Tag: ಪಬ್ಲಿಕ್ ಟಿವಿ DK Shivakumar

  • ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ

    ಈ ಸರ್ಕಾರದಲ್ಲಿ ಹೆಣ್ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳೂ ಸೇಫ್ ಅಲ್ಲ ಡಿಕೆಶಿ

    ಬೆಂಗಳೂರು: ಈ ಸರ್ಕಾರದಲ್ಲಿ ಹೆಣ್ಮಕ್ಕಳಾಗಲೀ, ಗಂಡು ಮಕ್ಕಳಾಗಲೀ ಸೇಫ್ ಅಲ್ಲ. ಇದಕ್ಕೆ ಮೈಸೂರು ಪ್ರಕರಣವೇ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ಗ್ಯಾಂಗ್ ರೇಪ್ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿ ನೋಡಿ ಪಾಪ ಗೃಹ ಸಚಿವರು ಹೊಸದಾಗಿ ಮಂತ್ರಿಯಾಗಿದ್ದಾರೆ. ಅವರ ಮೇಲೇನೆ ಮಾತನಾಡುವಂಥದ್ದಲ್ಲ. ಒಂದು ಸರ್ಕಾರ ಕಾರಣವಾಗುತ್ತದೆ. ಓರ್ವ ಗೃಹ ಸಚಿವ ಮಾತ್ರ ಅಲ್ಲ ಎಂದಿದ್ದಾರೆ. ಇದನ್ನೂ ಓದಿ:ಹೊರಗಡೆ ನಾಯಿಗಳಿದೆ ಎಂದು ಮಕ್ಕಳನ್ನು ಆಚೆ ಬಿಡದೇ ಇರಬೇಕೇ: ಎಚ್.ಕೆ.ಕುಮಾರಸ್ವಾಮಿ

    ನಾನು ಅವರ ಬಗ್ಗೆ ಕಾಮೆಂಟ್ ಮಾಡಲ್ಲ. ಆದ್ರೆ ಇದಕ್ಕೆ ಉತ್ತರ ಕೊಡಬೇಕಾಗಿರೋದು ಮುಖ್ಯಮಂತ್ರಿಗಳು. ಅವರ ಒಬ್ಬರದ್ದು ಏನಿದೆ, ಇಡೀ ಆಡಳಿತದ ಜವಾಬ್ದಾರಿ ಎಂದು ಗೃಹ ಸಚಿವರ ಮೇಲೆ ಸಾಫ್ಟ್ ಕಾರ್ನರ್ ತೋರಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ:ಸಿಟಿ ಮಾತ್ರವಲ್ಲ ಗ್ರಾಮೀಣ ಭಾಗದ ಹೆಣ್ಮಕ್ಕಳಿಗೂ ಆದ್ಯತೆ ಕೊಡಿ: ಗೌರಿ ಶಂಕರ್

  • ಹುತಾತ್ಮ ಸೋನಿಯಾ ಗಾಂಧಿ – ಭಾಷಣ ವೇಳೆ ಡಿಕೆಶಿ ಯಡವಟ್ಟು

    ಹುತಾತ್ಮ ಸೋನಿಯಾ ಗಾಂಧಿ – ಭಾಷಣ ವೇಳೆ ಡಿಕೆಶಿ ಯಡವಟ್ಟು

    ಬೆಂಗಳೂರು: ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭಾಷಣದ ವೇಳೆ ಎಡವಟ್ಟು ಮಾಡಿದ್ದಾರೆ.

    ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನಡೆಸಿ, ಕಾರ್ಯಕ್ರಮವನ್ನುದ್ದೇಶಿಸಿ ಕಾಂಗ್ರೆಸ್ ನಾಯಕರು ಮಾತನಾಡಿದ್ದಾರೆ. ಈ ವೇಳೆ ಡಿ.ಕೆ ಶಿವಕುಮಾರ್ ಭಾಷಣ ಮಾಡುವಾಗ, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಬಾಯಿತಪ್ಪಿ ಹೇಳಿ ನಂತರ ಸಾರಿ, ಸಾರಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ದಾರೆ.

    ಬಳಿಕ ದೇಶ ಕಟ್ಟಲು ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾತಂತ್ರ್ಯಕ್ಕಾಗಿ ಹಿರಿಯ ಹೋರಾಟ ಮಾಡಿದ್ದಾರೆ. ಆದರೆ ಈಗ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಾಗುತ್ತಿದ್ದು, ಇದರ ವಿರುದ್ಧ ಹೋರಾಡಬೇಕಾಗಿದೆ. ಜೊತೆಗೆ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಸಂಚು ನಡೆಸಿದ್ದಾರೆ. ಆದರೆ ಅಂತಹ ದೊಡ್ಡ ಮಹಾನೀಯರ ಹೆಸರನ್ನು ಬದಲಿಸಿದರೂ ಅವರು ಜನರ ಮನಸ್ಸಿನಲ್ಲಿ ಎಂದಿಗೂ ಚಿರಸ್ಥಾಯಿ ಎನ್ನುವುದನ್ನು ಮರೆಯಬಾರದು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

    ಈ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಮುಖಂಡರು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.  ಇದನ್ನೂ ಓದಿ:ಮೇಕೆದಾಟು, ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ: ಸಿಎಂ ಬೊಮ್ಮಾಯಿ

  • ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ : ಡಿಕೆ ಶಿವಕುಮಾರ್

    ಹಾಸನ: ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ, ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ವ್ಯಂಗ್ಯ ಮಾಡಿ ಕಿಡಿಕಾರಿದ್ದಾರೆ.

    ಹಾಸನದ ಶ್ರೀನಗರ ಬಡಾವಣೆಯಲ್ಲಿ ಪುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವಂತೆ ಸರ್ಕಾರ ತಿಳಿಸಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಅದು ಗೊತ್ತಾಗುವುದಿಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದೆ. ಅದರಂತೆ ಗೊತ್ತಿಲ್ಲದವರು ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಆನ್ ಲೈನ್ ರಿಜಿಸ್ಟ್ರೇಷನ್ ನಿಲ್ಲಿಸಿದೆ ಎಂದು ದೂರಿದರು.

    ಸರ್ಕಾರದ ಬಳಿ 18 ರಿಂದ 44 ವರ್ಷದವರೆಗೆ ಯುವಕರಿಗೆ ನೀಡಲು ಯಾವ ಲಸಿಕೆಯೂ ಇಲ್ಲ. ನಮ್ಮ ಉದ್ದೇಶ ವ್ಯಾಕ್ಸಿನೇಷನ್ ನೀಡಬೇಕು. ಜನರ ಜೀವ ಉಳಿಯಬೇಕು. ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇವೆ. ಲಸಿಕೆ ಕೊಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದೇವೆ. ಎಲ್ಲರಿಗೂ ವ್ಯಾಕ್ಸಿನೇಷನ್ ನೀಡಿ ಎಲ್ಲರ ಜೀವ ಉಳಿಸಿ ಎಂದಿದ್ದಾರೆ. ಇದನ್ನು ಓದಿ: ಮುಳಬಾಗಿಲು ಪಟ್ಟಣದಲ್ಲಿ ಸುಸಜ್ಜಿತ ಕೋವಿಡ್ ಕೇರ್ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ

    ಕೆಲವು ಜನರಿಗೆ ಖರೀದಿ ಮಾಡಲು ಲಸಿಕೆ ಸಿಗುತ್ತದೆ. ಆದರೆ ಸರ್ಕಾರಕ್ಕೆ ಏಕೆ ಸಿಗುತ್ತಿಲ್ಲ. ಅದ್ಯಾರೋ ಸಂಸದರು 900 ರೂ. ಗೆ ಲಸಿಕೆ ಸಿಗುತ್ತೆ ಅಂತಾರೆ ಅದು ಹೇಗೆ ಎಂದು ಪರೋಕ್ಷವಾಗಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಶ್ನಿಸುತ್ತಾ, ಜನರಿಗೆ ಲಸಿಕೆ ಕೊಟ್ಟು ಒಳ್ಳೆಯ ಹೆಸರು ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ತಿಳಿ ಹೇಳಿದರು.

