Tag: ಪಬ್ಲಿಕ್ ಟಿವಿ Dhanya Ram Kumar

  • ಕಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರಾ ಡಾ. ರಾಜ್‌ಕುಮಾರ್ ಮೊಮ್ಮಗಳು?

    ಕಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರಾ ಡಾ. ರಾಜ್‌ಕುಮಾರ್ ಮೊಮ್ಮಗಳು?

    ಬೆಂಗಳೂರು: ವರನಟ ಡಾ. ರಾಜ್ ಕುಮಾರ್‍ರವರ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಕಾಲಿವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿಯೊಂದು ಇದೀಗ ಗಾಂಧೀನಗರದಲ್ಲಿ ಹರಿದಾಡುತ್ತಿದೆ.

    ನಿನ್ನ ಸನಿಹಕೆ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದರ್ಪಣೆ ಮಾಡಿರುವ ಧನ್ಯಾ ರಾಮ್ ಕುಮಾರ್ ಈ ಚಿತ್ರದಲ್ಲಿ ನಟ ಸೂರಜ್ ಗೌಡಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಸಿನಿಮಾ ಆಗಸ್ಟ್ 20ರ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬೆಳ್ಳಿ ಪರದೆ ಮೇಲೆ ಬರಲಿದೆ ಎಂದು ಚಿತ್ರತಂಡ ಹೇಳುತ್ತಿದೆ.

    ಈ ಮಧ್ಯೆ ಧನ್ಯಾ ರಾಮ್ ಕುಮಾರ್‍ಗೆ ತಮಿಳು ಚಿತ್ರರಂಗದಿಂದ ಆಫರ್‌ವೊಂದು ಬಂದಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ವಿಚಾರವಾಗಿ ಕೆಲವು ತಮಿಳು ವೆಬ್‍ಸೈಟ್‍ಗಳಲ್ಲಿ ಸದ್ಯದಲ್ಲಿಯೇ ಧನ್ಯಾ ರಾಮ್ ಕುಮಾರ್ ತಮಿಳು ಸಿನಿಮಾವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ ಎಂದು ವರದಿ ಮಾಡಿದೆ. ಆದರೆ ಧನ್ಯಾ ರಾಮ್ ಕುಮಾರ್ ಅಭಿನಯಿಸುತ್ತಿರುವ ಚಿತ್ರ ಯಾವುದು, ನಿರ್ದೇಶಕ, ನಟ ಯಾರು ಎಂಬ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ದೊರೆತಿಲ್ಲ.

    ಈ ವಿಚಾರವಾಗಿ ತಮಿಳು ಚಿತ್ರ ವಿಶ್ಲೇಷಕ ಕೌಶಿಕ್ ಧನ್ಯಾ ರಾಮ್ ಸಿನಿಮಾ ಕುರಿತಂತೆ ಆದಷ್ಟು ಬೇಗ ವಿವರಗಳು ಸಿಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ ಕಲಾವಿದೆ ಜಯಂತಿ: ಗಣ್ಯರ ಸಂತಾಪ