಿಡಲು ಸೂಚಿಸಲಾಗಿದ್ದು, ಮೂರು ಜನ ಕೂರುವ ಸೀಟ್ ನಲ್ಲಿ ಕೇವಲ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕರೊನಾ ನಿಯಮ ಪಾಲಿಸಿ ಪ್ರಯಾಣಿಕರು ಪ್ರಯಾಣಿಸಬೇಕಿದೆ.
ಹೊರ ಜಿಲ್ಲೆಗಳಿಗೂ ಬಸ್ ಸಂಚಾರ ಮಾಡಲಿದ್ದು, ಲಾಕ್‍ಡೌನ್ ಇರುವ ಜಿಲ್ಲೆಗಳಲ್ಲಿ ಸಂಚಾರ ನಿಬರ್ಂಧಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 133 ಜನರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದ್ದು, ನಾಲ್ಕು ಜನ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ 1,358 ಸಕ್ರಿಯ ಪ್ರಕರಣವಿದೆ. ಇದನ್ನೂ ಓದಿ: ಮಂಗಳೂರಿನ ಕುಪ್ಪೆಪದವಿನಲ್ಲಿ ಗುಡ್ಡ ಕುಸಿತ- ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ವಾಷಿಂಗ್ಟನ್: ಕೋವಿಡ್-19 ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಮದುವೆ ಸಮಾರಂಭಗಳಿಗೆ ಅಡ್ಡಿಯನ್ನುಂಟು ಮಾಡುತ್ತಿದೆ. ಕೊರೊನಾದಿಂದ ಎಷ್ಟೋ ಮದುವೆಗಳು ರದ್ದುಗೊಂಡಿದೆ ಇನ್ನೂ ಕೆಲವು ಮದುವೆಗಳನ್ನು ಮುಂದೂಡಿದ್ದಾರೆ.
ಅಮೆರಿಕದ ಬಾಲ್ಟಿಮೋರ್ ಸಾರಾ ಸ್ಟಡ್ಲಿ ತನ್ನ ವಿವಾಹದ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೊಂದಿದ್ದಳು. ಆದರೆ ಕೋವಿಡ್-19 ನಿಯಮಗಳಿಂದಾಗಿ ವಿಜೃಂಭಣೆಯಿಂದ ನಡೆಯಬೇಕದ್ದ ಸಾರಾ ಸ್ಟಡ್ಲಿ ಮದುವೆ ಬಹಳ ಸರಳವಾಗಿ ನಡೆಯಿತು. ಮದುವೆ ರಿಸೆಪ್ಷನ್ ರದ್ದುಗೊಳಿಸಲಾಗಿತ್ತು. ಹೀಗಾಗಿ ಮದುವೆ ವೇಳೆ ಧರಿಸಬೇಕಿದ್ದ ಡ್ರಸ್‍ನನ್ನು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ದಿನದಂದು ಧರಿಸಲು ಪ್ಲಾನ್ ಮಾಡಿದ್ದಳು.
ಅದರಂತೆ ಭಾನುವಾರ ಮದುವೆಯ ಗೌನ್ ಧರಿಸಿ ಕ್ಲಿನಿಕ್‍ಗೆ ಭೇಟಿ ನೀಡಿ ಲಸಿಕೆ ಹಾಕಿಸಿಕೊಂಡಿದ್ದಾಳೆ. ಈ ಫೋಟೋವನ್ನು ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸಿಸ್ಟಮ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಲ್ಲಿಗೆ ವಧು ಬಂದಿದ್ದಾರೆ. ಎಂ ಮತ್ತು ಟಿ ಬ್ಯಾಂಕ್ ಸ್ಟೇಡಿಯಂನ ವ್ಯಾಕ್ಸಿನ್ ಸೈಟಿನಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್‍ನಿಂದ ರದ್ದಾದ ಮದುವೆಯ ರಿಸೆಪ್ಷನ್ ಗೌನ್ ಧರಿಸಿ ಲಸಿಕೆ ಪಡೆದಿದ್ದಾರೆ ಎಂದು ಕ್ಯಾಪ್ಷನ್‍ನಲ್ಲಿ ಹಾಕಿಕೊಂಡಿದೆ.
