Tag: ಪಬ್ಲಿಕ್ ಟಿವಿ Elephants

  • ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    ಒಂದು ಗಿಡ ಬಿಟ್ಟು ಇಡೀ ಬಾಳೆ ತೋಟ ನಾಶಗೊಳಿಸಿದ ಆನೆಗಳು

    – ಅಚ್ಚರಿಯ ವೀಡಿಯೋ ವೈರಲ್

    ಚೆನ್ನೈ: ಸಾಮಾನ್ಯವಾಗಿ ಆನೆಗಳನ್ನು ದೈತ್ಯ ಜೀವಿಗಳು ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳು ಮರಗಳನ್ನು ಉರುಳಿಸಬಹುದು ಮತ್ತು ಒಂದೇ ಬಾರಿಗೆ ಎಲ್ಲವನ್ನು ವಿನಾಶ ಮಾಡುತ್ತದೆ. ಇತರ ಪ್ರಾಣಿಗಳಿಗೆ ಹೋಲಿಸಿದರೆ ಆನೆಗಳಿಗೆ ಹೆಚ್ಚು ಬುದ್ಧಿ, ಸಮಯಪ್ರಜ್ಞೆ, ಹೃದಯವಂತಿಕೆ ಹೊಂದಿದೆ ಎಂದೇ ಹೇಳಬಹುದು.

    ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ತಮಿಳುನಾಡಿನ ಹಳ್ಳಿಯೊಂದರಲ್ಲಿ ಕಾಡು ಆನೆಗಳ ಗುಂಪು ಬಾಳೆ ತೋಟದ ಮೇಲೆ ದಾಳಿ ನಡೆಸಿ 300ಕ್ಕೂ ಅಧಿಕ ಬಾಳೆ ಗಿಡಗಳನ್ನು ನೆಲಕ್ಕುರುಳಿಸಿವೆ. ಇಡೀ ತೋಟವನ್ನು ಸಂಪೂರ್ಣ ನಾಶ ಪಡಿಸಿದ ಆನೆಗಳು ಅಲ್ಲಿಯೇ ಇದ್ದ ಪುಟ್ಟ ಪುಟ್ಟ ಪಕ್ಷಿಗಳ ಗೂಡಿನ ಮರವನ್ನು ಮಾತ್ರ ಹಾಗೆಯೇ ಬಿಟ್ಟು ಹೋಗಿದೆ. ಇದನ್ನು ನೋಡಿ ಗ್ರಾಮಸ್ಥರು ಬೆರಗಾಗಿದ್ದಾರೆ.

    ಈ ವೀಡಿಯೋವನ್ನು ಅರಣ್ಯ ಸೇವೆ(ಐಎಫ್‍ಎಸ್) ಅಧಿಕಾರಿ ಸುಸಂತಾ ನಂದಾರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಾಡು ಆನೆಗಳು ಬಾಳೆ ತೋಟವನ್ನು ನಾಶಪಡಿಸಿದ್ದು, ಪುಟ್ಟ ಪುಟ್ಟ ಪಕ್ಷಿಗಳ ಮರಿಗಳಿದ್ದ, ಹಕ್ಕಿಯ ಗೂಡಿಗೆ ಮಾತ್ರ ಯಾವುದೇ ಹಾನಿಗೊಳಿಸದಿರುವುದನ್ನು ಕಾಣಬಹುದಾಗಿದೆ.

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಮಂದಿ ವೀಕ್ಷಿಸಿದ್ದು, ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ.