Tag: ಪಬ್ಲಿಕ್ ಟಿವಿ Kangaroo

  • ಅಪ್ಪಿಕೊಂಡು ಕಾಂಗರೂಗಳ ಫೈಟ್ – ವೀಡಿಯೋ ನೋಡಿ ಕನ್ಫೂಸ್ ಆದ ನೆಟ್ಟಿಗರು

    ಅಪ್ಪಿಕೊಂಡು ಕಾಂಗರೂಗಳ ಫೈಟ್ – ವೀಡಿಯೋ ನೋಡಿ ಕನ್ಫೂಸ್ ಆದ ನೆಟ್ಟಿಗರು

    ಕಾಂಗರೂಗಳ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ವೀಡಿಯೋ ನೋಡಿ ನೆಟ್ಟಿಗರು ಫುಲ್ ಕನ್ಫ್ಯೂಷನ್ ಆಗಿದ್ದಾರೆ.

    ಹೌದು ವೀಡಿಯೋದಲ್ಲಿ ಎರಡು ಕಾಂಗರೂಗಳು ಒಂದಕ್ಕೊಂದು ಹಿಡಿದುಕೊಂಡು ಗಟ್ಟಿಯಾಗಿ ತಬ್ಬಿಕೊಂಡಿರುತ್ತದೆ. ಆದರೆ ಇದಕ್ಕಿದ್ದಂತೆ ಆದ್ಯಾಕೋ ಎರಡು ಕಾಂಗರೂ ತಮ್ಮ ಕಾಲುಗಳಲ್ಲಿ ಒದೆಯುವ ಮೂಲಕ ಜಗಳವಾಡಲು ಆರಂಭಿಸುತ್ತದೆ. ಈ ಜಗಳ ನೋಡಲು ಅಷ್ಟೇನೂ ಗಂಭೀರವಾಗಿ ಕಾಣಿಸದಿದ್ದರೂ, ಇಬ್ಬರೂ ಒಡಹುಟ್ಟಿದವರು ಹೇಗೆ ಕಿತ್ತಾಡುತ್ತಾರೋ ಆ ರೀತಿ ಜಗಳವಾಡುತ್ತದೆ.

    ಈ ವೇಳೆ ಎರಡು ಕಾಂಗರೂಗಳ ಕಾಲಿನಲ್ಲಿ ಒಂದಕ್ಕೊಂದು ಒದೆಯಲು ಪ್ರಯತ್ನಸುತ್ತಿರುವುದನ್ನು ಕಂಡು ಗೊಂದಲಗೊಂಡ ಮೂರನೇ ಕಾಂಗರೂ ಅವರಿಬ್ಬರ ಮಧ್ಯೆ ಪ್ರವೇಶಿಸುತ್ತದೆ. ವೀಡಿಯೋದಲ್ಲಿ ಮೂರನೇ ಕಾಂಗರೂ ಅವರಿಬ್ಬರನ್ನು ಬಿಡಿಸುತ್ತಾ ಮತ್ತೊಂದು ಕಾಂಗರೂಗೆ ಚುಂಬಿಸಲು ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತದೆ.

    15 ಸೆಕೆಂಡ್ ಇರುವ ಈ ವೀಡಿಯೋವನ್ನು ನೇಚರ್ ಆ್ಯಂಡ್ ಅನಿಮಲ್ಸ್ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಈವರೆಗೂ ಸುಮಾರು 36 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವಾರು ಕಾಮೆಂಟ್‍ಗಳ ಸುರಿಮಳೆ ಹರಿದು ಬರುತ್ತಿದೆ.