Tag: ಪಬ್ಲಿಕ್ ಟಿವಿ Injection

  • ವಾಕ್ಸಿನ್ ಪಡೆಯುವಾಗ ಮಮ್ಮಿ, ಮಮ್ಮಿ ಎಂದು ಕಿರುಚಾಡಿದ ಯುವತಿ

    ವಾಕ್ಸಿನ್ ಪಡೆಯುವಾಗ ಮಮ್ಮಿ, ಮಮ್ಮಿ ಎಂದು ಕಿರುಚಾಡಿದ ಯುವತಿ

    ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ರಾಜ್ಯ ಸರ್ಕಾರ ಕೋವಿಡ್ ವ್ಯಾಕ್ಸಿನ್ ನೀಡಲು ಆರಂಭಿಸಿದೆ. ಕೋವಿಡ್ ವ್ಯಾಕ್ಸಿನ್ ಸ್ವೀಕರಿಸಿದ ನಂತರ ಅನೇಕ ಮಂದಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಸದ್ಯ ಯುವತಿಯೊಬ್ಬಳು ಇಂಜೆಕ್ಷನ್‍ನನ್ನು ನೋಡಿದ ತಕ್ಷಣ ಗಾಬರಿಯಿಂದ ಕಿರುಚಾಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 45 ಸೆಕೆಂಡ್ ಇರುವ ಈ ವೀಡಿಯೋದಲ್ಲಿ, ಯುವತಿ ಲಸಿಕೆ ಪಡೆಯಲು ಕುರ್ಚಿ ಮೇಲೆ ಕುಳಿತುಕೊಳ್ಳುತ್ತಾಳೆ. ಈ ವೇಳೆ ನರ್ಸ್ ಕೈಯಲ್ಲಿ ಇಂಜೆಕ್ಷನ್ ಹಿಡಿದು ಹತ್ತಿರ ಬರುತ್ತಿದ್ದಂತೆ, ಯುವತಿ ಕುರ್ಚಿಯಿಂದ ಎದ್ದು, ಭಯದಿಂದ ನಡುಗುತ್ತಾ, ಒಂದು ನಿಮಿಷ ಇರಿ, ಒಂದು ನಿಮಿಷ ಇರಿ ಎಂದು ಕಿರುಚಾಡುತ್ತಾಳೆ.

    ಈ ವೇಳೆ ಆಕೆಯೊಂದಿಗೆ ಬಂದಿದ್ದ ವ್ಯಕ್ತಿ ಬಾಯಿಯನ್ನು ಮುಚ್ಚಿ ಯುವತಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಆಗಲೂ ಯುವತಿ ಜೋರಾಗಿ ಚಿರಾಡಲು ಆರಂಭಿಸುತ್ತಾಳೆ. ಆಗ ನರ್ಸ್‍ಗೆ ಕೋಪಬರುತ್ತದೆ. ಹಾಸ್ಯವರೆಂದರೆ ಯುವತಿ ತನಗೆ ತಾನೇ ಭಯವನ್ನು ನಿಯಂತ್ರಿಸಿಕೊಳ್ಳಲು ‘ಮಮ್ಮಿ ಮಮ್ಮಿ’ ಎಂದು ಹೇಳಬೇಕಾ ಎಂದು ಕೇಳಿಕೊಳ್ಳುತ್ತಾಳೆ. ಆಗ ವೈದ್ಯರು ಏನನ್ನು ಹೇಳಬೇಡಿ. ಶಾಂತಿಯಿಂದ ಕುಳಿತುಕೊಳ್ಳಿ ಎಂದು ತಿಳಿಸುತ್ತಾರೆ. ತದ ನಂತರ ಕಣ್ಣು ಮುಚ್ಚಿಕೊಂಡು ಯುವತಿ ಇಂಜೆಕ್ಷನ್ ಸ್ವೀಕರಿಸಿದ್ದಾಳೆ.

    ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರಿಗೆ ಮನರಂಜನೆ ನೀಡುತ್ತಿದೆ. ಇನ್ನೂ ಕೆಲವರಂತೂ ಹುಡುಗಿ ಆಡಿದ್ದನ್ನು ನೋಡಿ ಗೇಲಿ ಮಾಡುತ್ತಿದ್ದಾರೆ.