Tag: ಪಬ್ಲಿಕ್ ಟಿವಿ jagadish shettar

  • ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ : ಶೆಟ್ಟರ್

    ಲಾಕ್‍ಡೌನ್‍ನಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ : ಶೆಟ್ಟರ್

    ಧಾರವಾಡ: ಲಾಕ್‍ಡೌನ್ ಘೋಷಿಸಿದ್ದರಿಂದ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಶೇ.35 ಪಾಸಿಟಿವಿಟಿ ಹೋಗಿತ್ತು. ಆದರೆ ಈಗ ಶೇ. 14ಕ್ಕೆ ಇಳಿದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇವತ್ತು ಶೇ.14ರಷ್ಟು ಪಾಸಿಟಿವಿಟಿ ಬರಬಹುದು. ಪ್ರತಿ ಹಂತದಲ್ಲಿ ಕೊರೊನಾ ಇಳಿಕೆಯಾಗುತ್ತಿದೆ. ಲಾಕ್‍ಡೌನ್‍ನಿಂದ ಇದೆಲ್ಲಾ ಸಾಧ್ಯವಾಗಿದೆ. ಇನ್ನೂ ಏಳು ದಿನ ಲಾಕ್‍ಡೌನ್ ಇದೆ. ಜೂ. 5 ಅಥವಾ 6 ರಂದು ಬರುವ ಪಾಸಿಟಿವಿಟಿ ರೇಟ್ ನೋಡಿ ಸಿಎಂ ಲಾಕ್ ಡೌನ್ ಬಗ್ಗೆ ನಿರ್ಧಾರ ಮಾಡುತ್ತಾರೆ. ಶೇ. 5 ರಷ್ಟು ಪಾಸಿಟಿವಿಟಿ ಬಂದರೆ ಲಾಕ್‍ಡೌನ್ ಸಡಿಲಕೆ ಮಾಡುತ್ತೇವೆ ಎಂದು ನುಡಿದರು.

    ಯತ್ನಾಳ್ ಸಿಎಂ ಬಗ್ಗೆ ಮಾತನಾಡಿರುವುದು ಅವರ ವೈಯಕ್ತಿಕ ವಿಚಾರ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲಾರೆ. ಸಿಎಂ ಬದಲಾವಣೆ ಗೊಂದಲನೇ ನನಗೆ ಅರ್ಥ ಆಗುತ್ತಿಲ್ಲ. ಈಗ ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಇದ್ದವರೇ ಮುಂದುವರೆತ್ತಾರೆ ಎಂದರು. ಸಹಿ ಸಂಗ್ರಹದ ವಿಚಾರವೂ ನನಗೆ ಗೊತ್ತಿಲ್ಲ. ಈ ಬೆಳವಣಿಗೆ ಬಗ್ಗೆ ಎಲ್ಲಿ ಏನು ಮಾತಾಡಬೇಕು ಆ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ:ಕೈಗಾರಿಕಾಭಿವೃದ್ಧಿಗೆ ಪೂರಕವಾದ ರಾಷ್ಟ್ರೀಯ ಶಿಕ್ಷಣ ನೀತಿ ಈ ವರ್ಷದಿಂದಲೇ ಜಾರಿ: ಡಿಸಿಎಂ

  • ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲಿಡಲು ಆದೇಶ – ಸಚಿವ ಶೆಟ್ಟರ್

    ಖಾಸಗಿ ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ ಮೀಸಲಿಡಲು ಆದೇಶ – ಸಚಿವ ಶೆಟ್ಟರ್

    ಧಾರವಾಡ: ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಮುಖ್ಯಸ್ಥರೊಂದಿಗೆ ಸಭೆ ಮಾಡಿದ್ದೇವೆ, ನಮಗೆ ಇನ್ನಷ್ಟು ಬೆಡ್ ಅವಶ್ಯಕತೆ ಇದೆ. ಶೇ.50 ರಷ್ಟು ಮೀಸಲಿಡಲು ಆದೇಶಿಸಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಈ ಮುಂಚೆಯೂ ಹಲವಾರು ಬಾರಿ ಸಭೆ ನಡೆಸಿದ್ದೇವೆ. ಆಸ್ಪತ್ರೆಯವರ ಸಮಸ್ಯೆ ಬಗ್ಗೆಯೂ ಇದೀಗ ಚರ್ಚೆ ಮಾಡಿದ್ದೇವೆ. ಆಸ್ಪತ್ರೆಯವರು ಸರ್ಕಾರದ ನಿರ್ಧಾರಕ್ಕೆ ಸಿದ್ಧರಿದ್ದೇವೆ ಎಂದಿದ್ದಾರೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆ ವಿಚಾರವಾಗಿ 080 47168111 ನಂಬರ್‍ ಗೆ  ಫೋನ್ ಮಾಡಬಹುದು ಎಂದು ತಿಳಿಸಿದರು.

    ವಾರ್ ರೂಮ್‍ನಿಂದ ಆಸ್ಪತ್ರೆ, ಬೆಡ್ ಬಗ್ಗೆ ವ್ಯವಸ್ಥೆ ಮಾಡಲಾಗುತ್ತೆ, ಬಳಿಕ ಆಸ್ಪತ್ರೆ ಹೆಸರು, ಬೆಡ್ ಸಂಖ್ಯೆಯನ್ನು ರೋಗಿಗೆ ತಿಳಿಸಲಾಗುತ್ತದೆ. ಖಾಸಗಿಯವರು ಆರಂಭದಲ್ಲಿ ಬೆಡ್ ಕೊಡಲು ನಿರಾಕರಿಸಿದ್ದರು, ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಕಾನೂನು ಸಂಘರ್ಷಕ್ಕೆ ಅವಕಾಶ ಕೊಡುವುದು ಬೇಡ. ಜೊತೆಗೆ ಕೋವಿಡ್ ಅಲ್ಲದ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಕೊಡಲಾಗುವುದು ಎಂದು ಹೇಳಿದರು.