Tag: ಪಬ್ಲಿಕ್ ಟಿವಿ H.D Kumaraswamy

  • ಜಮೀರ್ ಮನೆ ಬಗ್ಗೆ ನಾನಂತೂ ದೂರು ಕೊಟ್ಟಿಲ್ಲ: ಹೆಚ್‍ಡಿಕೆ

    ಜಮೀರ್ ಮನೆ ಬಗ್ಗೆ ನಾನಂತೂ ದೂರು ಕೊಟ್ಟಿಲ್ಲ: ಹೆಚ್‍ಡಿಕೆ

    ರಾಮನಗರ: ಶಾಸಕ ಜಮೀರ್ ಅಹ್ಮದ್ ಖಾನ್‍ರವರು ನನ್ನ ರಾಜಕೀಯ ವಿರೋಧಿಗಳು ನನ್ನ ಬಗ್ಗೆ 3-4 ಕಂಪ್ಲೇಂಟ್ ನೀಡಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಜಮೀರ್ ಬಗ್ಗೆ ಯಾರು ದೂರು ನೀಡಿದ್ದಾರೆಂದು ಇಡಿ ಅವರೇ ಹೇಳಬೇಕು. ನಾನಂತೂ ಯಾರ ಬಗ್ಗೆ ಕೂಡ ದೂರು ನೀಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    Zameer Ahmed ED Raid

    ಬಿಡದಿಯಲ್ಲಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಮನೆ ಬಗ್ಗೆ ಯಾರು ದೂರು ನೀಡಿದ್ದಾರೆಂದು ನನಗೆ ಗೊತ್ತಿಲ್ಲ. ನಾನಂತೂ ಯಾರ ಬಗ್ಗೆ ಕೂಡ ದೂರು ನೀಡಿಲ್ಲ. ಯಾರು ದೂರು ಕೊಟ್ಟಿದ್ದಾರೋ ಅವರೇ ಸಮರ್ಥವಾಗಿ ಉತ್ತರ ಕೊಟ್ಟುಕೊಳ್ಳುತ್ತಾರೆ ಎಂದಿದ್ದಾರೆ.

    KDK reaction on Zameer Ahmed ED raid

    ಕೇಂದ್ರ ಸರ್ಕಾರಲ್ಲಿರುವಂತಹ ಕೆಲವು ಸಂಸ್ಥೆಗಳು, ಮೂಗರ್ಜಿಗಳನ್ನು ಬರೆದು, ಈ ರೀತಿಯ ಸಂದರ್ಭದಲ್ಲಿ ತನಿಖೆ ಮಾಡಿಕೊಂಡು ಬಂದಿರುವಂತದ್ದು, ಆಗಿನಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಮೇಲೂ ಹಲವಾರು ಬಾರಿ ತನಿಖೆಯಾಗಿಲ್ವಾ, ಇದೇ ಜಮೀನಿನ ಮೇಲೆ 25 ವರ್ಷ, 30 ವರ್ಷ ನಮಗೆಷ್ಟು ಕಾಟ ನೀಡಿದ್ದಾರೆಂಬುದು ನಮಗೆ ಮಾತ್ರ ಗೊತ್ತು ಎಂದು ಕಿಡಿಕಾರಿದ್ದಾರೆ.

    ರಾಜಕೀಯದಲ್ಲಿ ಇರುವಾಗ ಹಲವಾರು ರೀತಿಯ ರಾಜಕೀಯ ತೊಂದರೆಗಳನ್ನು ನಾವು ಅನುಭವಿಸಲೇ ಬೇಕು. ಆದರೆ ನಾವು ಸರಿಯಾಗಿದ್ದರೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಜಮೀರ್, ಬೇಗ್ ಮನೆಗೆ ಇಡಿ ದಾಳಿ- ಸಿದ್ದರಾಮಯ್ಯನವ್ರೇ ಇದರ ಪಲಾನುಭವಿಯಂತೆ!

