Tag: ಪಬ್ಲಿಕ್ ಟಿವಿ Divya Suresh

  • ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿನ್ ಬ್ಯಾಗ್ ಮೇಲೆ ಮಂಜು, ಶುಭಾ ಕಣ್ಣು – ಡಿಎಸ್ ಒದ್ದಾಟ

    ಬಿಗ್‍ಬಾಸ್ ಈ ವಾರ ಮನೆಯ ಸ್ಪರ್ಧಿಗಳಿಗೆ ಒಂದೊಂದು ಸೀಕ್ರೆಟ್ ಟಾಸ್ಕ್ ನೀಡುತ್ತಾ ಬಂದಿದ್ದಾರೆ. ಅದರಂತೆ ಬಿಗ್‍ಬಾಸ್ ಈ ಬಾರಿ ದಿವ್ಯಾ ಸುರೇಶ್‍ಗೆ ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್‍ನನ್ನು ಪೂರ್ಣಗೊಳಿಸಲು ದಿವ್ಯಾ ಸುರೇಶ್ ಪಟ್ಟ ಕಷ್ಟ ಮಾತ್ರ ಅಷ್ಟಿಷ್ಟಲ್ಲ, ಆದರೂ ಎಷ್ಟೇ ಪ್ರಯತ್ನಿಸಿದರೂ ಈ ಟಾಸ್ಕ್ ಕಂಪ್ಲೀಟ್ ಮಾಡುವಲ್ಲಿ ಕೊನೆಗೆ ದಿವ್ಯಾ ಸುರೇಶ್ ವಿಫಲರಾಗಿದ್ದಾರೆ.

    ಬಿಗ್‍ಬಾಸ್ ಮನೆಯ ಸ್ಪರ್ಧಿಗಳ ಬಲು ಅಚ್ಚು-ಮೆಚ್ಚಿನ ಸೀಟ್ ಎಂದರೆ ಅದು ಬಿನ್‍ಬ್ಯಾಗ್. ಅದರಲ್ಲೂ ಮನೆಯಲ್ಲಿ ಎಷ್ಟೇ ಜಾಗ ಇದ್ದರೂ ಮಂಜು ಹಾಗೂ ಶುಭಾ ಮಾತ್ರ ಗಾರ್ಡನ್ ಎರಿಯಾಗೆ ಹೋಗಿ ಬಿನ್ ಬ್ಯಾಗ್‍ನನ್ನು ಹುಡುಕಿ ಅದರ ಮೇಲೆಯೇ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.

    ಸದ್ಯ ಬಿಗ್‍ಬಾಸ್ ಕರೆ ಮಾಡಿದಾಗ ಮಾತನಾಡಿದ ದಿವ್ಯಾ ಸುರೇಶ್‍ಗೆ ಈ ಮನೆಯಲ್ಲಿರುವ ಎರಡು ಬಿನ್‍ಬ್ಯಾಗ್ ಇದೆ. ಅದರ ಮೇಲೆ ಹೆಚ್ಚಾಗಿ ಯಾರು ಕುಳಿತುಕೊಳ್ಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಂಜು ಹಾಗೂ ಶುಭಾ ಪೂಂಜಾ ಎಂದು ದಿವ್ಯಾ ಸುರೇಶ್ ಉತ್ತರಿಸಿದ್ದಾರೆ. ಆಗ, ಬಿಗ್‍ಬಾಸ್ ನಾನು ನಿಮಗೆ ಒಂದು ಕೆಲಸ ಕೊಡುತ್ತೇನೆ. ನಾಳೆ ಸಂಜೆಯವರೆಗೂ ಮಂಜು ಹಾಗೂ ಶುಭಾ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಸೀಕ್ರೆಟ್ ಟಾಸ್ಕ್ ನೀಡಿದ್ದಾರೆ.