    ರಮೇಶ್ ಜಾರಕಿಹೋಳಿ ಎಸ್‍ಐಟಿ ತನಿಖೆಗೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಸಿಎಂ, ಗೃಹ ಸಚಿವರು ಎರಡು ರೀತಿಯ ಹೇಳಿಕೆ ಕೊಟ್ಟಿದ್ದಾರೆ. ಆ ಎರಡು ಹೇಳಿಕೆಯಲ್ಲಿ ಗೊತ್ತಾಗುತ್ತಿದೆ. ಯಾವ ರೀತಿ ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ನಾವು ರಾಜ್ಯಾದ್ಯಂತ ನಮ್ಮದೇ ಆದ ಹೋರಾಟ ಮಾಡುತ್ತೇವೆ. ಇದನ್ನು ಬಿಡುವುದಿಲ್ಲ. ಅಧಿಕಾರಿಗಳು ಸರ್ಕಾರದ ಮಾತು ಕೇಳಿ ಏನು ಮಾಡುತ್ತಿದ್ದಾರೆ. ನಮಗೆ ಗೊತ್ತಿದೆ ಇದರ ವಿರುದ್ದ ಹೋರಾಟದ ರೂಪುರೇಷೆ ಮಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ: ಲಾಕ್‍ಡೌನ್ ಬಗ್ಗೆ ಜೂನ್ 5ರಂದು ಸಿಎಂ ತೀರ್ಮಾನ ಮಾಡ್ತಾರೆ: ಬೊಮ್ಮಾಯಿ

    ನಾನು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ರೈತರ ಕಷ್ಟ ಆಲಿಸುತ್ತಿದ್ದೇನೆ. ಇಂದು ಮಾರುಕಟ್ಟೆಗಳಲ್ಲಿ ಹೂವು ಹಣ್ಣು, ತರಕಾರಿ ಮಾರಾಟ ಮಾಡುವ ರೈತರ ಜೊತೆ ಮಾತನಾಡಲು ಬಂದಿದ್ದೆ. ಆದರೆ ಲಾಕ್ ಡೌನ್ ಇರುವುದರಿಂದ ಸಾಧ್ಯವಾಗಲಿಲ್ಲ ಮತ್ತೊಮ್ಮೆ ಬರುತ್ತೇನೆ ಎಂದರು.