  • ಜನರು ಸಂಕಷ್ಟದಲ್ಲಿರುವಾಗ ಬಿಜೆಪಿಯ ಈ ಗೊಂದಲ ಸರಿಯಲ್ಲ: ಹೆಚ್‍ಡಿಕೆ

    ಜನರು ಸಂಕಷ್ಟದಲ್ಲಿರುವಾಗ ಬಿಜೆಪಿಯ ಈ ಗೊಂದಲ ಸರಿಯಲ್ಲ: ಹೆಚ್‍ಡಿಕೆ

    ಮಂಡ್ಯ: ಬಿಜೆಪಿಯಲ್ಲಿ ಕಳೆದ ಎರಡು ವರ್ಷಗಳಿಂದಲೂ ಸಿಎಂ ಬದಲಾವಣೆ ವಿಚಾರ ಕೇಳಿ ಬರುತ್ತಿದೆ. ಸದ್ಯ ರಾಜ್ಯದಲ್ಲಿ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇಂತಹ ಸ್ಥಿತಿಯಲ್ಲಿ ಈ ರೀತಿಯ ವಾತಾವರಣ ನಿರ್ಮಾಣ ಮಾಡಿ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‍ಡಿಕೆ, ಬಿಜೆಪಿಯಲ್ಲಿ ಎರಡು ವರ್ಷಗಳಿಂದಲೂ ಸಿಎಂ ಬದಲಾವಣೆ ವಿಚಾರ ನಡೆಯುತ್ತಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆಯೇ ಹೊರತು, ಅಭಿವೃದ್ಧಿ ಕೆಲಸಗಳು ಆಗುವುದಿಲ್ಲ. ಆದಷ್ಟು ಬೇಗ ಈ ಗೊಂದಲಗಳನ್ನು ಬಗೆಹರಿಸಿಕೊಂಡು ಉತ್ತಮ ಆಡಳಿತ ನೀಡಬೇಕೆಂದು ಬಿಜೆಪಿ ಹೈಕಮಾಂಡ್‍ಗೆ ಸಲಹೆ ನೀಡಿದ್ದಾರೆ.

    ಯಡಿಯೂರಪ್ಪ ರಾಜೀನಾಮೆ ಕೊಡುವ ವಿಚಾರ ನನಗೆ ಸಂಬಂಧಿಸಿದ ವಿಷಯ ಅಲ್ಲ, ಅದು ಬಿಜೆಪಿಯ ಆಂತರಿಕ ವಿಚಾರವಾಗಿದೆ. ಅವರ ಪಕ್ಷದ ನಿರ್ಧಾರದಲ್ಲಿ ನಾನು ಮೂಗು ತೂರಿಸುವುದು ಕ್ಷೋಭೆ ತರುವುದಿಲ್ಲ. ಬಿಎಸ್‍ವೈಗೆ ಮಠಾಧೀಶರ ಬೆಂಬಲ ವಿಚಾರದ ಬಗ್ಗೆ ನಾನು ಏನು ಮಹತ್ವ ಕೊಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಭಾವನೆ ಇದೆ. ಹೀಗಾಗಿ ಅವರುಗಳು ಅವರ ಭಾವನೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಮಠಾಧೀಶರ ಲಾಬಿಯಿಂದ ಯಡಿಯೂರಪ್ಪ ಬೆಳೆದಿಲ್ಲ: ಬಿ.ವೈ ರಾಘವೇಂದ್ರ

  • ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    ಯಾವ ಕಾರಣಕ್ಕೆ ಕೇಸ್ ಹಿಂಪಡೆದಿದ್ದಾರೆಂದು ಗೊತ್ತಿಲ್ಲ : ಹೆಚ್‍ಡಿಕೆ

    – ನಿನ್ನೆ, ಮೊನ್ನೆ ನಡೆದಿದ್ದೇನು ಅನ್ನೋದು ಗೊತ್ತಾಗಬೇಕು

    ಕೋಲಾರ: ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಸಿಡಿ ಕೇಸ್ ವಾಪಸ್ ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕೆ ಕೇಸ್ ವಾಪಸ್ಸು ಪಡೆದುಕೊಂದ್ದಾರೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೆ ಕೇಸ್ ಹಾಕಿದ್ದಾರೆಂದು ಕೂಡ ಗೊತ್ತಿಲ್ಲ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸರ್ಕಾರವೇ ಈ ಪ್ರಕರಣದಲ್ಲಿ ಸುಮೋಟೋ ಕೇಸ್ ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರವಾದ ಘಟನೆಗಳು ನಡೆಯುತ್ತಿವೆ. ಸರ್ಕಾರ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜನತೆಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.

    ಕೇಸ್ ವಾಪಸ್ಸು ತೆಗೆದುಕೊಳ್ಳುವುದಕ್ಕೆ ಯಾರು ಪ್ರೇರಣೆ ಮಾಡಿದರು, ನಿನ್ನೆ ಮೊನ್ನೆ ರಾತ್ರಿ ಏನೇನು ನಡೆದಿದೆ. ಅದಲ್ಲೆವನ್ನು ತಿಳಿದುಕೊಳ್ಳಬೇಕು. ಇಲ್ಲಿಯವರೆಗೂ ಸಂತ್ರಸ್ಥ ಮಹಿಳೆ ಅನ್ಯಾಯವಾಗಿದೆ ಎಂದು ಯಾವತ್ತು ಹೊರಗಡೆ ಬಂದಿಲ್ಲ. ಯಾವ ಕಾರಣಕ್ಕೆ ಈ ಪ್ರಕರಣ ಹೊರ ಬಂದಿದೆ, ಇದರ ಸತ್ಯಾಂಶತೆ ಕುರಿತು ಜನರ ಮುಂದಿಡಬೇಕು ಎಂದು ಹೇಳಿದರು.

    ಇದೇ ವೇಳೆ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಯೋಗೇಶ್ವರ್ ಗ್ರಾಫಿಕ್ಸ್ ನಲ್ಲಿ ಎಕ್ಸ್‍ಪರ್ಟ್ ಇದ್ದಾರೆ, ಅವರಿಗೆ ಅನುಭವ ಇರುವುದರಿಂದ ಈ ಹೇಳಿಕೆ ಕೊಟ್ಟಿದ್ದಾರೆ. ಇದಕ್ಕೆ ನನ್ನ ಉತ್ತರ ಅನವಶ್ಯಕ ಎಂದು ಮಾತಿನ ಚಾಟಿ ಬೀಸಿದರು.