Tag: ಪಬ್ಲಿಕ್ ಟಿವಿ Haryana

  • ಕುಸ್ತಿ ಅಖಾಡದಲ್ಲಿ ಗುಂಡಿನ ದಾಳಿ – ಐವರ ದುರ್ಮರಣ

    ಕುಸ್ತಿ ಅಖಾಡದಲ್ಲಿ ಗುಂಡಿನ ದಾಳಿ – ಐವರ ದುರ್ಮರಣ

    ಚಂಡೀಗಡ: ಗುಂಡಿನ ದಾಳಿಯಿಂದ ಐವರು ಮಂದಿ ಮೃತಪಟ್ಟಿದ್ದು, ಕೆಲವರು ಗಾಯಗೊಂಡಿರುವ ಘಟನೆ ಹರಿಯಾಣದ ರೋಹ್ಟಕ್‍ನಲ್ಲಿನ ಖಾಸಗಿ ಕಾಲೇಜೊಂದರ ಕುಸ್ತಿ ಅಖಾಡದಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಪೊಲೀಸರು, ಗುಂಡಿನ ದಾಳಿಯಿಂದ ಮೃತಪಟ್ಟವರಲ್ಲಿ ಓರ್ವ ಕುಸ್ತಿ ತರಬೇತುದಾರನಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಘಟನೆಯಲ್ಲಿ 3 ವರ್ಷದ ಬಾಲಕ ಕೂಡ ಗಾಯಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಕುಸ್ತಿ ಅಖಾಡದಲ್ಲಿ ಗುಂಡು ಸಿಡಿಸಿದವರು ಯಾರು ಎಂಬುವುದು ಕೂಡ ಅವರಿಗೆ ತಿಳಿದುಬಂದಿಲ್ಲ. ಹೀಗಾಗಿ ಈ ಕುರಿತಂತೆ ತನಿಖೆ ನಡೆಸಲು ವಿಶೇಷ ತಂಡವೊಂದನ್ನು ರಚಿಸಿದ್ದು, ಘಟನೆ ಕುರಿತಂತೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಸದ್ಯ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶರ್ಮಾ ಹೇಳಿದ್ದಾರೆ.

  • 10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    ಚಂಡೀಗಢ: 11 ವರ್ಷದ ಚಂಡೀಗಢದ ದುರ್ಗ ಜಿಲ್ಲೆಯ ಬಾಲಕನಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿರುವ ಲಿವ್‍ಜೋತ್ ಸಿಂಗ್ ಅರೋರಾ ಎಂಬ ಬಾಲಕನ ಬುದ್ಧಿವಂತಿಕೆಯ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಸಮ್ಮತಿ ಸೂಚಿಸಿದೆ ಎಂದು ಮಂಗಳವಾರ ರಾಜ್ಯ ಜನಸಂಪರ್ಕ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

    ಬಹುಶಃ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ 10ನೇ ತರಗತಿ ಪರೀಕ್ಷಾ ಮಂಡಳಿ 12 ವರ್ಷದ ಬಾಲಕನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಈ ಮುನ್ನ ಲಿವ್‍ಜೋತ್ 2020-2021ರ ಸಾಲಿನ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿ ಸಿಜಿಬಿಎಸ್‍ಇಗೆ ಅರ್ಜಿ ಸಲ್ಲಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದುರ್ಗ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕನ ಐಕ್ಯೂ ಪರೀಕ್ಷೆಯನ್ನು ನಡೆಸಲಾಗಿತ್ತು. ವರದಿಯಲ್ಲಿ ಬಾಲಕ ಐಕ್ಯೂ 16ರ ವಯಸ್ಕರರ ಐಕ್ಯೂಗೆ ಸಮನಾಗಿದೆ ಎಂದು ತಿಳಿದುಬಂದಿದೆ. ಐಕ್ಯೂ ಎಂದರೇ ಮನುಷ್ಯರ ಬುದ್ದಿವಂತಿಕೆ ಪ್ರಮಾಣವನ್ನು ನಿರ್ಣಯಿಸಲು ವಿನ್ಯಾಸಗೊಳಿಸಿರುವ ಪ್ರಮಾಣೀಕೃತ ಪರೀಕ್ಷೆಯ ಗುಂಪಿನಿಂದ ಪಡೆದ ಅಂಕಗಳಾಗಿದೆ.

