Tag: ಪಬ್ಲಿಕ್ ಟಿವಿ Gujarat

  • ಮೊಸಳೆ ಜೊತೆ ಕುಳಿತು ವ್ಯಕ್ತಿ ಮಾತುಕತೆ – ವಿಚಿತ್ರ ದೃಶ್ಯ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

    ಮೊಸಳೆ ಜೊತೆ ಕುಳಿತು ವ್ಯಕ್ತಿ ಮಾತುಕತೆ – ವಿಚಿತ್ರ ದೃಶ್ಯ ನೋಡಿ ಬೆಚ್ಚಿ ಬಿದ್ದ ಸ್ಥಳೀಯರು

    ಗಾಂಧಿನಗರ: ಮೊಸಳೆ ಅಂದರೆ ಯಾರಿಗೆ ತಾನೇ ಭಯ ಇಲ್ಲ. ಮೊಸಳೆ ಹತ್ತಿರ ಹೋಗುವುದಕ್ಕೂ ಜನ ಹೆದರಿಕೊಳ್ಳುತ್ತಾರೆ. ಒಂದು ಬಾರಿ ಮೊಸಳೆ ಬಾಯಿಗೆ ಸಿಕ್ಕರೆ ಮತ್ತೆ ಮನುಷ್ಯ ಉಳಿಯುವುದೇ ಕಷ್ಟ. ಅಂತಹ ಭಯಾನಕ ಮೊಸಳೆಯೊಂದಿಗೆ ವ್ಯಕ್ತಿಯೊಬ್ಬ ಕುಳಿತು ಸ್ನೇಹದಿಂದ ಮಾತನಾಡುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನದಿ ಬಳಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಜೀವವನ್ನು ಲೆಕ್ಕಿಸದೇ ಮೊಸಳೆಗೆ ನಮಸ್ಕಾರ ಮಾಡಿ, ಅದನ್ನು ಮುಟ್ಟಿ ಅದರ ಜೊತೆ ತಾಳ್ಮೆಯಿಂದ ಮಾತನಾಡಿದ್ದಾನೆ. ಮೊಸಳೆ ಬಾಯಿಗೆ ಆತ ಆಹಾರವಾದರೆ ಎಂಬ ಆತಂಕದಿಂದ ಅಲ್ಲಿಂದ್ದ ಜನ ಆತನನ್ನು ಎದ್ದು ಹಿಂದಕ್ಕೆ ಬರುವಂತೆ ಕೂಗುತ್ತಿರುವುದು ವೀಡಿಯೋನಲ್ಲಿ ಕಂಡು ಬಂದಿದೆ.

    ವೀಡಿಯೋದಲ್ಲಿರುವ ವ್ಯಕ್ತಿಯನ್ನು ಪಂಕಜ್ ಎಂದು ಗುರುತಿಸಲಾಗಿದ್ದು, ಗುಜರಾತ್‍ನ ವಡೋದರ ಮೂಲದವನಾಗಿದ್ದಾನೆ. ವೀಡಿಯೋನಲ್ಲಿ ಮೊಸಳೆ ಮೇಲೆ ತನ್ನ ಕೈಗಳಿಂದ ಸವರುತ್ತಾ ಅದನ್ನು ತನ್ನ ತಾಯಿ ಎಂದು ಕರೆಯುವ ಮೂಲಕ ನಮಸ್ಕರಿಸಿ ಯಾರಾದರೂ ನಿಮ್ಮನ್ನು ಕಲ್ಲಿನಿಂದ ಹೊಡೆದರೆ ನಿಮ್ಮ ಮಗ(ತನ್ನನ್ನು ಉಲ್ಲೇಖಿಸಿ) ಅವರನ್ನು ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ ಎಂದು ಹೇಳಿಕೊಂಡಿದ್ದಾನೆ.

