Tag: ಪಬ್ಲಿಕ್ ಟಿವಿ Coronavirus

  • ನಂಗೆ ಕಣ್ಣು ಕಾಣಿಸಲ್ಲ, ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ಲಸಿಕೆಗೆ ಅಜ್ಜಿ, ಅಜ್ಜ ನಿರಾಕರಣೆ

    ನಂಗೆ ಕಣ್ಣು ಕಾಣಿಸಲ್ಲ, ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ಲಸಿಕೆಗೆ ಅಜ್ಜಿ, ಅಜ್ಜ ನಿರಾಕರಣೆ

    ವಿಜಯಪುರ: ವಿಜಯಪುರದಲ್ಲಿ ಶುಕ್ರವಾರ ಒಂದು ಲಕ್ಷ ಲಸಿಕಾ ದಿನ ಆಚರಿಸಲಾಯಿತು. ಈ ವೇಳೆ ನಾನು ಕೊರೊನಾ ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಅಜ್ಜಿ, ಅಜ್ಜ ನಿರಾಕರಿಸಿದ್ದಾರೆ.

    ಒಂದಲ್ಲಾ ಒಂದು ದಿನ ಸಾಯಲೇ ಬೇಕೆಂದು ಲಸಿಕೆ ಹಾಕಿಸಿಕೊಳ್ಳಲ್ಲ ಅಂತ ವಯೋವೃದ್ಧೆ ಮತ್ತು ವೃದ್ಧ ಪಟ್ಟು ಹಿಡಿದು ಕುಳಿತ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಕೇಶ್ವರ ಗ್ರಾಮದಲ್ಲಿ ಜರುಗಿದೆ. ಇದನ್ನೂ ಓದಿ: ಭಾನುವಾರ ಮನೆ ಬಿಟ್ಟಿದ್ದ ಮನೆ ಯಜಮಾನ ನಿನ್ನೆ ವಾಪಸ್‌ ಬಂದಾಗ ಕಂಡಿದ್ದು ಐವರ ಮೃತದೇಹ

    ಲಸಿಕೆ ಹಾಕಿಸಿಕೊಳ್ಳಲು ವಯೋವೃದ್ಧೆಯ ಮನವೊಲಿಸಲು ಗಾಮ್ರ ಪಂಚಾಯತಿ ಪಿಡಿಓ ಸುಜಾತಾ ಯಡ್ರಾವಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೈ ಹಿಡಿದು ಕರೆದುಕೊಂಡು ಹೋಗಿ ಲಸಿಕೆ ಹಾಕಿಸುತ್ತೇವೆ ಎಂದರೂ, ಅಜ್ಜಿ ನಿರಾಕರಿಸಿದ್ದಾರೆ. ಅಲ್ಲದೇ ನನಗೆ ಕಣ್ಣು ಕಾಣಿಸುವುದಿಲ್ಲ. ನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ನಾನು ಸಾಯುವುದಕ್ಕೆ ಎಂದೇ ಕುಂತಿರುವೆ ಎಂದು ಪಟ್ಟು ಹಿಡಿದಿದ್ದಾರೆ. ಆಗ ಲಸಿಕೆ ಹಾಕಿಸಿ ಕೊಂಡರೆ ಕೊರೊನಾದಿಂದ ನಿನಗೂ ಸುರಕ್ಷತೆ. ನಿನ್ನಿಂದ ಇತರರಿಗೂ ಸುರಕ್ಷೆ ಎಂದು ಪಿಡಿಒ ಸುಜತಾ ಮನವರಿಕೆ ಮಾಡಿದರೂ ಅಜ್ಜ, ಅಜ್ಜಿ ಡೋಂಟ್ ಕೇರ್ ಎಂದಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ

  • ಸತ್ತವರು, ಸೋಂಕಿತರು, ಸಂಬಂಧಿಕರು ಒಂದೇ ಕಡೆ – ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ

    ಸತ್ತವರು, ಸೋಂಕಿತರು, ಸಂಬಂಧಿಕರು ಒಂದೇ ಕಡೆ – ಆಸ್ಪತ್ರೆ ವಿರುದ್ಧ ಸ್ಥಳೀಯರು ಆಕ್ರೋಶ

    ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರನ್ನು ಒಂದೇ ಕಡೆ ಇರಿಸಲಾಗಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿನ ಪರಿಸ್ಥಿತಿ ಹೀಗಿದ್ದರೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗದೇ ಇನ್ನೇನು ಕಡಿಮೆಯಾಗುತ್ತಾ ಎಂದು ಜಿಲ್ಲಾಸ್ಪತ್ರೆ ವಿರುದ್ಧ ಜನರು ಅಸಮಾಧಾನ ಹೊರಹಾಕಿದ್ದಾರೆ.

    ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರು ಎಲ್ಲರೂ ಒಂದೇ ಜಾಗದಲ್ಲಿ ಅಕ್ಕಪಕ್ಕದ ಬೆಡ್‍ನಲ್ಲಿ ಇರಿಸಲಾಗಿದೆ. ಸೋಂಕಿತರನ್ನ ಸಂಬಂಧಿಗಳೇ ಉಪಚರಿಸುತ್ತಿದ್ದಾರೆ. ಸಾಮಾಜಿಕ ಅಂತರ, ಪಿಪಿಇ ಕಿಟ್ ಧರಿಸದೇ ಸೋಂಕಿತರಿಗೆ ಊಟ-ತಿಂಡಿ ಮಾಡಿಸುವ ಸಂಬಂಧಿಕರು ಸಂಜೆ ಮನೆಗೆ ಬಂದು ಮಾಮೂಲಿಯಂತೆ ಇದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಆಸ್ಪತ್ರೆ ವ್ಯವಸ್ಥೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನು ಓದಿ: ಮುದ್ದು ಕಂದಮ್ಮನ ಮುಖ ನೋಡುವ ಮುನ್ನವೇ ಕೊರೊನಾಗೆ ಬಲಿಯಾದ ಪವರ್ ಮ್ಯಾನ್

    ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳು, ರೋಗಿಗಳ ಜೊತೆ ಸಂಬಂಧಿಕರು, ಮೃತದೇಹಗಳು ಅಲ್ಲೆ ಇವೆ. ಸೋಂಕಿತರ ಊಟ-ತಿಂಡಿಯೂ ಅಲ್ಲೆ ನಡೆಯುತ್ತಿದೆ. ಹೀಗೆ ಒಂದೇ ಜಾಗದಲ್ಲಿ ಎಲ್ಲರೂ ಹೀಗಿದ್ದರೆ ಕೊರೊನಾ ಹೆಚ್ಚಾಗದೆ ಕಡಿಮೆ ಹೇಗಾಗುತ್ತೆ ಎನ್ನುವ ಪ್ರಶ್ನೆ ಮೂಡಿದೆ ಎಂದು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕೊರೊನಾ ಸೋಂಕಿತರ ಸಂಬಂಧಿಕರು ಕಿಡಿಕಾರಿದ್ದಾರೆ.

    ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯ ಪಾಸಿಟಿವಿಟಿ ರೇಟ್ ಕೂಡ 21ರಷ್ಟಿದೆ. ಹಳ್ಳಿಗಳಲ್ಲಿ ಕೊರೊನಾ ಅಬ್ಬರ ಜೋರಿದೆ. ಹಳ್ಳಿಗರು ಪರೀಕ್ಷೆಗೆ ಬರುತ್ತಿಲ್ಲ. ಮನೆಮದ್ದಿಗೆ ಆದ್ಯತೆ ನೀಡಿ ಸೋಂಕು ಹೆಚ್ಚಿಸುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಈ ರೀತಿ ಪರಿಸ್ಥಿತಿ ಕಂಡ ಜಿಲ್ಲೆಯ ಜನ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  • ಕೋವಿಡ್ ನಿರ್ಲಕ್ಷ್ಯ ಮಾಡಿದವರಿಗೆ ಐಸಿಯು, ವೆಂಟಿಲೇಟರ್ ಸಿಗಲ್ಲ- ಉಡುಪಿ ಜಿಲ್ಲಾಡಳಿತ

    ಕೋವಿಡ್ ನಿರ್ಲಕ್ಷ್ಯ ಮಾಡಿದವರಿಗೆ ಐಸಿಯು, ವೆಂಟಿಲೇಟರ್ ಸಿಗಲ್ಲ- ಉಡುಪಿ ಜಿಲ್ಲಾಡಳಿತ

    ಉಡುಪಿ: ಜಿಲ್ಲೆಯಲ್ಲಿ 1,300 ಆಕ್ಸಿಜನ್ ಬೆಡ್ ಗಳು ಇವೆ. ಆಮ್ಲಜನಕ ಕೊಡುವುದಕ್ಕೆ ಸರಕಾರ ಬದ್ಧವಿದೆ. ವೆಂಟಿಲೇಟರ್ ಚಿಕಿತ್ಸೆ ಕೊಡಲು ನಮ್ಮಲ್ಲಿ ಅವಕಾಶ ಇದೆ. ಆದರೆ ಮನೆಯಿಂದ ನೇರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡುವುದಿಲ್ಲ ಎಂದು ಉಡುಪಿ ಜಿಲ್ಲಾಡಳಿತದ ಸ್ಪಷ್ಟಪಡಿಸಿದೆ.

    ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ವಿಪರೀತವಾಗಿದೆ. ಪ್ರತಿದಿನ ಜಿಲ್ಲೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಕೇಸುಗಳು ದಾಖಲಾಗುತ್ತಿದೆ. ಕೊರೊನಾ ಪರಿಸ್ಥಿತಿ ಕೈಮೀರುವ ಈ ಸಂದರ್ಭದಲ್ಲಿ ಉಡುಪಿ ಡಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

    ಎಷ್ಟು ವೆಂಟಿಲೇಟರ್ ತಯಾರು ಮಾಡಿದರೂ ಸಾಕಾಗದ ಸ್ಥಿತಿ ಇದೆ. ಜನರ ನಿರ್ಲಕ್ಷಕ್ಕೆ ನಾವು ಜವಾಬ್ದಾರರಲ್ಲ. ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿ ಆಕ್ಸಿಜನ್ ಕೊಟ್ಟು ಜೀವ ಉಳಿಸುವ ಅವಕಾಶ ಇದೆ. ಗಂಭೀರ ಆದಲ್ಲಿ ಐಸಿಯು, ವೆಂಟಿಲೇಟರ್‍ಗೆ ಶಿಫ್ಟ್ ಮಾಡುತ್ತೇವೆ. ಆದರೆ ಪರಿಸ್ಥಿತಿ ಕೈಮೀರಿದ ನಂತರ ಏನು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ವೈದ್ಯರಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

    ನನಗೆ ವೆಂಟಿಲೇಟರ್ ಕೊಡುತ್ತೀರಾ ಎಂದು ಮನೆಯಿಂದ ಫೋನ್ ಮಾಡಬೇಡಿ. ಜನತೆಗೆ ಈ ನಿರ್ಲಕ್ಷ್ಯದ ಬುದ್ಧಿ ಹೋಗಬೇಕು. ಬುದ್ಧಿವಂತರ ಜಿಲ್ಲೆಯವರು ಜಾಗರೂಕರಾಗಿ ವರ್ತಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜನರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮನೆಯಲ್ಲೇ ಕುಳಿತು ನೇರ ಐಸಿಯುಗೆ ಬಂದರೆ ಚಿಕಿತ್ಸೆ ಸಾಧ್ಯವಿಲ್ಲ. ನಿಮ್ಮ ಜೀವದ ಜೊತೆ ನೀವೇ ಆಟವಾಡುತ್ತಿದ್ದೀರಿ ಎಂದು ಸಾಂಕ್ರಾಮಿಕ ಕೊರೊನಾ ನಿರ್ಲಕ್ಷಿಸುವವರ ವಿರುದ್ಧ ಉಡುಪಿ ಡಿಸಿ ಗರಂ ಆಗಿದ್ದಾರೆ.

