Tag: ಪಬ್ಲಿಕ್ ಟಿವಿ D.K shivakumar

  • ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14ಕ್ಕೆ ಮುಂದೂಡಿಕೆ

    ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14ಕ್ಕೆ ಮುಂದೂಡಿಕೆ

    ನವದೆಹಲಿ: ದೆಹಲಿ ಹೈಕೋರ್ಟ್ ಗೆ ಡಿ.ಕೆ ಶಿವಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14ಕ್ಕೆ ಮುಂದೂಡಲಾಗಿದ್ದು, ಇನ್ನೂ 14 ದಿನ ಕನಕಪುರ ಬಂಡೆ ಸೆರೆಮನೆ ವಾಸ ಅನುಭವಿಸಬೇಕಿದೆ.

    ಇಡಿ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ಡಿ.ಕೆ.ಶಿವಕುಮಾರ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಇಡಿ ಕೋರ್ಟ್ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ದೆಹಲಿ ಹೈಕೋರ್ಟ್ ನ ನ್ಯಾ.ಸುರೇಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆಗೆ ಬಂದಿತ್ತು. ವಿಚಾರಣೆ ನಡೆಯಬೇಕಿತ್ತು. ಈ ವಿಚಾರಣೆಯನ್ನು ನ್ಯಾಯಾಲಯ ಅ. 14ಕ್ಕೆ ಮುಂದೂಡಿದ್ದು, ಸದ್ಯ ಡಿಕೆಶಿ ತಿಹಾರ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ.

    ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ನ್ಯಾಯಂಗ ಬಂಧನದಡಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ. ಕನಕಪುರ ಬಂಡೆ ತಿಹಾರ್ ಜೈಲಿನಲ್ಲೇ ಸೆರೆಮನೆವಾಸ ಅನುಭವಿಸುತ್ತಿದ್ದು, ಇಡಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದಕ್ಕೆ ಡಿಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಜಾಮೀನು ಪಡೆಯುವ ಬಗ್ಗೆ ಕಾನೂನು ಹೋರಾಟ ಮುಂದುವರಿಸಿದ್ದಾರೆ.

    ಡಿಕೆಶಿ ಪರ ವಕೀಲರು ಯಾವ ಆಧಾರದ ಮೇಲೆ ಜಾಮೀನು ಕೊಡಲು ಇಡಿ ಕೋರ್ಟ್ ನಿರಾಕರಿಸಿದೆಯೋ ಅದೇ ಆಧಾರಗಳ ಮೇಲೆ ವಾದ ಮಾಡಿ ಜಾಮೀನು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡಿ ಕೋರ್ಟ್ ಜಾಮೀನು ನಿರಾಕರಿಸಲು ಪ್ರಮುಖವಾಗಿ ಮೂರು ಕಾರಣ ಕೊಟ್ಟಿತು. 317 ಖಾತೆಗಳ ಮೂಲಕ ಹಣ ವರ್ಗಾವಣೆ, ಡಿಕೆಶಿ ಪ್ರಭಾವಿಯಾಗಿರೋದು ಮತ್ತು ಪ್ರಕರಣ ತನಿಖಾ ಹಂತದಲ್ಲಿದೆ ಹಾಗಾಗಿ ಜಾಮೀನು ನೀಡೋಕೆ ಸಾಧ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ. ಇದೇ ಮೂರು ವಿಚಾರಗಳನ್ನು ಇಟ್ಟು ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ತಮಗೆ ಸಂಬಂಧ ಇಲ್ಲದ ವಿಚಾರಗಳ ಬಗ್ಗೆ ಇಡಿ ವ್ಯಾಪ್ತಿ ಮೀರಿ ತನಿಖೆ ಮಾಡುತ್ತಿದೆ ಎಂದು ಡಿಕೆ ಪರ ವಕೀಲರು ವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.

  • ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

    ಡಿಕೆಶಿಗೆ ಭಾರೀ ಮುಖಭಂಗ – ಶಾಸಕರನ್ನು ರಕ್ಷಿಸಲು ಸುಳ್ಳು ಹೇಳಿ ಭಾರೀ ಟೀಕೆಗೆ ಗುರಿಯಾದ್ರು ಡಿಕೆ ಬ್ರದರ್ಸ್!

    ಬೆಂಗಳೂರು: ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಭದ್ರಕೋಟೆಯನ್ನು ಕೆಡವಿ ಬಳ್ಳಾರಿಯ ರಾಜ ನಾನೇ ಎಂದು ಪೋಸ್ ಕೊಟ್ಟಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಭಾರೀ ಮುಖಭಂಗವಾಗಿದೆ. ಶಾಸಕರನ್ನು ರಕ್ಷಿಸಲು ಈಗ ಡಿಕೆ ಸಹೋದರರು ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಈಗ ಗುರಿಯಾಗುತ್ತಿದ್ದಾರೆ.

    ಹೌದು, ಆನಂದ್ ಸಿಂಗ್ ಮತ್ತು ಕಂಪ್ಲಿ ಗಣೇಶ್ ಇಬ್ಬರು ಒಳ್ಳೇಯ ಸ್ನೇಹಿತರು ಇಲ್ಲೇ ರೆಸಾರ್ಟ್ ನಲ್ಲೇ ಇದ್ದಾರೆ. ಮಧ್ಯಾಹ್ನ ಇಬ್ಬರು ಒಟ್ಟಿಗೆ ಬಂದು ಪ್ರತಿಕ್ರಿಯೆ ಕೊಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರೆ ಮತ್ತೊಂದು ಕಡೆ ಆನಂದ್ ಸಿಂಗ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ತೆರಳಿ ಸಹೋದರ ಡಿ.ಕೆ ಸುರೇಶ್ ಆರೋಗ್ಯ ವಿಚಾರಿಸಿದ್ದಾರೆ. ಶಾಸಕರ ಮರ್ಯಾದೆ ಉಳಿಸಲು ಡಿಕೆ ಸಹೋದರರು ಸುಳ್ಳು ಮೇಲೆ ಸುಳ್ಳು ಹೇಳಿಕೆ ನೀಡಿ ಈಗ ಪೇಚೆಗೆ ಸಿಲುಕಿದ್ದಾರೆ.

