Tag: ಪಬ್ಲಿಕ್ ಟಿವಿ maharashtra

  • ನಿಷೇಧದ ಮಧ್ಯೆಯೂ ವಿಜಯಪುರದಲ್ಲಿ ಅದ್ದೂರಿ ಮೊಹರಂ

    ನಿಷೇಧದ ಮಧ್ಯೆಯೂ ವಿಜಯಪುರದಲ್ಲಿ ಅದ್ದೂರಿ ಮೊಹರಂ

    ವಿಜಯಪುರ: ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೇ ಅಲೆ ತಾಂಡವ ಆಡುತ್ತಿದೆ. ಇದರಿಂದ ಮಹಾರಾಷ್ಟ್ರಕ್ಕೆ ಗಡಿ ಹಂಚಿಕೊಂಡಿರುವ ವಿಜಯಪುರದಲ್ಲಿ ಆತಂಕ ಮನೆ ಮಾಡಿದೆ.

    ಮಹಾರಾಷ್ಟ್ರ ಗಡಿಯ ವಿಜಯಪುರದ ಹಳ್ಳಿಗಳಲ್ಲಿ ಈ ಬಾರಿ ಅದ್ಧೂರಿಯಾಗಿ ಮೊಹರಂ ಆಚರಣೆ ನಡೆದಿದೆ. ಜಿಲ್ಲಾಡಳಿತದ ನಿಷೇಧದ ಮಧ್ಯವೇ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದಲ್ಲಿ ಅದ್ಧೂರಿ ಮೊಹರಂ ಆಚರಣೆ ಮಾಡಲಾಗಿದೆ. ಕೊರೊನಾ ಮೂರನೇ ಅಲೆ ತಡೆಯಲು ಜಿಲ್ಲಾಡಳಿತ ಮೊಹರಂ ಹಾಗೂ ಇತರೆ ಆಚರಣೆಗೆ ನಿಷೇಧಿಸಿದೆ. ಆದರೂ ನಿಷೇಧಕ್ಕೆ ಕ್ಯಾರೆ ಅನ್ನದ ಅದ್ದೂರಿಯಾಗಿ ಜನರು ಮೊಹರಂ ಆಚರಿಸಿದ್ದಾರೆ. ಇದನ್ನೂ ಓದಿ:ಕಾರು, ಬೈಕ್ ಮಧ್ಯೆ ಅಪಘಾತ- ಮೂವರು ಸ್ಥಳದಲ್ಲೇ ಸಾವು

    ಅಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ವರ್ತನೆ ಮಾಡಿದ್ದಾರೆ. ಕೊರೊವೆ. ನಿಷೇಧದ ಮಧ್ಯೆಯೇ ಈ ರೀತಿ ಅದ್ದೂರಿಯಾಗಿ ಮೊಹರಂ ಆಚರಣೆ ಮಾಡುತ್ತಿದ್ದರೂ ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಯಾಕೆ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ:ವಿಚಾರಣಾಧೀನ ಖೈದಿ ಜೈಲಿನಲ್ಲಿ ಸಾವು

  • ಡಿವೈಡರ್ ಮೇಲಿಂದ ಹಾರಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಭೀಕರ ಅಪಘಾತಕ್ಕೆ ಐವರು ಬಲಿ

    ಡಿವೈಡರ್ ಮೇಲಿಂದ ಹಾರಿ ಬಸ್ಸಿಗೆ ಡಿಕ್ಕಿ ಹೊಡೆದ ಕಾರು – ಭೀಕರ ಅಪಘಾತಕ್ಕೆ ಐವರು ಬಲಿ

    ಮುಂಬೈ: ಕಾರೊಂದು ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಭಾನುವಾರ ಮಧ್ಯರಾತ್ರಿ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ನಡೆದಿದೆ.

    ಈ ಘಟನೆ ಔರಂಗಾಬಾದ್‍ನಿಂದ 60 ಕಿ.ಮೀ ದೂರದಲ್ಲಿರುವ ದೇವ್‍ಗಡ್ ಫಟಾದಲ್ಲಿ ನಡುರಾತ್ರಿ ಸುಮಾರು 2 ಗಂಟೆಗೆ ಸಂಭವಿಸಿದೆ.