    ಲಿವ್‍ಜಿತ್ ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕಗಳ ಮತ್ತು ಆತನ ಐಕ್ಯೂ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು ಬಾಲಕನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.

    ಈ ಕುರಿತಂತೆ ಬಾಲಕನ ತಂದೆ ಗುರುವಿಂದರ್ ಸಿಂಗ್ ಅರೋರಾ ತಮ್ಮ ಮಗ ಬಿಹಾಲಿಯ ಮಿಲ್‍ಸ್ಟೋನ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಬೇಕಾದ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾನೆ. ಜೊತೆಗೆ ಪರೀಕ್ಷೆ ಬರೆಯಲು ಬಹಳ ಉತ್ಸುಹಕನಾಗಿದ್ದಾನೆ ಎಂದು ಹೇಳಿದ್ದಾರೆ.

    ಲಿವ್‍ಜೀತ್ ಮೊದಲಿನಿಂದಲೂ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದು, 3ನೇ ತರಗತಿಯಲ್ಲಿದ್ದಾಗಲೇ ಆತ ಗಣಿತದ ಲೆಕ್ಕ ಸಮಸ್ಯೆಯನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಿದ್ದನು. ಇದೀಗ ಚಿಕ್ಕವಯಸ್ಸಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದು ನಮಗೆ ಬಹಳ ಖುಷಿತರಿಸಿದೆ. ನಾವು ಕೂಡ ಆತನ ಮೇಲೆ ಯಾವುದೇ ಒತ್ತಡ ನೀಡದೇ ಅವನ್ನು ತಯಾರಿ ನಡೆಸಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

  • ಪತಿಯನ್ನ ಕೊಂದು ಒಂದು ವಾರ ಶವವನ್ನ ಮನೆಯಲ್ಲೇ ಇಟ್ಕೊಂಡ್ಳು!

    ಪತಿಯನ್ನ ಕೊಂದು ಒಂದು ವಾರ ಶವವನ್ನ ಮನೆಯಲ್ಲೇ ಇಟ್ಕೊಂಡ್ಳು!

    – ಚಿಕ್ಕಪ್ಪ, ಇನಿಯನ ಜೊತೆ ಸೇರಿ ಪತಿಗೆ ಚಟ್ಟ ಕಟ್ಟಿದ್ಳು!

    ಚಂಡೀಗಢ: ಅಕ್ರಮ ಸಂಬಂಧ ಉಳಿಸಿಕೊಳ್ಳಲು ಪ್ರಿಯಕರ ಹಾಗೂ ಆತನ ಸ್ನೇಹಿತರೊಂದಿಗೆ ಸೇರಿ ಮಹಿಳೆ ತನ್ನ ಪತಿಯನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದಿನೇಶ್ ಪತ್ನಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ವ್ಯಕ್ತಿ. ಜನವರಿ 28ರಂದು ಚರಂಡಿ ಬಳಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಮೃತದೇಹ ಸೈನಿಕ್ ಕಾಲೋನಿ ನಿವಾಸಿ ದಿನೇಶ್ ಎಂಬವರದ್ದು ಅಂತ ಗೊತ್ತಾಯ್ತು. ದಿನೇಶ್ ಪ್ರಾಪರ್ಟಿ ಡೀಲರ್ ಆಗಿ ಕೆಲಸ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ತನಿಖೆಯಲ್ಲಿ ದಿನೇಶ್ ಪತ್ನಿ ನಿತಿನ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ನಿತಿನ್ ಹಾಗೂ ಆಕೆಯ ಸಂಬಂಧಕ್ಕೆ ದಿನೇಶ್ ಅಡ್ಡಿಯಾಗುತ್ತಿದ್ದರಿಂದ ತನ್ನ ಚಿಕ್ಕಪ್ಪ ಹರ್ಜೀತ್ ಸಿಂಗ್, ನಿತಿನ್ ಹಾಗೂ ಆತನ ಸ್ನೇಹಿತರೊಂದಿಗೆ ಮಹಿಳೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದಳು.

