Tag: ಪಬ್ಲಿಕ್ ಟಿವಿ Divya Uruduga

  • ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ನಂಗೆ ಗೊತ್ತು ನೀವು ಅತ್ತಿದ್ದೀರಿ – ಪೆಟ್ಟಾದರೂ ಕೆಪಿಗೆ ಸಮಾಧಾನ ಹೇಳಿದ ಕೆ

    ಬಿಗ್‍ಬಾಸ್ ನೀಡಿದ್ದ ಹೀಗೂ ಅಂಟೆ ಟಾಸ್ಕ್ ವೇಳೆ ದಿವ್ಯಾ ಉರುಡುಗ(ಕವನ) ಕೈಗೆ ಪೆಟ್ಟಾಗಿದ್ದಕ್ಕೆ ಅರವಿಂದ್ ಕೆ.ಪಿ ಬೇಸರಗೊಂಡಿದ್ದಾರೆ.

    ಬಿಗ್ ಬಾಸ್ ‘ಹೀಗೂ ಅಂಟೆ’ ಎಂಬ ಟಾಸ್ಕ್‌ನನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಎರಡು ತಂಡದ ಒಬ್ಬೊಬ್ಬ ಸದಸ್ಯರು ಬಿಗ್‍ಬಾಸ್ ನೀಡುವ ಜಾಕೆಟ್ ತೊಡಬೇಕು ಹಾಗೂ ಎದುರಾಳಿ ತಂಡದವರು ಆ ಜಾಕೆಟ್‍ಗೆ ಸ್ಟಾರ್ ಒಂದನ್ನು ಅಂಟಿಸಬೇಕು ಎಂದು ಸೂಚಿಸಿದ್ದರು.

    ಅದರಂತೆ ವಿಜಯಯಾತ್ರೆ ತಂಡದ ಅರವಿಂದ್ ಜಾಕೆಟ್ ತೊಟ್ಟು ಆಟ ಆಡುವಾಗ, ದಿವ್ಯಾ ಉರುಡುಗ ಮಂಜು ಹಾಗೂ ದಿವ್ಯಾ ಸುರೇಶ್ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗ ಮೇಲೆ ಜೋರಾಗಿ ಬೀಳುತ್ತಾರೆ. ಟಾಸ್ಕ್ ನಂತರ ನಾನು ಬಹಳ ಜೋರಾಗಿ ಓಡಿ ಬರಬೇಕಾದರೆ ನನ್ನನ್ನು ತಡೆಯಲು ಬರಬೇಡ ಏಟಾಗುತ್ತದೆ ಎಂದು ಒಂದು ಬಾರಿ ದಿವ್ಯಾ ಉರುಡುಗಗೆ ಎಚ್ಚರಿಸುತ್ತಾರೆ.

    ನಂತರ ನಿಂಗೈತೆ ಇರು ತಂಡದಿಂದ ಜಾಕೆಟ್ ತೊಟ್ಟ ಆಟ ಆಡಲು ದಿವ್ಯಾ ಉರುಡುಗ ಆರಂಭಿಸುತ್ತಾರೆ. ಈ ವೇಳೆ ಅರವಿಂದ್ ದಿವ್ಯಾ ಉರುಡುಗಗೆ ಸ್ಟಾರ್ ಅಂಟಿಸಲು ಪ್ರಯತ್ನಿಸುತ್ತಿರುತ್ತಾರೆ. ಆಗ ಚಕ್ರವರ್ತಿ ದಿವ್ಯಾ ಉರುಡುಗರನ್ನು ಸೇವ್ ಮಾಡಲು ಹೋಗಿ ಗಾರ್ಡನ್ ಏರಿಯಾದಲ್ಲಿದ್ದ ಗಾಜಿಗೆ ದಿವ್ಯಾ ಉರುಡುಗ ಕೈ ತಗುಲಿ ಪೆಟ್ಟಾಗುತ್ತದೆ. ನಂತರ ಮನೆಯ ಎಲ್ಲ ಸದಸ್ಯರು ದಿವ್ಯಾ ಉರುಡುಗರಿಗೆ ಸಮಾಧಾನ ಪಡಿಸುತ್ತಾರೆ ಮತ್ತು ಕನ್ಫೆಷನ್ ರೂಮ್‍ಗೆ ಅರವಿಂದ್ ದಿವ್ಯಾ ಉರುಡುಗರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಾರೆ. ಬಳಿಕ ನಾನು ಅವಳನ್ನು ಸೇವ್ ಮಾಡಿ ಡೈರೆಕ್ಷನ್ ಚೇಂಜ್ ಮಾಡಲು ಪ್ರಯತ್ನಿಸಿದೆ ಆದರೆ ಈ ರೀತಿ ಆಯ್ತು ಎಂದು ಚಕ್ರವರ್ತಿ ಮನೆಯ ಸದಸ್ಯರಿಗೆ ತಿಳಿಸುತ್ತಾರೆ.

    ಬಳಿಕ ಚಿಕಿತ್ಸೆ ಪಡೆದು ವಾಪಸ್ ಬಂದ ದಿವ್ಯಾ ಉರುಡುಗರನ್ನು ಕಂಡು ಅರವಿಂದ್ ತಬ್ಬಿಕೊಂಡು ಅರವಿಂದ್ ನಿಟ್ಟುಸಿರು ಬಿಟ್ಟು, ದಿವ್ಯಾ ಉರುಡುಗರನ್ನು ಸಮಾಧಾನ ಪಡಿಸುತ್ತಾರೆ. ನಂತರ ದಿವ್ಯಾ ಉರುಡುಗ ಅರವಿಂದ್ ಕೆನ್ನೆಯನ್ನು ಕ್ಯೂಟ್ ಆಗಿ ಹಿಡಿದುಕೊಂಡು, ನನಗೆ ಹೀಗೆ ಪೆಟ್ಟಾಗಿದಕ್ಕೆ ಅತ್ರಾ ಎಂದು ಕೇಳುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ಎನ್ನುತ್ತಾರೆ. ಆಗ ದಿವ್ಯಾ ಉರುಡುಗ ನನಗೆ ನಿಮ್ಮ ಧ್ವನಿ ಅತ್ತಿರುವಂತೆ ಕೇಳಿಸುತ್ತಿದೆ. ನನಗೆ ಗೊತ್ತು, ನೀವು ಅತ್ತಿದ್ದೀರಾ ಎಂದು ಹೇಳುತ್ತಾರೆ.

    ಆಗ ಅರವಿಂದ್ ನಿನಗೆ ಏಟಾಗಿದ್ಯಾಲ್ಲ ಅದಕ್ಕೆ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂದು ಅಣಿಕಿಸಿ, ಜೀವ ಬಾಯಿಗೆ ಬಂದು ಬಿಟ್ಟಿತ್ತು. ಹೊಟ್ಟೆ ಬಳಿ ನೋಡಿದರೆ ರಕ್ತ ಇತ್ತು. ಅದು ಎಲ್ಲಿಂದ ಎಂದು ಗೊತ್ತಾಗುತ್ತಿರಲಿಲ್ಲ ಎಂದು ಗಾಬರಿಗೊಂಡಿದ್ದಾಗಿ ಅರವಿಂದ್ ದಿವ್ಯಾ ಉರುಡುಗಗೆ ಹೇಳಿದ್ದಾರೆ. ನಂತರ ಶಮಂತ್, ದಿವ್ಯಾ ಉರುಡುಗ ಮತ್ತು ಅರವಿಂದ್ ಇದೇ ವಿಚಾರವಾಗಿ ಕುಳಿತು ಚರ್ಚೆ ನಡೆಸುತ್ತಿರುವ ವೇಳೆ ನಾನು ಮೊದಲ ಬಾರಿಗೆ ಅರವಿಂದ್‍ರವರ ವಾಯ್ಸ್ ವೊಂದನ್ನು ಕೇಳಿದೆ, ಅದು ಹತ್ತು ಸೆಕೆಂಡ್, ಶೇಕಿಂಗ್ ವಾಯ್ಸ್ ಆಗಿತ್ತು ಎನುತ್ತಾರೆ. ಆಗ ಅರವಿಂದ್ ಹೌದು ಎಂದು ಹೇಳುತ್ತಾ ಕಣ್ಣಿನ ಅಂಚಲಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಆಗ ದಿವ್ಯಾ ಉರುಡುಗ ಅರವಿಂದ್‍ರನ್ನು ತಬ್ಬಿಕೊಂಡು ಸಮಾದಾನ ಪಡಿಸುತ್ತಾರೆ.