    ಘಟನೆ ವಿಚಾರವಾಗಿ ಅಹ್ಮದ್‍ನಗರದ ಪೊಲೀಸ್ ನಿಯಂತ್ರಣ ಅಧಿಕಾರಿಯೊಬ್ಬರು, ಔರಂಗಾಬಾದ್ ಮಾರ್ಗದಿಂದ ಅಹ್ಮದ್ ನಗರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‍ಗೆ ಕಾರು ಡಿಕ್ಕಿ ಹೊಡೆದಿದೆ. ಅಲ್ಲದೆ ಕಾರು ರಸ್ತೆ ವಿಭಜಕಕ್ಕೆ(ಡಿವೈಡರ್) ಡಿಕ್ಕಿ ಹೊಡೆದು ಮೇಲೆ ಹಾರಿ ಬಳಿಕ ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.

    ಮೃತಪಟ್ಟ ಐವರು ಕೂಡ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಿವಾಸಿಗಳಾಗಿದ್ದು, ಶಾಂತನು ನಾರಾಯಣ್ ಕಾಕ್ಡೆ(35), ಕೈಲಾಸ್ ನ್ಯೂರೆ(35), ವಿಷ್ಣು ಚವಾಣ್(31), ರಮೇಶ್ ದಶರ್ ಘುಗೆ(40) ಮತ್ತು ಕಾರು ಚಾಲಕ ನಾರಾಯಣ್ ವರ್ಕಡ್(23) ಎಂದು ಗುರುತಿಸಲಾಗಿದೆ. ಇದೀಗ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

  • 3ನೇ ವಸಂತಕ್ಕೆ ಕಾಲಿಟ್ಟ ಡಿಕಿ – ಕೇಕ್ ಕತ್ತರಿಸಿದ ಪೊಲೀಸರು

    3ನೇ ವಸಂತಕ್ಕೆ ಕಾಲಿಟ್ಟ ಡಿಕಿ – ಕೇಕ್ ಕತ್ತರಿಸಿದ ಪೊಲೀಸರು

    ಲಕ್ನೋ: 2020ರಲ್ಲಿ ಭಾರತಕ್ಕೆ ಆಗಮಿಸಿದ ಡೋನಾಲ್ಡ್ ಟ್ರಂಪ್‍ಗೆ ಭದ್ರತಾ ತಂಡದಲ್ಲಿ ಭಾಗವಹಿಸಿದ್ದ ಸ್ನಿಫರ್ ಶ್ವಾನ ಡಿಕಿಯ ಜನ್ಮದಿನವನ್ನು ಶನಿವಾರ ಮುಜಾಫರ್‍ನಗರದ ಪೊಲೀಸರು ಆಚರಿಸಿದ್ದಾರೆ.

    3ನೇ ವಸಂತಕ್ಕೆ ಕಾಲಿಟ್ಟಿರುವ ಡಿಕಿಗೆ ಕೇಕ್ ಕಟ್ ಮಾಡಲು ಸುನೀಲ್ ಕುಮಾರ್ ಸಹಾಯ ಮಾಡಿದ್ದಾರೆ. ಬರ್ತ್‍ಡೇ ಕ್ಯಾಪ್ ಧರಿಸಿದ ಡಿಕಿ ಕೋರೆ ಹಲ್ಲುಗಳನ್ನು ಹೊಂದಿದ್ದು, ಗಂಭೀರವಾಗಿ ಕುಳಿತು ಎಲ್ಲರನ್ನು ನೋಡುತ್ತಿತ್ತು. ನಂತರ ಪೊಲೀಸರು ಕೇಕ್ ಕತ್ತರಿಸಿದರು.

    ಲ್ಯಾಬ್ರಡಾರ್ ರಿಟ್ರೈವರ್‍ಗೆ ಉಡುಗೊರೆಯಾಗಿ ಕೋಟ್ ಸಿಕ್ಕಿದೆ. ವಿಶೇಷವೆಂದರೆ ತನ್ನ ದಿನನಿತ್ಯದ ಊಟದ ಜೊತೆಗೆ ಹುಟ್ಟುಹಬ್ಬದಂದು ಡಿಕಿ ಮೊಟ್ಟೆ, ಮಾಂಸ, ಹಾಲು, ತರಕಾರಿ, ಬ್ರೆಡ್‍ನಂತೆ ಭರ್ಜರಿ ಊಟ ಸವಿಯಿತು.

    ಡಿಕಿಗೆ ಇಂಡೋ-ಟಿಬೆಟಿಯನ್ ಗಡಿ ಭಾಗದ ಪೊಲೀಸರು ಹರಿಯಾಣದ ಪಂಚಕುಲದಲ್ಲಿ ತರಬೇತಿ ನೀಡಿದ ಬಳಿಕ 2019ರ ಆಗಸ್ಟ್‍ನಲ್ಲಿ ಮುಜಫರ್‍ನಗರಕ್ಕೆ ಬಂದಿದೆ. ಡಿಕಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿನ ಸ್ಪೋಟಕಗಳ ಕಾರ್ಯಾಚರಣೆಯ ವೇಳೆ ಪಾಲ್ಗೊಳ್ಳುತ್ತದೆ.

