Tag: ಪಬ್ಲಿಕ್ ಟಿವಿ Lorry

  • ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ವರನಹೊಂಡ ಎಂಬಲ್ಲಿ ನಡೆದಿದೆ.

    ಮೃತಪಟ್ಟ ಮಹಿಳೆಯನ್ನು ನೀಲಮ್ಮ (60) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದ ಟಾಟಾ ಸುಮೋದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆಗುರುಳಿದ ಮರ- ಪಾರಾದ ಉಡುಪಿ ವೆಂಕಟರಮಣ ಐತಾಳ್ ಅನುಭವ ಭಯಾನಕ

  • ಧಗಧಗನೇ ಹೊತ್ತಿ ಉರಿಯಿತು ಬೆಡ್ ಹೊತ್ತು ತಂದ ಲಾರಿ

    ಧಗಧಗನೇ ಹೊತ್ತಿ ಉರಿಯಿತು ಬೆಡ್ ಹೊತ್ತು ತಂದ ಲಾರಿ

    ಯಾದಗಿರಿ: ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ತಲುಪಬೇಕಾಗಿದ್ದ ಬೆಡ್ ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಯಾದಗಿರಿ ನಗರದ ಗಂಜ್ ಪ್ರದೇಶದಲ್ಲಿ ನಡೆದಿದೆ.

    ಲಾರಿ ಧಗಧಗನೇ ಹೊತ್ತಿ ಉರಿದಿದ್ದು, ವಿದ್ಯಾರ್ಥಿನಿಯರಿಗೆ ತಲುಪಬೇಕಾದ ಬೆಡ್ ಗಳು ಸುಟ್ಟು ಕರಕಲವಾಗಿವೆ. ಬೆಂಗಳೂರಿನಿಂದ ಬಂದಿರುವ ಬೆಡ್‍ಗಳನ್ನ ತುಂಬಿದ ಲಾರಿ ವಿದ್ಯುತ್ ತಂತಿ ಕಡಿದು ಬಿದ್ದಿರುವ ಪರಿಣಾಮ ಸುಮರು 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತಲುಪಬೇಕಾಗಿದ್ದು, ಬೆಂಕಿಗೆ ಆಹುತಿಯಾಗಿವೆ. ಇದನ್ನು ಓದಿ:ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ- ಲಾಕ್‍ಡೌನ್ ಎಫೆಕ್ಟ್‌ಗೆ ಸಿಕ್ಕು ನಲುಗಿದ ಶುಂಠಿ, ಕಲ್ಲಂಗಡಿ

    ಸಂಪೂರ್ಣ ಲಾರಿ ಜೊತೆ ಬೆಡ್‍ಗಳು ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ಆಗಿಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದೆ.

    ಇತ್ತೀಚೆಗಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ 6 ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಇದನ್ನು ಓದಿ: ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಭಾರೀ ಸ್ಫೋಟ – 6 ಮಂದಿಗೆ ಗಾಯ

  • ಅಕ್ರಮವಾಗಿ ಮದ್ಯ ಸಾಗಾಟ – ಲಾರಿಯನ್ನು ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಅಕ್ರಮವಾಗಿ ಮದ್ಯ ಸಾಗಾಟ – ಲಾರಿಯನ್ನು ವಶಕ್ಕೆ ಪಡೆದ ಅಬಕಾರಿ ಇಲಾಖೆ

    ಬೆಂಗಳೂರು: ಸಿಮೆಂಟ್ ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತವಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಹೊಸಕೋಟೆ ಸಮೀಪದ ಕಮಸಂದ್ರ ಗ್ರಾಮದ ಅಬಕಾರಿ ಅಧಿಕಾರಿಗಳು ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಟ ಮಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಲಾರಿ ಚಾಲಕ ಶಿವಕುಮಾರ್‍ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಲಾಕ್‍ಡೌನ್ ಹಿನ್ನೆಲೆ ಆಂಧ್ರಪ್ರದೇಶದ ಕರ್ನೂಲ್‍ನಿಂದ ತಮಿಳುನಾಡಿನ ಸೇಲಂಗೆ ಮದ್ಯವನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಮಾಡಲು ಮುಂದಾಗಿದ್ದ ವಿಚಾರ ಬಹಿರಂಗಗೊಂಡಿದೆ.