    ನಂತರ ಮಧ್ಯಾಹ್ನ ಮಂಜು ಹಾಗೂ ಶುಭಾ ಬಿನ್‍ಬ್ಯಾಗ್ ಮೇಲೆ ಕುಳಿತುಕೊಳ್ಳಲು ಗಾರ್ಡನ್ ಏರಿಯಾದತ್ತ ಹೋಗುತ್ತಿರುತ್ತಾರೆ. ಈ ವೇಳೆ ದಿವ್ಯಾ ಸುರೇಶ್ ನಾನು ಶುಭಾ ಜೊತೆ ಮಾತನಾಡಬೇಕು, ನಾನು ಅವಳೊಂದಿಗೆ ಟೈಮ್ ಸ್ಪೆಂಡ್ ಮಾಡಿಲ್ಲ ಎಂದು ಅಡ್ಡಹಾಕಿದ್ದಾರೆ. ಆದರೂ ಕೇಳದ ಮಂಜು ಶುಭಾರನ್ನು ದರದರ ಎಂದು ಎಳೆದುಕೊಂಡು ಹೋಗುತ್ತಿರುತ್ತಾರೆ. ಈ ಮಧ್ಯೆ ನೀನು ಕೂಡ ನಮ್ಮ ಜೊತೆ ಕುಳಿತುಕೊಂಡು ಮಾತನಾಡು ಬಾ ಎಂದು ದಿವ್ಯಾ ಸುರೇಶ್‍ರನ್ನು ಕೂಡ ಎಳೆದುಕೊಂಡು ಹೋಗುತ್ತಾರೆ.

    ಈ ವೇಳೆ ಬೇಡ ಬೇಡ ಎಂದು ಎಷ್ಟೇ ತಡೆದರು, ದಿವ್ಯಾ ಸುರೇಶ್‍ರನ್ನು ದೂರ ತಳ್ಳಿ ಶುಭಾ ಹಾಗೂ ಮಂಜು ಬಿನ್ ಬ್ಯಾಗ್ ಮೇಲೆ ಕುಳಿತೆ ಬಿಡುತ್ತಾರೆ. ಒಟ್ಟಾರೆ ಟಾಸ್ಕ್ ಕಂಪ್ಲೀಟ್ ಮಾಡಲು ಎಷ್ಟೇ ಒದ್ದಾಡಿ, ಪರದಾಡಿದರೂ ದಿವ್ಯಾ ಸುರೇಶ್ ಸೋತುಹೋಗಿದ್ದಾರೆ. ಒಟ್ಟಾರೆ ಈ ದೃಶ್ಯ ನೋಡಿದ ವೀಕ್ಷರಿಗೆ ಸಖತ್ ಮಜಾ ನೀಡಿದೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ:ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

  • ಕನಸು ನನಸು ಮಾಡಿಕೊಂಡ ದಿವ್ಯಾ ಸುರೇಶ್

    ಕನಸು ನನಸು ಮಾಡಿಕೊಂಡ ದಿವ್ಯಾ ಸುರೇಶ್

    ಬಿಗ್‍ಬಾಸ್ ಮನೆಯ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಒಮ್ಮೆಯಾದರೂ ಕ್ಯಾಪ್ಟನ್ ಆಗಬೇಕು ಎಂಬ ಆಸೆ ಇರುತ್ತದೆ. ಅದರಂತೆ ಕ್ಯಾಪ್ಟನ್ ಆಗಬೇಕೆಂದು ಹಲವು ದಿನಗಳಿಂದ ಕಾಯುತ್ತಿದ್ದ ದಿವ್ಯಾ ಸುರೇಶ್ ಕನಸು ಇದೀಗ ನನಸಾಗಿದೆ.

    ಮೇಕಪ್ ರೂಮಿನಲ್ಲಿ ಕುಳಿತುಕೊಂಡು ದಿವ್ಯಾ ಸುರೇಶ್, ಮೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದು ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್, ದಿವ್ಯಾ ಸುರೇಶ್ ನಿಮ್ಮ ಬಳಿ ಒಂದು ಸ್ಪೆಷಲ್ ಅಧಿಕಾರವಿದೆ ಅದನ್ನು ಈಗಲೇ ಬಳಸಿಕೊಳ್ಳಿ ಅದು ಒಂದು ದಿನಕ್ಕೆ ಮಾತ್ರ ಸೀಮಿತ ಅಂತ ಹೇಳಿ ಬಿಗ್‍ಬಾಸ್ ಎಂದು ಮೀರರ್ ನೋಡುತ್ತಾ ಕೇಳಿಕೊಂಡಿದ್ದಾರೆ.

    ಬಳಿಕ ಬಿಗ್‍ಬಾಸ್ ನೀಡಿದ್ದ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ನೀಡಿದ್ದರು. ಅದರಂತೆ ಈ ಆಟದಲ್ಲಿ ದಿವ್ಯಾ ಸುರೇಶ್ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ. ಬಳಿಕ ಬಿಗ್‍ಬಾಸ್ ದಿವ್ಯಾ ಸುರೇಶ್‍ರನ್ನು ಕ್ಯಾಪ್ಟನ್ ಆಗಿ ಘೋಷಿಸಿದ ನಂತರ ಫುಲ್ ಖುಷ್ ಆಗಿದ್ದಾರೆ.

    ನಂತರ ಮನೆಯ ಸ್ಪರ್ಧಿಗಳಿಗೆ ನಾನು ಇಂದು ಬೆಳಗ್ಗೆ ಪೌಡರ್ ರೂಮ್‍ನಲ್ಲೆ ಮೇಕಪ್ ಮಾಡಿಕೊಳ್ಳುತ್ತಿದ್ದೆ. ಈ ವೇಳೆ ಕ್ಯಾಮೆರಾ ನನಗೆ ಫೋಕಸ್ ಆಗಿತ್ತು. ಆಗ ಇದು ಬಿಗ್‍ಬಾಸ್ ಈ ವಾರದ ಕ್ಯಾಪ್ಟನ್ ಆಗಿ ದಿವ್ಯಾ ಸುರೇಶ್ ಆಯ್ಕೆಯಾಗಿದ್ದಾರೆ. ಅವರಿಗೆ ಅಭಿನಂದನೆಗಳು ಅಂತ ಹೇಳಿ ಬಿಗ್‍ಬಾಸ್ ಎಂದು ಕೇಳಿಕೊಂಡೆ ಇದು ನಿಜವಾಯ್ತು ಎಂದು ಸಂತಸಗೊಂಡಿದ್ದಾರೆ. ಇದನ್ನೂ ಓದಿ:ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

  • ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ಎಲ್ಲರೆದುರು ಸಿಟ್ಟಿನಿಂದ ಬೈಯ್ಯೋದು ಎಷ್ಟು ಸರಿ – ಮಂಜು ವಿರುದ್ಧ ದಿವ್ಯಾ ಅಸಮಾಧಾನ

    ವಾರ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಬಹಳ ಡಿಫರೆಂಟ್ ಟಾಸ್ಕ್‌ಗಳನ್ನು ನೀಡಿದ್ದಾರೆ. ಟಾಸ್ಕ್ ಆರಂಭಕ್ಕೂ ಮುನ್ನ ಮ್ಯೂಸಿಕ್ ವೊಂದನ್ನು ಪ್ಲೇ ಮಾಡಿದಾಗ ಎರಡು ತಂಡದ ಕ್ಯಾಪ್ಟನ್‍ಗಳು ಕನ್ಫೆಕ್ಷನ್ ರೂಮ್‍ಗೆ ಹೋಗಬೇಕಾಗುತ್ತದೆ.