  • ಪ್ರತಾಪ್ ಸಿಂಹಗೆ ಶಕ್ತಿ ಇದ್ರೆ ಡಿಸಿಯನ್ನು ಬದಲಾವಣೆ ಮಾಡಿಕೊಳ್ಳಲಿ: ಡಿಕೆಶಿ

    ಪ್ರತಾಪ್ ಸಿಂಹಗೆ ಶಕ್ತಿ ಇದ್ರೆ ಡಿಸಿಯನ್ನು ಬದಲಾವಣೆ ಮಾಡಿಕೊಳ್ಳಲಿ: ಡಿಕೆಶಿ

    ಧಾರವಾಡ: ಮೈಸೂರು ಸಂಸದ ಪ್ರತಾಪ್ ಸಿಂಹರವರಿಗೆ ಶಕ್ತಿ ಇದ್ದರೆ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ, ಸಚಿವರು ಸೇರಿ ಸಿಎಂ ಹತ್ತಿರ ಮಾತನಾಡಿ ಡಿಸಿ ಬದಲಾವಣೆ ಮಾಡಿಕೊಳ್ಳಲಿ. ಇದನ್ನೆಲ್ಲ ನೋಡಿ ಜನ ಉಗಿತಾ ಇದ್ದಾರೆ, ಡಿಸಿ ಕೆಲಸ ಪ್ರತಾಪ್ ಸಿಂಹ ಮಾಡಲು ಆಗುವುದಿಲ್ಲ. ಪ್ರತಾಪ್ ಸಿಂಹ ಕೆಲಸ ಡಿಸಿ ಮಾಡಲು ಆಗುವುದಿಲ್ಲ. ಏನೇ ಜಾರಿ ಮಾಡುವಿದ್ದರೂ ಡಿಸಿನೇ ಮಾಡಬೇಕು. ಸರಿಯೋ ತಪ್ಪೋ ಗೊತ್ತಿಲ್ಲ, ಆದರೆ ಇವರಿಗೆ ಸಮಸ್ಯೆ ಆದರೆ ಬದಲಿಸಿಕೊಳ್ಳಲಿ. ಐದೇ ನಿಮಿಷಕ್ಕೆ ಮಂತ್ರಿ, ಅಧಿಕಾರಿಗಳನ್ನು ಬದಲಿಸುತ್ತಿರಿ ಅಲ್ವಾ, ನಿಮಗೆ ಆಗದಿರುವವರನ್ನು ಬದಲಿಸಿಕೊಳ್ಳಿ, ನಿಮಗೆ ಬೇಕಾದವರನ್ನು ತಲೆ ಮೇಲೆ ಕುರಿಸಿಕೊಂಡು ಕೆಲಸ ಮಾಡಿ ಎಂದು ಕಿಡಿಕಾರಿದರು.

    ಇದೇ ವೇಳೆ ಸಚಿವರ ಸಿಡಿ ಕೇಸ್ ಪ್ರಕರಣ ವಿಚಾರವಾಗಿ ಮಾತನಾಡಿದ ಡಿಕೆಶಿ, ಅದ್ಯಾವುದೋ ಒಂದು ವಿಡಿಯೋ ನೋಡಿ ಕಾಲಿಗೆ ಗುಂಡು ಹಾಕಿದ್ದಾರೆ. ಇನ್ನೊಂದು ವಿಡಿಯೋ ನೋಡಿ ಸರ್ಟಿಫಿಕೇಟ್ ಕೊಡುತ್ತಿದ್ದರೆ. ಇದಕ್ಕೆಲ್ಲ ನಾವು ಒಂದು ಹೋರಾಟ ಮಾಡುತ್ತೇನೆ ಎಂದರು.

    ಎಸ್‍ಐಟಿ ಕಚೇರಿಗಳು ಎಷ್ಟಿವೆ? ಸರ್ಕಲ್ ಇನ್ಸ್‌ಪೆಕ್ಟರ್‌ಗಳೆಲ್ಲರ ಲಿಸ್ಟ್ ತರಿಸುತ್ತೇನೆ. ಬಸವರಾಜ ಬೊಮ್ಮಾಯಿ ಗೃಹ ಮಂತ್ರಿಯಾಗಿಯೇ ಇದಕ್ಕೆ ಸಪೋರ್ಟ್ ಮಾಡಿದ್ದಾರೆ. ಮುಖ್ಯಮಂತ್ರಿಯೇ ನಿರ್ದೋಷಿಯಾಗಿ ಸಿಡಿ ಕೇಸ್‍ನಿಂದ ಹೊರ ಬರುತ್ತಾರೆ ಅಂತಾ ಹೇಳಿದ್ದಾರೆ. ಆದರೆ ನಮ್ಮ ದೇಶದಲ್ಲಿ ಕೋರ್ಟ್ ಇನ್ನು ಬದುಕಿದೆ ಹರಿಹಾಯ್ದರು.

    ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆಯಾದರೂ ಮಾಡಿಕೊಳ್ಳಲಿ. ಅವರ ಜೊತೆಯಾದರು ಇಟ್ಟುಕೊಳ್ಳಲಿ. ಅದು ಅವರ ಪಾರ್ಟಿ ವಿಚಾರ. ನಮ್ಮವರನ್ನ ಕರೆದುಕೊಂಡು ಹೋಗಿ ಸರ್ಕಾರ ಮಾಡುತ್ತಾರಾ. ನಾವೇನು ಮಾಡೋಕೆ ಆಗುತ್ತೆ ಎಂದು ಹೇಳಿದರು. ಇದನ್ನು ಓದಿ: ಪ್ರತಾಪ್ ಸಿಂಹ ಪ್ರಶ್ನಿಸಿದ್ದಕ್ಕೆ ಕೋವಿಡ್ ಲೆಕ್ಕ ಬಿಡುಗಡೆ ಮಾಡಿದ ರೋಹಿಣಿ ಸಿಂಧೂರಿ

    ಕೋವಿಡ್ ನಿರ್ವಹಣೆಗೆ ಬಿಡುಗಡೆಯಾದ 41 ಕೋಟಿಯಲ್ಲಿ ವೆಚ್ಚ ಮಾಡಿರುವ 38 ಕೋಟಿ ರೂಪಾಯಿಯ ಲೆಕ್ಕ ಕೊಡಿ ಎಂದು ಸಂಸದ ಪ್ರತಾಪ್ ಸಿಂಹರವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪ್ರಶ್ನಿಸಿದ್ದರು. ಈ ಹಿನ್ನೆಲೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭಾನುವಾರ ರಾತ್ರಿ ಮಾಧ್ಯಮಗಳ ಮೂಲಕ ಉತ್ತರ ನೀಡಿದ್ದರು.

  • ಕುಟುಂಬ ಸಮೇತ ಧರ್ಮಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ

    ಕುಟುಂಬ ಸಮೇತ ಧರ್ಮಸ್ಥಳಕ್ಕೆ ಡಿ.ಕೆ.ಶಿವಕುಮಾರ್ ಭೇಟಿ

    ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು ಇಂದು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

    ಶ್ರೀಕ್ಷೇತ್ರ ಧರ್ಮಸ್ಥಳದ ಹೆಲಿಪ್ಯಾಡ್‍ಗೆ ಹೆಲಿಕಾಪ್ಟರ್ ಮೂಲಕ ಡಿಕೆಶಿ, ಪತ್ನಿ, ಮಗಳು, ಅಳಿಯ ಸೇರಿದಂತೆ ಕುಟುಂಬ ಸಮೇತರಾಗಿ ಬಂದಿಳಿದರು. ಇದೊಂದು ಖಾಸಗಿ ಕಾರ್ಯಕ್ರಮ, ಧರ್ಮಸ್ಥಳದ ವೈದ್ಯರನ್ನು ಭೇಟಿಯಾಗಲು ಬಂದಿರುವುದಾಗಿ ತಿಳಿಸಿದರು.

    ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್‌ರವರು, ಬ್ಲ್ಯಾಕ್ ಫಂಗಸ್ ಬಗ್ಗೆ ಮಂತ್ರಿಗಳಲ್ಲೇ ಗೊಂದಲ ಇದೆ. ಒಬ್ಬರು ಇದೆ ಅಂತಾರೆ, ಮತ್ತೊಬ್ಬರು ಇಲ್ಲ ಅಂತಾ ಹೇಳುತ್ತಾರೆ. ಫಂಗಸ್‍ಗೆ ಔಷಧಗಳು ಇಲ್ಲ ಅಂತಾ ಮಾಧ್ಯಮಗಳು ವರದಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಗುಜರಾತಿಗೆ ಔಷಧ ಕಳಿಸಿಕೊಟ್ಟಿದೆ. ಹಾಗಾಗಿ ನಮ್ಮ ರಾಜ್ಯ ಸರ್ಕಾರ ಗುಜರಾತಿನಿಂದಾದರೂ ಔಷಧ ತರಬೇಕಾಗಿದೆ. ಈಗಾಗಲೇ ಭಯಗೊಂಡಿರುವ ಜನರನ್ನು ರಾಜ್ಯ ಸರ್ಕಾರ ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತಿದೆ ಎಂದರು.