    ಈ ವೇಳೆ ಸ್ಥಳೀಯರು ಆತನನ್ನು ಎಷ್ಟೇ ಕರೆದರೂ ಬರದೇ ಕೊನೆಗೆ ಸ್ವಲ್ಪ ಸಮಯದ ನಂತರ ಅಲ್ಲಿಂದ ಎದ್ದು ಹಿಂದಕ್ಕೆ ಬಂದಿದ್ದಾನೆ. ಸದ್ಯ ಮೊಸಳೆಯಿಂದ ಆತನಿಗೆ ಯಾವುದೇ ಅಪಾಯವಾಗಲಿಲ್ಲ ಎಂದು ಅಲ್ಲಿದ್ದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

  • ಲಾಕರ್ ನಲ್ಲಿದ್ದ ಹಣ ತಿಂದ ಗೆದ್ದಲು – ಬ್ಯಾಂಕ್ ಆಫ್ ಬರೋಡಾ ಪ್ರತಿಕ್ರಿಯೆ

    ಲಾಕರ್ ನಲ್ಲಿದ್ದ ಹಣ ತಿಂದ ಗೆದ್ದಲು – ಬ್ಯಾಂಕ್ ಆಫ್ ಬರೋಡಾ ಪ್ರತಿಕ್ರಿಯೆ

    ಗಾಂಧಿನಗರ: ಗುಜರಾತಿನ ವಡೋದರ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ ವ್ಯಕ್ತಿಯೊಬ್ಬ ಇಟ್ಟಿದ್ದ 2 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದ ಘಟನೆ ಸಂಬಂಧಿಸಿದಂತೆ ಇದೀಗ ಬ್ಯಾಂಕ್ ಆಫ್ ಬರೋಡಾ ಅಧಿಕೃತವಾಗಿ ಹೇಳಿಕೆ ನೀಡಿದೆ.

    ವಡೋದರಾದ ಪ್ರತಾಪ್ ನಗರ ಶಾಖೆಯ ನಮ್ಮ ಬ್ಯಾಂಕಿನಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಒಂದಷ್ಟು ಗ್ರಾಹಕರ ಹಣವನ್ನು ಗೆದ್ದಲುಗಳು ತಿಂದು ಹಾಕಿದ್ದವು. ಈ ಕುರಿತಂತೆ ನಮ್ಮ ಬ್ಯಾಂಕ್ ಆಫ್ ಬರೋಡಾ ಆದಷ್ಟು ಶೀಘ್ರ ಪರಿಸ್ಥಿಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತದೆ ಎಂದು ತಿಳಿಸಿದೆ.

    ಅಲ್ಲದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡುಕೊಳ್ಳುತ್ತೇವೆ. ನಾವು ಗ್ರಾಹಕರ ದೂರನ್ನು ಪರಿಗಣಿಸಿದ್ದು, ಸಾಧ್ಯವಾದಷ್ಟು ಬೇಗ ಅವರ ಬೇಡಿಕೆಗಳನ್ನ ಪೂರೈಸುತ್ತೇವೆ. ಈ ವಿಚಾರವಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.

    ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬ ವ್ಯಕ್ತಿ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾ ಲಾಕರ್ ನಲ್ಲಿ ಇಟ್ಟಿದ್ದ 2.20 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದು ಹಾಕಿತ್ತು. ಈ ವಿಚಾರವಾಗಿ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥನ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿ ಹಣವನ್ನು ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದರು.

  • ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಬ್ಯಾಂಕ್ ಲಾಕರ್‌ನಲ್ಲಿದ್ದ 2.20 ಲಕ್ಷ ಹಣವನ್ನು ತಿಂದು ತೇಗಿದ ಗೆದ್ದಲು ಹುಳ

    ಗಾಂಧಿನಗರ: ಬ್ಯಾಂಕ್ ಲಾಕರ್‌ನಲ್ಲಿಟ್ಟ  2 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ.

    ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬವರು ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ 2.20 ಲಕ್ಷ ರೂ ಹಣ ಇಟ್ಟಿದ್ದರು. ಆದರೆ ಬ್ಯಾಂಕ್ ಲಾಕರ್ ನಂ 252ರಲ್ಲಿ ಇದ್ದ ಹಣದ ಕಂತೆಗಳನ್ನು ಗೆದ್ದಲು ಹುಳುಗಳು ತಿಂದು ಹಾಕಿದೆ.

    ಈ ವಿಚಾರವಾಗಿ ರೆಹನಾ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಳೆದುಕೊಂಡಿರುವ ಅಷ್ಟು ಹಣವನ್ನು ಬ್ಯಾಂಕ್ ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದಾರೆ.