Tag: ಪಬ್ಲಿಕ್ ಟಿವಿ Husband

  • ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪತಿ

    ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪತಿ

    ತುಮಕೂರು: ಒಂದು ವರ್ಷದ ಹಿಂದೆ ಮಾದುವೆಯಾಗಿದ್ದ ಯುವತಿಯನ್ನು ವರದಕ್ಷಿಣೆ ಆಸೆಗೆ ಪತಿಯೇ ಕೊಲೆಗೈದ ಘಟನೆ ತುಮಕೂರಿನಲ್ಲಿ ನಡೆದಿದೆ.

    ಸೌಂದರ್ಯ(19) ಕೊಲೆಯಾದ ದುರ್ದೈವಿ. ಈಕೆಯ ಪತಿ ನಾಗರಾಜು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಒಂದು ವರ್ಷದ ಹಿಂದೆ ಹಾಸನದ ಸಕಲೇಶಪುರದ ನಿವಾಸಿ ಸೌಂದರ್ಯಳನ್ನು, ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ವಿವಾಹವಾಗಿದ್ದರು. ಒಂದು ವರ್ಷದಿಂದಲು ವರದಕ್ಷಿಣೆ ಹಣಕ್ಕಾಗಿ ಸೌಂದರ್ಯಾಳ ಪತಿ ನಾಗರಾಜ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನು ಓದಿ: ತವರು ಮನೆಯಿಂದ ಹಣ ತರುವಂತೆ ಗಲಾಟೆ- ಸಿವಿಲ್ ಎಂಜಿನಿಯರ್ ಪತ್ನಿ ಆತ್ಮಹತ್ಯೆ

    ಆರೋಪಿ ನಾಗರಾಜು ತುಮಕೂರಿನ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ತುಮಕೂರಿನ ಸರಸ್ವತಿಪುರಂಗೆ ಬಂದು ನೆಲೆಸಿದ್ದರು. ಆದರೆ ಆಗಿಂದಾಗ್ಗೆ ಇಬ್ಬರ ನಡುವೆ ವರದಕ್ಷಿಣೆ ಹಾಗೂ ಸಣ್ಣಪುಟ್ಟ ವಿಷಯಕ್ಕೆ ಜಗಳ ನಡೆಯುತ್ತಿತ್ತು. ಆದರೆ ಕಳೆದ ರಾತ್ರಿ ಹಣಕ್ಕಾಗಿ ಪೀಡಿಸಿದ ನಾಗರಾಜು ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದು, ತುಮಕೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ:ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

  • ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿ

    ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಬಲಿ

    ಬಳ್ಳಾರಿ: ಕೇವಲ ಮೂರು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮದಿರೆ ಗ್ರಾಮದಲ್ಲಿ ನಡೆದಿದೆ.

    ಒಂದೇ ಕುಟುಂಬದ ಗಂಡ-ಹೆಂಡತಿ ಮತ್ತು ಮಗಳು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಮದಿರೆ ಗ್ರಾಮದ ಸುನೀತಮ್ಮ (45), ರುದ್ರಪ್ಪ (56) ಹಾಗೂ ನಂದಿನಿ (22) ಮೃತಪಟ್ಟಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆ ಮೊದಲಿಗೆ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು, ನಂತರ ಚಿಕಿತ್ಸೆ ಪಡೆದ ಬಳಿಕ ಗುಣಮುಖರಾಗಿದ್ದರು. ಆದರೆ ಹೈದ್ರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದ ಮಗಳು ನಂದಿನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಹೈದರಾಬಾದ್ ನಿಂದ ಗ್ರಾಮಕ್ಕೆ ಮರಳಿದ್ದಳು. ಗ್ರಾಮಕ್ಕೆ ಬಂದ ಬಳಿಕ ಮಗಳ ಕೋವಿಡ್ ಪರೀಕ್ಷೆ ಮಾಡಿದಾಗ ನಂದಿನಿಗೆ ಕೊರೊನಾ ಸೋಂಕು ಇರುವುದು ದೃಢವಾದ ಹಿನ್ನೆಲೆಯಲ್ಲಿ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.

    ಆಗ ಮನೆಯಲ್ಲಿ ಇದ್ದ ಉಳಿದ ಮೂವರಿಗೂ ಕೋವಿಡ್ ಪರೀಕ್ಷೆ ಮಾಡಿದಾಗ ಮೂವರಲ್ಲಿಯೋ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಇವರನ್ನು ಸಹ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕಳೆದ ಎರಡು ದಿನಗಳ ಹಿಂದೆ ತಾಯಿ ಸುಮಿತಮ್ಮ ಹಾಗೂ ಮಗಳು ನಂದಿನಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ರುದ್ರಪ್ಪಾ ಸಹ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಕೇವಲ ಮೂರು ದಿನಗಳ ಅಂತರದಲ್ಲಿ ಮನೆಯ ಮೂರು ಮಂದಿಯನ್ನು ಕೊರೊನಾ ಸೋಂಕು ಬಲಿಪಡೆದಿದೆ. ಅದೃಷ್ಟವಶಾತ್ ಸೋಂಕಿನಿಂದ ಮಗ ಪಾರಾಗಿದ್ದಾನೆ.

  • ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು – ಸಾವಿನಲ್ಲೂ ಒಂದಾದ ದಂಪತಿ

    ಚಿಕ್ಕಮಗಳೂರು: ಪತಿಯ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಕೋಟೆ ಬಡಾವಣೆಯಲ್ಲಿ ನಡೆದಿದೆ.

    ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಕೋಟೆ ಬಡಾವಣೆ ನಿವಾಸಿ ಹರೀಶ್ ಅವರನ್ನು ಸೋಮವಾರ ಮಧ್ಯಾಹ್ನ ನಗರದ ಕೆ.ಆರ್.ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆ.ಆರ್.ಎಸ್. ಆಸ್ಪತ್ರೆಯಲ್ಲಿ ಹರೀಶ್‍ಗೆ ಆಕ್ಸಿಜನ್ ನೀಡಿ ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿದ್ದರಿಂದ ವೈದ್ಯರು ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು. ಆ ಬಳಿಕ ಕುಟುಂಬಸ್ಥರು ಹರೀಶ್ ಅವರನ್ನ ನಗರದ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಮೃತಪಟ್ಟಿದ್ದಾರೆ.

    ತಂದೆ ಹರೀಶ್ ಮೃತಪಟ್ಟ ವಿಷಯವನ್ನ ಪಿಯುಸಿ ಓದುತ್ತಿರುವ ಮಗ ತಾಯಿಗೆ ಮೊಬೈಲ್ ಮೂಲಕ ಫೋನ್ ಮಾಡಿ ತಿಳಿಸಿದ್ದಾರೆ. ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಸೌಮ್ಯ ಕೂಡ ವಿಷಯ ತಿಳಿದ ಹತ್ತೇ ನಿಮಿಷದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಈ ಮೂಲಕ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ಹರೀಶ್ ಹಾಗೂ ಸೌಮ್ಯಾ ದಂಪತಿಗೆ ಕೋವಿಡ್ ಸೋಂಕು ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗ ಹಾಗೂ ಸಂಬಂಧಿಕರ ನೋವು ನೋಡುಗರ ಕಣ್ಣಲ್ಲೂ ನೀರು ತರಿಸುವಂತಿತ್ತು. ಮೃತ ಹರೀಶ್ ನಗರದ ಎಂ.ಜಿ.ರಸ್ತೆಯಲ್ಲಿ ಗಿಫ್ಟ್ ಸೆಂಟರ್ ನಡೆಸುತ್ತಿದ್ದರು.

