Tag: ಪಬ್ಲಿಕ್ ಟಿವಿ Girl

  • ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸ್ಥಳೀಯರಿಂದ ಗೂಸ

    ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ – ಆರೋಪಿಗೆ ಸ್ಥಳೀಯರಿಂದ ಗೂಸ

    ಚಿತ್ರದುರ್ಗ: ಅಪ್ರಾಪ್ತ ಬಾಲಕಿಗೆ ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ಸ್ಥಳೀಯರು ಭರ್ಜರಿ ಗೂಸ ಕೊಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶುಗರ್ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಿರುವ ಸಾಲು ಮನೆಗಳ ಬಳಿ ಬಾಡಿಗೆ ಮನೆಯಲ್ಲಿ ಕಳೆದ ಒಂದು ತಿಂಗಳಿಂದ ವಾಸವಾಗಿದ್ದ ತುಮಕೂರು ಜಿಲ್ಲೆ ಶಿರಾ ಮೂಲದ ತಿಪ್ಪಯ್ಯ(42) ಎಂಬ ಕಾಮುಕ 8 ವರ್ಷದ ಅಪ್ರಾಪ್ತ ಬಾಲಕಿಗೆ ಚಾಕ್ಲೇಟ್ ಆಮಿಷವೊಡ್ಡಿ ಕರೆದೊಯ್ದು, ಬಾಲಕಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಆಗ ಬಾಲಕಿ ಗಾಬರಿಗೊಂಡು ಜೋರಾಗಿ ಕಿರುಚಿದ್ದಾಳೆ. ಬಾಲಕಿ ಅಳುತ್ತಿರುವ ಶಬ್ಧ ಕೇಳಿದ ಅಲ್ಲಿನ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಮನೆಯಲ್ಲಿನ ಸ್ಥಿತಿ ಕಂಡು ತೀವ್ರ ಆಕ್ರೋಶಗೊಂಡಿರುವ ಸ್ಥಳೀಯರು ಆರೋಪಿ ತಿಪ್ಪಯ್ಯಗೆ ಭರ್ಜರಿ ಧರ್ಮದೇಟು ನೀಡಿದ್ದಾರೆ.  ಇದನ್ನೂ ಓದಿ :ಮಲೆನಾಡಲ್ಲಿ ಮಳೆಯಬ್ಬರ – ಸಿಡಿಲಿಗೆ ಗೃಹಪಯೋಗಿ ವಸ್ತುಗಳು ನಾಶ

    ಈ ವೇಳೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಮುಂದಾದ ಸಾರ್ವಜನಿಕರ ಪ್ರಯತ್ನ ಗಮನಿಸಿದ ಆರೋಪಿ ಅಲ್ಲಿಂದ ಅನಾರೋಗ್ಯದ ಡ್ರಾಮಾ ಮಾಡಿ ಎಸ್ಕೇಪ್ ಆಗಿದ್ದಾನೆ. ಇನ್ನು ಬಾಲಕಿಯ ಪೋಷಕರು ಸಹ ಮಾರ್ಯಾದೆಗೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕಿದ್ದು, ಆರೋಪಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಧರ್ಮದೇಟು ನೀಡಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.  ಇದನ್ನೂ ಓದಿ :ಯುವ ಪ್ರೇಮಿಗಳೇ ದರೊಡೆಕೋರರ ಟಾರ್ಗೆಟ್- ಪೊಲೀಸರ ಸೋಗಿನಲ್ಲಿ ದೋಚುತ್ತಿದ್ದ ಮೂವರ ಬಂಧನ

  • ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನಕ್ಕೆ ಛತ್ರಿ ಹಿಡಿದ ಬಾಲಕಿ – ವೀಡಿಯೋ ವೈರಲ್

    ಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ಪುಟ್ಟ ಬಾಲಕಿ ತನ್ನ ಛತ್ರಿಯ ಸಹಾಯದಿಂದ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    12 ಸೆಕೆಂಡುಗಳಿರುವ ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದ ಎಂಬವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಪುಟ್ಟ ಬಾಲಕಿ, ಮಳೆಯಲ್ಲಿ ನೆನೆಯುತ್ತಿದ್ದ ಶ್ವಾನವನ್ನು ತನ್ನ ಛತ್ರಿಯನ್ನು ಬಳಸಿ ರಕ್ಷಿಸುತ್ತಾಳೆ. ಅಲ್ಲದೇ ಶ್ವಾನ ಎಲ್ಲಿಯೇ ಹೋದರೂ ಅದನ್ನು ಹಿಂಬಾಲಿಸುತ್ತಾಳೆ. ಆದರೆ ಶ್ವಾನ ಮಾತ್ರ ಛತ್ರಿಯನ್ನು ನಿರಾಕರಿಸುವುದನ್ನು ನೋಡಬಹುದಾಗಿದೆ.

    ಈ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಬಾಲಕಿಯ ನಿಸ್ವಾರ್ಥ ಮನಸ್ಸಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ದಯೆಯೊಂದಿದ್ದರೆ ಬೇರೆಯವರಿಗೆ ಪ್ರತಿಯೊಬ್ಬರು ಸಣ್ಣಪುಟ್ಟ ಕೆಲಸವನ್ನು ಮಾಡುತ್ತಾರೆ. ಏಕೆಂದರೆ ನಿಮಗೆ ಅದನ್ನು ಮಾಡುವ ಶಕ್ತಿ ಇರುತ್ತದೆ’ ಎಂದು ಐಎಫ್‍ಎಸ್ ಅಧಿಕಾರಿ ವೀಡಿಯೋ ಜೊತೆಗೆ ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಮನ ಗೆದ್ದಿದ್ದು, ಲೈಕ್ಸ್‌ಗಳ ಸುರಿ ಮಳೆ ಬರುತ್ತಿದೆ. ಬಾಲಕಿ ಚಿನ್ನದಂತ ಮನಸ್ಸು ಹೊಂದಿದ್ದಾಳೆ, ಬಾಲಕಿ ಸಹಾಯ ಮಾಡುವ ಗುಣ ಹೊಂದಿದ್ದಾಳೆ. ಹೀಗೆ ಹಲವಾರು ಕಾಮೆಂಟ್‍ಗಳು ಹರಿದು ಬರುತ್ತಿದೆ.