    ದಿವ್ಯಾ ಅವರನ್ನು ಮನೆಯಲ್ಲಿ ಕವನ ಎಂದು ಕರೆಯುತ್ತಾರೆ. ಹೀಗಾಗಿ ಅರವಿಂದ್ ಶಾರ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ‘ಕೆ’ ಎಂದು ಕರೆಯುತ್ತಾರೆ. ಇದನ್ನೂ ಓದಿ:ನನ್ನ ಎದುರಾಕ್ಕೊಂಡವರು ಮಂಡಿ ಬಗ್ಗಿಸಿ ನಡೀಬೇಕು- ಶುಭಾ ವಿರುದ್ಧ ಮಂಜು ರಿವೇಂಜ್

  • ಡಿಯುಗೆ ಕಿಚ್ಚನ ಅಡ್ವೈಸ್ – ಗಳಗಳನೆ ಅತ್ತು ಕ್ಷಮೆ ಕೇಳಿದ ದಿವ್ಯಾ ಉರುಡುಗ

    ಡಿಯುಗೆ ಕಿಚ್ಚನ ಅಡ್ವೈಸ್ – ಗಳಗಳನೆ ಅತ್ತು ಕ್ಷಮೆ ಕೇಳಿದ ದಿವ್ಯಾ ಉರುಡುಗ

    ವಾರ ಮನೆಯ ಕ್ಯಾಪ್ಟನ್ ಆಗಿದ್ದ ದಿವ್ಯಾ ಉರುಡುಗ ಟಾಸ್ಕ್ ವೇಳೆ ತೆಗೆದುಕೊಂಡಿದ್ದ ಕೆಲವು ತಪ್ಪು ನಿರ್ಧಾರಗಳ ಕುರಿತಂತೆ ಕಿಚ್ಚ ಸುದೀಪ್, ದಿವ್ಯಾ ಉರುಡುಗಗೆ ತಿಳಿ ಹೇಳಿದ್ದಾರೆ.

    ಬಿಗ್‍ಬಾಸ್ ಪ್ರಕಾರ ಮನೆಯ ಕ್ಯಾಪ್ಟನ್ ಆಗಿ ದಿವ್ಯಾ ಉರುಡುಗರವರು ತೆಗೆದುಕೊಂಡ ನಿರ್ಧಾರಗಳು ಬಹಳ ಚೆನ್ನಾಗಿತ್ತು, ನೀವು ಯಾರಿಗೂ ಭೇದ-ಭಾವ ಮಾಡಲಿಲ್ಲ, ಯಾರ ಪರವಾಗಿಯೂ ಇರಲಿಲ್ಲ ಎಂಬುದು ಬಿಗ್‍ಬಾಸ್ ಅನಿಸಿಕೆ ಗುಡ್ ಜಾಬ್ ಎಂದು ಮೊದಲು ಶ್ಲಾಘಿಸುತ್ತಾರೆ. ನಂತರ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅರವಿಂದ್ ಲಾಕರ್ ಬೀಗ ತೆಗೆದು ಅದನ್ನು ಲಾಕರ್ ಮೇಲೆಯೇ ಇಟ್ಟಿದ್ದರು. ಇದನ್ನು ಪ್ರಶಾಂತ್‍ರವರು ನಿಮಗೆ ತಿಳಿಸಿದಾಗ ನೀವು ಅದನ್ನು ಸರಿಪಡಿಸಿದ್ರಿ, ಆದರೆ ಇದೇ ತಪ್ಪನ್ನು ಮನೆಯ ಬೇರೆ ಸ್ಪರ್ಧಿಗಳು ಮಾಡಿದ್ದರೆ, ನಿಮ್ಮ ಪ್ರತಿಕ್ರಿಯೆ ಇಷ್ಟೇ ಸಿಂಪಲ್ ಇರುತ್ತಿತ್ತಾ? ನೀವು ವಾರ್ನಿಂಗ್ ಮಾಡುವ ಶೈಲಿ ಆಗ ಮಾತ್ರ ನಮಗೆ ಕಾಣಿಸಲಿಲ್ಲ. ಅದರಿಂದ ಇನ್ನೊಬ್ಬರು ಕ್ಯಾಪ್ಟನ್ ಆಗುವ ಅವಕಾಶ ತಪ್ಪಿತು ಎಂಬುದು ನಿಮಗೆ ಅರ್ಥವಾಗಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