    ಉಡುಪಿಯಲ್ಲಿ 950 ಹೆಚ್ಚು ಆಕ್ಸಿಜನ್ ಬೆಡ್ ಖಾಲಿಯಿದೆ. ಮಹಾಮಾರಿ ಕೊರೊನಾ ಸೋಂಕು ವಿಪರೀತ ಹೆಚ್ಚಳವಾಗುತ್ತಿದ್ದು, ಜ್ವರ ಶೀತ ಕೆಮ್ಮು ನೆಗಡಿಯನ್ನು ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನ ಆಕ್ಸಿಜನ್ ಬೆಡ್ ಇಲ್ಲ ಎಂದು ಪ್ಯಾನಿಕ್ ಆಗದಿರಿ. ಆಸ್ಪತ್ರೆಯ ಅಗತ್ಯ ಇಲ್ಲದವರು ಬೆಡ್ ಹುಡುಕುತ್ತಿದ್ದಾರೆ. ಜನರು ಭಯಪಡಬೇಡಿ, ಜಾಗೃತೆವಹಿಸಿ ಎಂದು ಡಿಸಿ ಹೇಳಿದ್ದಾರೆ.

  • ಕೊರೊನಾದಿಂದ ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಯುವಕ

    ಕೊರೊನಾದಿಂದ ಒಂದೇ ದಿನ ತಂದೆ-ತಾಯಿಯನ್ನು ಕಳೆದುಕೊಂಡ ಯುವಕ

    – ಬಳ್ಳಾರಿಯ ಕೊಳಗಲ್ ಗ್ರಾಮದಲ್ಲಿ 15ಕ್ಕೂ ಹೆಚ್ಚು ಸಾವು

    ಬಳ್ಳಾರಿ: ಯುವಕನೊಬ್ಬ ಒಂದೇ ದಿನ ತಂದೆ ತಾಯಿ ಇಬ್ಬರನ್ನು ಕಳೆದುಕೊಂಡ ಹೃದಯವಿದ್ರಾವಕ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿ ತಾಂಡಾದಲ್ಲಿ ನಡೆದಿದೆ.

    ಮಾಂತೇಶ್ ನಾಯಕ್ ಎಂಬಾತ ಒಂದೇ ದಿನ ತಾಯಿ ಸೀತಾ ಬಾಯಿ(58) ಮತ್ತು ತಂದೆ ನಾಕ್ಯಾ ನಾಯ್ಕ್(63)ರನ್ನು ಕಳೆದುಕೊಂಡಿದ್ದಾರೆ. ಬೆಳಗ್ಗೆ ತಂದೆ ಮೃತಪಟ್ಟರೆ, ಸಂಜೆ ಅವರ ತಾಯಿ ಸಾವನ್ನಪ್ಪಿದ್ದಾರೆ.

    ಒಂದೇ ದಿನ ಗ್ರಾಮದಲ್ಲಿ 6 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರನ್ನು ಗ್ರಾಮದ ಸರೋಜಾ ಭಾಯಿ, ಗಿರಿಜಾ ಬಾಯಿ, ದಿನೇಶ್ ನಾಯಕ್, ಭೀಮಾ ನಾಯಕ್ ಎಂದು ಗುರುತಿಸಲಾಗಿದೆ. ಎಲ್ಲರೂ ಉಸಿರಾಟದ ತೊಂದರೆಯಿಂದ ಹಾಗೂ ನಾನಾ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕೊರೊನಾದಿಂದ ಗ್ರಾಮೀಣ ಪ್ರದೇಶಗಳು ಇದೀಗ ಸಾವಿನ ಮನೆಯಂತಾಗುತ್ತಿದ್ದು, ಗ್ರಾಮಸ್ಥರಲ್ಲೀಗ ಆತಂಕ ಮನೆ ಮಾಡಿದೆ.

    ಇನ್ನೂ ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ 15 ಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಇದೊಂದೇ ಗ್ರಾಮದಲ್ಲಿ 250 ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ವಿಚಾರ ಇದೀಗ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಎರಡು ವಾರಗಳ ಕಾಲ ಸ್ವಯಂ ಪ್ರೇರಿತರಾಗಿ ಲಾಕ್‍ಡೌನ್ ಮಾಡಲು ಜನರು ಮುಂದಾಗಿದ್ದಾರೆ.

    ಈ ಬಗ್ಗೆ ಗ್ರಾಮದಲ್ಲಿ ಅನಾವಶ್ಯಕವಾಗಿ ಅಂಗಡಿ ಮುಂಗಟ್ಟು ಓಪನ್ ಮಾಡಿದರೆ ದಂಡ ಹಾಕುವುದಾಗಿ ಗ್ರಾಮಸ್ಥರು ಡಂಗುರ ಸಾರಿದ್ದಾರೆ.