  • ಬರ್ತ್ ಡೇಯಲ್ಲಿ ಮಾರಕಾಸ್ತ್ರಗಳ ಕಾರುಬಾರು – 7 ಮಂದಿ ಅರೆಸ್ಟ್

    ಬರ್ತ್ ಡೇಯಲ್ಲಿ ಮಾರಕಾಸ್ತ್ರಗಳ ಕಾರುಬಾರು – 7 ಮಂದಿ ಅರೆಸ್ಟ್

    ಮುಂಬೈ: ಮಾರಕಾಸ್ತ್ರಗಳನ್ನು ಮುಂದಿಟ್ಟುಕೊಂಡು ಹುಟ್ಟುಹಬ್ಬ ಆಚರಿಸುತ್ತಿದ್ದ ಹಿನ್ನೆಲೆ ಪುರಸಭೆಯ ಮುಖ್ಯಸ್ಥ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯಲ್ಲಿ ನಡೆದಿದೆ.

    ಬುಧವಾರ ಸಂಜೆ ಪುರಸಭೆಯ ಮುಖ್ಯಸ್ಥ ಹಾಜಿ ರಶೀದ್ ಖಾನ್ ಜಮದಾರ್‍ರವರ ಹುಟ್ಟುಹಬ್ಬವನ್ನು ಶಾಲಾ ಮೈದಾನವೊಂದರಲ್ಲಿ ಆಚರಿಸಲಾಗಿತ್ತು. ಬರ್ತ್ ಡೇಯಲ್ಲಿ ಸುಮಾರು 40 ಮಂದಿ ಪಾಲ್ಗೊಂಡಿದ್ದು, ಕೆಲವರು ಮಾರಕಾಸ್ತ್ರಗಳನ್ನು ಹಿಡಿದು ನೃತ್ಯ ಮಾಡಿದ್ದಾರೆ. ಈ ವಿಚಾರವಾಗಿ ಖಚಿತ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬರ್ತ್ ಡೇ ಪಾರ್ಟಿಯನ್ನು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ.

    ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕಾರಣ ಹಾಜಿ ರಶೀದ್ ಖಾನ್ ಜಮದಾರ್ ಸೇರಿದಂತೆ ಆರು ಮಂದಿಯನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಚಾವ್ರಿಯಾ ತಿಳಿಸಿದ್ದಾರೆ.

    ಇದೀಗ ನ್ಯಾಯಾಲಯವು ಫೆಬ್ರವರಿ 15ರವರೆಗೂ ಎಲ್ಲರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇತ್ತೀಚಿನ ದಿನಗಳಲ್ಲಿ ಬರ್ತ್ ಡೇ ವೇಳೆ ಕತ್ತಿಗಳನ್ನು ಕೇಕ್ ಕತ್ತರಿಸಲು ಬಳಸುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಪೊಲೀಸರು ಇಂತಹ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.

  • 400 ರೂ.ಗಾಗಿ ಗೆಳೆಯನ ಕೊಲೆ – ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

    400 ರೂ.ಗಾಗಿ ಗೆಳೆಯನ ಕೊಲೆ – ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

    – ಲೋಹದ ಪೈಪ್‍ನಿಂದ ಹೊಡೆದು ಕೊಂದ

    ಮುಂಬೈ: ನಾಲ್ಕನೂರು ಸಾಲ ಹಿಂದಿರುಗಿಸದ ಗೆಳೆಯನನ್ನ ಆತನ ಸ್ನೇಹಿತನೇ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ಥಾಣಾ ಜಿಲ್ಲೆಯ ಉಲ್ಲಾಸ ನಗರದಲ್ಲಿ ಮಂಗಳವಾರ ನಡೆದಿದೆ.

    ಫಾಯಿಮ್ ಶೇಖ್ ಗೆಳೆಯ ಸೋನು ಗುಪ್ತಾನಿಂದ ಕೊಲೆಯಾದ ಯುವಕ. ಸೋನು ಬಳಿ ಫಾಯಿಮ್ ಸಾಲವಾಗಿ 400 ರೂ. ಪಡೆದುಕೊಂಡಿದ್ದನು. ಮಂಗಳವಾರ ಸೋನು ತನ್ನ ಹಣ ಹಿಂದಿರುಗಿಸುವಂತೆ ಕೇಳಿದ್ದಾನೆ. ಆದ್ರೆ ಫಾಯಿಮ್ ಹಣ ನೀಡಲ್ಲ ಎಂದು ಹೇಳಿದ್ದರಿಂದ ಇಬ್ಬರ ನಡುವೆ ಜಗಳ ಆರಂಭಗೊಂಡಿದೆ. ಗಲಾಟೆಯನ್ನು ದೂರದಲ್ಲಿದ್ದ ಗೆಳೆಯರು ಗಮನಿಸಿ ಇಬ್ಬರ ಜಗಳ ಇತ್ಯರ್ಥಕ್ಕೆಗೊಳಿಸಲು ಆಗಮಿಸಿದ್ದಾರೆ.