    ಮೊಟ್ಟೆ ಒಡೆಯುವ ಟಾಸ್ಕ್ ವೇಳೆ ಕ್ಯಾಪ್ಟನ್ ಆದವರು ರೂಲ್ಸ್ ಬುಕ್ ಓದಿದ ನಂತರ ಟಾಸ್ಕ್ ಆರಂಭಿಸಬೇಕು. ಆದರೆ ನೀವು ಅದನ್ನು ಮಾಡಲಿಲ್ಲ. ರಾತ್ರಿ ಒಂದು ರೂಲ್ಸ್ ಬೆಳಗ್ಗೆ ಒಂದು ರೂಲ್ಸ್ ಬದಲಾಯಿಸುವುದು ಎಷ್ಟು ಸರಿ. ರೂಲ್ಸ್ ಚೇಂಜ್ ಮಾಡುವುದು ತಪ್ಪಲ್ಲ. ಚೇಂಜ್ ಮಾಡಿದ ನಂತರ ಮನೆಯ ಎಲ್ಲ ಸ್ಪರ್ಧಿಗಳಿಗೂ ತಿಳಿಸುವುದು ಒಂದು ನಾಯಕಿಯ ಕರ್ತವ್ಯ ಎಂದು ತಿಳಿ ಹೇಳಿದ್ದಾರೆ.

    ಮಂಜು ಹಾಗೂ ಪ್ರಶಾಂತ್ ನಡುವೆ ನಡೆದ ಏಪ್ರನ್ ಕಿತ್ತಾಟ ವಿಚಾರವಾಗಿ ಮಾತನಾಡಿ, ಮಂಜು, ಪ್ರಶಾಂತ್, ದಿವ್ಯಾ ಉರುಡುಗ ನಿಮ್ಮ ಮೂವರ ವಾದ ಸರಿ ಕೂಡ ಇತ್ತು, ಜೊತೆಗೆ ಅಷ್ಟೇ ತಪ್ಪು ಕೂಡ ಇತ್ತು. ಆದರೆ ಸ್ಪಷ್ಟತೆ ಇರಲಿಲ್ಲ. ಆ ವೇಳೆ ದಿವ್ಯಾ ಉರುಡುಗರವರ ಪರಿಸ್ಥಿತಿ ನಮಗೆ ಅರ್ಥವಾಗುತ್ತದೆ. ಆದರೆ ಒಂದು ಬಾರಿ ಏಪ್ರನ್‍ನನ್ನು ನೀವು ಹಿಂಪಡೆದು ಇಬ್ಬರನ್ನು ಮೈನ್ ಡೋರ್‍ನಿಂದ ಮತ್ತೆ ಓಡಿಸಬಹುದಿತ್ತು ಎಂದಿದ್ದಾರೆ.

