Tag: ಪಬ್ಲಿಕ್ ಟಿವಿ Manju

  • ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    – ಮಂಜು ಕುರಿತು ಹಾಡು ಬರೆದಿದ್ದ ಚಕ್ರವರ್ತಿ
    – 16 ಲಕ್ಷ ಮಂದಿಯಿಂದ ಪದ್ಯ ಶೇರ್

    ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಕೊನೆಯ ಟಾಪ್ 2 ಕಂಟೆಸ್ಟೆಂಟ್‍ನನ್ನು ವೇದಿಕೆ ಮೇಲೆ ಸುದಿಪ್ ಕರೆದುಕೊಂಡು ಬರುತ್ತಾರೆ. ನಂತರ ಇಬ್ಬರಲ್ಲಿ ಯಾರು ಗೆಲ್ಲಬಹುದು ಎಂದು ಇತರ ಸ್ಪರ್ಧಿಗಳಿಗೆ ಪ್ರಶ್ನಿಸಿದಾಗ ಬಹುತೇಕ ಮಂದಿ ಮಂಜು ಹೆಸರನ್ನು ಸೂಚಿಸಿದ್ದರು. ಆದರೆ ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಬಹಳ ಭಾವುಕರಾಗಿ ಉತ್ತರಿಸಿದ್ದಾರೆ.

    7 ದೇಶಗಳಲ್ಲಿ 8 ಕೋಟಿ 76 ಲಕ್ಷ ಜನ ಕಳೆದ 15 ದಿನಗಳಲ್ಲಿ ಕನ್ನಡ ಬಿಗ್‍ಬಾಸ್ ಕುರಿತಂತೆ ಚರ್ಚೆ ನಡೆಸುತ್ತಿದ್ದಾರೆ. ಎರಡು ವಲಯದಲ್ಲಿ ಎರಡು ದಿಕ್ಕಿನಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರು ನನಗೆ ಒಂದು ರೀತಿ ತಮ್ಮಂದಿರು, ಅದರಲ್ಲಿ ಒಬ್ಬ ಅಂತರಾಷ್ಟ್ರೀಯ ಪ್ರತಿಭೆ, ಮತ್ತೊಬ್ಬ ಕುಡಿಯಲು ನೀರು ಕೂಡ ಇರದ ಊರಿನಿಂದ ಬಂದವನು. ಒಬ್ಬ ಯಶಸ್ಸು ಹಾಗೂ ಸೋಲು ಎರಡನ್ನು ಕಂಡು ಸೋತು ಗೆದ್ದವನು. ಆದರೆ ಒಬ್ಬ ಒಂದೇ ಒಂದು ಯಶಸ್ಸು ಸಿಕ್ಕಿದರೆ ನನ್ನ ಜೀವನ ಉದ್ದಾರ ಮಾಡಿಕೊಳ್ಳುತ್ತೇನೆ. ನೂರಾರು ಜನರಿಗೆ ನಾನು ಮಾದರಿಯಾಗುತ್ತೇನೆ ಎಂದು ನಿಂತಿದ್ದಾನೆ. ಒಬ್ಬನಿಗೆ ಛಲ ಇದ್ದರೆ, ಮತ್ತೊಬ್ಬನಿಗೆ ಅಮಾಯಕತ್ವವಿದೆ. ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ. ಇಷ್ಟನ್ನೆಲ್ಲಾ ನೋಡಿದಾಗ ನನ್ನ 66 ದಿನಗಳ ಜರ್ನಿ ನೋಡಿದಾಗ, ಕರ್ನಾಟಕದ ಜನತೆಯ ಆಶೀರ್ವಾದ ನೋಡಿದಾಗ ನನ್ನ ಮತ ಅಂತಃಕರ್ಣಕ್ಕೆ, ಹಳ್ಳಿ ಹಕ್ಕಿ ಪ್ರತಿಭೆಗೆ, ಇಂದು ನಾನು ಮಂಜು ಬಗ್ಗೆ ಬರೆದ ಒಂದು ಪದ್ಯವನ್ನು 16 ಲಕ್ಷ ಜನ ಶೇರ್ ಮಾಡಿದ್ದಾರೆ. ಅಷ್ಟು ಜನ ಮಂಜುರನ್ನು ಬಹಳ ಇಷ್ಟಪಡುತ್ತಿದ್ದಾರೆ ಎಂದು ಚಕ್ರವರ್ತಿ ಹೇಳಿದ್ದಾರೆ.

    ಮನೆಯಲ್ಲಿ ಕರೆಂಟ್ ಇಲ್ಲ, ಬಸ್ ಇಲ್ಲ, ಏನೂ ಇಲ್ಲದ ಒಬ್ಬ ಬಡ ಹುಡುಗ ಇಂತಹ ಒಂದು ದೊಡ್ಡ ಆಟಕ್ಕೆ ಬಂದು ಎಲ್ಲರೊಂದಿಗೆ ಸ್ಪರ್ಧಿಸುತ್ತಾನಲ್ಲ, ಅವನದ್ದು ನಿಜವಾದ ಶಕ್ತಿ, ಅದು ನಿಜವಾದ ತಾಕತ್ತು. ಅಂತಹ ಕೆಲಸ ಮಂಜು ಮಾಡಿದ್ದಾನೆ. ಅರವಿಂದ್ ಕೆಪಿಗೆ ಎಲ್ಲವನ್ನು ಭರಿಸಿಕೊಳ್ಳುವ ಶಕ್ತಿ ಎಲ್ಲ ಮಾರ್ಗಗಳಿದೆ. ಆದರೆ ಮಂಜು ಏನೂ ಇಲ್ಲದೇ ಬಂದಿದ್ದಾನೆ, ನಾನು ಅವನನ್ನು ಎಷ್ಟೋ ಬಾರಿ ಕೆಣಕಿದೆ. ಆದರೆ ಅವನು ಒಂದು ಕ್ಷಣ ಕೂಡ ಕುಗ್ಗಿದ್ದನ್ನು ನಾನು ನೋಡಲೇ ಇಲ್ಲ. ನಾನೇ ಎಷ್ಟೋ ಅಡ್ಡಗಳನ್ನು ಹಾಕಿದೆ. ಆದರೆ ಆ ಅಡ್ಡಗಳನ್ನೆಲ್ಲಾ ದಾಟಿ ನನ್ನ ಮನಸ್ಸನ್ನು ಹಾಗೂ ನನ್ನ ತಾಯಿ ಮನಸ್ಸನ್ನು ಗೆದ್ದಿದ್ದು, ನೂರಾರು ಕೋಟಿ ಜನರ ಆಶೀರ್ವಾದಕ್ಕೆ ಕಾರಣನಾಗಿದ್ದು ಮಂಜು. ಈ ಎಲ್ಲಾ ಕಾರಣಕ್ಕೆ ಬಿಗ್‍ಬಾಸ್ ಗ್ರ್ಯಾಂಡ್ ಫಿನಾಲೆಯ ಸೀಸನ್-8ರ ಗೆಲುವು ಮಂಜು ಪಾವಗಡ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸುವ ಜೊತೆಗೆ ಮಂಜುರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಲ್ಲಿ ಮಂಜು ಕಲಿತಿದ್ದೇನು..?- ಮುಂದಿನ ಯೋಚನೆ, ಯೋಜನೆಗಳ ಬಗ್ಗೆ ವಿನ್ನರ್ ಮಾತು

  • ಫಿನಾಲೆಗೆ ಭರ್ಜರಿ ಸಿದ್ಧತೆ – ಹೊಸ ಲುಕ್‍ನಲ್ಲಿ ಮನೆ ಮಂದಿ ಫುಲ್ ಮಿಂಚಿಂಗ್

    ಫಿನಾಲೆಗೆ ಭರ್ಜರಿ ಸಿದ್ಧತೆ – ಹೊಸ ಲುಕ್‍ನಲ್ಲಿ ಮನೆ ಮಂದಿ ಫುಲ್ ಮಿಂಚಿಂಗ್

    ಬಿಗ್‍ಬಾಸ್ ಸೀಸನ್-8ರ ಗ್ರಾಂಡ್ ಫಿನಾಲೆಗೆ ಇನ್ನೇನು ಕೌಂಟ್‍ಡೌನ್ ಸ್ಟಾರ್ಟ್ ಆಗಿದೆ. ಹೀಗಾಗಿ ಮನೆಯ ಸ್ಪರ್ಧಿಗಳು ಫಿನಾಲೆಯಲ್ಲಿ ಮಿಂಚಲು ಬಿಗ್‍ಬಾಸ್, ಸೆಲೆಬ್ರೆಟಿಗಳಿಗೆ ಸ್ಟೈಲಿಶ್ ಆಗಿ ಹೇರ್ ಕಟ್ ಮಾಡುವ ತಂಡವನ್ನು ಬಿಗ್‍ಬಾಸ್ ಮನೆಗೆ ಕಳುಹಿಸಿದ್ದರು.

