Tag: ಪಬ್ಲಿಕ್ ಟಿವಿ Groom

  • ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ಲಕ್ನೋ: ಮದುವೆ ಸಮಾರಂಭದ ವೇದಿಕೆ ಮೇಲೆಯೇ ವರನಿಗೆ ತಾಯಿ ಚಪ್ಪಲಿಯಲ್ಲಿ ಹೊಡೆದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

    ಈ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯ ಭರೂವಾ ಸುಮೇರ್‍ಪುರ ಗ್ರಾಮದಲ್ಲಿ ನಡೆದಿದ್ದು, ವಧು ಹಾಗೂ ವರ ಇಬ್ಬರು ಹಾರ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದಕ್ಕಿದಂತೆ ಮೆಟ್ಟಿಲುಗಳನ್ನು ಹತ್ತಿ ವೇದಿಕೆ ಮೇಲೆ ಬಂದ ವರನ ತಮ್ಮ ಚಪ್ಪಲಿಯನ್ನು ಕಾಲಿನಿಂದ ಬಿಚ್ಚಿ ವರನಿಗೆ ಹೊಡೆಯಲು ಆರಂಭಿಸುತ್ತಾರೆ.

    ಈ ದೃಶ್ಯವನ್ನು ಕಂಡು ಸಮಾರಂಭಕ್ಕೆ ಆಗಮಿಸಿದ್ದ ಅಥಿತಿಗಳಿಗೆ ಆಶ್ಚರ್ಯವಾಗಿದೆ. ನಂತರ ಮಗನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಅಸಮಾಧಾನಗೊಂಡ ತಾಯಿ ವರ ಉಮೇಶ್ ಚಂದ್ರರಿಗೆ ಹೊಡೆದಿದ್ದಾರೆ ಎಂಬ ಅಸಲಿ ಸತ್ಯ ಬಹಿರಂಗಗೊಂಡಿದೆ.

    ಕುಟುಂಬಸ್ಥರ ವಿರೋಧದ ನಡುವೆ ಉಮೇಶ್ ಚಂದ್ರರವರು ಅಂಕಿತಾ ಎಂಬವರನ್ನು ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ವಿವಾಹದ ನಂತರ ವಧುವಿನ ತಂದೆ ಜುಲೈ 3 ರಂದು ಜಿಲ್ಲಾ ಸಭಾಂಗಣವೊಂದರಲ್ಲಿ ಸಣ್ಣದಾಗಿ ಫಂಕ್ಷನ್ ಮಾಡಲು ನಿರ್ಧರಿಸಿದ್ದರು. ಆದರೆ ಸಮಾರಂಭಕ್ಕೆ ವರನ ಕುಟುಂಬ ಮತ್ತು ಅವರ ಸಹೋದರರನ್ನು ಆಹ್ವಾನಿಸಿದ ಕಾರಣ ಆಕ್ರೋಶಗೊಂಡು ವರನ ತಾಯಿ ಸ್ಥಳಕ್ಕೆ ಆಗಮಿಸಿ ಮಗನಿಗೆ ಎಲ್ಲರ ಸಮ್ಮುಖ ವೇದಿಯಲ್ಲಿಯೇ ಚಪ್ಪಲಿ ಮೂಲಕ ಹೊಡೆದಿದ್ದಾರೆ.

    https://youtu.be/AWL9p72roF4

  • ಮಂಟಪಕ್ಕೆ ಕುಡಿದು ಬಂದ ವರ – ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

    ಮಂಟಪಕ್ಕೆ ಕುಡಿದು ಬಂದ ವರ – ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

    ಲಕ್ನೋ: ವರ ಮತ್ತು ಆತನ ಸ್ನೇಹಿತ ಮದುವೆ ಮಂಟಪಕ್ಕೆ ಕುಡಿದು ಬಂದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವಧು ಮದುವೆಯನ್ನು ನಿಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜನ್‍ನಲ್ಲಿ ನಡೆದಿದೆ.

    ಪ್ರಯಾಗರಾಜ್‍ನ ಪ್ರತಾಪಗಢ ನಗರದ ಟಿಕ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ರೈತರೊಬ್ಬರು ತಮ್ಮ ಮಗಳ ಮದುವೆಯನ್ನು ರವೀಂದ್ರ ಪಟೇಲ್ ಎಂಬವರ ಜೊತೆ ನಿಗದಿ ಪಡಿಸಿದ್ದರು. ಆದರೆ ಮದುವೆ ದಿನ ವರ ಮತ್ತು ಆತನ ಸ್ನೇಹಿತರು ಕುಡಿದು ಮಂಟಪಕ್ಕೆ ಬಂದರು. ಈ ವೇಳೆ ವಧು ಹಾಗೂ ಆಕೆಯ ಕುಟುಂಬಸ್ಥರು ಮೊದಲಿಗೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ವರ ವಧುವನ್ನು ಜೈಮಾಲಾ ಹಾಡಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದಾಗ ಪರಿಸ್ಥಿತಿ ತಿರುವು ಪಡೆದುಕೊಂಡಿದೆ.