    ದಿವ್ಯಾ ಉರುಡುಗ ನಿಮ್ಮ ಕ್ಯಾಪ್ಟನ್ ಶಿಪ್ ಜರ್ನಿ ಬಹಳ ಚೆನ್ನಾಗಿ ಪ್ರಾರಂಭವಾಯಿತು. ನನ್ನ ಹಾಗೂ ಜನಗಳ ಅನಿಸಿಕೆ ಪ್ರಕಾರ ನಿಮ್ಮ ತೀರ್ಮಾನಗಳು ಬಹಳ ಚೆನ್ನಾಗಿತ್ತು. ಆದರೆ ಇಷ್ಟು ತಪ್ಪುಗಳು ನಡೆದಿದೆ. ಇದೆಲ್ಲವೂ ನಿಮ್ಮ ಗಮನದಲ್ಲಿರಲಿ. ನೀವು ಚೆನ್ನಾಗಿ ಆಡಿಲ್ಲ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಿಮ್ಮ ನಿರ್ಧಾರಗಳು ತಪ್ಪಾಗಿದೆ ಎಂದು ಕೂಡ ಹೇಳುತ್ತಿಲ್ಲ. ಚೆನ್ನಾಗಿ ಕ್ಯಾಪ್ಟನ್ಸಿ ನಿಭಾಯಿಸುವ ಪ್ರಯತ್ನದಲ್ಲಿ ಕೆಲವು ಸ್ಪರ್ಧಿಗಳು ಹೇಳುವ ಮಾತನ ಕಡೆ ಗಮನ ನೀಡಬೇಕಾಗಿತ್ತು. ಇದರಿಂದ ನಿಮಗೆ ಸ್ಪಷ್ಟತೆ ಸಿಗುತ್ತಿತ್ತು. ಅಷ್ಟೇ. ತಪ್ಪಾಗಿದೆ ಎಂಬುದು ನಿಮಗೆ ಕೂಡ ಗೊತ್ತಾಗಲಿಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಮಾತನಾಡುತ್ತಿದ್ದೇನೆ ಹೊರತು ನಿಮ್ಮ ತಪ್ಪನ್ನು ಎತ್ತಿ ತೋರಿಸುವ ಉದ್ದೇಶ ನಮಗೆ ಇಲ್ಲ ಎಂದು ತಿಳಿಸಿದ್ದಾರೆ.

    ಈ ವೇಳೆ ದಿವ್ಯಾ ಉರುಡುಗರವರು ನಾನು ನನಗೆ ಬೇಕಾದಂತೆ ರೂಲ್ಸ್ ಮಾಡಿಕೊಂಡೆ ಎಂದು ಪ್ರಶಾಂತ್‍ರವರು ಆರೋಪಿಸಿದ್ದಾರೆ. ಆದರೆ ನಾನು ಎಲ್ಲರಿಗೂ ಒಳ್ಳೆಯದಾಗಬೇಕೆಂದು ನಿರ್ಧಾರಗಳನ್ನು ತೆಗೆದುಕೊಂಡೆ. ಒಂದು ವೇಳೆ ನನ್ನಿಂದ ಏನಾದರೂ ತಪ್ಪಾಗಿದ್ದರೆ ಎಲ್ಲರಲ್ಲಿಯೂ ಕ್ಷಮೆ ಕೇಳುತ್ತಾನೆ ಎಂದು ಗಳಗಳನೇ ಅತ್ತಿದ್ದಾರೆ. ಇದನ್ನೂ ಓದಿ:ಮಾತುಗಳಿಗೂ ಸ್ಯಾನಿಟೈಸರ್ ಬಳಸಿ – ಪ್ರಶಾಂತ್, ಚಕ್ರವರ್ತಿಗೆ ಕಿಚ್ಚ ವಾರ್ನ್

  • ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್

    ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್

    ಬಿಗ್‍ಬಾಸ್ ನೀಡಿದ್ದ  ನೋಟು ಮುದ್ರಿಸುವ ಟಾಸ್ಕ್ ವೇಳೆ ಏಪ್ರನ್‍ಗಾಗಿ ಮಂಜು ಹಾಗೂ ಪ್ರಶಾಂತ್ ನಡುವೆ ಕಾದಾಟ ನಡೆದಿದೆ.

    ಇಬ್ಬರ ಜಗಳ ಮಧ್ಯೆ ಪ್ರವೇಶಿಸಿದ ಕ್ಯಾಪ್ಟನ್ ದಿವ್ಯಾ ಉರುಡುಗ ಮೊದಲು ಏಪ್ರನ್ ಕತ್ತಿಗೆ ಹಾಕಿಕೊಂಡಿದ್ದು ಮಂಜು ಆಗಿರುವುದರಿಂದ ಏಪ್ರನ್ ಮಂಜುಗೆ ಸೇರಬೇಕೆಂದು ಪ್ರಶಾಂತ್‍ರಿಂದ ಏಪ್ರನ್ ಹಿಂಪಡೆದು ಮಂಜುಗೆ ನೀಡುತ್ತಾರೆ. ಇದರಿಂದ ಬೇಸರಗೊಂಡ ಪ್ರಶಾಂತ್, ತಪ್ಪು ನಿರ್ಧಾರ ತೆಗೆದುಕೊಂಡು ನಮ್ಮ ಮಾರ್ಯದೆ ತೆಗಿತಿದ್ದಾಳೆ ಎಂದು ಬೈದು, ಬೆಡ್ ರೂಮ್‍ಗೆ ಹೋಗಿ ಅಳುತ್ತಾರೆ.

