Tag: ಪಬ್ಲಿಕ್ ಟಿವಿ Liger

  • ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ‘ಲೈಗರ್’ ಗಾಗಿ ಮುಂಬೈಗೆ ಹಾರಿದ ಟಾಲಿವುಡ್ ರೌಡಿ

    ಮುಂಬೈ: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾದ ಶೂಟಿಂಗ್‍ನನ್ನು ಮುಂಬೈನಲ್ಲಿ ಮತ್ತೆ ಆರಂಭವಾಗಿದೆ. ಸದ್ಯ ಲೈಗರ್ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಚಾರ್ಮಿ ಕೌರ್ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡಿದ್ದು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಗುರುವಾರ ಲೈಗರ್ ಸಿನಿಮಾದ ಶೂಟಿಂಗ್‍ಗಾಗಿ ವಿಜಯ್ ದೇವರಕೊಂಡ ಮುಂಬೈಗೆ ಹಾರಿದ್ದು, ಚಾರ್ಮಿ ಕೌರ್ ವಿಜಯ್ ದೇವರಕೊಂಡಗೆ ಸ್ವಾಗತ ಕೋರಿದ್ದಾರೆ ಹಾಗೂ ವಿಜಯ್ ಜೊತೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ನಮ್ಮ ಲೈಗರ್ ಮತ್ತೆ ಮರಳಿದೆ ಎಂದು ಚಾರ್ಮಿ ಕೌರ್ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಸಿನಿಮಾ ಕುರಿತ ಪ್ರಮೋಷನ್ ಇಲ್ಲದಿದ್ದರೆ ವಿಜಯ್ ದೇವರಕೊಂಡ ಅಷ್ಟಾಗಿ ಸಾಮಾಜಿಕ ಜಾಲಾತಾಣದಲ್ಲಿ ಸಕ್ರಿಯರಾಗಿರುವುದಿಲ್ಲ. ಈಗ ಒಂದು ತಿಂಗಳ ಬಳಿಕ ವಿಜಯ್ ದೇವರಕೊಂಡ ಅವರು ಸೋಫಾದ ಮೇಲೆ ಕುಳಿತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Vijay Deverakonda (@thedeverakonda)

    11 ತಿಂಗಳ ಬಳಿಕ ಲೈಗರ್ ಸಿನಿಮಾದ ಚಿತ್ರೀಕರಣ ಪುನಾರಂಭಗೊಂಡಿದ್ದು, ವಿಜಯ್ ದೇವರಕೊಂಡ ಹೈದರಾಬಾದ್‍ನಿಂದ ಮುಂಬೈಗೆ ಫ್ಲೈಟ್ ಮೂಲಕ ಓಡಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಅನನ್ಯ ಪಾಂಡೇ ಸ್ಕ್ರೀನ್ ಶೇರ್ ಮಾಡಿದ್ದಾರೆ. ಚಾರ್ಮಿ ಕೌರ್ ಮತ್ತು ಕರಣ್ ಜೋಹರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಲೈಗರ್ ಸಿನಿಮಾ ಸೆಪ್ಟೆಂಬರ್ 9 ರಂದು ಅನೇಕ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.