    ಈ ಮಧ್ಯೆ ಮಂಜು ತಮ್ಮ ತಂಡದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ಮ್ಯೂಸಿಕ್ ಪ್ಲೇ ಆಗುತ್ತದೆ. ಆಗ ದಿವ್ಯಾ ಸುರೇಶ್ ನಿಧಾನವಾಗಿ ಡ್ಯಾನ್ಸ್ ಮಾಡುತ್ತಾ ಬರುತ್ತಾರೆ. ಇದನ್ನು ಕಂಡ ಮಂಜು ದಿವ್ಯಾ ಸುರೇಶ್‍ಗೆ ಬೇಗ ಬಾ ಎಂದು ರೇಗುತ್ತಾರೆ. ಇದರಿಂದ ಬೇಸರಗೊಂಡ ದಿವ್ಯಾ ಸುರೇಶ್ ಪ್ರಿಯಾಂಕ ಬಳಿ, ನಾನು ನಡೆದುಕೊಂಡು ಬರಬೇಕಾದರೆ ಮ್ಯೂಸಿಕ್ ಪ್ಲೇ ಆಯಿತು. ಅದಕ್ಕೆ ನಾನು ಡ್ಯಾನ್ಸ್ ಮಾಡಿಕೊಂಡು ಬರುತ್ತಿದ್ದೆ. ಅದಕ್ಕೆ ಬೇಗ ಬಾ ಏನು ಮಾಡುತ್ತಿದ್ಯಾ ಎಂದು ರೇಗುತ್ತಾರೆ. ನನ್ನ ಮೇಲೆ ರೇಗುವ ಅವಶ್ಯಕತೆ ಏನಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಫಸ್ಟ್ ಇನ್ನಿಂಗ್ಸ್‌ನಲ್ಲಿ ಹೇಗಿದ್ವಿ ಹಾಗೇ ಇರಲು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಆಗುವುದಿಲ್ಲ ಎಂದು ಹೇಳಿದ್ದೆ ಅವನು, ಅವನು ಇರಲು ಆಗುವುದಿಲ್ಲ ಎಂದರೆ ನಾನು ಹಾಗೆಯೇ ಇರುವುದಕ್ಕೆ ಆಗುವುದಿಲ್ಲ. ನಾನು ಸುಮ್ಮನೆ ಒಬ್ಬಳೇ ಕುಳಿತುಕೊಳ್ಳಲು ಆಗುವುದಿಲ್ಲ, ನಾನು ಎಲ್ಲರ ಜೊತೆಯಲ್ಲಿ ಕೂಡ ಮಾತನಾಡಬೇಕಾಗುತ್ತದೆ, ಎಲ್ಲರ ಜೊತೆ ಬೆರೆಯಬೇಕಾಗುತ್ತದೆ. ಕೊಟ್ಟಿರುವ ಟಾಸ್ಕ್‌ಗಳನ್ನು ಮಾಡಬೇಕಾಗುತ್ತದೆ. ಸುದೀಪ್ ಸರ್ ಹೇಳಿದ್ರು, ನಾನು ಚೆನ್ನಾಗಿ ಆಟ ಆಡುತ್ತಿದ್ದೇನೆ ಅಂತ, ನಾನು ಕೂಡ ಅದನ್ನೇ ಮಾಡಬೇಕಾಗುತ್ತದೆ. ಸುಮ್ಮನೆ ನನ್ನ ಮೇಲೆ ರೇಗಾಡಿದ, ಅದರ ಅವಶ್ಯತೆ ಇರಲಿಲ್ಲ ಎಂದು ಹೇಳುತ್ತಾರೆ.

    ಅವನು ಶುಭಾ ಜೊತೆ ಬಹಳ ಕ್ಲೋಸ್ ಆಗಿದ್ದಾನೆ. ಅವನು ಕುಳಿತು ಹೋದ ಬಿನ್ ಬ್ಯಾಗ್ ಮೇಲೆ ಕುಳಿತುಕೊಳ್ಳಲು ನಾನು ಎಷ್ಟು ಯೋಚಿಸುತ್ತೇನೆ ಗೊತ್ತಾ. ನಾನು ನೀನು ಯಾಕೆ ಅಷ್ಟು ಕ್ಲೋಸ್ ಆಗಿದ್ಯಾ ಅಂತ ಒಂದು ಕಂಪ್ಲೇಟ್ ಕೂಡ ಮಾಡಿಲ್ಲ, ನಿನ್ನ ಲೈಫ್, ನೀನು ಏನು ಬೇಕಾದರೂ ಮಾಡಬಹುದು, ಹಾಗೆಯೇ ನನ್ನ ಲೈಫ್ ನಾನು ಏನು ಬೇಕಾದರೂ ಮಾಡಬಹುದು. ನಾನು ಏನು ಮಾಡಿಲ್ಲ ಆದರೂ ಎಲ್ಲರೆದುರು ಸಿಟ್ಟಿನಿಂದ ಬೈಯುವುದು ಎಷ್ಟು ಸರಿ ನಿನ್ನೆ ಕೂಡ ಹೀಗೆ ಮಾಡಿದ ಕಣ್ಣೀರಾಕಿದ್ದಾರೆ. ಇದನ್ನೂ ಓದಿ: ಶಮಂತ್ ಒಂದು ದಾರಿಯಲ್ಲಿ ನಡೆದು ಬಿಟ್ರೆ, ನಾನು ಚಾಲೆಂಜ್ ಮಾಡ್ತೇನೆ: ಚಕ್ರವರ್ತಿ