    ಈ ಸಂದರ್ಭ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜೊತೆಗಿದ್ದರು.

  • ಸೋಲಿನಲ್ಲಿ ಗೆಲುವು ಕಂಡಿದ್ದೇವೆ: ಡಿಕೆ ಶಿವಕುಮಾರ್

    ಸೋಲಿನಲ್ಲಿ ಗೆಲುವು ಕಂಡಿದ್ದೇವೆ: ಡಿಕೆ ಶಿವಕುಮಾರ್

    ಬೆಂಗಳೂರು: ಸೋಲಿನಲ್ಲಿ ಗೆಲುವನ್ನು ಕಂಡಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‍ರವರು ಹೇಳಿದ್ದಾರೆ.

    ಇಂದು ನಡೆದ ವಿಧಾನಸಭಾ ಮತ್ತು ಲೋಕಸಭಾ ಉಪಚುನಾವಣೆಯ ಫಲಿತಾಂಶ ಕುರಿತಂತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಇವತ್ತು ಇಡೀ ಭಾರತದಲ್ಲಿ ಒಂದು ದೊಡ್ಡ ಬದಲಾವಣೆ ಅಲೆ ನೋಡುತ್ತಾ ಇದ್ದೀರಿ, ಮತದಾರ ಕೊಟ್ಟ ತೀರ್ಪಿಗೆ ತಲೆಬಾಗಲೇಬೇಕು ಎಂದಿದ್ದಾರೆ.

     

    ಪಶ್ಚಿಮ ಬಂಗಾಳ, ಕೇರಳದಲ್ಲಿ ಕಾಂಗ್ರೆಸ್ ಸೋತಿರಬಹುದು. ಆದರೆ ಜನ ಬಿಜೆಪಿಯ ಬದಲಾವಣೆಯನ್ನು ಬಯಸಿದ್ದಾರೆ. ತಮಿಳುನಾಡು, ಪಶ್ಚಿಮ ಬಂಗಾಳ, ಕರ್ನಾಟಕದಲ್ಲಿ ಬಿಜೆಪಿ ವಿರುದ್ಧವಾಗಿ ಮತ ಚಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಕರ್ನಾಟಕದಲ್ಲಿ ಒಂದು ಸ್ಥಾನ ಗೆದ್ದಿದ್ದೇವೆ ಒಂದು ಸೀಟ್ ಫೈಟು ಕೊಟ್ಟಿದ್ದೇವೆ. ಸೋಲಿನಲ್ಲಿ ಗೆಲವು ಕಂಡಿದ್ದೇವೆ. ಸತೀಶ್ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ. ವಿಧಾನ ಸಭಾ ಸದಸ್ಯರಾಗಿದ್ದಾರು, ಅವರು ಟಿಕೆಟ್ ಕೇಳಿರಲಿಲ್ಲಾ. ಪಕ್ಷಕ್ಕಾಗಿ ನೀವು ಅಭ್ಯರ್ಥಿ ಮಾಡಿದ್ವಿ, ವರ್ತಕರಿಗೆ ರೈತರಿಗೆ ಮುಖಂಡರು ಒಂದು ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಎಲ್ಲಾರಿಗೂ ಧನ್ಯವಾದಗಳು ಹಾಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಬಸವ ಕಲ್ಯಾಣದಲ್ಲಿ ಅಂತರ ಹೆಚ್ಚಾಗಿದೆ. ಮಸ್ಕಿಯ ಸ್ವಾಭಿಮಾನದ ಮತದಾರರು ಮತ ಕೊಟ್ಡಿದ್ದಾರೆ. ನನ್ನ ಹತ್ತಾರು ವರ್ಷದ ಅನುಭವದಲ್ಲಿ ಈ ಮೂರು ಚುನಾವಣೆಯಲ್ಲಿ ಒಗ್ಗಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಬೆಳಗಾವಿ ತೀರ್ಪು ಕಾಂಗ್ರೆಸ್ ಬದಲಾವಣೆ ನಂಬಿಕೆ ಕೊಟ್ಟಿದ್ದಾರೆ. ಯಾರು ಸಂಭ್ರಮಾಚರಣೆ ಮಾಡಬಾರದು ಎಂದು ತಿಳಿಸಿದರು.

