Tag: ಪಬ್ಲಿಕ್ ಟಿವಿ Madhya Pradesh

  • ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    ಮಗಳ ಮುಂದೆಯೇ ಮಹಿಳೆಗೆ ಕತ್ತರಿಯಿಂದ ಇರಿದು ಕೊಂದ ಪ್ರಿಯಕರ!

    – ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಮಹಿಳೆ
    – ತೀವ್ರ ರಕ್ತಸ್ರಾವವಾಗಿ ಮಗಳ ಎದುರೇ ಉಸಿರು ನಿಲ್ಲಿಸಿದ್ಳು

    ಇಂದೋರ್: ಇಂದಿನ ಕಾಲದ ಯುವಕ-ಯುವತಿಯರು ಸೋಶಿಯಲ್ ಮೀಡಿಯಾಗೆ ಫುಲ್ ಅಡಿಕ್ಟ್ ಆಗಿ ಹೋಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರ ಕೈನಲ್ಲೂ ಒಂದಲ್ಲ ಒಂದು ಮೊಬೈಲ್ ಇದ್ದೇ ಇರುತ್ತದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರೊಂದಿಗೆ ಚಾಟಿಂಗ್, ಡೇಟಿಂಗ್ ಎಂದು ಲೋಕವನ್ನೇ ಮರೆತು ಹೋಗಿರುತ್ತಾರೆ. ಹೀಗೆ ಆನ್‍ಲೈನ್ ನಲ್ಲಿ ಶುರುವಾದ ಪ್ರೀತಿಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಪ್ರಿಯಾ ಅಗರ್‍ವಾಲ್(26) ಎಂಬ ಮಹಿಳೆಯೊಬ್ಬಳು ಪತಿ ಮತ್ತು ಮುದ್ದಾದ ಮಗಳೊಂದಿಗೆ ಇಂದೋರ್ ನಲ್ಲಿ ನೆಲೆಸಿದ್ದಳು. ಆದರೆ ಪ್ರಿಯಾ ಅಗರ್‍ವಾಲ್‍ಗೆ ಆನ್‍ಲೈನ್ ಮೂಲಕ ಕಳೆದ ವರ್ಷ ಸೌರಭ್ ಎಂಬ ವ್ಯಕ್ತಿ ಪರಿಚಯವಾಗಿದ್ದಾನೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಹೀಗೆ ಚಾಟ್ ಮಾಡುತ್ತಾ, ಮಾಡುತ್ತಾ ಒಬ್ಬರಿಗೊಬ್ಬರು ಬಹಳ ಆತ್ಮೀಯರಾದರು. ಇತ್ತೀಚೆಗೆ ಪ್ರಿಯಾ ಸೌರಭ್ ಜೊತೆ ಮಾತನಾಡುವುದನ್ನು ಕಡಿಮೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಸೌರಭ್, ಆಕೆಯನ್ನು ಭೇಟಿ ಮಾಡುವಂತೆ ಕರೆಸಿಕೊಂಡಿದ್ದಾನೆ.

    ಅಂತೆಯೇ ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಪ್ರಿಯಾ, ಆತನನ್ನು ಭೇಟಿ ಮಾಡಲು ಮಗಳೊಂದಿಗೆ ಗ್ಯಾನಶೀಲ ಸೂಪರ್ ಸಿಟಿ ಬಳಿ ಇರುವ ಖಾಲಿ ಜಾಗಕ್ಕೆ ಬಂದಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಮಾಡುತ್ತಾ ವಿಕೋಪಕ್ಕೆ ತಿರುಗಿ ಸೌರಭ್ ತನ್ನ ಬಳಿ ಇದ್ದ ಕತ್ತರಿಯಿಂದ ಆಕೆಯ ಮೇಲೆ ಎರಡು ಬಾರಿ ಚುಚ್ಚಿದ್ದಾನೆ. ಪರಿಣಾಮ ಮುಖ ಮತ್ತು ಕತ್ತಿಗೆ ಇರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಪ್ರಿಯಾಗೆ ರಕ್ತ ಹರಿಯಲು ಆರಂಭಿಸಿದೆ. ಮಗಳ ಮುಂದೆ ಉಸಿರಾಡಲು ಕೂಡ ಆಗದೇ ಪ್ರಿಯಾ ಸಮೀಪದಲ್ಲಿದ್ದ ಅಂಗಡಿ ಮುಂದೆ ಕುಸಿದಿದ್ದಾಳೆ. ಆದರೂ ಸೌರಭ್ ಇದಕ್ಕೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸ್ಕೂಟರ್ ಹತ್ತಿ ಆರಾಮವಾಗಿ ಸ್ಥಳದಿಂದ ಹೋಗುತ್ತಾನೆ. ಇನ್ನೂ ಈ ವೀಡಿಯೋ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಸಾರ್ವಜನಿಕ ಶೌಚಾಲಯದಲ್ಲಿ ಮೊಟ್ಟೆ, ಮಾಂಸ ಮಾರಾಟ

    ಇಂದೋರ್: ಮೊಟ್ಟೆ ಮತ್ತು ಮಾಂಸವನ್ನು ಮಾರಲು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿರುವ ಘಟನೆ ಇಂದೋರ್‍ನ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸುಲಭ್ ಶೌಚಾಲಯದಲ್ಲಿನ ನಡೆಸಲಾಗುತ್ತಿದ್ದ ಈ ಅಕ್ರಮ ವ್ಯಾಪಾರ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಾಗರಿಕ ಸೌಲಭ್ಯ ಮತ್ತು ಅವ್ಯವಸ್ಥೆ ವಿಚಾರವಾಗಿ ಕ್ರಮ ಕೈಗೊಂಡಿದ್ದು, ಸುಲಭ್ ಇಂಟರ್ ನ್ಯಾಷನಲ್ ಎಂಬ ಎನ್‍ಜಿಒ ವಿರುದ್ಧ ದಂಡ ವಿಧಿಸಿದೆ.

    ಈ ಕುರಿತಂತೆ ಮಾತನಾಡಿದ ಈಎಂಸಿಯ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್ಕರ್, ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಶೌಚಾಲಯವನ್ನು ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆರೋಪಿಗೆ ಸ್ಥಳದಲ್ಲಿಯೇ 1,000 ರೂ. ದಂಡ ವಿಧಿಸಲಾಗಿದೆ. ಜೊತೆಗೆ ಎನ್‍ಜಿಒ ಸುಲಭ್ ಇಂಟರ್ ನ್ಯಾಷನಲ್‍ಗೆ ನೋಟಿಸ್ ಕಳುಹಿಸುವ ಮೂಲಕ 20,000 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.

    2017 ಅಂದರೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಇಂದೋರ್ ದೇಶದಲ್ಲಿಯೇ ಸ್ವಚ್ಛನಗರ ಎಂದು ಕೇಂದ್ರ ಸರ್ಕಾರದ ಸ್ವಚ್ಛ ಸುರಕ್ಷನ್ ಸಮೀಕ್ಷೆ ಅಡಿ ತಿಳಿಸಲಾಗಿದೆ.

  • 15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿಗಳು!

    15 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿಗಳು!

    ಭೋಪಾಲ್: ಹೊಲದಲ್ಲಿದ್ದ ತಂದೆಗೆ ಊಟ ನೀಡಿ ಮನೆಗೆ ಹಿಂದಿರುಗುತ್ತಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ಅಪರಿಚಿತ ವ್ಯಕ್ತಿಗಳು ಅತ್ಯಾಚಾರ ಎಸಗಿ ಕೊಡಲಿಯಿಂದ ಕ್ರೂರವಾಗಿ ಕೊಂದಿರುವ ಘಟನೆ ಗುರುವಾರ ಮಧ್ಯಪ್ರದೇಶದ ಚಿತ್ರಕೂತ್ ಗ್ರಾಮದಲ್ಲಿ ನಡೆದಿದೆ. ಅಲ್ಲದೆ ಆಕೆಯ ಜೊತೆಗಿದ್ದ ನಾಲ್ಕು ವರ್ಷದ ಸೋದರಳಿಯನ ಮೇಲೆ ಕೂಡ ಆರೋಪಿಗಳು ಹಲ್ಲೆ ಮಾಡಿದ್ದಾರೆ.

    ಈ ಕುರಿತಂತೆ ತನಿಖೆ ವೇಳೆ ಬಾಲಕಿ ಶವ ಗ್ರಾಮದಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಆರೋಪಿಗಳು ಕೊಡಲಿಯಿಂದ ಕೊಚ್ಚಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯ ಜೊತೆಗಿದ್ದ ಬಾಲಕನನ್ನು ಪೊಲೀಸರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗಿದೆ ಆತ ಕೂಡ ಮೃತಪಟ್ಟಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಮಿತ್ತಲ್ ಹೇಳಿದ್ದಾರೆ.

    ಘಟನೆ ವಿಚಾರವಾಗಿ ವೃತ್ತ ಅಧಿಕಾರಿ ಸುಬೋಧ್ ಗೌತಮ್ ಬಾಲಕಿಯು ಹೊಲದಲ್ಲಿದ್ದ ತನ್ನ ತಂದೆಗೆ ಊಟ ನೀಡಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಗಳು ಆಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

    ಬಾಲಕಿಯ ಕುಟುಂಬಸ್ಥರು ಆರೋಪಿಗಳು ಅತ್ಯಾಚಾರ ನಡೆಸಿದ ನಂತರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆಯ ವರದಿ ನಂತರ ಸತ್ಯ ತಿಳಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.