    ಅದೇ ರೀತಿ ಸಿಮೆಂಟ್ ತುಂಬಿದ್ದ ಲಾರಿಯಲ್ಲಿ ಅಕ್ರಮವಾಗಿ 18 ಲಕ್ಷ 73 ಸಾವಿರ ಮೌಲ್ಯದ ಮದ್ಯವನ್ನು ತೆಗೆದುಕೊಂಡು ಬರುತ್ತಿದ್ದಾಗ ಖಚಿತ ಮಾಹಿತಿ ಕಲೆಹಾಕಿದ ಹೊಸಕೋಟೆ ಅಬಕಾರಿ ಇಲಾಖೆಯ ಅಧಿಕಾರಿಗಳಾದ ದಿಲೀಪ್ ಕುಮಾರ್ ಹಾಗೂ ರಾಜಶೇಖರ್ ನೇತೃತ್ವದ ಅಧಿಕಾರಿಗಳ ತಂಡ ವಾಹನವನ್ನು ಪರಿಶೀಲನೆ ನಡೆಸಿದಾಗ ಕ್ಯಾಬಿನ್‍ನಲ್ಲಿ ಬರೋಬ್ಬರಿ ಮದ್ಯದ ಬಾಕ್ಸ್‍ಗಳನ್ನು ಶೇಖರಣೆ ಮಾಡಿದ್ದು, ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮಾಲಿನ ಸಮೇತವಾಗಿ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಕ್ಕೆ ಒಪ್ಪಿಸಿದ್ದಾರೆ. ಇದನ್ನು ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ

  • ಲಾರಿಯ ಇಂಜಿನ್‍ಗೆ ಆಕಸ್ಮಿಕ ಬೆಂಕಿ – ಚಾಲಕ ಸಜೀವ ದಹನ

    ಲಾರಿಯ ಇಂಜಿನ್‍ಗೆ ಆಕಸ್ಮಿಕ ಬೆಂಕಿ – ಚಾಲಕ ಸಜೀವ ದಹನ

    ಹಾಸನ: ಲಾರಿಯ ಇಂಜಿನ್‍ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಹಿನ್ನಲೆಯಲ್ಲಿ ಲಾರಿ ಚಾಲಕ ಸಜೀವ ದಹನವಾಗಿರುವ ಘಟನೆ ಹಾಸನದ ಬೈಪಾಸ್‍ನಲ್ಲಿ ನಡೆದಿದೆ.

    ಹಾಸನದ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಲಾರಿ ಚಾಲಕ ಲಾರಿಯೊಳಗೆ ಸುಟ್ಟು ಹೋಗಿದ್ದಾನೆ.

    ಆಕಸ್ಮಿಕ ಬೆಂಕಿಯಿಂದ ಲಾರಿ ಸುಟ್ಟು ಹೋಗಿದ್ದು, ಅಗ್ನಿ ಶಾಮಕ ದಳ ಬೆಂಕಿ ನಂದಿಸುವ ವೇಳೆ ಚಾಲಕ ಲಾರಿಯಲ್ಲಿದ್ದ ವಿಚಾರ ಗೊತ್ತಾಗಿದೆ. ಬಳಿಕ ಲಾರಿಯ ಗಾಜು ಒಡೆದು ಹಾಕಿ ಚಾಲಕನನ್ನು ರಕ್ಷಣೆ ಮಾಡುವುದರೊಳಗೆ ಆತ ಸುಟ್ಟು ಕರಕಲಾಗಿದ್ದಾನೆ.

    ಲಾರಿಯಲ್ಲಿನ ಎಂಜಿನ್ ಸಮಸ್ಯೆಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂಬುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಹಾಸನ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.