  • ರ್‍ಯಾಗಿಂಗ್ ರೂವಾರಿ ಚಕ್ರವರ್ತಿ, ಕ್ಷಮಿಸಿ ದಿವ್ಯಾ ಸುರೇಶ್: ಪ್ರಶಾಂತ್ ಸಂಬರಗಿ

    ರ್‍ಯಾಗಿಂಗ್ ರೂವಾರಿ ಚಕ್ರವರ್ತಿ, ಕ್ಷಮಿಸಿ ದಿವ್ಯಾ ಸುರೇಶ್: ಪ್ರಶಾಂತ್ ಸಂಬರಗಿ

    ದಿವ್ಯಾ ಸುರೇಶ್ ವೈಯಕ್ತಿಕ ವಿಚಾರ ಕುರಿತಂತೆ ಅಣುಕಿಸಿದ್ದ ಪ್ರಶಾಂತ್ ಸಂಬರಗಿಯವರಿಗೆ ಶನಿವಾರ ಬಿಗ್‍ಬಾಸ್ ಪಂಚಾಯತಿಯಲ್ಲಿ ಪ್ರಶಾಂತ್ ಸಂಬರಗಿಯವರಿಗೆ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ನಂತರ ತಮ್ಮ ತಪ್ಪನ್ನು ಅರಿತ ಪ್ರಶಾಂತ್ ಸಂಬರಗಿಯವರು ದಿವ್ಯಾ ಸುರೇಶ್ ಬಳಿ ಹೋಗಿ, ನೀನು ಡಿಗ್ರಿ ಕಾಲೇಜ್ ಪಿಕ್ಚರ್ ಮಾಡಿರುವುದರ ಬಗ್ಗೆ ನನಗೆ ಗೊತ್ತೆ ಇರಲಿಲ್ಲ. ಈ ಡ್ರಾಮವನ್ನೆಲ್ಲಾ ನನ್ನ ತಲೆಗೆ ಹಾಕಿದ್ದು ಚಕ್ರವರ್ತಿ. ನನಗೆ ಏನು ಗೊತ್ತಿರಲಿಲ್ಲ ನಾನು ಹೇಳುತ್ತೇನೆ, ನೀನು ರಿಯಾಕ್ಟ್ ಮಾಡು ಅಂತ ಹೇಳಿದ್ದರು. ನನ್ನನ್ನು ನೀನು ಕರ್ನಾಟಕದ ಜನತೆ ಮುಂದೆ ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದೆ, ಹಾಗಾಗಿ ನೀನು ನನಗೆ ಕ್ಷಮೆ ಕೇಳುತ್ತೀಯಾ ಎಂದು ಕೊಂಡಿದ್ದೆ. ನಿನಗೆ ನಾನು ಪ್ರತಿ ಬಾರಿ ಗೈಡೆನ್ಸ್ ನೀಡಿದ್ದೇನೆ. ಆದರೆ ಏನಾದರೂ ತಪ್ಪು ಮಾಡಿದ್ನಾ? ಎಂದು ಹೇಳುತ್ತಾ ಕ್ಷಮೆಯಾಚಿಸಿದ್ದಾರೆ.

    ಇದಕ್ಕೆ ದಿವ್ಯಾ ಸುರೇಶ್ ಕೂಡ ನಾನು ನಿಮ್ಮ ಬಗ್ಗೆ ಆ ಹೇಳಿಕೆ ನೀಡಬಾರದಿತ್ತು ಸಾರಿ ಎಂದು ಕ್ಷಮೆ ಕೋರಿದ್ದಾರೆ. ನಂತರ ನೀನು ಸೆಕ್ಯೂರಿಟಿ ಗಾರ್ಡ್ ಎಂದಿದ್ದಕ್ಕೆ ಅಷ್ಟೇ ಕೋಪ ಇತ್ತು. ಆದರೆ ಇದರ ರೂವಾರಿ ಚಕ್ರವರ್ತಿ ಚಂದ್ರಚೂಡ್ ಎಂದು ಹೇಳಿದ್ದಾರೆ.