    ನಂತರ ಮಹಿಳೆ ನೃತ್ಯ ಮಾಡಲು ನಿರಾಕರಿಸಿ ವರನ ನಡವಳಿಕೆಯಿಂದ ಆಕ್ರೋಶಗೊಂಡು ಮದುವೆಯನ್ನು ನಿಲ್ಲಿಸಿದ್ದಾಳೆ. ವಧು ಮದುವೆಯನ್ನು ನಿರಾಕರಿಸಿದ ನಂತರ ಆಕೆಯ ಕುಟುಂಬಸ್ಥರು ಮದುವೆ ವೇಳೆ ವರನಿಗೆ ನೀಡಿದ್ದ ಉಡುಗೊರೆಯನ್ನು ಹಿಂದಿರುಗಿಸುವಂತೆ ವರನ ಕುಟುಂಬಸ್ಥರನ್ನು ಕೇಳಿದ್ದಾರೆ.  ಇದನ್ನು ಓದಿ: ಪಾಕಿಸ್ತಾನ ಸ್ಟಾರ್ ಕ್ರಿಕೆಟಿಗನ ಪತ್ನಿಗೆ ಕೊಹ್ಲಿ ಎಂದರೆ ಪಂಚಪ್ರಾಣವಂತೆ

    ಹೀಗಾಗಿ ವರನ ಕುಟುಂಬಸ್ಥರು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಸಂಧಾನ ಮಾಡಿಕೊಳ್ಳವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ ನಂತರ ಮಹಿಳೆ ವರನನ್ನು ಮದುವೆಯಾಗಲು ನಿರಾಕರಿಸಿರುವುದಾಗಿ ತಿಳಿಸಿದ್ದಾಳೆ. ಅಲ್ಲದೆ ಮದುವೆ ವೇಳೆ ವರನಿಗೆ ನೀಡಿದ್ದ ನಗದು ಹಾಗೂ ಇತರ ವಸ್ತುಗಳನ್ನು ಹಿಂದಿರುಗಿಸುವಂತೆ ವಧುವಿನ ಕಡೆಯವರು ತಿಳಿಸಿದ್ದಾರೆ.

  • ಖಾಲಿ ರೋಡಿನ ಮಧ್ಯೆ ಕುದುರೆ ಏರಿ ಹೊರಟ ವರ

    ಖಾಲಿ ರೋಡಿನ ಮಧ್ಯೆ ಕುದುರೆ ಏರಿ ಹೊರಟ ವರ

    ಪ್ರತಿಯೊಬ್ಬರು ತಮ್ಮ ಕುಟುಂಬ ಹಾಗೂ ಪ್ರೀತಿಪಾತ್ರದವರ ಸಮ್ಮುಖದಲ್ಲಿ ಮದುವೆಯಾಗಬೇಕೆಂಬ ಕನಸು ಹೊಂದಿರುತ್ತಾರೆ. ಆದರೆ ಕೊರೊನಾ ವೈರಸ್ ಗ್ರಾಂಡ್ ಆಗಿ ಮದುವೆ ಆಗಬೇಕೆಂದುಕೊಂಡಿದ್ದ ಅದೆಷ್ಟೂ ಜೋಡಿಗಳ ಆಸೆಗೆ ತಣ್ಣಿರೆರಚಿದೆ ಎಂದೇ ಹೇಳಬಹುದು.

    ಅದರಲ್ಲಿಯೂ ಕೋವಿಡ್-19 ಎರಡನೇ ಅಲೆಯಿಂದ ಸರ್ಕಾರವು ಹಲವಾರು ಹೊಸ ನಿರ್ಬಂಧಗಳನ್ನು ಜಾರಿಗೆ ತಂದಿದೆ. ಮದುವೆಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಂದಿ ಮಾತ್ರ ಪಾಲ್ಗೊಳ್ಳಬೇಕೆಂದು ಸೂಚಿಸಿದೆ. ಕೊರೊನಾ ವೈರಸ್‍ನಿಂದಾಗಿ ಅದ್ದೂರಿಯಾಗಿ ಮದುವೆಯಾಗಬೇಕೆಂದುಕೊಂಡಿದ್ದ ಹಲವು ಜೋಡಿಗಳು ಆಸೆ ಇದೀಗ ನುಚ್ಚುನೂರಾಗಿದೆ. ಆದರೂ ನೈಟ್ ಕಫ್ರ್ಯೂ ಲಾಕ್‍ಡೌನ್ ನಿರ್ಬಂಧಗಳ ಮಧ್ಯೆ ಬ್ಯಾಂಡ್ ಬಾಜಾ ಬರಾತ್ ಜೊತೆಗೆ ಮದುವೆಯನ್ನು ಅತ್ಯಂತ ದುಃಖಕರವಾಗಿ ಕೆಲವರು ಆಚರಿಸಿಕೊಂಡಿದ್ದಾರೆ.

    ಹೌದು, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, 27 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ನೈಟ್ ಕಫ್ರ್ಯೂನಿಂದಾಗಿ ರಸ್ತೆ ಪೂರ್ತಿ ಖಾಲಿಯಾಗಿರುತ್ತದೆ. ಈ ವೇಳೆ ವರನು ಕುದುರೆ ಮೇಲೆ ಕುಳಿತುಕೊಂಡು ಬರುತ್ತಿದ್ದರೆ, ಕೇವಲ 3 ಮಂದಿ ಬ್ಯಾಂಡ್ ಬಾರಿಸುತ್ತಾ ವರನ ಜೊತೆಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.

    ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದು ಎಲ್ಲಿಯದ್ದು ಎನ್ನುವುದು ದೃಢಪಟ್ಟಿಲ್ಲ.

  • ಮದುವೆ ವೇಳೆ ವಧು ಪಕ್ಕ ಶಾರ್ಟ್ಸ್ ಧರಿಸಿ ಕುಳಿತ ವರ

    ಮದುವೆ ವೇಳೆ ವಧು ಪಕ್ಕ ಶಾರ್ಟ್ಸ್ ಧರಿಸಿ ಕುಳಿತ ವರ

    ಜಕಾರ್ತಾ: ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುದು ಬಹಳ ಮುಖ್ಯ. ಎಲ್ಲರೂ ಅವರ ಮದುವೆಯ ವಿಶೇಷ ದಿನದಂದು ಬಹಳ ಸುಂದರವಾಗಿ ಕಾಣಿಸಲು ಇಷ್ಟಪಡುತ್ತಾರೆ ಮತ್ತು ತಾವು ಧರಿಸುವ ಬಟ್ಟೆ ಎಲ್ಲರಿಗಿಂತಲೂ ಕಂಗೋಳಿಸಬೇಕೆಂದು ಇಚ್ಛಿಸುತ್ತಾರೆ.

    ಅಲ್ಲದೆ ಮದುವೆಯ ದಿನ ಆಪ್ತರು, ಕುಟುಂಬಸ್ಥರು ಮತ್ತು ದೂರದ ಸಂಬಂಧಿಗಳು ಎಲ್ಲರ ಗಮನವನ್ನು ವಧುವರರು ತಮ್ಮ ಡ್ರೆಸ್ ಮೂಲಕವೇ ಸೆಳೆಯುತ್ತಾರೆ. ಆದರೆ ಇಂಡೋನೇಷ್ಯಾದ ನವ ದಂಪತಿಯೊಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇತ್ತೀಚೆಗೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆಶ್ಚರ್ಯವೆಂದರೆ ಈ ಫೋಟೋದಲ್ಲಿ ವರ ಶಾರ್ಟ್ಸ್ ಹೊರತುಪಡಿಸಿ ಬೇರೆ ಯಾವುದನ್ನು ಧರಿಸದೇ ವಧುವಿನ ಪಕ್ಕ ಕುಳಿತುಕೊಂಡಿದ್ದಾನೆ.

    ಹೌದು ಮದುವೆಯೊಂದರಲ್ಲಿ ವಧು ಸಂಪ್ರಾದಾಯಿಕ ಉಡುಗೆ ತೊಟ್ಟು ಕುಳಿತುಕೊಂಡರೆ, ವರ ಮೊಣಕಾಲು ಪ್ಲಾಸ್ಟರ್ ಅಂಟಿಸಿಕೊಂಡು, ತೋಳಿಗೆ ಬ್ಯಾಂಡೇಜ್ ಸುತ್ತಿಕೊಂಡು ಕುಳಿತುಕೊಂಡಿರುತ್ತಾನೆ. ಈ ಫೋಟೋವನ್ನು ದಂಪತಿ ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ವಧು, ನನ್ನ ಪತಿ ಪೆಟ್ರೋಲ್ ತರಲು ಹೋಗಿದ್ದು ದಾರಿಯಲ್ಲಿ ಬರುವಾಗ ಇದ್ದಕ್ಕಿದಂತೆ ಪ್ರಜ್ಞೆ ತಪ್ಪಿ ಮೋಟಾರ್ ಸೈಕಲ್‍ನಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಅಲ್ಲದೆ ಹಲವು ಕಡೆ ಗಾಯಗೊಂಡಿದ್ದಾರೆ. ಹೀಗಾಗಿ ಮದುವೆಯ ಸಮಯದಲ್ಲಿ ಅವರು ಉಡುಪನ್ನು ಧರಿಸಲು ಆಗಲಿಲ್ಲ ಎಂದು ತಿಳಿಸಿದ್ದಾರೆ.

    ಸದ್ಯ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ 3000ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದ್ದು, ನೂರಾರು ಕಮೆಂಟ್‍ಗಳ ಸುರಿ ಮಳೆ ಹರಿದುಬರುತ್ತಿದೆ.