Here comes the bride…to get her vaccination at M&T Bank Stadium Mass Vaccination Site! Rather than let the beautiful gown for her pandemic-cancelled wedding reception just hang in her closet, Sarah Studley wore it to get vaccinated. pic.twitter.com/eeRJvITO51
— University of Maryland Medical System (@umms) April 12, 2021
ನವದೆಹಲಿ: ಮದುವೆ ಎಂದರೆ ವಿಜೃಂಭಣೆ, ಅದ್ಧೂರಿಯಾಗಿ ಹಣ ಖರ್ಚುಮಾಡಿ ಆಗುವುದನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದರೆ ದೆಹಲಿಯ ಜೋಡಿಯೊಂದು ಆಡಂಬರದ ಮದುವೆಗೆ ಬ್ರೇಕ್ ಹಾಕಿ ಬಹಳ ಯುನಿಕ್ ಆಗಿ ಸರಳವಾಗಿ ಪರಿಸರ ಸ್ನೇಹಿಗಳಿಬ್ಬರು ವಿವಾಹವಾಗಿದ್ದಾರೆ.
ಹೌದು, ವರ ಆದಿತ್ಯ ಅಗರ್‍ವಾಲ್(32) ತಮ್ಮ ಮದುವೆಗೆ ಕಾರು ಬೈಕ್‍ನಲ್ಲಿ ಬರದೇ ಯುಲು ಬೈಕ್ ಮೇಲೆ ಬಂದರು. ಮೊದಲಿನಿಂದಲೂ ಕಡಿಮೆ ವೆಚ್ಚದಲ್ಲಿ ಮದುವೆಯಗಬೇಕೆಂಬ ಆಸೆ ಹೊಂದಿದ್ದ, ವಧು ಮಾಧುರಿ ಬಲೋಡಿಯವರಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರು ಬೆಂಬಲ ನೀಡಿದ್ದಾರೆ.
ಮಾಧುರಿಯವರ ವಿವಾಹವನ್ನು ಅವರ ಚಿಕ್ಕಪ್ಪನ ಮನೆಯ ಗಾರ್ಡನ್ ನಲ್ಲಿ ಏರ್ಪಡಿಸಲಾಗಿತ್ತು. ಮದುವೆ ಸಮಯದಲ್ಲಿ ಸಾಧ್ಯವಾದಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸದೇ, ಹಳೆಯ ಬಾಟಲಿಗಳಿಗೆ ನ್ಯೂಸ್ ಪೇಪರ್‌ಗಳನ್ನು ಅಂಟಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗಿತ್ತು.
ಮದುವೆಗೆ ಆಹ್ವಾನ ಪತ್ರಿಕೆ ನೀಡಿದರೆ ಜನ ಅದನ್ನು ನೋಡಿ ಬಿಸಾಡುತ್ತಾರೆ. ಹಾಗಾಗಿ ಆಹ್ವಾನ ಪತ್ರಿಕೆಯನ್ನು ಪ್ರಿಂಟ್ ಮಾಡಿಸದೇ ನನ್ನ ಮದುವೆ ಸ್ವತಃ ನಾನೇ ಆಹ್ವಾನ ಪತ್ರಿಕೆಯನ್ನು ವಿನ್ಯಾಸಗೊಳಿಸಿದೆ ಹಾಗೂ ಮದುವೆಗೆ ಪ್ರಿಂಟೆಡ್ ಬ್ಯಾನರ್ ಬಳಸುವ ಬದಲಾಗಿ ನಾವು ಚಾರ್ಕ್ ಬೋಡ್ ಬಳಸಲಾಗಿದೆ ಎಂದು ಮಾಧುರಿ ತಿಳಿಸಿದ್ದಾರೆ.