    ಮೊದಲಿಗೆ ಹೇರ್ ಸ್ಟೈಲಿಶ್‍ರನ್ನು ನೋಡಿ ದೊಡ್ಮನೆ ಮಂದಿ ಫುಲ್ ಶಾಕ್ ಆಗುತ್ತಾರೆ. ನಂತರ ಎಲ್ಲರೂ ಒಬ್ಬೊಬ್ಬರೇ ಹೇರ್ ಸ್ಟೈಲ್, ಫೇಶಿಯಲ್ ಮುಂತಾದವುಗಳನ್ನು ಮಾಡಿಸಿಕೊಂಡಿದ್ದಾರೆ.

    ಮಂಜು, ಅರವಿಂದ್, ಪ್ರಶಾಂತ್ ಹೇರ್ ಕಟ್ ಹಾಗೂ ಹೇರ್ ಸ್ಟೈಲ್ ಮಾಡಿಸಿಕೊಂಡರೆ, ದಿವ್ಯಾ ಉರುಡುಗ ವೈಷ್ಣವಿ ಹೇರ್ ಕಟ್, ಫೇಶಿಯಲ್, ಪೆಡಿಕ್ಯೂರ್ ಮಾಡಿಸಿಕೊಂಡಿಸಿಕೊಂಡಿದ್ದಾರೆ. ಇದೇ ವೇಳೆ ಒಬ್ಬ ಹೇರ್ ಸ್ಟೈಲಿಶ್ ಆಗಿ ನನಗೆ ನಾನೇ ಹೇರ್ ಕಟ್ ಮಾಡಿಕೊಳ್ಳುವುದ ಬಹಳ ಕಷ್ಟ, ಆದರೆ ನೀವು ನಿಮಗೆ ಹೇರ್ ಸ್ಟೈಲ್ ಮಾಡಿಕೊಳ್ಳುತ್ತೀರಾ ಎಂದಾಗ, ಅರವಿಂದ್ ನಾನು ವಿದೇಶ ಪ್ರಯಾಣ ಮಾಡುವಾಗ ಅಲ್ಲಿ ಒಂದು ಹೇರ್ ಕಟ್‍ಗೆ 25 ಡಾಲರ್ಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ನಾನು ಆ ಡಾಲರ್‍ನನ್ನು ಉಳಿಸುವುದಕ್ಕೆ ನನಗೆ ನಾನೇ 2010ರಿಂದ ಹೇರ್ ಸ್ಟೈಲ್ ಮಾಡಿಕೊಳ್ಳಲು ಆರಂಭಿಸಿದೆ.

     

    ಈ ಮಧ್ಯೆ ಮಂಜು ಮನೆಗೆ ಬಂದ ಹೇರ್ ಸ್ಟೈಲಿಶ್‍ಗಳಿಗೆ ಮನೆಗೆ ಬಂದವರಿಗೆ ಊಟ ಮಾಡಿಕೊಂಡು ಹೋಗಿ, ಚಿಕನ್ ತಿನ್ನುತ್ತೀರಾ ಮಟನ್ ತಿನ್ನುತ್ತೀರಾ ಎಂದು ಕೇಳುತ್ತಾ, ಬಳಿಕ ಬರೀ ಎಗ್‍ರೈಸ್ ಮಾಡಿದ್ದೇವೆ ಅದನ್ನೇ ಎರಡು ಸ್ಪೂನ್ ತಿಂದುಕೊಂಡು ಹೋಗಿ ಎಂದು ಹಾಸ್ಯ ಮಾಡಿದ್ದಾರೆ.

    ಒಟ್ಟಾರೆ ಬಿಗ್‍ಬಾಸ್ ಗ್ರಾಂಡ್ ಫಿನಾಲೆಗೆ ಮನೆಮಂದಿಯೆಲ್ಲಾ ಟಿಪ್‍ಟಾಪ್ ಆಗಿ ಕಾಣಲು ಭರ್ಜರಿಯಾಗಿ ತಯಾರಿಯಾಗುತ್ತಿದ್ದಾರೆ.

  • ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ಮಂಜು ಒಬ್ಬ ರಿಯಲ್ ಎಂಟರ್ಟೈನರ್ – ಮಂಜುಗೆ ಮನೆಮಂದಿಯ ಶುಭ ಹಾರೈಕೆಗಳು

    ವಾರ ಬಿಗ್‍ಬಾಸ್ ಗ್ರಾಂಡ್ ಫಿನಾಲೆ ವೀಕ್ ಆಗಿರುವುದರಿಂದ ಪ್ರತಿದಿನ ದೊಡ್ಮನೆಯಲ್ಲಿ ಟಾಪ್ 5 ಸ್ಪರ್ಧಿಗಳ ವಾಲ್ ಆಫ್ ದಿ ಫ್ರೆಮ್ ಕ್ರಿಯೆಟ್ ಮಾಡಿ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ಜರ್ನಿಯನ್ನು ಮೆಲುಕು ಹಾಕಲಾಗುತ್ತಿದೆ.

    ಸದ್ಯ ಬಿಗ್‍ಬಾಸ್ 43ನೇ ದಿನ ಗಾರ್ಡನ್ ಏರಿಯಾದಲ್ಲಿ ಜಗಮಗಿಸುವ ಲೈಟ್ ಮಧ್ಯೆ ಮಂಜು ಪಾವಗಡ ಫೋಟೋ ಫ್ರೆಮ್ ಹಾಕಲಾಗಿತ್ತು. ಇದನ್ನು ನೋಡಿ ಮಂಜು ಫುಲ್ ಖುಷ್ ಆಗಿದ್ದಾರೆ. ಬಳಿಕ ನನ್ನ ಜೀವನದಲ್ಲಿ ಬಿಗ್‍ಬಾಸ್ ದೊಡ್ಡ ಇತಿಹಾಸ. ಇದು ದೊಡ್ಡ ವೇದಿಕೆ, ನನಗೆ ಈ ಜಾಗ ಎಂದರೆ ಬಹಳ ಇಷ್ಟ. ಇದು ನನಗೆ ಸುಮಾರು ವರ್ಷದ ಕನಸಾಗಿತ್ತು. ನಾನು ರಂಗಭೂಮಿ ಸಿನಿಮಾರಂಗಕ್ಕೆ ಪ್ರವೇಶಿಸಿ ಸುಮಾರು 9-10 ವರ್ಷವಾಯಿತು. ಮಜಾಭಾರತದಿಂದ ಬಂದು ಇಂದು ಬಿಗ್‍ಬಾಸ್ ಮನೆಗೆ ಬಂದು 110 ದಿನ, 20 ದೊಡ್ಡ ಗಣ್ಯರು, ದೊಡ್ಡ ಹೆಸರಿನಲ್ಲಿ ಗುರುತಿಸಿಕೊಂಡವರು. ಎಲ್ಲರೂ ಸಾಧನೆ ಮಾಡಿರುವವರು ಇಂದು ನನ್ನ ಸ್ನೇಹಿತರಾಗಿದ್ದಾರೆ. ಇಲ್ಲಿ ಬಂದು ಒಬ್ಬೊಬ್ಬರಿಂದ ಒಂದೊಂದು ಬಹಳ ಕಲಿತ್ತಿದ್ದೇನೆ. ಎಲ್ಲರಿಗೂ ಬಹಳ ಧನ್ಯವಾದ ಎಂದು ತಿಳಿಸಿದ್ದಾರೆ.