    ಜಿಲ್ಲಾ ಉಸ್ತುವಾರಿ ಮಂತ್ರಿ ಸ್ಥಾನವನ್ನು ಪಡೆದು, ಲೋಕಸಭಾ ಉಪಚುನಾವಣೆಯಲ್ಲಿ ಉಗ್ರಪ್ಪನವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ ಬಳಿಕ ಡಿಕೆ ಶಿವಕುಮಾರ್ ಕನಕಪುರದ ಬಳಿಕ ಬಳ್ಳಾರಿ ರಾಜಕೀಯದಲ್ಲೂ ತಮ್ಮ ಪ್ರಭಾವ ವಿಸ್ತರಿಸತೊಡಗಿದ್ದರು. ಆದರೆ ಈಗ ಆನಂದ್ ಸಿಂಗ್ ಪ್ರಕರಣದಿಂದಾಗಿ ಡಿಕೆಶಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ:ಮೊದ್ಲು ಮದುವೆ ಬಳಿಕ ಎದೆನೋವು ಈಗ ಆಕ್ಸಿಡೆಂಟ್ – ಕಡೆಗೂ ಆನಂದ್ ಸಿಂಗ್ ತಲೆಗೆ 12 ಹೊಲಿಗೆ!

    ಶಾಸಕರನ್ನು ತಮ್ಮ ಜಿಲ್ಲಾ ವ್ಯಾಪ್ತಿಯ ರೆಸಾರ್ಟ್ ಗೆ ಕರೆತಂದು ಸರ್ಕಾರದ ರಕ್ಷಣೆ, ಶಾಸಕರ ರಕ್ಷಣೆ ಮಾಡುವುದು ನಾವೇ ಎಂದು ಡಿಕೆ ಸಹೋದರು ಪೋಸ್ ಕೊಟ್ಟಿದ್ದರು. ಉಗ್ರಪ್ಪನವರನ್ನು ಗೆಲ್ಲಿಸಿದ ಬಳಿಕ ಬಳ್ಳಾರಿಯ ಶಾಸಕರು ಹಾಗೂ ಸಚಿವರು ನಾನು ಹೇಳಿದಂತೆ ಕೇಳಬಹುದು ಎನ್ನುವ ನಂಬಿಕೆಯಲ್ಲಿದ್ದ ಡಿಕೆ ಶಿವಕುಮಾರ್ ಈಗ ಆನಂದ್ ಸಿಂಗ್ ಪ್ರಕರಣವನ್ನು ನಿಭಾಯಿಸುವುದು ಹೇಗೆ ಎನ್ನುವ ಚಿಂತೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಆನಂದ್ ಸಿಂಗ್ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲು: ಸಂಸದ ಡಿಕೆ ಸುರೇಶ್

    ವಿಶೇಷ ಏನೆಂದರೆ ಶನಿವಾರ ಸಂಜೆ ವಿಧಾನಸೌಧದಲ್ಲಿ ನಡೆದ ಬಳ್ಳಾರಿ ಜಿಲ್ಲೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಲು ಬಳ್ಳಾರಿ ಶಾಸಕರನ್ನು ರೆಸಾರ್ಟಿನಿಂದ ತಮ್ಮ ಕಾರಿನಲ್ಲೇ ಡಿಕೆಶಿ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೇ ಬಳ್ಳಾರಿ ಶಾಸಕರು ಯಾರು ಕಾಂಗ್ರೆಸ್ ಬಿಡಲ್ಲ ಎನ್ನುವುದನ್ನು ತೋರಿಸಲು ಸಂಜೆ ಮಾಧ್ಯಮಗಳ ಮುಂದೆ ನಿಲ್ಲಿಸಿ ಡಿಕೆಶಿ ಪೋಸ್ ಕೊಟ್ಟಿದ್ದರು. ರಾತ್ರಿ ರೆಸಾರ್ಟಿನಿಂದ ಮನೆಗೆ ತೆರಳಿದ್ದ ಡಿಕೆಶಿಗೆ ಬೆಳಗಿನ ಜಾವ ಆನಂದ್ ಸಿಂಗ್, ಗಣೇಶ್ ಹೊಡೆದಾಟದ ಸುದ್ದಿ ಕೇಳಿ ಶಾಕ್ ಆಗಿ ತಕ್ಷಣವೇ ಬಿಡದಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಯಾವ ಹೊಡೆದಾಟವೂ ಇಲ್ಲ, ಬಾಟಲಿಯೂ ಇಲ್ಲ: ಡಿಕೆಶಿ

    ಒಂದು ಕಡೆ ಶಾಸಕರನ್ನ ಹಿಡಿದಿಟ್ಟುಕೊಳ್ಳಬೇಕು ಮತ್ತೊಂದು ಕಡೆ ಪಕ್ಷದ ಮಾನವನ್ನು ಕಾಪಾಡಬೇಕು. ಶಾಸಕರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದ ತಪ್ಪಿಗೆ ಈಗ ಎಲ್ಲದಕ್ಕೂ ತಾವೇ ಉತ್ತರ ಕೊಡಬೇಕು ಎನ್ನುವ ಚಿಂತೆಗೆ ಈಗ ಡಿಕೆ ಸಹೋದರರು ಬಿದ್ದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv