Tag: ಪಬ್ಲಿಕ್ ಟಿವಿ Grandson

  • ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ಹೈದರಾಬಾದ್: ಅಂತ್ಯಕ್ರಿಯೆ ನಡೆಸಲು ಹಣವಿಲ್ಲದೇ ವ್ಯಕ್ತಿಯೊಬ್ಬರು ತಮ್ಮ 93 ವರ್ಷದ ತಾತನ ದೇಹವನ್ನು ಫ್ರಿಡ್ಜ್ ಒಳಗೆ ಅಡವಿಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ನೆರೆಹೊರೆಯವರು ದುರ್ವಾಸನೆ ಕುರಿತಂತೆ ಪೊಲೀಸರಿಗೆ ದೂರು ನೀಡಿದ ಬಳಿಕ ಪೊಲೀಸರು ವಾರಂಗಲ್‍ನ ಪರ್ಕಳದಲ್ಲಿರುವ ಮನೆಯನ್ನು ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ರೆಫ್ರಿಜರೇಟರ್ ಒಳಗೆ ಕೊಳೆತ ದೇಹವೊಂದು ಪತ್ತೆಯಾಗಿದೆ. ನಿವೃತ್ತ ವ್ಯಕ್ತಿ ಹಾಗೂ ಆತನ ಮೊಮ್ಮಗ ನಿಖಿಲ್ ಬಾಡಿಗೆಗೆ ಈ ಮನೆಯಲ್ಲಿ ವಾಸವಾಗಿದ್ದು, ವೃದ್ಧನಿಗೆ ಬರುವ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಈ ಕುರಿತಂತೆ ನಿಖಿಲ್(23) ಇತ್ತೀಚೆಗಷ್ಟೆ ನನ್ನ ತಾತ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆದರೆ 3 ದಿನಗಳ ಹಿಂದೆ ಸಾವನ್ನಪ್ಪಿದ್ದಾರೆ. ಅವರು ನಿಧನರಾದ ಬಳಿಕ ಅಂತಿಮ ವಿಧಿವಿಧಾನ ನಡೆಸಲು ಹಣವಿಲ್ಲದ ಕಾರಣ, ಒಂದು ಬೆಡ್‍ಶೀಟ್‍ನಲ್ಲಿ ಮೊದಲು ತಾತನ ದೇಹವನ್ನು ಸುತ್ತಿ ನಂತರ ರೆಫ್ರಿಜರೇಟರ್‍ನಲ್ಲಿ ಇಟ್ಟಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಸದ್ಯ ಪೊಲೀಸರಿಗೆ ನಿಖಿಲ್ ತನ್ನ ತಾತನ ಪಿಂಚಣಿ ಹಣಕ್ಕಾಗಿ ದೇಹವನ್ನು ಬಚ್ಚಿಟ್ಟಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ತಾನು ನಿರ್ಮಿಸಿದ ಹೆಲಿಕಾಪ್ಟರ್‌ನಿಂದಲೇ ಯುವಕನಿಗೆ ಕಾದಿತ್ತು ಆಪತ್ತು

  • ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು – ಮೊಮ್ಮಗನ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಅಜ್ಜಿ

    ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು – ಮೊಮ್ಮಗನ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ಅಜ್ಜಿ

    ಮಡಿಕೇರಿ: ನಾಪತ್ತೆಯಾಗಿದ್ದ ಮೊಮ್ಮಗ ಶವವಾಗಿದ್ದಾನೆ ಎನ್ನುವ ಸುದ್ದಿ ತಿಳಿದು ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಲ್ಲಿ ನಡೆದಿದೆ.

    ತನ್ನ ಸ್ನೇಹಿತರೊಂದಿಗೆ ನಿನ್ನೆ ಆಟವಾಡಲೆಂದು ತೆರಳಿದ್ದ ವಿದ್ಯಾರ್ಥಿ ಮುಬಾಷೀರ್ (18) ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಸ್ನೇಹಿತರೊಂದಿಗೆ ಪ್ರಶ್ನಿಸಿದಾಗ ಸುಂಟಿಕೊಪ್ಪ ಸಮೀಪ ಹೊಸತೋಟದ ಹಾರಂಗಿ ಹಿನ್ನೀರಿನಲ್ಲಿ ಸ್ನಾನಕ್ಕೆಂದು ನೀರಿಗಿಳಿದ ಮುಬಶೀರ್ ಮತ್ತೆ ಮೇಲೆ ಬಾರದೆ ಇರುವುದನ್ನು ತಿಳಿಸಿದ್ದಾರೆ.

    ಮೊಮ್ಮಗ ನೀರು ಪಾಲಾದ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಅಜ್ಜಿ ರುಕಿಯಾ(62) ಕುಸಿದು ಬಿದ್ದು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ರಾತ್ರಿ ವೇಳೆ ಹಾರಂಗಿ ಹಿನ್ನೀರಿನಲ್ಲಿ ಮುಬಾಶೀರ್ ಮೃತದೇಹ ಹುಡುಕಾಡಲು ಸಾಧ್ಯವಾಗದ ಕಾರಣ ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭ ಮೃತದೇಹ ದೊರೆತಿದ್ದು, ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.