    ಬಳಿಕ ಕಿಚ್ಚ ಸುದೀಪ್ ಮುಂದೆ ಕೂಡ ಈ ರ್‍ಯಾಗಿಂಗ್ ರೂವಾರಿ, ಸ್ಕ್ರಿಪ್ಟ್ ರೈಟರ್ ಚಕ್ರವರ್ತಿಯವರು ನಾನು ಕೇವಲ ಪಾತ್ರ ತುಂಬಿದ್ದೆ ಅಷ್ಟೇ ನಾನು ದಿವ್ಯಾ ಸುರೇಶ್‍ಗೆ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಕೂಡ ಅವಳಿಂದ ಕ್ಷಮೆ ನಿರೀಕ್ಷಿಸಿದ್ದೆ. ಯಾಕೆಂದರೆ ನನ್ನನ್ನು ಸೆಕ್ಯೂರಿಟಿ ಗಾರ್ಡ್ ಎಂದು ಕರೆದಿದ್ದಳು. ನಾನು ಅವಳಿಗೆ ತಿಳಿ ಹೇಳಿದ್ದೆ, ಅವಳಿಗೆ ಒಳ್ಳೆಯಾದಗಲಿ ಎಂದು ಬಯಸಿದ್ದೆ. ಅದೊಂದು ಬೇಜಾರಿತ್ತು. ಆದರೆ ಅದು ಬಿಟ್ಟರೆ ಅವಳು ಸ್ವೀಟ್ ಗರ್ಲ್. ಅವಳು ನನಗೆ ಬೇಜಾರು ಮಾಡಿದಕ್ಕೆ, ನಾನು ಅವಳಿಗೆ ಬೇಜಾರು ಮಾಡಲು ಹೊರಟಿದ್ದೆ. ಅದು ನನ್ನ ಚಿಕ್ಕತನ. ಆದರೆ ನಾನು ಅದನ್ನು ಕ್ಷಮಿಸಿ ಮುಂದೆ ಹೋಗಬೇಕಾಗಿತ್ತು ಎಂದಿದ್ದಾರೆ.

  • ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು, ಕೆಟ್ಟವರಿಗೆ ದುಷ್ಟ: ಸಂಬರಗಿ

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ವೇಳೆ ದಿವ್ಯಾ ಸುರೇಶ್ ಹೇಳಿದ ಒಂದು ಹೇಳಿಕೆಯಿಂದ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಆಕ್ರೋಶಗೊಂಡಿದ್ದಾರೆ.

    ಭಾನುವಾರ ನಡೆದ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರನ್ನು ಬಹುಶಃ ನಿನ್ನನ್ನು ಸೆಕ್ಯೂರಿಟಿ ಗಾರ್ಡ್ ಆಗಿ ಕರೆಸಿರಬಹುದು. ಯಾವಾಗಲೂ ಹಿಂದೆ ಮಾತನಾಡುತ್ತಿದ್ದರು ಎಂದು ನಮ್ಮ ಮನೆಯಲ್ಲಿ ಹೇಳುತ್ತಿದ್ದರು ಎಂದು ದಿವ್ಯಾ ಸುರೇಶ್ ಸುದೀಪ್ ಎದುರಲ್ಲಿ ಹೇಳಿದ್ದರು.

    ವಾರದ ಕೊನೆಯಲ್ಲಿ ಪ್ರಶಾಂತ್ ಅವರನ್ನು ಎಲಿಮಿನೆಟ್‍ಗೊಳಿಸಿ ನಂತರ ಮನೆಯ ಸ್ಪರ್ಧಿಗಳಿಗೆ, ಪ್ರಶಾಂತ್ ಅವರು ಸೇವ್ ಆಗಿದ್ದು, ಬಿಗ್‍ಬಾಸ್ ಮುಂದಿನ ಆದೇಶದವರೆಗೂ ಮನೆಯಲ್ಲಿ ಪ್ರಶಾಂತ್ ಕಂಡರೂ ಕಾಣದಂತೆ ವರ್ತಿಸಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು. ನಂತರ ಮನೆ ಮಂದಿಯನ್ನೆಲ್ಲಾ ಮಾತನಡಿಸಲು ಸರ್ಕಸ್ ಮಾಡಿದ ಪ್ರಶಾಂತ್ ಜೊತೆಗೆ ಯಾರು ಕೂಡ ಮಾತನಾಡಲಿಲ್ಲ.

    ಈ ವೇಳೆ ದಿವ್ಯಾ ಸುರೇಶ್‍ರನ್ನು ಬಿಡದೇ ಪ್ರಶಾಂತ್ ಸಂಬರ್ಗಿ ಕೆದಕುವ ಪ್ರಯತ್ನ ಮಾಡಿದ್ದಾರೆ. ಡೈನಿಂಗ್ ಹಾಲ್ ಕುಳಿತು ದಿವ್ಯಾ ಸುರೇಶ್ ಟಿಫಿನ್ ಮಾಡುತ್ತಿರುತ್ತಾರೆ. ಆಗ ಪ್ರಶಾಂತ್, ಪ್ರಿಯಾಂಕ ಆಚೆ ಹೋದಾಗ ನನ್ನ ಟಿವಿ ಸಂದರ್ಶನಗಳನ್ನು ನೋಡಿದ್ಯಾ? ಫೇಕ್ ಲವ್ ಸ್ಟೋರಿ ಬಗ್ಗೆ ಹೇಳಿದ್ದೇನೆ. ಅದನ್ನು ಇಲ್ಲಿಯೂ ಒಪ್ಪಿಕೊಂಡಿದ್ದಾರೆ. ಪ್ರಿಯಾಂಕ ಫೇಕ್ ಲವ್ ಸ್ಟೋರಿ ಬಗ್ಗೆ ಕೇಳಿದ್ಯಾ? ಕೃತಕವಾದ ಮೆಕನಿಕಲ್ ಲವ್ ಸ್ಟೋರಿ ಬಗ್ಗೆ ನಾನು ಆಚೆ ಹೇಳಿದ್ದೇನೆ. ಕರ್ನಾಟಕ ಜನತೆ ಮುಂದೆ ಆಡಿರುವ ನಾಟಕ ಒಪ್ಪಿಕೊಂಡಿದ್ದಾರೆ. ಇರುವುದನ್ನು ಹಾಗೇ ನಾನು ಆಚೆ ನೇರವಾಗಿ ಹೇಳಿದರೆ ನಿಷ್ಠುರವಾಗಿ ಕೋಪ ಬರುತ್ತದೆ. ಪ್ರಿಯಾಂಕ ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ ಎಷ್ಟು ಕೆಲಸ ಗೊತ್ತಾ? ನಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್‍ಗೆ 30 ಸಾವಿರ ಸಂಬಳ ಜೊತೆಗೆ ಮನೆ ಕೂಡ ನೀಡಿದ್ದೇನೆ ಎಂದು ಅಣುಕಿಸಿದ್ದಾರೆ.

    ನಂತರ ಶಮಂತ್ ಕಿವಿಯ ಬಳಿ ಬಂದು ನಾನು ಒಳ್ಳೆಯವರಿಗೆ ತುಂಬಾ ಒಳ್ಳೆಯವನು ಕೆಟ್ಟವರಿಗೆ ದುಷ್ಟ ಎಂದು ನನಗೆ ಶತ್ರುಗಳಿಗಿಂತ ಮಿತ್ರರು ಜಾಸ್ತಿ ಇದ್ದಾರೆ. ಆದರೆ ಶತ್ರುಗಳೇ ರಿಯಲ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ಪ್ರಶಾಂತ್ ಸಂಬರಗಿ

  • ಮಚ್ಚೆ ಇರಬೇಕು ಅಂತ ಹೇಳಿದ್ಯಾಕೆ ರಘು!

    ಮಚ್ಚೆ ಇರಬೇಕು ಅಂತ ಹೇಳಿದ್ಯಾಕೆ ರಘು!

    -ರಘುಗೆ ಅದೃಷ್ಟ ಪುರುಷ ನೀನೇಂದ ದಿವ್ಯಾ ಸುರೇಶ್

    ಬೆಳಗ್ಗೆ ಎದ್ದ ಕೂಡಲೇ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಿಸಿ ಬಿಸಿಯಾದ ರುಚಿಕರವಾದ ಕಾಫಿ, ಟೀಯನ್ನು ಸವಿಯುತ್ತಾರೆ. ಆದರೆ ತಮಗೆ ಬೇಕಾದ ಕಾಫಿ ಹಾಗೂ ಟೀಯನ್ನು ಸ್ಪರ್ಧಿಗಳು ಅವರಿಗೆ ಅವರೇ ಮಾಡಿಕೊಂಡು ಕುಡಿಯಬೇಕು. ಈ ಮಧ್ಯೆ ಇಂದು ರಘು ಮತ್ತೊಬ್ಬರ ಕೈಯಲ್ಲಿ ಕಾಫಿ ಮಾಡಿಸಿಕೊಂಡು ಕುಡಿಯುತ್ತಿರುವುದಾಗಿ ಹೇಳಿದಕ್ಕೆ, ದಿವ್ಯಾ ಸುರೇಶ್ ನೀನು ಅದೃಷ್ಟ ಪುರುಷ ಎಂದು ಕಾಮೆಂಟ್ ಮಾಡಿದ್ದಾರೆ.