    ನಂತರ ವೈಷ್ಣವಿ ನೀವಿದ್ದ ಕಡೆ ನಗು ಇರುತ್ತದೆ. ನೀವು ಎಲ್ಲೆ ಇದ್ದರೂ, ಏನೇ ಮಾಡುತ್ತಿದ್ದರೂ ಎಂಗೇಜಿಂಗ್ ಆಗಿರುತ್ತೀರಾ. ಅದರಿಂದ ಎನರ್ಜಿ ಲೆವಲ್ ತುಂಬಾ ಹೈ ಆಗುತ್ತದೆ. ಈ ಮನೆಗೆ ತುಂಬಾ ನೀವು ಅವಶ್ಯಕತೆ, ನೀವು ಟಾಸ್ಕ್ ಆಡುವ ರೀತಿ, ಒಂದು ಟೀಂನನ್ನು ನಿಭಾಯಿಸುವ ರೀತಿ, ನಿಮ್ಮ ಟೀಂನಲ್ಲಿ ಇದ್ದಾಗ ನನಗೆ ಬಹಳ ಖುಷಿಕೊಟ್ಟಿದೆ. ಎಲ್ಲರನ್ನು ಯಾವಾಗಲೂ ನಗಿಸುತ್ತೀರಿ, ನಿಮ್ಮ ನಗು ಇಡೀ ಕರ್ನಾಟಕ ಅಲ್ಲ. ಭಾರತಕ್ಕೆ ಸ್ಪ್ರೆಡ್ ಆಗಲಿ ಎಂದು ವಿಶ್ ಮಾಡುತ್ತಾರೆ.

    ಬಳಿಕ ಪ್ರಶಾಂತ್ ಮಂಜು ಯಾವ ಸೋಲನ್ನು ಒಪ್ಪಿಕೊಳ್ಳದ ವ್ಯಕ್ತಿ, ಚೇರ್ ಟಾಸ್ಕ್‌ನಲ್ಲಿ ಮಂಜು ಆಡಿದ ಮೈಂಡ್ ಗೆ ನಾನು ಯಾವತ್ತು ಮರೆಯಲ್ಲ. ಮಾತು ಬಲ್ಲವನಿಗೆ ಜಗಳವಿಲ್ಲ. ಮಂಜುಗೆ ಮಾತು ಬರುತ್ತದೆ. ಮಂಜುಗೆ ಮಾತೇ ಬಂಡವಾಳ. ಮಾತಿನಿಂದಲೇ ಅವನು ಮುಂದೆ ಹೋಗಬಹುದು ಒಳ್ಳೆಯದಾಗಲಿ. ಈ ವರ್ಷ ನಿಮಗೆ ಮದುವೆಯಾಗಲಿ, ಯಾವಾಗಲೂ ನಗುತ್ತೀರಿ, ನಗಿಸುತ್ತೀರಿ ಎಂದು ಹಾರೈಸುತ್ತಾರೆ.

    ಮತ್ತೊಂದೆಡೆ ದಿವ್ಯಾ ಉರುಡುಗ ಮಂಜು ಒಬ್ಬ ನಿಜವಾದ ಎಂಟರ್ಟೈನರ್, ಇಲ್ಲಿ ಇರುವವರಲ್ಲಿ ಬಹಳ ಕಂಫರ್ಟ್ ಇರುವ ವ್ಯಕ್ತಿ ಅಂದರೆ ಮಂಜು, ನಾನು ಅವನೊಂದಿಗೆ ತುಂಬಾ ಒಳ್ಳೆಯ ಕಾಲವನ್ನು ಕಳೆದಿದ್ದೇನೆ. ಮಂಜು ನನಗೆ ತುಂಬ ಒಳ್ಳೆಯ ಫ್ರೆಂಡ್. ನಾನು ಅವನೊಂದಿಗೆ ಎಲ್ಲವನ್ನು ಶೇರ್ ಮಾಡಿಕೊಳ್ಳಬಹುದು. ಮಂಜು ಸೇವ್ ಆಗಿದ್ದು, ತುಂಬಾ ಖುಷಿಯಾಗುತ್ತಿದೆ. ನಿನಗೆ ಒಳ್ಳೆಯದಾಗಲಿ ಖುಷಿಯಾಗಿರು ಎಂದು ಹೇಳುತ್ತಾರೆ.

    ನಂತರ ಮಾತನಾಡಿದ ಅರವಿಂದ್, ನನಗೆ ಮಂಜು ಟೈಮಿಂಗ್ ಅಂದರೆ ಬಹಳ ಇಷ್ಟ. ಮಂಜು ಒಳ್ಳೆ ಕಾಂಪಿಟೇಟರ್, ಮುಂದೆ ಆಚೆ ಕೂಡ ನಾವು ಹೀಗೆ ಇರುತ್ತೇವೆ ಎಂದು ಭಾವಿಸುತ್ತೇನೆ. ಗುಡ್ ಲಕ್ ಚೆನ್ನಾಗಿರಿ ಎಂದಿದ್ದಾರೆ.

    ಇನ್ನೂ ದಿವ್ಯಾ ಸುರೇಶ್ ನನ್ನ ಬಿಗ್‍ಬಾಸ್ ಜರ್ನಿ ಮಂಜು ಪಾವಗಡ ಇಲ್ಲದೇ ಇನ್ ಕಂಪ್ಲೀಟ್. ಇಷ್ಟು ದಿನ ನಿನಗೆ ಸ್ಫೂರ್ತಿ ಯಾರು ಅಂದರೆ ನಮ್ಮ ಅಮ್ಮ ಎಂದು ಹೇಳುತ್ತಿದ್ದೆ. ಆದ್ರೆ ಇನ್ನೂ ಮುಂದೆ ನಮ್ಮ ಅಮ್ಮ ಜೊತೆ ಮಂಜು ಪಾವಗಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಿನ್ನ ಜರ್ನಿ ನೋಡಿದರೆ ಜೀರೋಯಿಂದ ಬಿಗ್‍ಬಾಸ್ ತನಕ ಬರುವುದು ಬಹಳ ಕಷ್ಟ. ನೀನು ತುಂಬಾ ಒಳ್ಳೆಯವನು, ಒಳ್ಳೆಯ ಮನಸ್ಸಿದೆ ಯಾವಾಗಲೂ ಖುಷಿಯಾಗಿರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

  • ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಮನೆಯಲ್ಲಿ ಈಡೇರದ ಒಂದೊಂದು ಕೋರಿಕೆಯನ್ನು ತಿಳಿಸುವಂತೆ ಬಿಗ್‍ಬಾಸ್ ಸೂಚಿಸಿದ್ದರು. ಹಾಗಾಗಿ ಮನೆಯ ಸ್ಪರ್ಧಿಗಳು ತಮ್ಮ ಚಿಕ್ಕ ಚಿಕ್ಕ ಬಯಕೆಗಳನ್ನು ಬಿಗ್‍ಬಾಸ್ ಬಳಿ ತೊಡಿಕೊಂಡಿದ್ದರು. ಸದ್ಯ ಮಂಜು ಪಾವಗಡಗೆ ಸ್ಪೆಷಲ್ ಆಗಿ ಫ್ರೆಂಡ್ ಶಿಪ್ ಡೇಗೆ ವಿಶ್ ಮಾಡಬೇಕೆಂದು ಕೇಳಿಕೊಂಡಿದ್ದ ದಿವ್ಯಾ ಸುರೇಶ್ ಆಸೆಯನ್ನು ಬಿಗ್‍ಬಾಸ್ ಈಡೇರಿಸಿದ್ದಾರೆ.

    ಅದರಂತೆ ಗಾರ್ಡನ್ ಏರಿಯಾದಲ್ಲಿ ಒಂದು ಟೇಬಲ್ ಮೇಲೆ ಕೇಕ್, ಬಲೂನ್‍ಗಳ ರಾಶಿ, ಮಂಜು ಹಾಗೂ ದಿವ್ಯಾ ಸುರೇಶ್ ಫೋಟೋವೊಂದನ್ನು ಇರಿಸಿ ಸಿಂಗಾರಿಸಲಾಗಿತ್ತು. ಈ ಅರೆಂಜ್ ಮೆಂಟ್ಸ್ ನೋಡಿ ಮಂಜು ಶಾಕ್ ಆದರೆ, ಮನೆಮಂದಿಯೆಲ್ಲಾ ಫುಲ್ ಖುಷ್ ಆಗಿದ್ದಾರೆ.

    ನಂತರ ದಿವ್ಯಾ ಸುರೇಶ್ ಹಾಗೂ ಮಂಜು ಏಕಾಂತದಲ್ಲಿ ಕುಳಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ನಿನ್ನನ್ನು ನೋಡಿದಾಗ ನನಗೆ ಗೌರವ ನೀಡಬೇಕು ಅನಿಸುತ್ತದೆ. ನೀವು ಹೋಗಿ ಬನ್ನಿ ಎಂದು ಕರೆಯಬೇಕು ಎನಿಸುತ್ತದೆ. ಫಸ್ಟ್ ಇನ್ನಿಂಗ್ಸ್‌ನಲ್ಲಿ ನಾನು ನಿನಗೆ ಬಹಳ ಹರ್ಟ್ ಮಾಡಿದ್ದೇನೆ. ಬಹಳ ಡೊಮಿನೇಟ್ ಆಗಿಬಿಟ್ಟೆ, ಕೊನೆ ಕೊನೆಯಲ್ಲಿ ನನ್ನಿಂದ ನಿನ್ನ ಆಟಕ್ಕೆ ತೊಂದರೆ ಆಯ್ತು ಎಂಬುವುದು ಅರ್ಥವಾಯಿತು. ನಾನು ನಿನ್ನ ಬಗ್ಗೆ ಬಹಳ ಪೊಸೆಸಿವ್ ಆಗಿಬಿಟ್ಟೆ ಜೊತೆಗೆ ನಿನ್ನ ಫ್ರೀಡಂನ ಕಂಟ್ರೋಲ್ ಕೂಡ ಮಾಡಾತ್ತಿದೆ. ಮನೆಯಿಂದ ಹೊರಗೆ ಹೋದ ನಂತರ ನಾನು ನಿನಗೆ ಕ್ಷಮೆ ಕೇಳಲು ಆಗಲಿಲ್ಲ. ನನಗೆ ನೀನು ಅಂದರೆ ತುಂಬಾ ಇಷ್ಟ. ಥ್ಯಾಂಕ್ಯು ನೀನು ನನಗೆ ಫ್ರೆಂಡ್ ಆಗಿದ್ದಕ್ಕೆ. ಹೀಗೆ ನನ್ನ ಜೊತೆ ಯಾವಾಗಲೂ ಇರು, ನೀನು ನನ್ನ ಬೆಸ್ಟ್ ಫ್ರೆಂಡ್ ಎನ್ನುತ್ತಾರೆ.

    ಇದಕ್ಕೆ ಮಂಜು, ಗೊತ್ತೊ, ಗೊತ್ತಿಲ್ಲದೇ ಮಾಡುವ ತಪ್ಪನ್ನು ತಿದ್ದುಕೊಳ್ಳಬೇಕು ಎಂಬುವುದು ನಿನಗೆ ಅರ್ಥವಾಯಿತಲ್ಲಾ ನನಗೆ ಖುಷಿಯಾಯಿತು. ಇದು ದೊಡ್ಡ ವೇದಿಕೆ ಇಲ್ಲಿಂದ ಆಚೆ ಹೋದ ಬಳಿಕ ಎಲ್ಲರೂ ಒಳ್ಳೆದನ್ನು ಮಾತನಾಡಬೇಕು, ಒಳ್ಳೆ ಅವಕಾಶಗಳು ಸಿಗಬೇಕು. ಚೆನ್ನಾಗಿ ಹಾಗೂ ಖುಷಿಯಾಗಿರು ಎಂದು ವಿಶ್ ಮಾಡುತ್ತಾರೆ. ಅಲ್ಲದೇ ಇದನ್ನೆಲ್ಲಾ ನಾನು ಸಿನಿಮಾದಲ್ಲಿ ನೋಡಿದ್ದೆ. ಇದು ಯಾವುದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ.

    ನಂತರ ಇಬ್ಬರೂ ಕೇಕ್ ಕತ್ತರಿಸಿ ಫ್ರೆಂಡ್ ಶಿಪ್ ಡೇ ಸೆಲೆಬ್ರೆಟ್ ಮಾಡುತ್ತಾರೆ. ನಂತರ ಕೇಕ್ ತಿನ್ನುವ ವೇಳೆ ಮಂಜು ನಮ್ಮ ಹುಡುಗ್ರು ಇದನ್ನೆಲ್ಲಾ ನೋಡಿದರೆ ಫುಲ್ ಶಾಕ್ ಆಗುತ್ತಾರೆ. ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇರುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳುತ್ತಾರೆ.  ಇದನ್ನೂ ಓದಿ:BB ಮನೆಯಿಂದ ರಾತ್ರೋರಾತ್ರಿ ಹೊರಗೆ ಬಂದ DS

  • ನೀನು ಯಾರು ನನ್ನ ಕೇಳುವುದಕ್ಕೆ – ಡಿಎಸ್ ವಿರುದ್ಧ ಮಂಜು ಗರಂ

    ನೀನು ಯಾರು ನನ್ನ ಕೇಳುವುದಕ್ಕೆ – ಡಿಎಸ್ ವಿರುದ್ಧ ಮಂಜು ಗರಂ

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಿಂದಲೂ ಜೊತೆಯಾಗಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಆಗಾಗ ಇಬ್ಬರು ಸಿಟ್ಟು ಹಾಗೂ ಬೇಸರ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ಎಷ್ಟೇ ಮನಸ್ತಾಪ ಇದ್ದರೂ ಇಬ್ಬರೂ ಕೊನೆಯಲ್ಲಿ ಇಬ್ಬರೂ ಒಂದಾಗಿ ಬಿಡುತ್ತಾರೆ.

    ಸದ್ಯ ವೈಷ್ಣವಿ ಹಾಗೂ ಪ್ರಶಾಂತ್‍ಗೆ ಬಿಗ್‍ಬಾಸ್ ಟಾಸ್ಕ್‌ವೊಂದನ್ನು ನೀಡಿರುತ್ತಾರೆ. ಈ ವೇಳೆ ಮಂಜು ಹಾಗೂ ದಿವ್ಯಾ ಸುರೇಶ್ ಇಬ್ಬರು ಒಟ್ಟಿಗೆ ವಾಕಿಂಗ್ ಮಾಡುತ್ತಿರುತ್ತಾರೆ. ಈ ವೇಳೆ ನಿನ್ನೆ ನೀನು ಆಡಿದ ಮಾತು ನೆನಪಾಯಿತು ಎಂದು ದಿವ್ಯಾ ಸುರೇಶ್ ಮಂಜುಗೆ ಹೇಳುತ್ತಾರೆ. ಆಗ ಮಂಜು ನಾನು ಏನೆಂದು ಹೇಳಿದೆ ಎಂದಾಗ, ಊಟ ಮಾಡುವಾಗ ನೀನು ಯಾರು ನನ್ನ ಕೇಳುವುದಕ್ಕೆ, ನೀನು ಏಕೆ ನನ್ನ ಕೇಳುತ್ತಿದ್ದಿಯಾ ಅಂತ ಕೇಳಿಲ್ವಾ ನೀನು. ಎಷ್ಟು ಕೋಪ ಮಾಡಿಕೊಂಡು ಆ ಮಾತನ್ನು ಹೇಳಿದೆ ಎಂದು ನಿನಗೆ ಗೊತ್ತಿದ್ಯಾ? ನಾನು ಯಾರು ಅಂದ ಮೇಲೆ ನನ್ನ ಜೊತೆ ಯಾಕೆ ಮಾತನಾಡುತ್ತಿಯಾ, ಮಾತಾಡಿಸಬೇಡ ಬಿಟ್ಟು ಬಿಡು. ನಾವಿಬ್ಬರು ಮತ್ತೆ ಮಾತನಾಡುವುದರಲ್ಲಿ ನನಗೆ ಅರ್ಥ ಇಲ್ಲ ಅನಿಸುತ್ತದೆ. ನೀನು ನನ್ನನ್ನು ಆ ರೀತಿ ಪ್ರಶ್ನೆ ಮಾಡುವಂತೆ ನಾನೇನು ಹೇಳಿಲ್ಲ ಎನ್ನುತ್ತಾ, ನಾನು ಮನೆ ಒಳಗೆ ಹೋಗುತ್ತೇನೆ ಅಂತ ಕೋಪ ಮಾಡಿಕೊಂಡು ದಿವ್ಯಾ ಸುರೇಶ್ ಹೋಗುತ್ತಾರೆ.

    ನಂತರ ಕಿಚನ್‍ನಲ್ಲಿ ದಿವ್ಯಾ ಸುರೇಶ್ ಕೆಲಸ ಮಾಡುತ್ತಿದ್ದಾಗ ಮಂಜು, ನೀನು ಏನು ಮಾತನಾಡಲೇ ಇಲ್ವಾ ಎಂದು ಪ್ರಶ್ನಿಸಿದಾಗ, ನೀನು ಯಾರು ಎಂದು ಕೇಳುವಷ್ಟು ನಾನೇನು ಮಾಡಿಲ್ಲ ಎಂದು ಹೇಳುತ್ತಾರೆ. ನನಗೆ ನೀನು ಒಳ್ಳೆ ಪ್ರಶ್ನೆಯನ್ನೇ ಕೇಳಿದೆ ಎಂದು ಅಳುತ್ತಾರೆ.