ಮದುವೆ ಸಮಯದಲ್ಲಿ ನನ್ನ ಸ್ನೇಹಿತರು ಗಾಜಿಪುರದಿಂದ ತುಳಸಿ ಹಾರವನ್ನು ತರಿಸಿದ್ದು, ನಾವು ಹಾರವಾಗಿ ತುಳಸಿಯನ್ನು ಬಳಸಿದ್ದೇವೆ. ಅಲ್ಲದೇ ಎರಡು ಕುಟುಂಬಗಳು ಯಾವುದೇ ಗಿಫ್ಟ್‍ಗಳನ್ನು ವಿನಿಮಯ ಮಾಡಿಕೊಳ್ಳದೇ, ಬದಲಾಗಿ ಇಬ್ಬರು ಒಂದು ಕೆಜಿ ಹಣ್ಣುಗಳನ್ನು ತಂದಿದ್ದಾರೆ. ಹಿಂದಿನ ಕಾಲದಲ್ಲಿ ಜನರು ಮದುವೆಗೆ ಹೋಗುವಾಗ ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಹೋಗುತ್ತಿದ್ದರು. ಇದೀಗ ಜನರ ಮಧ್ಯೆ ಆ ಬಾಂಧವ್ಯ ಕಾಣೆಯಾಗದೆ. ಆದರೆ ನಮ್ಮ ಮದುವೆಗೆ ಎಲ್ಲರೂ ವಿಭಿನ್ನ ರೀತಿಯಲ್ಲಿಯೇ ಕೊಡುಗೆ ನೀಡಿದ್ದಾರೆ.
ಈ ಜೋಡಿ ವಿವಾಹಕ್ಕೆ ಮಾಧುರಿ ಸೋದರ ಸಂಬಂಧಿಯೊಬ್ಬರು ಪಂಡಿತರ ಪಾತ್ರವನ್ನು ವಹಿಸಿದರೆ, ಸ್ನೇಹಿತರು ಫೋಟೋವನ್ನು ಮದುವೆಯ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಮದುವೆ ವೇಳೆ ಮಾಧುರಿ 2,500 ರೂ ಸೀರೆ ಉಟ್ಟರೆ, ವರ ಆದಿತ್ಯ 3,000 ರೂ ಶೇರ್ವಾನಿ ಧರಿಸಿದ್ದರು. ಅಲ್ಲದೆ ಮದುವೆಯಲ್ಲಿ ಪಾಲ್ಗೊಂಡವರಿಗೆ ತಾಂಬೂಲದ ಬದಲಿಗೆ ಗಿಡವನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಸಾಮಾನ್ಯವಾಗಿ ಸಾಂಪ್ರಾದಾಯಿಕ ಆಭರಣ ತೊಡದೇ ಮದುಮಗಳ ನೋಟವು ಪರಿಪೂರ್ಣಗೊಳ್ಳವುದೇ ಇಲ್ಲ. ಹಿಂದಿನ ಕಾಲದಲ್ಲಿ ಮದುವೆಯ ಸಮಯದಲ್ಲಿ ವಧು ಸಿಂಗಾರಗೊಳಿಸಲು ಮುಡಿಯಿಂದ ಪಾದದವರೆಗೂ 16 ಆಭರಣಗಳನ್ನು ಹಾಕಲಾಗುತ್ತಿತ್ತು. ಆದರೆ ಇಂದಿನ ಕಾಲದ ವಧು 16 ಆಭರಣಗಳನ್ನು ಧರಿಸಲೇ ಬೇಕೆಂಬ ಅಗತ್ಯವಿಲ್ಲ. ಹೀಗಾಗಿ ಅವರ ಪೂರ್ವಜರು ನೀಡಿದ ಅಥವಾ ತಮ್ಮ ನೆಚ್ಚಿನ ಅಂಗಡಿಗಳಲ್ಲಿ ಆಭರಣ ಖರೀದಿಸಿ ಕಡಿಮೆ ಆಭರಣವನ್ನು ತೊಟ್ಟು ವಧುವಿನಂತೆ ಮಿಂಚುತ್ತಾರೆ.