    ಎಷ್ಟು ಜೀವ ಉಳಿಸೋದಕ್ಕೆ ಸಾಧ್ಯಾನೋ ಅಷ್ಟು ಕೆಲಸ ಮಾಡಲು ಮನವಿ ಮಾಡಲಾಗುತ್ತಿದೆ. ಬಿಜೆಪಿಯನ್ನು ದೂರ ಮಾಡಬೇಕು. ಬಿಜೆಪಿ ದೇಶಕ್ಕೆ ದೊಡ್ಡ ಅಪಾಯಕಾರಿಯಾಗಿದೆ. ಒಂದು ಎರಡು ರಾಜ್ಯದಲ್ಲಿ ಕಾಂಗ್ರೆಸ್ ಚೇತರಿಕೆ ಕಂಡಿದೆ. ಬಿಜೆಪಿ ಎಂಟು ಭಾಗದ ಚುನಾವಣೆ ವ್ಯವಸ್ಥೆಯನ್ನು ನಾವು ವಿರೋಧ ಮಾಡಿದ್ವಿ. ಕಾಂಗ್ರೆಸ್ ಮೇಲೆ ವಿಶ್ವಾಸ ಹೆಚ್ಚಾಗುತ್ತಿದೆ. ಮಸ್ಕಿಯಲ್ಲಿ ಸ್ವಾಭಿಮಾನಕ್ಕೆ ಮತ ಕೇಳಿದ್ವಿ. ಅಲ್ಲಿ ಜನ ಅದನ್ನು ಗೌವರದಿಂದ ಮತಕೊಟ್ಟಿದ್ದಾರೆ.

  • ರಮೇಶ್ ಜಾರಕಿಹೊಳಿ ಬಂಧಿಸುವಂತೆ ಡಿಕೆಶಿ ಅಭಿಮಾನಿಗಳಿಂದ ಒತ್ತಡ

    ರಮೇಶ್ ಜಾರಕಿಹೊಳಿ ಬಂಧಿಸುವಂತೆ ಡಿಕೆಶಿ ಅಭಿಮಾನಿಗಳಿಂದ ಒತ್ತಡ

    – ಮಾಜಿ ಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ್ರು

    ನೆಲಮಂಗಲ: ರಾಜ್ಯದಲ್ಲಿ ಸಂಚಲನ ಹುಟ್ಟಿಸಿರುವ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ, ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸುವಂತೆ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗ ಒತ್ತಾಯಿಸಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ಮೂಲಕ ಜಾಥಾ ನಡೆಸಿ ಡಿ.ಕೆ ಶಿವಕುಮಾರ್ ಅಭಿಮಾನಿ ಸಂಘದಿಂದ ನೂರಾರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

    ಡಿ.ಕೆ ಶಿವಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಬಗ್ಗೆ ಅವಹೇಳನ ಶಬ್ಧ ಬಳಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ನೆಲಮಂಗಲ ಪ್ರವಾಸಿ ಮಂದಿರದಿಂದ ತಾಲೋಕ್ ಕಚೇರಿವರೆಗೆ ಪ್ಲಕಾರ್ಡ್ ಹಿಡಿದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ರಮೇಶ್ ಜಾರಕಿಹೊಳಿಯ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು.

