Tag: ಪಬ್ಲಿಕ್ ಟಿವಿ Imran Khan

  • ಪಾಕ್ ಪ್ರಧಾನಿಗೆ ಕೊರೊನಾ – ಶೀಘ್ರ ಚೇತರಿಕೆಗೆ ಮೋದಿ ಹಾರೈಕೆ

    ಪಾಕ್ ಪ್ರಧಾನಿಗೆ ಕೊರೊನಾ – ಶೀಘ್ರ ಚೇತರಿಕೆಗೆ ಮೋದಿ ಹಾರೈಕೆ

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

    ಈ ಕುರಿತಂತೆ ಶನಿವಾರ ಸಂಜೆ ಟ್ವೀಟ್ ಮಾಡಿರುವ ಮೋದಿ, ಕೊರೊನಾ ಸೋಂಕಿನಿಂದ ಇಮ್ರಾನ್ ಖಾನ್ ಶೀಘ್ರವೇ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಆರೋಗ್ಯ ಸಚಿವರು, ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಇಬ್ಬರನ್ನೂ ಮನೆಯಲ್ಲಿಯೇ ಕ್ವಾರಂಟೈನ್‍ಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು.

    ಕಳೆದ ಗುರುವಾರ ಮಾರ್ಚ್ 19 ರಂದು ಇಮ್ರಾನ್ ಖಾನ್ ಅವರು ಚೀನಾದ ಸಿನೋಫಾರ್ಮ್ ಲ್ಯಾಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಅಲ್ಲದೆ ಇತ್ತೀಚೆಗೆ ಇಮ್ರಾನ್‍ಖಾನ್ ಹಲವಾರು ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಭೆಗಳಿಗೆ ಮಾಸ್ಕ್ ಧರಿಸದೇ ಭಾಗವಹಿಸಿದ್ದರು ಎಂಬ ಆರೋಪಗಳು ಕೇಳಿಬರುತ್ತಿದೆ.

    ಒಟ್ಟಾರೆ ಸದಾ ಯುದ್ಧ, ಕದನದಿಂದ ಕೂಡಿರುವ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯಾವುದೇ ಉತ್ತಮ ಬಾಂಧವ್ಯವಿಲ್ಲ ಎಂದು ಉಭಯ ದೇಶಗಳು ತಿಳಿದಿದ್ದವು. ಆದರೆ ಮೋದಿ, ಇಮ್ರಾನ್‍ ಖಾನ್‍ಗೆ ಚೇತರಿಕೆಗೊಳ್ಳುವಂತೆ ಶುಭ ಕೋರಿರುವುದು ಮಾನವೀಯತೆ ಮೆರೆದಿರುವುದಕ್ಕೆ ಸಾಕ್ಷಿಯಾಗಿದ್ದು, ಎಲ್ಲ ರಾಷ್ಟ್ರಗಳ ಗಮನ ಸೆಳೆದಿದೆ.