ಆದರೆ ಎಷ್ಟೋ ಮಹಿಳೆಯರಿಗೆ ಮದುವೆಯ ಸಮಯದಲ್ಲಿ ವಧುವಿನಂತೆ ಕಾಣಿಸಿಕೊಳ್ಳಲು ಮುಖ್ಯವಾಗಿ ಧರಿಸಬೇಕಾದ ಆಭರಣಗಳು ಯಾವುದೆಂಬುವುದರ ಬಗ್ಗೆ ತಿಳಿದಿರುವುದಿಲ್ಲ. ಅಂತಹವರಿಗೆ ಕೆಲವೊಂದು ಮಾಹಿತಿ ಈ ಕೆಳಗಿನಂತಿದೆ.
ವಧುವಿನ ಸೆಟ್: ವಧುವಿನ ಸೆಟ್‍ನಲ್ಲಿ ನೆಕ್ಲೆಸ್ ಹಾಗೂ ಜುಮ್ಕಿ ಸೇರಿದಂತೆ ಕೆಲವು ಬೇಸಿಕ್ ಆಭರಣಗಳು ಇರುತ್ತದೆ. ಮದುವೆ ಸಮಯದಲ್ಲಿ ವಧುವಿಗೆ ಹೆಚ್ಚಾಗಿ ಹಲವಾರು ಶೈಲಿಯ ಹಾರದ ಸರಗಳನ್ನು ಹಾಕುತ್ತಾರೆ.
ವಧುವಿನ ಸೆಟ್
ಬೈತಲೆ ಬೊಟ್ಟು: ವಧುವಿಗೆ ತೊಡಿಸುವ ಆಭರಣಗಳಲ್ಲಿ ಬೈತಲೆ ಬೊಟ್ಟು ಕೂಡ ಒಂದು. ಕೂದಲಿನ ಮಧ್ಯೆ ಕ್ರಾಫ್ ತೆಗೆದು ಹಣೆಯ ಮಧ್ಯೆ ಇದನ್ನು ಸಿಗಿಸಲಾಗುತ್ತದೆ. ಹಿಂದೂ ಪುರಾಣದಲ್ಲಿ ಇದನ್ನು ಮೂರನೇ ಕಣ್ಣು ಅಥವಾ ಆತ್ಮದ ಶಕ್ತಿ ಎಂದು ಪ್ರತಿನಿಧಿಸಲಾಗುತ್ತದೆ. ಇದು ಮಹಿಳೆ ಹಾಗೂ ಪುರುಷ ಮಧ್ಯೆ ಇರುವ ಆಧ್ಯಾತ್ಮಿಕ, ದೈಹಿಕ ಮತ್ತು ಭಾವನಾತ್ಮಕ ಮಟ್ಟದ ಪವಿತ್ರ ಒಕ್ಕೂಟವನ್ನು ಸೂಚಿಸುವ ಸಂರಕ್ಷಣೆಯ ಕೇಂದ್ರವಾಗಿದೆ.
ಬೈತಲೆ ಬೊಟ್ಟು
ಹಾಥ್ ಪೂಲ್: ಯಾವುದೇ ಆಭರಣಗಳನ್ನು ಧರಿಸಿದರು ವಧುವಿನ ಕೈ ಮತ್ತು ಬೆರಳುಗಳ ಮೇಲೆ ಹ್ಯಾಥ್‍ಪೂಲ್‍ನಂತೆ ಸುಂದರವಾಗಿ ಯಾವುದು ಕಾಣಿಸಲು ಸಾಧ್ಯವಿಲ್ಲ. ಹ್ಯಾಥ್‍ಫೂಲ್ ಎಂದರೆ ಫ್ಲವರ್ ಆಫ್ ದಿ ಆ್ಯಂಡ್ (ಕೈ ಮೇಲೆ ಹೂವು) ಎಂದರ್ಥ. ಹಸ್ತದ ಹಿಂಭಾಗ ಹೂವಿನಂತೆ ಆಭರಣವನ್ನು ವಿನ್ಯಾಸಗೊಳಿಸಲಾಗಿದ್ದು, ಮುತ್ತು, ರತ್ನ, ಕಮಲ, ಸರಗಳಿಂದ ತಯಾರಿಸಲಾಗಿದೆ. ಈ ಆಭರಣವು ವಧುವುಗೆ ಗ್ಲಾಮರ್ ಲುಕ್ ನೀಡುತ್ತದೆ.
