Tag: ಪಬ್ಲಿಕ್ ಟಿವಿ. karwar

  • ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಡಲ ತೀರದಲ್ಲಿ ಕಡಲಾಮೆಗಳ 125 ಮೊಟ್ಟೆಗಳು ಪತ್ತೆ

    ಕಾರವಾರ: ಬೃಹದಾಕಾರದ ಕಡಲಾಮೆಗಳ 125 ಮೊಟ್ಟೆಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನಲ್ಲಿ ಪತ್ತೆಯಾಗಿದೆ.

    ಅಳಿವಿನಂಚಿನಲ್ಲಿರುವ ಬೃಹದಾಕಾರದ ಕಡಲಾಮೆ 125 ಮೊಟ್ಟೆಗಳು ಕಡಲತೀರದಲ್ಲಿ ಪತ್ತೆಯಾಗಿದ್ದು, ಅವುಗಳನ್ನು ರಕ್ಷಣೆ ಮಾಡಲಾಗಿದೆ. ಪ್ರತಿ ವರ್ಷ ಕಡಲಾಮೆಗಳು ಕಾಸರಕೋಡಿನ ಬಂದರು ಜಾಗದ ಬಳಿ ಮೊಟ್ಟೆ ಇಟ್ಟು 45 ದಿನದ ನಂತರ ಮರಿ ಮಾಡಿ ಕರೆದುಕೊಂಡು ಹೋಗುತ್ತವೆ. ಐದು ಅಡಿ ಸುತ್ತಳತೆಗೂ ಹೆಚ್ಚು ಹಾಗೂ ಮೂರು ಅಡಿಗೂ ಹೆಚ್ಚು ಈ ಆಮೆಗಳು ಬೆಳೆಯುತ್ತದೆ.

    ಸದ್ಯ ಅವನತಿಯ ಅಂಚಿನಲ್ಲಿರುವ ಈ ಆಮೆಗಳು ಸಮುದ್ರದ ತಡದಲ್ಲಿನ ಯಾಂತ್ರಿಕ ಬದಲಾವಣೆಯಿಂದಾಗಿ ತನ್ನ ವಂಶಗಳನ್ನು ಕಳೆದುಕೊಳ್ಳುತಿದ್ದು ಅಳಿವಿನಂಚಿಗೆ ತಲುಪಿದೆ. ಇಂದು ಅರಣ್ಯ ಇಲಾಖೆ ಈ ಮೊಟ್ಟೆಗಳನ್ನು ರಕ್ಷಣೆಮಾಡಿದ್ದು ಕೃತಕ ಶಾಖ ನೀಡಿ 45 ದಿನದ ನಂತರ ಸಮುದ್ರಕ್ಕೆ ಬಿಡಲಿದ್ದಾರೆ.

  • ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ : ಸಚಿವ ಶಿವರಾಮ್ ಹೆಬ್ಬಾರ್

    ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ : ಸಚಿವ ಶಿವರಾಮ್ ಹೆಬ್ಬಾರ್

    ಕಾರವಾರ: ಸಚಿವ ಸ್ಥಾನ ಸಿಗದಿದ್ದರೂ ಬೇಸರವಿಲ್ಲ, ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದರು.

    ಶಿರಸಿ ನಗರದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸಕ್ಕರೆ ಖಾತೆ ಹಿಂಪಡೆದಿದ್ದಕ್ಕೆ ಬೇಸರವಿಲ್ಲ. ಖಾತೆ ನೀಡುವುದು, ಹಿಂಪಡೆಯುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಅವರಿಗೆ ಪರಮಾಧಿಕಾರವಿದೆ ಎಂದರು.

    ಸಚಿವ ಸಂಪುಟ ವಿಸ್ತರಣೆ ನಿರಂತರ ಪ್ರಕ್ರಿಯೆ. ಕ್ರಿಯಾಶೀಲವಾಗಿ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡುವವರಿಗೆ ಮುಖ್ಯಮಂತ್ರಿ ಖಾತೆ ನೀಡಿದ್ದಾರೆ. ಸಂಪುಟದಲ್ಲಿರುವ ಯಾವ ಸಚಿವರಿಗೂ ಅಸಮಾಧಾನವಿಲ್ಲ. ಸಚಿವ ಸ್ಥಾನ ಸಿಗದಿದ್ದವರಲ್ಲೂ ಬೇಸರವಿಲ್ಲ ಎಂದರು. ಮುಖ್ಯಮಂತ್ರಿ ಜೊತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಯತ್ನಾಳ್ ಹಾಗೂ ವಿಶ್ವನಾಥ ಅವರ ಹೇಳಿಕೆಯ ಕುರಿತು ಹೈಕಮಾಂಡ್ ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.

  • ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ

    ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ

    ಕಾರವಾರ: ಮಳೆ ಶುರುವಾಗ್ತಿದ್ದಂತೆ ಕಪ್ಪೆಗಳು ವಟಗುಟ್ಟುವುದು ಸರ್ವೆ ಸಾಮಾನ್ಯ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆಯಾಗಿದೆ.

    ಮೀನಕ್ಕಿಯಂತೆ ಶಬ್ದ ಮಾಡೋದು ಇದರ ವಿಶೇಷ. ಹಸಿರು ಬಣ್ಣ, ನೀಲಿ ಬಣ್ಣದ ಎರಡು ಗಾಳಿ ಚೀಲ ಹೊಂದಿರೋದು ಇದರ ವಿಶೇಷತೆ. ವಿಶ್ವದ ಅಳಿವಿನಂಚಿಲ್ಲಿರುವ ಕಪ್ಪೆ ಜಾತಿ ಇದಾಗಿದ್ದು, ಕರಾವಳಿ ಚಿಮ್ಮುವ ಕಪ್ಪೆ ಎಂದು ನಾಮಕರಣ ಮಾಡಲಾಗಿದೆ.

    ಅಣಶಿ ಉಪವಲಯ ಅರಣ್ಯಾಧಿಕಾರಿ ಸಿಆರ್ ನಾಯಕ್ ಮೊದಲ ಬಾರಿಗೆ ಈ ಕಪ್ಪೆಯನ್ನು ಪತ್ತೆ ಹಚ್ಚಿಸಿದ್ದರು.