    ನಂತರ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ಗೃಹ ಸಚಿವ ಹಾಗೂ ಪೊಲೀಸ್ ಇಲಾಖೆ ನೊಂದ ಯುವತಿಗೆ ನ್ಯಾಯ ನೀಡಿ ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುರೇಶ್, ಸಪ್ಪಗಿರಿ ಶಂಕರ್ ನಾಯಕ್, ವೆಂಕಟೇಶ್ ಬಾಬು, ರಮೇಶ್, ಉಮೇಶ್ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ತಾಲೂಕು ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

  • ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು : ಡಿಕೆ ಶಿವಕುಮಾರ್

    ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು : ಡಿಕೆ ಶಿವಕುಮಾರ್

    – ನರೇಶ್ ಪರಿಚಯ, ಬೇಕಾದ ಹುಡುಗ

    ಬೆಂಗಳೂರು: ಮೊದಲ ಬಾರಿಗೆ ಸಿಡಿ ಬಿಡುಗಡೆಯಾದಾಗ ಯುವತಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿರಬಹುದು. ಆದರೆ ಇಲ್ಲಿಯವಗೂ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‍ ರವರು ಹೇಳಿದ್ದಾರೆ.

     

    ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವೆಲ್ಲರೂ ಸಾರ್ವಜನಿಕರ ಮಧ್ಯೆ ಇದ್ದೇವೆ. ನೊಂದವರ ಮಧ್ಯೆ ನಾವು, ನೀವು ಸೇತುವೆಯಾಗಿ ಕೆಲಸ ಮಾಡುತ್ತೇವೆ. ರಾಜಕಾರಣಿಯಾಗಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಜನಸೇವೆ ಮಾಡುವುದು ನಮ್ಮ ಪ್ರವೃತ್ತಿ. ಹಾಗೆಯೇ ಆ ಹೆಣ್ಣು ಮಗಳು ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಿದ್ದಾಳೆ. ನಾವು ಒಬ್ಬ ರಾಜಕಾರಣಿಯಾಗಿ ನೊಂದಂತವರಿಗೆ, ಸಮಸ್ಯೆಯಲ್ಲಿ ಸಿಲುಕಿದವರು ಪ್ರಾಮಾಣಿಕರಾಗಿದ್ದಾರೆ ಸಹಾಯ ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಯುವತಿ ಪೋಷಕರ ರಕ್ಷಣೆ ಕುರಿತಂತೆ, ಸರ್ಕಾರದಲ್ಲಿ ಉತ್ತಮ ಅಧಿಕಾರಿಗಳಿದ್ದು, ಅವರು ಯುವತಿ ಪೋಷಕರಿಗೆ ರಕ್ಷಣೆ ನೀಡುತ್ತಾರೆ. ಸದ್ಯ ಯುವತಿ ಪೋಷಕರು ಬೇರೆಯವರ ರಕ್ಷಣೆಯಲ್ಲಿದ್ದಾರೆ ಎಂಬ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ಎಲ್ಲ ನಾನು ಏಕೆ ಟ್ರ್ಯಾಕ್ ಮಾಡಲಿ, ನನ್ನ ಬಳಿ ಯಾರಾದರೂ ಬಂದರೆ ಖಂಡಿತ ರಕ್ಷಣೆ ಮಾಡುತ್ತೇನೆ ಎಂದರು.

    ನರೇಶ್‍ನನ್ನು ಭೇಟಿ ಮಾಡಿದ್ದು ನಿಜ, ಅವನು ನಮ್ಮೊಂದಿಗೆ ಕೆಲವು ವಿಚಾರಗಳನ್ನು ತಿಳಿಸಿದ್ದಾನೆ. ನರೇಶ್ ನನಗೆ ಬೇಕಾದವನು, ಮಾಧ್ಯಮದ ಹುಡುಗ ಎಂದು ಹೇಳಿದರು.