    ಏನು ಮಾಡುವುದು ಎಷ್ಟೇ ಆದರೂ ಬಿಟ್ಟು ಹೋಗುವುದಕ್ಕೆ ಆಗುವುದಿಲ್ವಲ್ಲಾ ಎನ್ನುತ್ತಾರೆ. ಆಗ ಮಂಜು 108 ದಿನಗಳಲ್ಲಿ ಯಾವತ್ತು ಈ ದಿನ ಬಂದಿರಲಿಲ್ಲ ಎನ್ನುತ್ತಾ ಬೇಸರ ವ್ಯಕ್ತಪಡಿಸುತ್ತಾರೆ. ಹೀಗೆ ಇಬ್ಬರು ಮಾತನಾಡುತ್ತಾ ಜೊತೆಗೆ ಕೈ ಹಿಡಿದುಕೊಂಡು ಒಂದಾಗಿದ್ದಾರೆ. ಇದನ್ನೂ ಓದಿ:ಅರವಿಂದ್ ವಸ್ತು ಕದಿಯಲು ಕಷ್ಟಪಟ್ಟೆ – ಟಾಸ್ಕ್ ಗೆದ್ದ ವೈಷ್ಣವಿಗೆ ಸಿಕ್ತು ಐಸ್‍ಕ್ರೀಂ

  • ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ನನ್ನ ಮದುವೆ ಹಾಳು ಮಾಡೋದಕ್ಕೆ ಶುಭಾನೇ ಸಾಕು: ಮಂಜು

    ಬಿಗ್‍ಬಾಸ್ ಮನೆಯಲ್ಲಿ ಮಂಜು ಮದುವೆ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮದುವೆ ಬಗ್ಗೆ ಸಾಕಷ್ಟು ಕನಸು, ಆಸೆಗಳನ್ನು ಹೊಂದಿರುವ ಮಂಜು ಮದುವೆಯಾಗಲು ತಯಾರಾಗಿದ್ದರೆ. ಆದರೆ ನನ್ನ ಮದುವೆಯನ್ನು ಶುಭಾನೇ ಕೆಡಿಸಿಬಿಡುತ್ತಾರೆ ಎಂದು ಸುದೀಪ್ ಜೊತೆ ಮಂಜು ಹೇಳಿಕೊಂಡಿದ್ದಾರೆ.

    ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ಮಂಜು ನಾನು ಹೆಣ್ಣು ನೋಡುವ ಶಾಸ್ತ್ರಕ್ಕೆ ಯಾರನ್ನು ಕರೆದುಕೊಂಡು ಹೋದರೂ ಶುಭಾ ಪೂಂಜಾರನ್ನು ಮಾತ್ರ ಕರೆದುಕೊಂಡು ಹೋಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಸುದೀಪ್ ಕಾರಣವೇನು ಎಂದಾಗ ನಾನು ಹೆಣ್ಣು ನೋಡವ ಶಾಸ್ತ್ರಕ್ಕೆ ಶುಭಾ ಕರೆದುಕೊಂಡು ಹೋದರೆ ಇವರೇ ಹಾಳು ಮಾಡಿಬಿಡುತ್ತಾರೆ.

    ಹುಡುಗಿ ಮುಂದೆ ಬೇಡ ಹುಡುಗ ಸರಿ ಇಲ್ಲ. ಡಬ್ಬ ನನ್ನ ಮಗ, ಚಂಪೂ, ಹಲ್ಲುಬ್ಬ, ತುರೆಮಣೆ, ನೀನೇನೋ ಒಳ್ಳೆ ಚಿಂಪಾಂಜಿ ತರ ಇದ್ಯಾ? ನೀನು ಯಾವ ಸೀಮೆ ಅದೋ ಅಂತಾರೆ. ಇಷ್ಟು ಹುಡುಗಿ ಮುಂದೆ ಹೇಳಿದರೆ ಸಾಕು ಹುಡುಗಿ ರಿಜೆಕ್ಟ್ ಮಾಡಿ ಬಿಡುತ್ತಾಳೆ. ಇದರ ಬದಲಿಗೆ ಹುಡುಗ ಚೆನ್ನಾಗಿದ್ದಾನೆ ಎಂದರೆ ಒಕೆ. ಆದರೆ ಇವನೊಬ್ಬ ದರಿದ್ರಾನನ್ನ ಮಗ, ಇವನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ಸೊಟ್ಟ ನನ್ನ ಮಗ ಅಂತ ಏನೇನೋ ಬೈತಾರೆ ಎಂದು ಮಂಜು ಆರೋಪಿಸುತ್ತಾರೆ.

    ಈ ವೇಳೆ ಸುದೀಪ್ ಹುಡುಗಿ ಕೂಡ ನಾನು ಹಲ್ಲು ಹುಜ್ಜುವುದಿಲ್ಲ ಎಂದರೆ ಹೇಗೆ ಇರುತ್ತದೆ ಒಮ್ಮೆ ನೆನಪಿಸಿಕೊಳ್ಳಿ. ಹಾಗೇ ಹೇಳಿದ ತಕ್ಷಣ ಅಲ್ಲಿಂದ ಎದ್ದು ಓಡಿ ಹೋಗುವವರೇ ಮೊದಲು ನೀವು ಮಂಜು ಅವರೇ ಎಂದು ಅಣುಕಿಸುತ್ತಾರೆ. ಇನ್ನೂ ಚಕ್ರವರ್ತಿಯವರು ಬರುತ್ತೀನಿ ಅಂದ್ರು ಅವರನ್ನು ಬೇಡ ಅಂದ್ರಿ ಯಾಕೆ ಎಂದು ಕೇಳುತ್ತಾರೆ.

    ಆಗ ಮಂಜು ಅವರಿಗೂ ನನಗೂ ಪ್ರೀತಿ ವಿಶ್ವಾಸ ಜಾಸ್ತಿ ಇದೆ. ಹಾಗಾಗಿ ಅವರನ್ನು ಡೈರೆಕ್ಟ್ ಮದುವೆಗೆ ಬನ್ನಿ ಎಂದು ಹೇಳಿದ್ದೇನೆ ಎನ್ನುತ್ತಾರೆ. ಈ ವೇಳೆ ಸುದೀಪ್ ಸೆರಿದಂತೆ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇದನ್ನೂ ಓದಿ : ಇವತ್ತು ಹೋಗಲ್ಲ, ಈ ವಾರ ಹೋಗ್ತಾರೆ- ಬಿಗ್ ಬಾಸ್ ಎಲಿಮಿನೇಶನ್ ಟ್ವಿಸ್ಟ್

  • ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

    ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

    ಬಿಗ್‍ಬಾಸ್ ಮನೆಯ ಮೋಸ್ಟ್ ಎಂಟರ್​ಟೈನರ್ ಅಂದರೆ ಮಂಜು. ದೊಡ್ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲರ ಜೊತೆ ಬೆರೆಯುತ್ತಿದ್ದ ಮಂಜು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ರೀತಿ ತಮಗೆ ಕಂಫರ್ಟ್ ಇರುವವರೊಂದಿಗೆ ಮಾತ್ರ ಹೆಚ್ಚಾಗಿ ಬೆರೆಯುತ್ತಿದ್ದಾರೆ.

    ಸದ್ಯ ಶುಭಾ ಪೂಂಜಾ ಮಂಜುಗೆ ಯಾವಾಗಲೂ ಹುಡುಗಿಯರ ಜೊತೆಯಲ್ಲಿಯೇ ಇರುತ್ತೀಯಲ್ಲ ಹೋಗಿ ಹುಡುಗರೊಟ್ಟಿಗೆ ಕೂಡ ಕುಳಿತುಕೊಂಡು ಮಾತನಾಡು ಎಂದು ಹೇಳುತ್ತಾರೆ. ಇದಕ್ಕೆ ಮಂಜು ಹುಡುಗರು ಸರಿಯಾಗಿಲ್ಲ. ಯಾಕೆ ಎಂದು ಕೇಳಿದಾಗ ಹುಡುಗರ ಬುದ್ಧಿ ಸರಿಯಾಗಿಲ್ಲ ಎನ್ನುತ್ತಾರೆ.

