Tag: ಪಬ್ಲಿಕ್ ಟಿವಿ Ilayaraja

  • 78ನೇ ವಸಂತಕ್ಕೆ ಕಾಲಿಟ್ಟ ಸಂಗೀತ ನಿರ್ದೇಶಕ ಇಳಯರಾಜ

    78ನೇ ವಸಂತಕ್ಕೆ ಕಾಲಿಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಚೆನ್ನೈ: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ 78ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    ಈ ವಿಶೇಷದಿನದಂದು ಅಭಿಮಾನಿಗಳು ತಮ್ಮ ನೆಚ್ಚಿನ ಹಾಡುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇಳಯರಾಜರವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಇಳಯರಾಜರವರು 1,000ಕ್ಕೂ ಹೆಚ್ಚು ಸಿನಿಮಾಗಳಿಗೆ 7,000ಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತಾ ಸಂಯೋಜಿಸಿದ್ದಾರೆ. ವಿಶ್ವದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಇಳಯರಾಜವರು ಕೂಡ ಒಬ್ಬರಾಗಿದ್ದಾರೆ ಎಂದು ಗುರುತಿಸಲಾಗಿದೆ.

    ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಇಳಜರಾಜರವರು ತಮ್ಮ ಚೆನ್ನೈ ನಿವಾಸದಲ್ಲಿ ಕುಟುಂಬದೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇಳಯರಾಜರವರಿಗೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ.

    ಇಳಯರಾಜರವರು ನಾಲ್ಕು ದಶಕದ ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಹಿಟ್ ಹಾಡುಗಳನ್ನು ನೀಡುವ ಮೂಲಕ ಯಶಸ್ಸು ಪಡೆದುಕೊಂಡಿದ್ದಾರೆ. ಅಲ್ಲದೆ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರಗಳಿಗೆ ಪಾಶ್ಚತ್ಯ ಮಾದರಿಯ ಸಂಗೀತ ತಂತ್ರಗಳನ್ನು ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

    2010 ಮತ್ತು 2018ರಲ್ಲಿ ಇಳಯರಾಜರವರಿಗೆ ಸರ್ಕಾರ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಇದನ್ನು ಓದಿ: ಸಿಬಿಎಸ್‍ಇ ಪರೀಕ್ಷೆ ರದ್ದು – ಕರ್ನಾಟದಲ್ಲಿ ಏನು?

  • ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಚೆನ್ನೈ: ಯುವನ್ ಶಂಕರ್ ರಾಜಾ ಇತ್ತೀಚೆಗೆ ತಮ್ಮ ತಂದೆ ಇಳಯರಾಜ ಮತ್ತು ಮಗಳು ಜಿಯಾ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಇಳಯರಾಜ ಪಿಯಾನೋವನ್ನು ಜಿಯಾಗೆ ಹೇಗೆ ನುಡಿಸಬೇಕೆಂದು ಕಲಿಸಿಕೊಡುತ್ತಿರುತ್ತಾರೆ. ಈ ವೇಳೆ ಪಿಯಾನೋ ನುಡಿಸುತ್ತಿದ್ದಂತೆಯೇ ಜಿಯಾ ಬೇರೆ ಕಡೆಗೆ ಬೇಗ ಗಮನ ಹರಿಸುತ್ತಾಳೆ. ಈ ವೀಡಿಯೋಗೆ ಶ್ರುತಿ ಹಾಸನ್, ವಿಜಯ್ ಯೇಸುದಾಸ್ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಯುವನ್ ಶಂಕರ್ ಇಳಯರಾಜಾ ಮೊಮ್ಮಗಳು ಜಿಯಾ ಜೊತೆ ಕಾಲಕಳೆಯುತ್ತಿರುವ ಮುದ್ದಾದ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಇಳಯಾರಾಜ ಜಿಯಾ ಅವರೊಟ್ಟಿಗೆ ಟ್ಯೂನ್‍ವೊಂದನ್ನು ನುಡಿಸಿದ್ದಾರೆ. ಈ ಸುಂದರವಾದ ಕ್ಷಣವನ್ನು ಯುವನ್ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ವೀಡಿಯೋದಲ್ಲಿ ಜಿಯಾ ಪಿಯಾನೊ ನುಡಿಸಲು ಪ್ರಯತ್ನಿಸುತ್ತಿದ್ದ ವೇಳೆ ಇಳಯರಾಜ ಅವರು, ಅವಳನ್ನು ಮೇಜಿನ ಮೇಲೆ ನಿಲ್ಲಲು ಸಹಾಯ ಮಾಡುತ್ತಾರೆ. ಬಳಿಕ ಅವಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಡಲು ಮುಂದಾದಾಗ ಜಿಯಾ ಮೇಜಿನ ಮೇಲೆ ಇಟ್ಟಿರುವ ಕಲಾಕೃತಿಯೊಂದಿಗೆ ಆಟ ಆಡುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by U1 (@itsyuvan)