    ಬೆಳಗ್ಗೆ ಎದ್ದು, ಬೆಡ್ ರೂಂ ಏರಿಯಾದಲ್ಲಿ ದಿವ್ಯಾ ಸುರೇಶ್ ಕುಳಿತುಕೊಂಡಿದ್ದಾಗ, ಕಾಫಿ ಯಾವಾಗ ಮಾಡಿಕೊಂಡು ಕುಡಿಯಲಿ ಎಂದು ಯೋಚಿಸುತ್ತಿದ್ದೇನೆ ಎಂದು ರಘುಗೆ ಹೇಳುತ್ತಾರೆ. ಅದನ್ನು ಕೇಳಿ ರಘು ಏನ್ ಮಗ ಎಲ್ಲಾ ಟಾಸ್ಕ್ ತರ ಪ್ಲಾನ್ ಮಾಡುವಂತಾಗಿ ಹೋಯಿತಲ್ಲಾ ಎನ್ನುತ್ತಾರೆ.

    ನಂತರ ನೀನು ಕಾಫಿ ಕುಡಿದ್ಯಾ ಎಂದು ದಿವ್ಯಾ ಸುರೇಶ್ ರಘುರನ್ನು ಕೇಳಿದಾಗ, ಇಲ್ಲಾ ಮಾಡಿಸಿಕೊಳ್ಳುತ್ತಿದ್ದೇನೆ ಎಂದು ರಘು ಹೇಳುತ್ತಾರೆ. ಆಗ ದಿವ್ಯಾ ಸುರೇಶ್, ನಿನಗೇನಪ್ಪಾ ಮಾಡಿ ಕೊಡುವವರಿದ್ದಾರೆ ಕಾಫಿನಾ.. ಅಂತ ಹೇಳುತ್ತಾ ರೇಗಿಸುತ್ತಾರೆ. ಅದಕ್ಕೆ ರಘು ನಾನು ಕಾಫಿ ಮಾಡಿದರೆ ಡಬ್ಬಾ ತರ ಇರುತ್ತದೆ ಎಂದು ಹೇಳುತ್ತಾ ನಗುತ್ತಾರೆ.

    ಇದಕ್ಕೆ ದಿವ್ಯಾ ಸುರೇಶ್ ಬಿಡಪ್ಪಾ ಆಯ್ತು, ಕಾಫಿ ಮಾಡಿಕೊಡುವುದಕ್ಕೆ ಒಬ್ಬರು, ಟಿಫನ್ ಹಾಕಿಕೊಡುವುದಕ್ಕೆ ಒಬ್ಬರು, ನೀರು ಕೊಡುವುದಕ್ಕೆ ಒಬ್ಬರು ಅದೃಷ್ಟ ಪುರುಷ ನೀನು ಎಂದು ಗೇಲಿ ಮಾಡುತ್ತಾರೆ. ನನ್ನ ವೈಫು ಹೇಳಿದ್ಲಾಲ್ಲಾ ಮಜಾ ಮಾಡು ಅಂತಾ, ಏನು ಮಜಾ ಮಾಡುವುದೋ ಇಲ್ಲಿ ಅಂತ ರಘು ಹೇಳುತ್ತಾರೆ. ಆಗ ದಿವ್ಯಾ ಸುರೇಶ್ ಹಾಗೇ ಹೇಳಿಕೊಂಡೇ ಇಲ್ಲಿ ಬೆಳಗ್ಗೆ ಎದ್ದಾಗಲಿಂದಲೂ ಮಲಗುವವರೆಗೂ ನಿನಗೆ ಎಲ್ಲಾ ಸಿಗುತ್ತೆ. ಅದಕ್ಕೆಲ್ಲಾ ಪುಣ್ಯ ಮಾಡಿರಬೇಕು ಎನ್ನುತ್ತಾರೆ.

    ಅಂದ್ರೆ ಅದಕ್ಕೆಲ್ಲಾ ಮಚ್ಚೆ ಇರಬೇಕು ಅಂತೀಯಾ ಎಂದು ರಘು ಕೇಳುತ್ತಾರೆ. ಆಗ ದಿವ್ಯಾ ಸುರೇಶ್ ಹಾ.. ಎಂದು ಹೇಳುತ್ತಾ ನಗುತ್ತಾರೆ.