    ಜನವರಿ 11 ಹಾಗೂ 12 ಮಧ್ಯರಾತ್ರಿ ಮಹಿಳೆ ಪ್ರಿಯಕರ ನಿತಿನ್, ಆತನ ಸ್ನೇಹಿತರಾದ ವಿನೀತ್ ಮತ್ತು ವಿಷ್ಣು ಕೋಲಿನಿಂದ ದಿನೇಶ್ ಮೇಲೆ ಹಲ್ಲೆ ನಡೆಸಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ನಂತರ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಬಾತ್ ರೂಂನಲ್ಲಿ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಹರ್ಜೀತ್ ಸಿಂಗ್ ಪಾತ್ರವು ಇದ್ದು ಆತನು ಬರುವುದು ತಡವಾದ್ದರಿಂದ ನಿತಿನ್ ಹಾಗೂ ಆತನ ಸ್ನೇಹಿತರೇ ದಿನೇಶ್‍ನನ್ನು ಕೊಲೆ ಮಾಡಿ ಮುಗಿಸಿ ಬಿಟ್ಟಿದ್ದರು. ಅಲ್ಲದೆ ಈ ಕೊಲೆ ಮಾಡಲು ನಿತಿನ್ ಸ್ನೇಹಿತರಾದ ವಿನೀತ್ ಮತ್ತು ವಿಷ್ಣುವಿಗೆ 41 ಸಾವಿರ ರೂ. ಹಣ ನೀಡಿದ್ದನು.

    ಸುಮಾರು ಒಂದು ವಾರದವರೆಗೂ ಪತಿಯ ಶವವನ್ನು ಮಹಿಳೆ ಮನೆಯಲ್ಲಿಯೇ ಇಟ್ಟಿಕೊಂಡಿದ್ದಾಳೆ. ಆದರೆ ಶವ ಜನವರಿ 18ಕ್ಕೆ ದುರ್ವಾಸನೆ ಬರಲು ಆರಂಭವಾಗಿದೆ ಹಾಗಾಗಿ ಮಹಿಳೆ ಮತ್ತೋರ್ವ ಸ್ನೇಹಿತ ದೀಪಕ್ ಜೊತೆ ಸೇರಿ ಶವವನ್ನು ಡಬುವಾ ಪ್ರದೇಶದಲ್ಲಿನ ಚರಂಡಿಗೆ ಎಸೆದಿದ್ದಾಳೆ. ಇದೀಗ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಇತರ ಶಂಕಿತರನ್ನು ಬಂಧಿಸಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ.

  • 7 ವರ್ಷಗಳ ಕಾಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆ ಅರೆಸ್ಟ್

    7 ವರ್ಷಗಳ ಕಾಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ತಂದೆ ಅರೆಸ್ಟ್

    ಚಂಡೀಗಡ: 17 ವರ್ಷದ ಮಗಳ ಮೇಲೆ ಸತತ ಏಳು ವರ್ಷದಿಂದ ಅತ್ಯಾಚಾರ ಎಸಗಿದ್ದ ಕಾಮುಕ ತಂದೆಯನ್ನು ಹಿಸ್ಸಾರ್ ಪೊಲೀಸರು ಬಂಧಿಸಿದ್ದಾರೆ.

    ಈ ವಿಚಾರವಾಗಿ ಆರೋಪಿ ವಿರುದ್ಧ ಹರಿಯಾಣದ ಹಿಸ್ಸರ್‍ನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 376(2)(ಎನ್), 376(2), 354-ಅ(1), 313, 323, 506, ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ಸಂರಕ್ಷಿಸುವ(ಪೋಕ್ಸೋ) ಕಾಯಿದೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ತನಿಖೆ ವೇಳೆ ಸಂತ್ರಸ್ತೆ ತನ್ನ ತಂದೆ ಸರ್ಕಾರಿ ಅಧಿಕಾರಿಗಳು ಉಳಿದುಕೊಂಡಿರುವ ಕ್ವಾಟ್ರಸ್‍ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿಸಿದ್ದಾಳೆ. ತನ್ನ ತಂದೆ ಸುಮಾರು 7 ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದನು ಹಾಗೂ ಕೃತ್ಯವನ್ನು ವಿರೋಧಿಸಿದರೆ ಕೊಲ್ಲುವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ವಿಚಾರಣೆ ಸಂದರ್ಭದಲ್ಲಿ ಆತ ತನ್ನ ಇನ್ನೋರ್ವ 11 ವರ್ಷದ ಮಗಳಿಗೂ ಕಿರುಕುಳ ನೀಡುತ್ತಿದ್ದ ವಿಚಾರವೂ ಬೆಳಕಿಗೆ ಬಂದಿದೆ.