  • 3.5 ಕೋಟಿ ವಿಮೆ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ

    3.5 ಕೋಟಿ ವಿಮೆ ಹಣಕ್ಕಾಗಿ ಪತಿಯನ್ನೇ ಕೊಂದ ಪತ್ನಿ

    – ಸಂಬಂಧಿ ಜೊತೆ ಸೇರಿ ಗಂಡನ ಕೊಲೆಗೆ ಸ್ಕೆಚ್
    – ಬೆಂಕಿ ಹಚ್ಚಿ ಕೊಂದ್ಳು

    ಚೆನ್ನೈ: 62 ವರ್ಷದ ಮಹಿಳೆಯೊಬ್ಬಳು 3.5 ಕೋಟಿ ರೂ. ವಿಮೆ ಹಣಕ್ಕಾಗಿ ಸಂಬಂಧಿಕನ ಜೊತೆ ಸೇರಿ ಪತಿಯನ್ನೇ ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಮೃತಪಟ್ಟ ವ್ಯಕ್ತಿಯನ್ನು ಕೆ. ರಂಗರಾಜು ಎಂದು ಗುರುತಿಸಲಾಗಿದ್ದು, ಈತ ಈರೋಡ್ ಜಿಲ್ಲೆಯ ತುಡುಪತಿಯ ನಿವಾಸಿಯಾಗಿದ್ದಾನೆ. ಮೃತ ವ್ಯಕ್ತಿ ವಿದ್ಯುತ್ ಮಗ್ಗದ ಘಟಕ ಹೊಂದಿದ್ದು, ಮಾರ್ಚ್ 15 ರಂದು ಅಪಘಾತದಲ್ಲಿ ಗಾಯಗೊಂಡರು. ಹಾಗಾಗಿ ರಂಗರಾಜುನನ್ನು ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಬಳಿಕ ಗುರುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಈ ವೇಳೆ ಪತ್ನಿ ಆರ್. ಜ್ಯೋತಿ ಮಣಿ ಹಾಗೂ ಸಂಬಂಧಿ ರಾಜಾ ರಂಗರಾಜುರನ್ನು ವ್ಯಾನ್‍ನಲ್ಲಿ ಕರೆದೊಯಿದ್ದಾರೆ.

    ರಾತ್ರಿ ಸುಮಾರು 11.30ಕ್ಕೆ ಪೆರುಮನಲ್ಲೂರು ಬಳಿಯ ವಲಸುಪಾಲಯಂನಲ್ಲಿ ವಾಹನವನ್ನು ನಿಲ್ಲಿಸಿ ರಾಜಾ ಹಾಗೂ ಜ್ಯೋತಿಮಣಿ ವಾಹನದಿಂದ ಕೆಳಗೆ ಇಳಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರಂಗರಾಜ್‍ರನ್ನು ಜೀವಂತವಾಗಿ ಸುಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ರಾಜಾ ಸಾವಿನ ಕುರಿತಂತೆ ತಿರುಪುರ ಗ್ರಾಮೀಣ ಪೊಲೀಸರಿಗೆ ಅಪಘಾತ ನಡೆದಿರುವುದಾಗಿ ಮಾಹಿತಿ ನೀಡಿದ್ದಾನೆ.

    ಈ ಬಗ್ಗೆ ಅನುಮಾನಗೊಂಡ ಪೊಲೀಸರು, ತನಿಖೆ ನಡೆಸಲು ಆರಂಭಿಸಿದಾಗ ಪೆಟ್ರೋಲ್ ಬಂಕ್‍ನಲ್ಲಿ ಆರೋಪಿ ರಾಜಾ ಪೆಟ್ರೋಲ್ ಖರೀದಿಸಿರುವ ದೃಶ್ಯ ಸೆರೆಯಾಗಿದೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿ ರಾಜಾ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ವೇಳೆ ರಂಗರಾಜು 1.5 ಕೋಟಿ ಸಾಲ ಮಾಡಿದ್ದು, ಜ್ಯೋತಿಮಣಿಗೆ ಹಣಕ್ಕಾಗಿ ಪೀಡಿಸುತ್ತಿದ್ದನು. ರಂಗರಾಜು ಹೆಸರಿನಲ್ಲಿ 3.5 ಕೋಟಿ ವಿಮೆ ಹಣವಿದ್ದರಿಂದ ಜ್ಯೋತಿ ಮಣಿ ಹಾಗೂ ನಾನು ಸಂಚು ರೂಪಿಸಿ ಕೊಲೆ ಮಾಡಲು ನಿರ್ಧರಿಸೆದೇವು. ಅಲ್ಲದೆ ಜ್ಯೋತಿ ಮಣಿ ಕೊಲೆ ಮಾಡಲು ನನಗೆ ಮುಂಗಡವಾಗಿ 50,000 ರೂ ಹಣ ನೀಡಿದ್ದು, ಕೊಲೆ ನಂತರ 1 ಲಕ್ಷ ರೂ. ಹಣ ನೀಡುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಾನೆ.

    ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

  • ಪತ್ನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದ ಪತಿ!

    ಪತ್ನಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದ ಪತಿ!

    ಭುವನೇಶ್ವರ: 32 ವರ್ಷದ ವ್ಯಕ್ತಿಯೋರ್ವ 28 ವರ್ಷದ ತನ್ನ ಪತ್ನಿಯನ್ನೇ ಸುಟ್ಟುಹಾಕಿರುವ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯಲ್ಲಿ ನಡೆದಿದೆ.

    ಪಟ್ಟಮುಂಡೈ ಪೊಲೀಸ್ ಠಾಣಾ ವ್ಯಾಪ್ತಿ ಬಜೀಪಾಡ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮಹಿಳೆ ಸುಟ್ಟ ದೇಹ ಗುರುವಾರ ಬೆಳಗ್ಗೆ ಮನೆಯೊಳಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸದ್ಯ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

  • ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ನೀನು ಕಪ್ಪು, ದಪ್ಪ, ಕೊಳಕು – ಪತಿ ವಿರುದ್ಧ ದೂರು ನೀಡಿದ ಪತ್ನಿ

    ಗಾಂಧಿನಗರ: ಪತ್ನಿ ಕಪ್ಪು ಹಾಗೂ ನೋಡಲು ದಪ್ಪ, ಕೊಳಕು ಎಂದು ಕಿರುಕುಳ ನೀಡುತ್ತಿದ್ದ ಪತಿ ವಿರುದ್ಧ 23 ವರ್ಷದ ಮಹಿಳೆ ಗುಜರಾತಿನ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಮಹಿಳೆ 2008ರಲ್ಲಿ ವಿವಾಹವಾಗಿದ್ದು, ಆಕೆಯ ಪತಿ ವರದಕ್ಷಿಣೆ ನೀಡುವಂತೆ ಕಿರುಕುಳ ಕೊಡುತ್ತಿದ್ದ ಎಂದು ಆರೋಪಿಸಿದ್ದಾಳೆ. ಅಲ್ಲದೆ ಮಹಿಳೆಯ ಪೋಷಕರು ವರದಕ್ಷಿಣೆ ನೀಡಲು ಸಾಧ್ಯವಾಗದಿದ್ದಾಗ ಅವಳ ಪತಿ ನೀನು ದಪ್ಪಗಿದ್ದೀಯಾ, ನೋಡಲು ನೀನು ಕಪ್ಪಾಗಿರುವೆ ಎಂದು ಅಣಕಿಸಿ ಥಳಿಸುತ್ತಿದ್ದನು. ಜೊತೆಗೆ ತನ್ನ ಗರ್ಲ್ ಫ್ರೆಂಡ್ ನೋಡಲು ಬಹಳ ತೆಳ್ಳಗಿದ್ದಾಳೆ ಹಾಗೂ ಬಿಳುಪಾಗಿದ್ದಾಳೆ ಎಂದು ಹೋಲಿಸಿದ್ದಾನೆ. ಜೊತೆಗೆ ಉತ್ತಮವಾಗಿ ಅಡುಗೆ ಮಾಡುವುದಿಲ್ಲ, ತನಗೆ ಕಿರುಕುಳ ನೀಡುತ್ತಾಳೆ ಎಂದು ಪತಿ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆ.

    ನನ್ನ ಪತಿ ನನ್ನನ್ನು ದಪ್ಪ, ಕಪ್ಪು ಮತ್ತು ಕೊಳಕು ಎಂದು ವ್ಯಂಗ್ಯ ಮಾಡಿ ತನ್ನ ಗರ್ಲ್ ಫ್ರೆಂಡ್ ನೋಡಲು ತೆಳ್ಳಗೆ ಹಾಗೂ ಬಿಳುಪಾಗಿದ್ದು ಸುಂದರವಾಗಿದ್ದಾಳೆ ಎಂದು ಅವಳೊಟ್ಟಿಗೆ ತನ್ನನ್ನು ಹೋಲಿಸುತ್ತಾನೆ. ಇದನ್ನು ನಾನು ವಿರೋಧಿಸಿದಾಗ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದನು.

    ಪತಿ ಮನೆಯವರು ಕೂಡ ನನ್ನನ್ನು ಹೊಡೆಯಲು ಪ್ರಚೋದಿಸುತ್ತಿದ್ದರು ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಅಲ್ಲದೆ ಹೆಣ್ಣು ಮಗುವಿಗೆನಾದರೂ ಜನ್ಮ ನೀಡಿದರೆ ತೀವ್ರವಾಗಿ ಪರಿಣಾಮವನ್ನು ಹೆದರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿರುವುದಾಗಿ ಆರೋಪಿಸಿದ್ದಾಳೆ.