ಹಾಥ್ ಪೂಲ್
ಮೂಗು ಬೊಟ್ಟು (ನೋಸ್ ರಿಂಗ್): ವೃತ್ತಾಕಾರದ ಮುಗುತಿ ವಧುವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ರೀತಿಯ ಮೂಗುತಿಯನ್ನು ಪಾರ್ವತಿ ದೇವರು ಮದುವೆಯ ಸಮಯದಲ್ಲಿ ಧರಿಸಿದ್ದರು ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಈ ರೀತಿಯ ಮುಗುತಿ ಭಾರವಿರುವುದರಿಂದ ನಿಮಗೆ ಧರಿಸಲು ಆನ್‍ಕಂಫರ್ಟ್‍ಟೇಬಲ್ ಫೀಲ್ ಆದಲ್ಲಿ ಧರಿಸುವ ಅಗತ್ಯವಿಲ್ಲ. ಇದೀಗ ಕಡಿಮೆ ತೂಕದ ಮುಗುತಿ ಹಾಗೂ ಪ್ರೆಸಿಂಗ್ ಮೂಗು ಬೊಟ್ಟು ದೊರೆಯುತ್ತದೆ.
ಮೂಗು ಬೊಟ್ಟು
ಬಳೆಗಳು: ವಧು ಬಳೆಗಳನ್ನು ತೊಡದೇ ಮದುವೆಯ ಸಂಪೂರ್ಣಗೊಳ್ಳುವುದಿಲ್ಲ. ಬಳೆಗಳು ಭಾರತೀಯ ಸಂಸ್ಕøತಿಯ ಒಂದು ಭಾಗವಾಗಿದೆ. ಇಂದಿನ ಮಾಡ್ರೆನ್ ವಧುಗಳು ಕೆಂಪು ಮತ್ತು ಹಸಿರಿನ ಸಾಂಪ್ರದಾಯಿಕ ಬಳೆಯನ್ನೇ ತೊಡಬೇಕೆಂದಿಲ್ಲ. ಮುತ್ತಿನ, ಚಿನ್ನದ ಮತ್ತು ವಜ್ರದ ಬಳೆಗಳನ್ನು ತೊಡುತ್ತಾರೆ. ಅಲ್ಲದೆ ತಮ್ಮ ಉಡುಪಿಗೆ ಹೊಂದಿಕೊಳ್ಳುವಂತಹ ಬಳೆಗಳನ್ನು ಹಾಕಿಕೊಂಡು ವಧು ಮದುವೆಯ ಸಮಯದಲ್ಲಿ ಕಂಗೋಳಿಸುತ್ತಾರೆ. ಬಳೆ ನಿಮ್ಮ ಕೈಗಳನ್ನು ಪೂರ್ಣಗೊಳಿಸುವುದಲ್ಲದೇ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಬಳೆಗಳು
ಗೆಜ್ಜೆ : ಸರಳವಾದಂತಹ ಗೆಜ್ಜೆಯನ್ನು ಧರಿಸಿದರು ವಧುವಿನ ಕಾಲುಗಳು ಸುಂದರವಾಗಿ ಕಾಣಿಸುತ್ತದೆ. ಬೆಳ್ಳಿ ಲೋಹ ಮತ್ತು ಚಿಕ್ಕ ಮಣಿಯಂತಿರುವ ಗಂಟೆಗಳನ್ನು ಅಳವಡಿಸುವ ಮೂಲಕ ಗೆಜ್ಜೆಯನ್ನು ತಯಾರಿಸಲಾಗುತ್ತದೆ. ವಧು ನಡಿಯುವಾಗ ಗೆಜ್ಜೆ ಸದ್ದು ಮಾಡುತ್ತದೆ. ಅಲ್ಲದೆ ಗೆಜ್ಜೆ ಧರಿಸಿ ವಧು ಹಸೆಮಣೆಯತ್ತ ಬರುವಾಗ ಸಾಕ್ಷತ್ ಲಕ್ಷ್ಮಿ ದೇವಿ ಪ್ರವೇಶಿಸಿದಂತೆ ತೋರುತ್ತದೆ.