    ಬಳಿಕ ಟಾಸ್ಕ್ ನಡೆಯುತ್ತಿದ್ದ ವೇಳೆ ಕ್ಯಾಪ್ಟನ್ ನೀವು ಇಂದು ಮೋಸದ ಆಟ ಆಡಿದ್ದೀರಾ ಎಂದು ಪ್ರಶಾಂತ್ ಹೇಳುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಾನು ಯಾವುದೇ ತಪ್ಪು ನಿರ್ಧಾರ ನೀಡಿಲ್ಲ ಎಂದಿದ್ದಾರೆ. ನಂತರ ಮಂಜುನೂ ಮೋಸ ಮಾಡಿದ್ದಾನೆ, ನೀನು ಕೂಡ ಮೋಸ ಮಾಡಿದ್ಯಾ ಎಂದು ಪದೇ ಪದೇ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಮೈಕ್ ಏನಾದರೂ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಮೈಕ್‍ನನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡು, ಮಂಜುನೂ ಮೋಸ ಮಾಡಿದ್ದಾನೆ, ದಿವ್ಯಾ ಉರುಡುಗನೂ ಮೋಸ ಮಾಡಿದ್ದಾಳೆ ಎಂದು ಕಿರುಚುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ಥ್ಯಾಂಕ್ಯು ಎಂದು ಅಣುಕಿಸುತ್ತಾರೆ.

    ನಂತರ ಅರವಿಂದ್ ಜೊತೆ ಇದೇ ವಿಚಾರವಾಗಿ ಚರ್ಚಿಸಿದ ದಿವ್ಯಾ ಉರುಡುಗ, ಟಾಸ್ಕ್ ಬುಕ್‍ನನ್ನು ಓದುತ್ತಾರೆ. ಕುತ್ತಿಗೆಗೆ ಮೊದಲು ಏಪ್ರಿನ್ ಧರಿಸುವ 5 ಮಂದಿ ಆ ಸುತ್ತಿನಲ್ಲಿ ನೋಟು ಮುದ್ರಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಪ್ರಶಾಂತ್‍ರವರು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಅವನು ಕುತ್ತಿಗೆಗೆ ಹಾಕಿಕೊಂಡಿಲ್ಲ. ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಹಾಕಿಕೊಂಡಿರಲಿಲ್ಲ ಎಂದು ವಾದಿಸಿದ್ದಾರೆ. ಜೊತೆಗೆ ಇಂದು ನಿನ್ನಲ್ಲಿ ಬೇಧ-ಭಾವವಿದೆ ಎಂದು ಕಿಡಿಕಾರಿದ್ದಾರೆ.

    ಇದಕ್ಕೆ ನಿಮ್ಮ ಮಾತಿನ ಮೇಲೆ ಅಲ್ಲ, ನನ್ನ ಕಣ್ಣಿನ ಮೇಲೆ ನನಗೆ ನಂಬಿಕೆ ಇದೆ, ಅವನು ಕುತ್ತಿಗೆಗೆ ಏಪ್ರನ್ ಹಾಕಿಕೊಂಡಿದ್ದನ್ನು ನೋಡಿದ್ದೇನೆ. ಆಗ ನಿಮ್ಮ ಕೈನಲ್ಲಿ ಏಪ್ರನ್ ಇತ್ತು. ಅದರ ಆಧಾರ ಮೇಲೆ ನಾನು ಮಂಜುಗೆ ಏಪ್ರನ್ ಕೊಟ್ಟಿದ್ದೇನೆ. ನನಗೆ ಗೊತ್ತಿದೆ ನಾನು ಸರಿ ಮಾಡುತ್ತಿದ್ದೇನೋ, ತಪ್ಪು ಮಾಡುತ್ತಿದ್ದೇನೋ, ನನ್ನ ಪ್ರಕಾರ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಸರಿ, ತಪ್ಪು ಯಾವುದು ಎಂದು ನೀವು ಹೇಳಿಕೊಡಬೇಕಾಗಿಲ್ಲ ಎಂದು ಗುಡುಗಿದ್ದಾರೆ.