    ಗೆಳೆಯರು ಬರೋ ವೇಳೆಗೆ ಸೋನು ಸ್ಥಳದಲ್ಲಿದ್ದ ಲೋಹದ ಪೈಪ್ ನಿಂದ ಫಾಯಿಮ್ ಮೇಲೆ ಹಲ್ಲೆ ನಡೆಸಿದ್ದಾನೆ. ಹೊಡೆತದ ತೀವ್ರತೆಗೆ ಫಾಯಿಮ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕೊಲೆಯ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೊಲೀಸರು ಸೋನು ಗುಪ್ತಾನನ್ನ ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    ಡ್ರಗ್ ಕೇಸ್ – ಮಹಾರಾಷ್ಟ್ರದ ಸಚಿವರ ಸೋದರಳಿಯ ಅರೆಸ್ಟ್

    – ಡ್ರಗ್ಸ್ ಡೀಲರ್ ಜೊತೆ ವ್ಯವಹಾರ

    ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲ್ಲಿಕ್ ಸೋದರಳಿಯ ಸಮೀರ್ ಖಾನ್‍ರನ್ನು ಎನ್‍ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬುಧವಾರ ಬೆಳಗ್ಗೆ ವಿಚಾರಣೆಗೆಂದು ಕರೆಸಿದ್ದ ಅವರನ್ನು ಹಲವು ವಿಚಾರಣೆಗಳ ಬಳಿಕ ಇದೀಗ ಬಂಧಿಸಿದ್ದಾರೆ.

    ಬ್ರಿಟಿಷ್ ಮೂಲದ ಕರಣ್ ಸಜ್ನಾನಿ ಎಂಬಾತನ ಜೊತೆ ಸಮೀರ್ ಖಾನ್ 20 ಸಾವಿರ ರೂ.ಯಷ್ಟು ವ್ಯವಹಾರ ನಡೆಸಿದ ಹಿನ್ನೆಲೆ ವಿಚಾರಣೆಗೆ ಕರೆಸಲಾಗಿತ್ತು. ಕಳೆದ ವಾರ ಕರಣ್ ಮತ್ತು ಇಬ್ಬರು ಮಹಿಳೆಯರನ್ನ ಪೊಲೀಸರು ಬಂಧಿಸಿ, ಮೂವರ ಬಳಿಯಲ್ಲಿದ್ದ 200 ಕೆಜಿ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು.

    ಕಳೆದ ವಾರ ಬಾಂದ್ರಾ ವೆಸ್ಟ್‍ಗೆ ಕೊರಿಯರ್ ಮೂಲಕ ಬಂದ ಗಾಂಜಾವನ್ನ ಅಧಿಕಾರಿಗಳು ವಶಪಡಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕರಣ್ ಗಾಂಜಾ ಆಮದು ಮಾಡಿಕೊಳ್ಳುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಎನ್‍ಡಿಪಿಎಸ್ ಕಾಯ್ದೆ ಅಡಿ ಎನ್‍ಸಿಬಿ ಅಧಿಕಾರಿಗಳು ರಹಿಲ್ ಫರ್ನಿಚರ್ ವಾಲಾ, ಸಹಿಸ್ತಾ ಫರ್ನಿಚರ್ ವಾಲಾ ಮತ್ತು ರಾಮ್ ಕುಮಾರ್ ಅಲಿಯಾಸ್ ಪಾನ್‍ವಾಲಾನನ್ನು ಬಂಧಿಸಿದ್ದರು.

    ಕರಣ್ ವಿಚಾರಣೆ ವೇಳೆ ಡ್ರಗ್ಸ್ ವ್ಯವಹಾರದಲ್ಲಿ ಸಮೀರ್ ಖಾನ್ ಪಾತ್ರವೂ ಕಂಡು ಬಂದ ಹಿನ್ನೆಲೆ ಎನ್‍ಸಿಬಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಸಮೀರ್ ಖಾನ್ ನನ್ನ ಬಂಧಿಸಲಾಗಿದೆ.