    ಇದೇ ವೇಳೆ ಶಮಂತ್ ಎಲ್ಲೆಲ್ಲೋ ಇದ್ವಿ ನಾವು, ಹೆಂಗಾದ್ವಿ ನೋಡಿ ನೀವು, ಬರಬರುತ್ತಾ ಜೀವನ ಯಾಕೋ ಕಷ್ಟ ಆಗುತ್ತಿದೆ. ಬಜರ್ ಆದಾಗ ಓಡಿ ಹೋಗ್ತೀವಿ. ಸಣ್ಣ ಮ್ಯಾಟರ್‌ಗೆ ಕಿತ್ತಾಡ್ತೀವಿ ಎಂದು ಹಾಡು ಹೇಳುತ್ತಿರುತ್ತಾರೆ. ಆಗ ಮಂಜು, ಶಮಂತ್‍ರನ್ನು ವೈಷ್ಣವಿ ಹಾಗೂ ಶುಭಾಗೆ ತೋರಿಸಿ ಅರ್ಥ ಆಯ್ತಾ ನಾನು ಯಾಕೆ ಸೇರುವುದಿಲ್ಲ. ಇವನು ಈ ತರ ಎಂದು ಹೇಳುತ್ತಾರೆ.

    ಬಳಿಕ ಚಕ್ರವರ್ತಿಯವರನ್ನು ತೋರಿಸಿ, ಅವರು ಅವರದ್ದೇ ಆದ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನೂ ಪ್ರಶಾಂತ್ ಕೇಸು, ಪಾಸು, ಕೋರ್ಟ್, ಜೈಲು, ಪೈಲು ಎಂದು ಕೊಂಡಿರುತ್ತಾರೆ. ಇನ್ನೊಬ್ಬ ಅರವಿಂದ್ ರನ್ನಿಂಗ್ ಎಂದು ಓಡುವ ಸನ್ನೆ ಮಾಡಿ ತೋರಿಸುತ್ತಾರೆ.

    ಮಂಜು ಓಡುವುದನ್ನು ತೋರಿಸಿದ್ದನ್ನು ಕಂಡು ಶುಭಾ ಹಾಗೂ ವೈಷ್ಣವಿ ಜೋರಾಗಿ ನಗುತ್ತಾ, ಬಹಳ ಕ್ಯೂಟ್ ಆಗಿ ರನ್ನಿಂಗ್‍ನನ್ನು ತೋರಿಸಿದ್ರಿ, ಮತ್ತೊಮ್ಮೆ ತೋರಿಸಿ ಎಂದು ಕೇಳುತ್ತಾರೆ. ಇದನ್ನೂ ಓದಿ:ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

  • ಮಂಜುಗೆ ಊಟ ಮಾಡಿಸಲು ವೈಷ್ಣವಿ, ಪ್ರಶಾಂತ್ ಸರ್ಕಸ್

    ಮಂಜುಗೆ ಊಟ ಮಾಡಿಸಲು ವೈಷ್ಣವಿ, ಪ್ರಶಾಂತ್ ಸರ್ಕಸ್

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಈ ವಾರ ಸೋತ ತಂಡದ ಸದಸ್ಯರಿಗೆ ಬಿಗ್‍ಬಾಸ್ ಡಿಫರೆಂಟ್ ಶಿಕ್ಷೆಯನ್ನು ನೀಡುತ್ತಿದ್ದಾರೆ. ಸದ್ಯ ಏಳು ಬೀಳು ಟಾಸ್ಕ್‌ನಲ್ಲಿ ಸೋತ ವಿಜಯಯಾತ್ರೆ ತಂಡದ ಇಬ್ಬರು ಸದಸ್ಯರು ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೆ ಊಟ ಮಾಡಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದಾರೆ.

    ಅದರಂತೆ ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ನಿಂಗೈತೆ ಇರು ತಂಡದ ಎಲ್ಲಾ ಸದಸ್ಯರಿಗೂ ಊಟಮಾಡಿಸಿದ್ದಾರೆ. ಆದರೆ ಈ ಎಲ್ಲಾ ಸದಸ್ಯರಲ್ಲಿ ಮಂಜುಗೆ ಊಟ ಮಾಡಿಸಲು ವೈಷ್ಣವಿ ಹಾಗೂ ಪ್ರಶಾಂತ್ ಸಿಕ್ಕಾಪಟ್ಟೆ ಸರ್ಕಸ್ ಮಾಡಿದ್ದಾರೆ.

    ತಮ್ಮ ಚೇಷ್ಟೆ, ತಮಾಷೆ ಹಾಗೂ ತುಂಟತನದಿಂದಲೇ ಬಿಗ್ ಮನೆಯ ಸ್ಪರ್ಧಿಗಳಿಗೆ ಮನರಂಜನೆ ನೀಡುವ ಮಂಜುಗೆ, ವೈಷ್ಣವಿ ಊಟ ಮಾಡಿಸುವ ವೇಳೆ ನನಗೆ ಇನ್ನು ಸ್ವಲ್ಪ ಉಪ್ಪು ಬೇಕಿತ್ತು ಎಂದು ಸತಾಯಿಸುತ್ತಾರೆ. ಆಗ ವೈಷ್ಣವಿ ಕೊಡುವುದಿಲ್ಲ ಎಂದು ಸ್ವಲ್ಪ, ಸ್ವಲ್ಪವೇ ಅನ್ನ ತಿನ್ನಿಸುತ್ತಾರೆ. ಆಗ ಮಂಜು ಬೆಳಗ್ಗೆ ತನಕ ನಿಧಾನವಾಗಿ ತಿನ್ನಿಸುತ್ತಾ ಎಂದು ಅಣುಕಿಸಿದ್ದಾರೆ. ನಂತರ ಮತ್ತೊಂದು ತುತ್ತು ಊಟ ತಿನ್ನಿಸಲು ಬಂದ ವೈಷ್ಣವಿಗೆ ಇರು ಇನ್ನೂ ಅಗೀತಾ ಇದ್ದೀನಿ, ಗ್ರೈಂಡ್ ಆಗಬೇಕು ಎಂದು ಕಾಯಿಸುತ್ತಾರೆ. ನನ್ನ ಜಾತಕದಲ್ಲಿತ್ತು ನೀನು ಒಂದು ದೊಡ್ಡ ಟಾಲ್ ಹೀರೋಯಿನ್ ಕೈನಲ್ಲಿ ಊಟ ಮಾಡಿಸಿಕೊಳ್ಳುತ್ತೀಯಾ ಎಂದು ಹೇಳಿದ್ದರು. ಮೊನ್ನೆ ಒಬ್ಬರಿಗೆ ಬಟ್ಟೆ ಬಿಚ್ಚಿಸಿ ಕುಣಿಸಿದ್ದೆ, ಇವತ್ತು ಅದೇ ವ್ಯಕ್ತಿ ನನಗೆ ಊಟ ಕೂಡ ಮಾಡಿಸುತ್ತಿದ್ದಾರೆ ಎಂದು ರೇಗಿಸಿದ್ದಾರೆ.

    ನಂತರ ಪ್ರಶಾಂತ್ ಮಂಜುಗೆ ಊಟ ಮಾಡಿಸಲು ಬಂದಾಗ, ಇಲ್ಲಿ ಕುರೋಣ್ವಾ ಅಥವಾ ಗಾರ್ಡನ್ ಏರಿಯಾದಲ್ಲಿ ಕುರೋಣ್ವಾ ಎಂದಾಗ ಪ್ರಶಾಂತ್ ನೀನು ಎಲ್ಲಿ ಹೇಳುತ್ತಿಯಾ ಅಲ್ಲಿ, ಮಗುಗೆ ಹೊಟ್ಟೆ ತುಂಬಬೇಕು ಅಷ್ಟೇ ಎಂದು ಊಟ ಮಾಡಿಸುತ್ತಾರೆ. ಈ ವೇಳೆ ಪ್ರಶಾಂತ್ ಒಂದು ಊರಿನಲ್ಲಿ ಮಂಜು ಎಂಬ ಹುಡುಗ ಇದ್ನಂತೆ. ಅವನು ತುಂಬಾ ತುಂಟ ಅಂತೆ, ಅವನ ತುಂಟತನಕ್ಕೆ ಮನೆ ಮಂದಿಯೆಲ್ಲಾ ಕಣ್ಣೀರು ಹಾಕುತ್ತಿದ್ರಂತೆ ಎಂದು ಕಥೆ ಹೇಳಲು ಆರಂಭಿಸುತ್ತಾರೆ. ಆಗ ಮಂಜು ನನಗೆ ನನ್ನ ದೊಡ್ಡಪ್ಪನೇ ನೆನಪಾಗುತ್ತಿದ್ದಾರೆ, ನನಗೆ ಸಾಕು ಎಂದು ರೇಗಿಸುತ್ತಾ, ವೈಷ್ಣವಿ ಹಾಗೂ ಪ್ರಶಾಂತ್‍ಗೆ ಮನೆಯೆಲ್ಲಾ ಓಡಾಡಿಸುತ್ತಾ, ಸೋಫಾ ಮೇಲೆ ಉರುಳಾಡುತ್ತಾ ಆಟ ಆಡಿಸಿದ್ದಾರೆ. ಇದನ್ನೂ ಓದಿ:ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

  • ಕೆಲವರಿಗೆ ಅದೃಷ್ಟ ಹಿಡಿದರೆ, ನನಗೆ ದರಿದ್ರ ಹಿಡಿದಿದೆ: ಮಂಜು

    ಕೆಲವರಿಗೆ ಅದೃಷ್ಟ ಹಿಡಿದರೆ, ನನಗೆ ದರಿದ್ರ ಹಿಡಿದಿದೆ: ಮಂಜು

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲಿಯೇ ಮಂಜು ಕೈಗೆ ರಾಕಿ ಕಟ್ಟಿ ಅಣ್ಣ-ತಂಗಿಯಾಗಿರುವ ವೈಷ್ಣವಿ ಮಂಜುಗೆ ಸಿಕ್ಕಾಪಟ್ಟೆ ಕೀಟಲೆ ಕೊಡುತ್ತಿದ್ದಾರೆ. ಸದ್ಯ ಮಂಜುಗೆ ಸೊಪ್ಪಿನ ಅಲಂಕಾರ ಮಾಡಿ ವೈಷ್ಣವಿ ದೃಷ್ಟಿ ತೆಗೆದಿದ್ದಾರೆ.

    ಈ ವಾರ ದೊಡ್ಮನೆ ಕಿಚನ್ ಜವಾಬ್ದಾರಿ ಹೊತ್ತುಕೊಂಡಿರುವ ಗಂಡೈಕ್ಳು ಅಡುಗೆ ಮಾಡಲು ಸೊಪ್ಪನ್ನು ಬಿಡುಸುತ್ತಿರುತ್ತಾರೆ. ಈ ವೇಳೆ ಹೊಟ್ಟೆ ಹಸಿವಿನಿಂದಾಗಿ ಸೋಫಾ ಮೇಲೆ ಕುಳಿತಿದ್ದ ವೈಷ್ಣವಿ ಮಂಜುರನ್ನು ಕರೆಯುತ್ತಾರೆ. ಆಗ ಆಗೊಯ್ತು ಇಷ್ಟೇ ಸೊಪ್ಪಿದೆ ಇನ್ನೂ ಕೆಲವು ಹೊತ್ತಿನಲ್ಲಿಯೇ ಉಪ್ಪು-ಖಾರ ಹಾಕಿ ಕೊಡುತ್ತೇನೆ ತಿಂದುಕೊಂಡು ಹೋಗಿ, ಸೊಪ್ಪು ಬಿಡುಸುವುದಕ್ಕೂ ನೆಮ್ಮದಿಯಾಗಿ ಬಿಡುವುದಿಲ್ವಾಲ್ಲ ಎನ್ನುತ್ತಾರೆ.

    ಆಗ ವೈಷ್ಣವಿ ನಿಮ್ಮನ್ನು ನೋಡಬೇಕು ಅನಿಸಿತು. ನೋಡಲು ಬಾರದಾ ಎಂದು ಕೇಳುತ್ತಾ, ಮಂಜಣ್ಣಾ, ಹೇ ಮಂಜಣ್ಣಾ ಎಂದು ಕರೆಯುತ್ತಾರೆ. ಏನಮ್ಮ ಎಂದು ಮಂಜು ಕೇಳಿದಾಗ, ವೈಷ್ಣವಿ ಹೇಗಿದ್ದೀರಾ? ಎಂದಾಗ ಚೆನ್ನಾಗಿದ್ದೀನಿ ಎಂದು ಮಂಜು ಹೇಳುತ್ತಾರೆ. ನಂತರ ನೀವು ಹೇಳುತ್ತಿರುವುದು ಕೇಳಿಸುತ್ತಿಲ್ಲ. ಬರ್ಲಾ ಅಲ್ಲಿ, ಬಂದೇ ಇರಿ ಎಂದು ರೇಗಿಸುತ್ತಾ ಕಿಚನ್ ಬಳಿ ಹೋಗುತ್ತಾರೆ.

    ನೀವು ಹೆಂಗಸರು ಕಿಚನ್ ಬಳಿ ಬರಬೇಡಿ ಎಂದು ಹೇಳಿದ್ನಾಲ್ಲ ಎಂದು ಮಂಜು ಹೇಳಿದಾಗ ವೈಷ್ಣವಿ ನಾನು ಹೆಂಗಸಲ್ಲ, ನಾನು ಮನುಷ್ಯಿ ಎನ್ನುತ್ತಾ, ಅರವಿಂದ್, ರಘು ಹಾಗೂ ಮಂಜು ಬಿಡಿಸಿದ್ದ ಸೊಪ್ಪನ್ನು ಒಂದೊಂದಾಗಿಯೇ ಮಂಜು ಕೂದಲಿಗೆ ಸಿಗಿಸುತ್ತಾರೆ. ಈ ವೇಳೆ ದಿವ್ಯಾ ಉರುಡುಗ ತಲೆಯನ್ನೇ ಸಾಂಬರ್ ಮಾಡಿ ಬಿಡೋಣ ಎಂದು ಕೇಳಿದಾಗ, ವೈಷ್ಣವಿ ತಲೆಯನ್ನೇ ಸ್ಟಾವ್ ಮೇಲೆ ಇಟ್ಟು ಅಡುಗೆ ಮಾಡಿಬಿಡೋಣ ಎಂದು ಇಬ್ಬರು ನಗುತ್ತಾರೆ.

    ಈ ವೇಳೆ ಮಂಜು ಅದೃಷ್ಟ ಹಿಡಿದಿದೆ ಎಂದು ಕೆಲವರು ಹೇಳುತ್ತಾರೆ ಗೊತ್ತಾ? ಹಾಗೆಯೇ ನನಗೆ ದರಿದ್ರ ಹಿಡಿದಿದೆ. ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ ವೈಷ್ಣವಿ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವೈಷ್ಣವಿ ನನಗೆ ಅಣ್ಣ ಅದ್ರಲ್ಲಾ ಎನ್ನುತ್ತಾ ಸೊಪ್ಪಿನಿಂದ ಮಂಜು ತಲೆಯನ್ನು ಅಲಂಕಾರ ಮಾಡುತ್ತಾರೆ. ಅದನ್ನು ಕಂಡು ಶುಭಾ ಪೂಂಜಾ ಯಾರು ಇಷ್ಟು ಚೆನ್ನಾಗಿ ನಿನಗೆ ಅಲಂಕಾರ ಮಾಡಿರುವುದು ಬಹಳ ಚೆನ್ನಾಗಿ ಕಾಣಿಸುತ್ತಿದ್ದೀಯಾ ಎಂದು ಆಡಿಕೊಳ್ಳುತ್ತಾರೆ.

    ನಂತರ ತಲೆಗಷ್ಟೇ ಅಲ್ಲದೇ ಮಂಜು ಬಾಯಿಗೂ ಸೊಪ್ಪನ್ನು ಸಿಗಿಸಿ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ವೈಷ್ಣವಿ ಕಾಮೆಂಟ್ ಮಾಡುತ್ತಾ, ದೃಷ್ಟಿ ತೆಗೆದಿದ್ದಾರೆ.  ಇದನ್ನೂ ಓದಿ:  ನನ್ನ ಫ್ರೆಂಡ್ಸ್, ನನ್ನ ವಸ್ತುಗಳ ವಿಚಾರದಲ್ಲಿ ನಾನು ತುಂಬಾ ಪೊಸೆಸಿವ್: ಅರವಿಂದ್

  • ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ವೈಷ್ಣವಿ ಉಪ್ಪಿಟ್ಟು, ಶಮಂತ್ ಹಪ್ಪಳ, ಶುಭಾ ತಂಬಿಟ್ಟು: ಮಂಜು

    ಬಿಗ್‍ಬಾಸ್‍ನ ವಾರದ ಕಥೆ ಕಿಚ್ಚ ಸುದೀಪ್ ಜೊತೆಗೆ ಸಂಚಿಕೆಯಲ್ಲಿ ಮಂಜುರವರಿಗೆ ಮನೆಯಲ್ಲಿರುವ 12 ಸ್ಪರ್ಧಿಗಳನ್ನು 12 ತಿಂಡಿಗಳ ಹೆಸರಿಗೆ ಸೂಚಿಸುವಂತೆ ಸುದೀಪ್ ಸೂಚಿಸಿದ್ದರು. ಅದರಂತೆ ಮಂಜು ಮೊದಲಿಗೆ ವೈಷ್ಣವಿಯವರ ಹೆಸರನ್ನು ಉಪ್ಪಿಟ್ಟಿಗೆ ಸೂಚಿಸಿ, ಕಾರಣ ಬೋರಿಂಗ್, ಅರ್ಜೆಂಟ್‍ಗೆ ಉಪ್ಪಿಟು ಬೇಕಾಗಬಹುದು, ಇಲ್ಲವಾದಲ್ಲಿ ಅದರ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಪ್ರಶಾಂತ್ ಸಂಬರಗಿ ಚಪಾತಿ, ಯಾವಾಗಲೂ ತಿನ್ನಬೇಕು ಅನಿಸುವುದಿಲ್ಲ. ಆದರೆ ಯಾವಾಗಲಾದರೂ ತಿನ್ನಬೇಕಾಗುತ್ತದೆ ಎಂದು ಹೇಳುತ್ತಾರೆ. ಈ ವೇಳೆ ಸುದೀಪ್ ಚಪಾತಿಗೆ ಅಂತಾನೇ ಯಾವುದು ಇಲ್ಲ. ಆದರೆ ಅದರೊಂದಿಗೆ ಏನು ಸರ್ವ್ ಮಾಡುತ್ತೇವೆ ಅದರ ಮೇಲೆ ಡಿಪೆಂಡ್ ಆಗಿರುತ್ತದೆ. ಅಲ್ಲದೇ ಚಪಾತಿಗೆ ತಟ್ಟಿ, ತಟ್ಟಿ ರುಬ್ಬಿಸಿಕೊಂಡು ಅಭ್ಯಾಸ ಇದೆ ಎಂದು ಹಾಸ್ಯಮಾಡುತ್ತಾರೆ.

    ನಂತರ ಕೇಸರಿ ಬಾತ್ ಪ್ರಿಯಾಂಕ, ನೋಡಲು ಲಕ್ಷಣವಾಗಿದ್ದು ಸುಂದರವಾಗಿದ್ದಾರೆ. ಚೆನ್ನಾಗಿ ಮಾತನಾಡುತ್ತಾರೆ ಎಂದಿದ್ದಾರೆ. ಬಳಿಕ ದಿವ್ಯಾ ಸುರೇಶ್ ಬಿಸಿಬೇಳೆ ಬಾತ್‍ಗೆ ಕಾರಣ ಮೇಲೆ ಬೂಂದಿ ಹಾಕಿಕೊಂಡು ತಿನ್ನಬೇಕು. ಒಂದು ರೀತಿ ತಿನ್ನಲು ಬಿಸಿಬಿಸಿಯಾಗಿ ಚೆನ್ನಾಗಿರುತ್ತದೆ. ಚಕ್ರವರ್ತಿ ಕೇರಳ ಪರೋಟ ಅದು ಒಂದು ರೀತಿ ಲೇಯರ್ ಪರೋಟ ಮೇಲಕ್ಕೆ ಎತ್ತಿದರೆ ಬರುತ್ತಲೇ ಇರುತ್ತದೆ ಎನ್ನುತ್ತಾರೆ. ಆಗ ಸುದೀಪ್ ಲೇಯರ್ ಪರೋಟ ಮುಗಿಯಿತು ಎಂದರೆ ಮೇಲಕ್ಕೆ ಬರುತ್ತಾನೆ ಇರುತ್ತದೆ. ಉದಾಹರಣೆ ವಾದ ಮುಗಿಯಿತು ಎಂದರೆ ಇನ್ನೊಂದು ಬರುತ್ತಲೇ ಇರುತ್ತದೆ ಎಂದು ನಗುತ್ತಾರೆ.

    ರಘು ಒಂದು ರೀತಿ ಡ್ರೈ ಜಾಮೂನ್ ಇದ್ದಂತೆ. ನೋಡಲು ಒರಟಾಗಿ ಚೆನ್ನಾಗಿ ಕಾಣಿಸುವುದಿಲ್ಲ ತಿನ್ನಬೇಕು ಎಂದು ಕೂಡ ಅನಿಸುವುದಿಲ್ಲ. ಆದ್ರೆ ತಿಂದ ನಂತರ ಚೆನ್ನಾಗಿರುತ್ತದೆ. ಇನ್ನೂ ನಿಧಿ ಮೆಣಸಿನ ಕಾಯಿ ಬಜ್ಜಿ ನೋಡಲು ಮೇಲೆ ಕಡಲೆ ಹಿಟ್ಟಿನ ರೀತಿ ಇರುತ್ತದೆ. ಯಾಮಾರಿದರೆ ಒಳಗಡೆ ಮೆಣಸಿನಕಾಯಿ ಭಾರೀ ಘಾಟು. ಅವರ ಪಕ್ಕ ಕೂರುವುದಿರಲಿ ಅಕ್ಕ-ಪಕ್ಕದಲ್ಲಿರುವವರು ಮನೆಯನ್ನೇ ಖಾಲಿ ಮಾಡಿಕೊಂಡು ಹೋಗಿಬಿಡುತ್ತಾರೆ ಎನ್ನುತ್ತಾರೆ.

    ಶುಭ ತಂಬಿಟ್ಟು, ಎಷ್ಟು ಸಲ ಬೆಕಾದರೂ ತಿನ್ನಬಹುದು ಬೇಜಾರಾದಾಗ ಉಗಿಯಬಹುದು. ಅಂದರೆ ಬರೀ ಹಿಟ್ಟು-ಹಿಟ್ಟೆ ಸಿಗುತ್ತದೆ. ತಂಬಿಟ್ಟು ತಿನ್ನಲು ಚೆಂದ, ಉಗಿಯಲು ಕೂಡ ಚೆಂದ ಅಂದಾಗ, ಸುದೀಪ್ ಒಳ್ಳೆ ಟೈಂ ಪಾಸ್ ಸಿರಿಯಸ್ ಊಟ ಕೂಡ ಅಲ್ಲ ಅಂತ ಕೇಳುತ್ತಾರೆ. ಆಗ ಮಂಜು ಊಟನೂ ಅಲ್ಲ. ಸ್ನಾಕ್ಸ್ ಕೂಡ ಅಲ್ಲ ಎಂದು ಹೇಳುತ್ತಾರೆ.

    ಇಡ್ಲಿ ದಿವ್ಯಾ ಉರುಡುಗ ಕಾರಣ ಅದನ್ನು ಬೇಗ ತಿಂದು ಹೋಗಿಬಿಡಬಹುದು. ಇಡ್ಲಿಗೆ ಚಟ್ನಿ ಅಥವಾ ಸಂಬಾರ್ ಇರಬೇಕು ಆಗಲೆ ಅದಕ್ಕೆ ಬೆಲೆ. ಅರವಿಂದ್ ಪೂರಿ, ಕಾರಣ ಅದು ಸಿಂಗಲ್ ಅದಕ್ಕೂ ಏನಾದರೂ ಬೇಕು ಎನ್ನುತ್ತಾರೆ. ಈ ವೇಳೆ ಇಡ್ಲಿ ಹಾಗೂ ಪೂರಿ ಒಳ್ಳೆ ಕಾಂಬಿನೇಷನ್ ಅಲ್ವಾಲ್ಲ ಎಂದು ಸುದೀಪ್ ಪ್ರಶ್ನಿಸಿದಾಗ, ಇಡ್ಲಿಗೂ ಸಾಗು, ಚಟ್ನಿ ಹಾಕಬಹುದು, ಪೂರಿಗೂ ಸಾಗು ಚಟ್ನಿ ಹಾಕಬಹುದು. ಒಂದರಲ್ಲೇ ಎರಡು ನಡೆಯುತ್ತದೆ.

    ಹಪ್ಪಳ ಬಂದು ಶಮಂತ್ ಎಂದಾಗ ಸುದೀಪ್ ಎರಡು ಐಟಂ ಮಧ್ಯೆ ಅದನ್ನು ಎಷ್ಟು ಬಾರಿ ಕೇಳಿದರು ಹಾಕುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಹೊಟ್ಟೆ ಬಿರಿಯುವಂತೆ ನಕ್ಕಿದ್ದಾರೆ. ನಂತರ ದಿವ್ಯಾ ಸುರೇಶ್ ಚಕ್ರವರ್ತಿ ಹಾಗೂ ಶಮಂತ್ ಮನೆಮಂದಿ ಎಲ್ಲ ರಾಗಿ ಮುದ್ದೆ, ರಾಗಿ ರೊಟ್ಟಿಗೆ ಮಂಜುರನ್ನು ಹೋಲಿಸಿದ್ದಾರೆ.