Tag: ಪಬ್ಲಿಕ್ ಟಿವಿ Lion

  • ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು

    ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು

    – ಬನ್ನೇರುಘಟ್ಟದಿಂದ ಬಂದ ಸುಚಿತ್ರಾ, ಯಶ್ವಂಥ್
    – ಆರಕ್ಕೇರಿದ ಸಿಂಹಗಳ ಸಂಖ್ಯೆ

    ಶಿವಮೊಗ್ಗ: ನೈಸರ್ಗಿಕ ಅರಣ್ಯದ ಮಧ್ಯೆ ಇರುವ ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಎರಡು ಹೊಸ ಅತಿಥಿಗಳು ಆಗಮಿಸಿದ್ದು, ಸಿಂಹಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

    ಬನ್ನೇರುಘಟ್ಟದಿಂದ ಶಿವಮೊಗ್ಗದ ಮೃಗಾಲಯಕ್ಕೆ ಏಳು ವರ್ಷದ ಸುಚಿತ್ರಾ ಮತ್ತು ಯಶ್ವಂಥ್ ಎಂಬ ಹೆಸರಿನ ಎರಡು ಸಿಂಹಗಳನ್ನು ಕರೆ ತರಲಾಗಿದೆ. ಈಗಾಗಲೇ ಮೃಗಾಲಯದಲ್ಲಿ ಆರ್ಯ, ಮಾನ್ಯ, ಸುಶ್ಮಿತಾ ಹಾಗೂ ಸರ್ವೇಶ್ ಎಂಬ ನಾಲ್ಕು ಸಿಂಹಗಳಿದ್ದವು. ಇದೀಗ ಆ ಕುಟುಂಬಕ್ಕೆ ಇನ್ನೆರಡು ಸಿಂಹಗಳು ಹೊಸದಾಗಿ ಸೇರ್ಪಡೆಯಾಗಿವೆ.

    ಈ ಹಿಂದೆಯೇ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಸಿಂಹಗಳನ್ನು ತರುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಿಂಹಗಳನ್ನು ತರಲು ಸಾಧ್ಯವಾಗಿರಲಿಲ್ಲ. ಈಗ ಆ ಯೋಜನೆ ಈಡೇರಿದಂತಾಗಿದೆ. ಇದನ್ನೂ ಓದಿ: ಕಾಲಿಗೆ ಮಾಸ್ಕ್ ಸಿಕ್ಕಿಸಿಕೊಂಡು ಟ್ರೋಲ್ ಆದ ಸಚಿವ

  • ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹ – ಮಹಿಳೆ ವಿರುದ್ಧ ಆಕ್ರೋಶ

    ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹ – ಮಹಿಳೆ ವಿರುದ್ಧ ಆಕ್ರೋಶ

    ಲಾಹೋರ್: ಪಾಕಿಸ್ತಾನದ ಮಹಿಳೆಯೊಬ್ಬರು ತನ್ನ ಬರ್ತ್‍ಡೇ ಪಾರ್ಟಿಯಲ್ಲಿ ಸಿಂಹವನ್ನು ಮನರಂಜನಾ ವಸ್ತುವನ್ನಾಗಿ ಬಳಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸುಸಾನ್ ಖಾನ್ ಲಾಹೋರ್‌ನಲ್ಲಿ  ತನ್ನ ಬರ್ತ್‍ಡೇ ಪಾರ್ಟಿಯನ್ನು ಆಯೋಜಿಸಿದ್ದಳು. ಈ ವೇಳೆ ಸಿಂಹವೊಂದನ್ನು ಕಬ್ಬಿಣ ಚೈನ್ ಮೂಲಕ ಬಂಧಿಸಲ್ಪಟ್ಟಿದ್ದು, ಅದರ ಸುತ್ತಮುತ್ತಾ ಜನ ಸಾಂಗ್ ಪ್ಲೇ ಮಾಡಿಕೊಂಡು ಪಾರ್ಟಿ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಈ ವೀಡಿಯೋವನ್ನು ಪ್ರಾಜೆಕ್ಟ್ ಸೇವ್ ಅನಿಮಲ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪೀಠೋಕರಣದ ಮೇಲೆ ಸಿಂಹ ಮಲಗಿಕೊಂಡು ಅದರ ಕತ್ತಿನ ಸುತ್ತ ಕಬ್ಬಿಣದ ಸರಪಳಿ ಕಟ್ಟಲಾಗಿದೆ. ಅಲ್ಲದೇ ಈ ಸಿಂಹವನ್ನು ಸುಸಾನ್ ಖಾನ್ ತಮ್ಮ ಮನೆಯಲ್ಲಿಯೇ ಸಾಕಿದ್ದಾಳೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎಲ್‍ಇಟಿ ಕಮಾಂಡರ್, ಇಬ್ಬರು ಉಗ್ರರ ಎನ್‍ಕೌಂಟರ್

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಾಣಿಗಳು ನಮ್ಮತೆಯೇ ಜೀವಿಗಳು, ಅವುಗಳನ್ನು ಕಟ್ಟು ಹಾಕುವುದು ಸರಿಯಲ್ಲ. ನಿಮ್ಮ ಪ್ರತಿಷ್ಠೆಗಾಗಿ ಪ್ರಾಣಿಗಳನ್ನು ಸಾಕಿ. ಜನಸಂದಣಿಯ ಗದ್ದಲದ ನಡುವೆ ಅವುಗಳಿಗೆ ಹಿಂಸೆಯಾಗುತ್ತದೆ ಎಂದು ಅನೇಕ ಮಂದಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.