Tag: ಪಬ್ಲಿಕ್ ಟಿವಿ Corona

  • ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಸಲ್ಮಾನ್ ಖಾನ್ ಹಾಡಿಗೆ ವೈದ್ಯರ ಡ್ಯಾನ್ಸ್ – ನೃತ್ಯ ನೋಡಿ ದಿಶಾ ಪಟಾನಿ ಫಿದಾ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಇತ್ತೀಚೆಗೆ ಬಿಡುಗಡೆಗೊಂಡ ರಾಧೆ ಸಿನಿಮಾದ ಹಾಡೊಂದಕ್ಕೆ ವೈದ್ಯರ ಗುಂಪೊಂದು ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಆಸ್ಪತ್ರೆಯ ಕಾರಿಡೋರ್‍ನಲ್ಲಿ ವೈದ್ಯರ ಗುಂಪು ರಾಧೆ ಸಿನಿಮಾದ ಸೀಟಿ ಮಾರ್ ಹಾಡಿನ ವಾದ್ಯಕ್ಕೆ ಒಟ್ಟಿಗೆ ಡ್ಯಾನ್ಸ್ ಮಾಡಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಾವ್, ನಮ್ಮ ರಿಯಲ್ ಹೀರೋಸ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ದಿಶಾ ಪಟಾನಿ ಫ್ಯಾನ್ಸ್ ಕ್ಲಬ್‍ನಲ್ಲಿ ಮೊದಲಿಗೆ ಪೋಸ್ಟ್ ಮಾಡಿದ್ದು, ನಂತರ ದಿಶಾ ಕೂಡ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Team Disha (@teamdishap)

    ವೈರಲ್ ಆಗಿರುವ ವಿಡಿಯೋದಲ್ಲಿ ಕೊರೊನಾ ವೈರಸ್ ವಿರುದ್ಧ ಹಗಲು ರಾತ್ರಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು , ಮಾಸ್ಕ್ ಧರಿಸಿ, ಪಿಪಿಇ ಕಿಟ್ ಧರಿಸಿ ಹಾಡಿನ ವಾದ್ಯಕ್ಕೆ ನೃತ್ಯ ಮಾಡಿದ್ದಾರೆ. ಅಲ್ಲದೆ ವೈದ್ಯರಲ್ಲಿ ಒಬ್ಬರು ಮ್ಯಾಂಡೊಲಿನ್ ನುಡಿಸುವುದನ್ನು ಕಾಣಬಹುದಾಗಿದೆ.

  • ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ನೆರವು ನೀಡಿದ್ರು ಕೌರವ

    ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ನೆರವು ನೀಡಿದ್ರು ಕೌರವ

    ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟ ತಮ್ಮ ಕ್ಷೇತ್ರದ ಕುಟುಂಬದ ಸದಸ್ಯರಿಗೆ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ವಿತರಣೆ ಮಾಡಿದರು.

    ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹಿರೇಕೋಣತಿ ಗ್ರಾಮದ ಬಸನಗೌಡ ಕವಲಿ ಮತ್ತು ನಿಟ್ಟೂರು ಗ್ರಾಮದ ಮಲ್ಲಿಕಾರ್ಜುನ ಬಂಗಾರಿ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿದರು. ನಂತರ ಹಂಸಭಾವಿ ಗ್ರಾಮದ ಶಿವಾನಂದಯ್ಯ, ರಮೀಜಾ ಬಾಯಿ, ದೊಡ್ಡಮನಿ ಹಾಗೂ ಯೋಗಿಕೊಪ್ಪ ಗ್ರಾಮದ ಬಸನಗೌಡ ಪಾಟೀಲ್ ಹಾಗೂ ವಡೇನಪುರದ ಪಕ್ಕೀರಪ್ಪ ಶಿವಣ್ಣನವರ್ ಮತ್ತು ಅರಳಿಕಟ್ಟಿ ಗ್ರಾಮದ ಗುಡ್ಡಪ್ಪ ಎಲೆದಳ್ಳಿ ಕುಟುಂಬಕ್ಕೆ 50 ಸಾವಿರ ವೈಯಕ್ತಿಕ ಪರಿಹಾರ ನೀಡಿದರು.

    ಕೊರೊನಾ ಸೋಂಕಿನಿಂದ ಮೃತಪಟ್ಟವರ ಮನೆಗಳಿಗೆ ತೆರಳಿ ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ವಿತರಿಸಿ, ಅವರ ಆರೋಗ್ಯ ವಿಚಾರಿಸಿದರು. ನೀವು ಸಹ ಯಾವುದೇ ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಆಗಮಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಕುಟುಂಬ ಸದಸ್ಯರಿಗೆ ಸಲಹೆ ನೀಡಿದರು. ರಟ್ಟಿಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ 18 ಜನರಿಗೆ ಪರಿಹಾರವನ್ನು ಸಚಿವ ಬಿ.ಸಿ ಪಾಟೀಲ್ ವಿತರಿಸಲಿದ್ದಾರೆ.

  • 250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    250 ಟಾಕ್ಸಿಗಳನ್ನು ಮಿನಿ ಅಂಬುಲೆನ್ಸ್ ಆಗಿ ಪರಿವರ್ತಿಸಿದ ಚೆನ್ನೈ ನಾಗರಿಕ ಸಂಸ್ಥೆ

    ಚೆನ್ನೈ: ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸಂಸ್ಥೆಗಳು, ಎನ್‍ಜಿಒಗಳು ಮತ್ತು ಅನೇಕ ವ್ಯಕ್ತಿಗಳು ಸಹಾಯ ಮಾಡಲು ಮುಂದೆ ಬರತ್ತಿದ್ದಾರೆ. ಸದ್ಯ ಚೆನ್ನೈನಲ್ಲಿಯೂ ಸಹ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೆನ್ನೈನ ನಾಗರಿಕ ಸಂಸ್ಥೆ 250 ಟ್ಯಾಕ್ಸಿಗಳನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಿದೆ.

    ಗ್ರೇಟರ್ ಚೆನ್ನೈ ಕಾಪೋರೇಷನ್ 250 ಕೋವಿಡ್-ವಿಶೇಷ ಟ್ಯಾಕ್ಸಿಗಳನ್ನು ಮಿನಿ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ಇಪ್ಪತ್ತು ವಾಹನಗಳಿಗೆ ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಸಚಿವ ಕೆ.ಎನ್. ನೆಹರುರವರು ಚಾಲನೆ ನೀಡಿದರು.

    ಈ ಕುರಿತಂತೆ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಆಯುಕ್ತ ಗಗನ್ ಸಿಂಗ್ ಬೇಡಿ, 108 ಅಂಬುಲೆನ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಆಕ್ಸಿಜನ್ ಅಗತ್ಯವಿಲ್ಲದವರು ಕೂಡ 108 ಅಂಬುಲೆನ್ಸ್‌ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಆಕ್ಸಿಜನ್ ಅಗತ್ಯವಿರುವವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಟ್ಯಾಕ್ಸಿ ಹಾಗೂ ಕಾರುಗಳನ್ನು ತಾತ್ಕಾಲಿಕ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ನಾಗರಿಕ ಸಂಘವು ಪ್ರತಿ ವಲಯದಲ್ಲಿ 15 ವಾಹನಗಳನ್ನು ನಿಗದಿಪಡಿಸಿದೆ ಮತ್ತು 250 ವಾಹನಗಳನ್ನು ಕಾರನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ಆದೇಶಿಸಿದೆ ಎಂದರು.

  • ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ನಿರೀಕ್ಷೆಗೂ ಮೀರಿ ಕೇಸ್‍ಗಳು ಬರ್ತಿವೆ, ನಾವೇನು ಮಾಡೋಕೆ ಆಗುತ್ತೆ : ಈಶ್ವರಪ್ಪ

    ಶಿವಮೊಗ್ಗ: ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿರೀಕ್ಷೆಗೂ ಮೀರಿ ಕೇಸುಗಳು ಬರುತ್ತಿವೆ. ನಾವೇನು ಮಾಡೋಕೆ ಆಗುತ್ತೆ? ಆದರೂ, ನಾವು ಎಲ್ಲಾ ಪ್ರಯತ್ನಗಳನ್ನು ನಡೆಸಿ, ಕೋವಿಡ್ ಸೋಂಕಿತರಿಗೆ ಸೌಕರ್ಯ ಒದಗಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಕೋವಿಡ್ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಗತ್ಯವಾಗಿರುವ ಆಕ್ಸಿಜನ್ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ, 32 ಕೆ.ಎಲ್, ಸರ್ಕಾರಿ ಆಸ್ಪತ್ರೆಗಳಲ್ಲಿ 19 ಕೆ.ಎಲ್ ಒಟ್ಟು 51 ಕೆ.ಎಲ್ ನಷ್ಟು ಆಕ್ಸಿಜನ್ ಲಭ್ಯವಿದೆ. ಜೊತೆಗೆ 42 ಡ್ಯೂರಾ ಸಿಲಿಂಡರ್ ಗಳು ಮತ್ತು 582 ಜಂಬೋ ಸಿಲಿಂಡರ್ ಗಳು ಲಭ್ಯವಿದೆ ಎಂದು ತಿಳಿಸಿದ್ದಾರೆ. ಅದರಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿ 552, ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿದಂತೆ, ಒಟ್ಟು, 935 ರೆಮಿಡಿಸ್ವಿರ್ ಇಂಜೆಕ್ಷನ್ ಲಭ್ಯವಿದೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

    ಅದರಂತೆ, ಕೊರೊನಾ ನಿರ್ವಹಣೆಗೆ ಜಿಲ್ಲಾಡಳಿತದ ವತಿಯಿಂದ ಗರಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್‍ಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ 776 ಬೆಡ್, ಖಾಸಗಿ ಆಸ್ಪತ್ರೆಗಳಲ್ಲಿ 999 ಬೆಡ್‍ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 216 ಐಸಿಯು ಬೆಡ್ ಹಾಗೂ 944 ಆಕ್ಸಿಜನ್ ಬೆಡ್‍ಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 78 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 32 ವೆಂಟಿಲೇಟರ್‍ಗಳಿವೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಕೋವಿಡ್ ಕೇರ್ ಸೆಂಟರ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

    ಅದೇ ರೀತಿ, ಜಿಲ್ಲೆಯಲ್ಲಿ ಇದುವರೆಗೆ 2,67,060 ಡೋಸ್ ಕೋವಿಶೀಲ್ಡ್ ನೀಡಲಾಗಿದ್ದು, 2540 ಡೋಸ್ ಉಳಿಕೆ ಇದೆ. ಕೋವಾಕ್ಸಿನ್ 20,460 ಡೋಸ್ ನೀಡಲಾಗಿದ್ದು, ಉಳಿಕೆ ಇರುವುದಿಲ್ಲ. 2,41,578 ಮಂದಿಗೆ ಮೊದಲ ಡೋಸ್ ನೀಡಲಾಗಿದ್ದು, 54,358 ಮಂದಿಗೆ ಎರಡನೇ ಡೋಸ್ ಪೂರ್ಣಗೊಳಿಸಲಾಗಿದೆ. 88 ಸಕ್ರಿಯ ಕಂಟೈನ್‍ಮೆಂಟ್ ಜೋನ್‍ಗಳಿವೆ. ಮಾಸ್ಕ್ ಧರಿಸದ 9207 ಪ್ರಕರಣಗಳಲ್ಲಿ 12,76,850 ರೂ. ದಂಡ ವಿಧಿಸಲಾಗಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದರು.

  • ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಉಪ್ಪಿ ಫೌಂಡೇಷನ್‍ಗೆ ದೇಣಿಗೆ ನೀಡಿದ ಬಾಲ ನಟ

    ಬೆಂಗಳೂರು: ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಮತ್ತು ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರವರ ಉಪ್ಪಿ ಫೌಂಡೇಶನ್‍ಗೆ ಬಾಲ ನಟನೊಬ್ಬ 10,000ರೂ ದೇಣಿಗೆ ನೀಡಿದ್ದಾನೆ. ಈ ಬಗ್ಗೆ ನಟ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕೊರೊನಾದ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರೆಟಿಗಳು ಸಹಾಯ ಮಾಡುತ್ತಿದ್ದಾರೆ. ಉಪೇಂದ್ರರವರು ಕೂಡ ಉಪ್ಪಿ ಫೌಂಡೇಷನ್ ಮೂಲಕ ದೇಣಿಗೆ ಸಂಗ್ರಹಿಸುತ್ತಿದ್ದು, ಬಾಲ ನಟ ಅನೀಶ್ ಸಾಗರ್ 10 ಸಾವಿರ ರೂ. ಸಹಾಯ ಮಾಡಿದ್ದಾರೆ.

    ಈ ಬಗ್ಗೆ ಉಪೇಂದ್ರರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಜೀವನಾನೆ ನಾಟಕ ಸ್ವಾಮಿ ಮತ್ತು ಸಾಲುಗಾರ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದ ಮಾಸ್ಟರ್ ಅನೀಶ್ ಸಾಗರ್ ನಾಯ್ಡು ತನಗೆ ಬಂದ ಸಂಭಾವನೆಯಲ್ಲಿ 10,000ರೂ.ವನ್ನು ಕೊರೊನಾ ಸಂಕಷ್ಟದಲ್ಲಿರುವವರಿಗೆ ದಾನ ಮಾಡಿದ್ದಾನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ.

  • ಕೋವಿಡ್ ಸಮಯದಲ್ಲಿ ವಿಎಚ್‍ಪಿಯಿಂದ ಸಮಾಜ ಸೇವೆ – ಏನೇನು ಮಾಡಿದೆ?

    ಕೋವಿಡ್ ಸಮಯದಲ್ಲಿ ವಿಎಚ್‍ಪಿಯಿಂದ ಸಮಾಜ ಸೇವೆ – ಏನೇನು ಮಾಡಿದೆ?

    ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷದ್ ರಾಜ್ಯಾದ್ಯಂತ ಹಲವು ರೀತಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಕೊರೊನಾದಿಂದ ಬಳಲುತ್ತಿರುವ ಅನೇಕ ಮಂದಿಗೆ ಆಕ್ಸಿಜನ್, ಊಟ, ಉಚಿತ ಆಟೋ ಸೇವೆ ಹೀಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದೆ.

    ಈಗ ವಿಶ್ವ ಹಿಂದೂ ಪರಿಷದ್ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ 5, ಶಿವಮೊಗ್ಗಕ್ಕೆ 2, ಚಿತ್ರದುರ್ಗ 1, ಮಂಗಳೂರಿಗೆ 1 ಆಕ್ಸಿಜನ್ ಸಾಂದ್ರಕವನ್ನು ಕಳುಹಿಸಿ ಕೊಡಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀಬಸವರಾಜ್ ಜಿ ಅವರು ಸೇವಾಕಾರ್ಯಗಳ ವಿವರ ನೀಡಿದರು.

    ಏನೇನು ಮಾಡಿದೆ?
    * ಎಲ್ಲಾ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರ
    * ಮಂಗಳೂರಿನಲ್ಲಿ ಕೋವಿಡ್ ರೋಗಿಗಳಿಗೆ ಉಚಿತ ಆಟೋ ಸೇವೆ, ಅದಕ್ಕಾಗಿ ಸಹಾಯವಾಣಿ ಆರಂಭ
    * ಮಂಗಳೂರು, ಸುರತ್ಕಲ್, ಉಪ್ಪಿನಂಗಡಿ, ಮಡಿಕೇರಿ, ಚಿತ್ರದುರ್ಗ, ಮಳವಳ್ಳಿ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಹೀಗೆ ಹಲವಾರು ಕಡೆ ಕೋವಿಡ್‍ನಿಂದ ಮೃತಪಟ್ಟವರನ್ನು ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ.
    * ಶಿವಮೊಗ್ಗದಲ್ಲಿ ಅನ್ನ ಪರಬ್ರಹ್ಮ ಎನ್ನುವ ಕಾರ್ಯಕ್ರಮದಡಿ ಹಸಿದವರಿಗೆ ಪ್ರತಿದಿನ ನಗರದಾದ್ಯಂತ 1 ಸಾವಿರ ಆಹಾರ ಪೊಟ್ಟಣ ವಿತರಣೆ
    * ಬೆಂಗಳೂರಿನಲ್ಲಿ ಕೋವಿಡ್ ಆಗಿ ಹೋ ಐಸೋಲೇಷನ್‍ನಲ್ಲಿ ಇರುವವರಿಗೆ ಮೆಡಿಸನ್ ವಿತರಣೆ.
    * ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆಯ ಸರಕಾರಿ ಆಸ್ಪತ್ರೆಗಳಲ್ಲಿರುವ ರೋಗಿಗಳ ಸಂಬಂಧಿಗಳಿಗೆ ಪ್ರತಿನಿತ್ಯ 200 ಆಹಾರ ಪೊಟ್ಟಣ ವಿತರಣೆ.
    * ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಸೇವಾ ಭಾರತೀಯಿಂದ 40 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರದ ಮೂಲಕ ಸಹಾಯ.
    * ಚಿತ್ರದುರ್ಗದಲ್ಲಿ ವಿಹಿಂಪ ಮತ್ತು ಜೈನ್ ಸಮುದಾಯ ಒಟ್ಟಾಗಿ 12 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರವನ್ನು ತೆರೆದಿಒದೆ.
    * ವಿಶ್ವ ಹಿಂದೂ ಪರಿಷದ್ ಕರ್ನಾಟಕ ಕೇಂದ್ರಕಾರ್ಯಾಲಯ ಧರ್ಮಶ್ರೀಯಲ್ಲಿ ಎರಡು ದಿನಗಳ ಕಾಲ ವ್ಯಾಕ್ಸಿನೇಷನ್ ಡ್ರೈವ್.
    * ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, ಆರ್‍ಎಸ್‍ಎಸ್ ಏಕಲ್ ವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಕೇರ್ ಸೆಂಟರ್.

  • ರಾಜ್ಯದಲ್ಲಿ 39,998 ಪಾಸಿಟಿವ್, 517 ಸಾವು – 34,752 ಜನ ಡಿಸ್ಚಾರ್ಜ್

    ರಾಜ್ಯದಲ್ಲಿ 39,998 ಪಾಸಿಟಿವ್, 517 ಸಾವು – 34,752 ಜನ ಡಿಸ್ಚಾರ್ಜ್

    ಬೆಂಗಳೂರು: ಮಂಗಳವಾರ ದಾಖಲಾಗಿದ್ದ ಹೊಸ ಕೋವಿಡ್ ಪ್ರಕರಣಗಳಿಗೆ ಹೋಲಿಸಿದರೆ ಇಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪಮಟ್ಟಿಗೆ ಏರಿಕೆಯಾಗಿದ್ದು, 39,998 ಹೊಸ ಪ್ರಕರಣಗಳು ವರದಿಯಾಗಿದೆ.

    ಮೈಸೂರಿನಲ್ಲಿ 1 ವರ್ಷ 5 ತಿಂಗಳ ಹೆಣ್ಣು ಮಗು ಸೇರಿದಂತೆ 517 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 20,368ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 34,752 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.29.67 ಮತ್ತು ಮರಣ ಪ್ರಮಾಣ ಶೇ.1.29ರಷ್ಟಿದೆ. ಟೆಸ್ಟಿಂಗ್ ಏರಿಕೆಯಾಗಿದ್ದು, ಇಂದು 1,347,92 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಒಟ್ಟು 88,437 ಮಂದಿಗೆ ಲಸಿಕೆ ನೀಡಲಾಗಿದ್ದು, ಇಲ್ಲಿಯವರೆಗೆ ಒಟ್ಟು 1,08,82,080 ಡೋಸ್‍ಗಳನ್ನು ವಿತರಣೆ ಮಾಡಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 16,286 ಹೊಸ ಪ್ರಕರಣಗಳು ವರದಿಯಾಗಿದ್ದು, 275 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,60,619 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 610, ಬಳ್ಳಾರಿ 1,823, ಬೆಳಗಾವಿ 856, ಬೆಂಗಳೂರು ಗ್ರಾಮಾಂತರ 1,138, ಬೆಂಗಳೂರು ನಗರ 16,286, ಬೀದರ್ 281, ಚಾಮರಾಜನಗರ 517, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 646, ಚಿತ್ರದುರ್ಗ 192, ದಕ್ಷಿಣ ಕನ್ನಡ 1,077, ದಾವಣಗೆರೆ 362, ಧಾರವಾಡ 904, ಗದಗ 347, ಹಾಸನ 1,572, ಹಾವೇರಿ 189, ಕಲಬುರಗಿ 646, ಕೊಡಗು 678, ಕೋಲಾರ 815, ಕೊಪ್ಪಳ 278, ಮಂಡ್ಯ 1,223, ಮೈಸೂರು 1,773, ರಾಯಚೂರು 289, ರಾಮನಗರ 135, ಶಿವಮೊಗ್ಗ 1,125, ತುಮಕೂರು 2,360, ಉಡುಪಿ 919, ಉತ್ತರ ಕನ್ನಡ 960, ವಿಜಯಪುರ 690 ಮತ್ತು ಯಾದಗಿರಿಯಲ್ಲಿ 753 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • 39,510 ಪಾಸಿಟಿವ್, 480 ಸಾವು – 22,584 ಡಿಸ್ಚಾರ್ಜ್

    39,510 ಪಾಸಿಟಿವ್, 480 ಸಾವು – 22,584 ಡಿಸ್ಚಾರ್ಜ್

    ಬೆಂಗಳೂರು: ಸೋಮವಾರ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ಕೊಂಚ ಏರಿಕೆಯಾಗಿದ್ದು, 39,510 ಹೊಸ ಪ್ರಕರಣಗಳು ವರದಿಯಾಗಿದೆ.

    ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಚಿತ್ರದುರ್ಗದಲ್ಲಿ 4 ವರ್ಷದ ಬಾಲಕ ಸೇರಿದಂತೆ 480 ಮಂದಿ ಮೃತಪಟ್ಟಿದ್ದಾರೆ. ಏಪ್ರಿಲ್ ನಲ್ಲಿ ಮೃತಪಟ್ಟವರ ವಿವರಗಳನ್ನು ಬಿಬಿಎಂಪಿ ಆರೋಗ್ಯ ಇಲಾಖೆಗೆ ತಡವಾಗಿ ನೀಡುತ್ತಿರುವುದರಿಂದ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

    ಇಂದು ಆಸ್ಪತ್ರೆಯಿಂದ 22,584 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.33.66 ಮತ್ತು ಮರಣ ಪ್ರಮಾಣ ಶೇ.1.21ರಷ್ಟಿದೆ. ಟೆಸ್ಟಿಂಗ್ ಇಳಿಕೆಯಾಗಿದ್ದು, ಇಂದು 1,16,238 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ರಾಜಧಾನಿ ಬೆಂಗಳೂರಿನಲ್ಲಿ ಇವತ್ತು 15,879 ಹೊಸ ಪ್ರಕರಣಗಳು ವರದಿಯಾಗಿದ್ದು, 259 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 3,62,696 ಸಕ್ರಿಯ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 676, ಬಳ್ಳಾರಿ 1,558, ಬೆಳಗಾವಿ 755, ಬೆಂಗಳೂರು ಗ್ರಾಮಾಂತರ 688, ಬೆಂಗಳೂರು ನಗರ 15,879, ಬೀದರ್ 158, ಚಾಮರಾಜನಗರ 411, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 537, ಚಿತ್ರದುರ್ಗ 193, ದಕ್ಷಿಣ ಕನ್ನಡ 915, ದಾವಣಗೆರೆ 212, ಧಾರವಾಡ 740, ಗದಗ 456, ಹಾಸನ 654, ಹಾವೇರಿ 465, ಕಲಬುರಗಿ 971, ಕೊಡಗು 892, ಕೋಲಾರ 913, ಕೊಪ್ಪಳ 414, ಮಂಡ್ಯ 1,359, ಮೈಸೂರು 2,170, ರಾಯಚೂರು 763, ರಾಮನಗರ 440, ಶಿವಮೊಗ್ಗ 1,108, ತುಮಕೂರು 2,496, ಉಡುಪಿ 1,083, ಉತ್ತರ ಕನ್ನಡ 1,084, ವಿಜಯಪುರ 485 ಮತ್ತು ಯಾದಗಿರಿಯಲ್ಲಿ 426 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

  • ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ದರ್ಶನ್ ಭೇಟಿ

    ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ದರ್ಶನ್ ಭೇಟಿ

    ಮೈಸೂರು: ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್ ಹಿನ್ನೆಲೆ ಸ್ಯಾಂಡಲ್‍ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

    ಮೊದಲಿನಿಂದಲೂ ನಟ ದರ್ಶನ್‍ಗೆ ಪ್ರಾಣಿ-ಪಕ್ಷಿಗಳೆಂದರೆ ಬಹಳ ಪ್ರೀತಿ. ಇದಕ್ಕೆ ಸಾಕ್ಷಿ ಎಂಬಂತೆ ದರ್ಶನ್ ಮೈಸೂರಿನ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಮತ್ತು ತಮ್ಮ ಫಾರ್ಮ್ ಹೌಸ್‍ನಲ್ಲಿ ಹಲವಾರು ಪ್ರಾಣಿ, ಪಕ್ಷಿಗಳನ್ನು ಸಾಕಿದ್ದಾರೆ. ಅಲ್ಲದೆ ಬಿಡುವಿದ್ದಾಗಲೆಲ್ಲಾ ಸಫಾರಿಗೆ ಕೂಡ ಹೋಗುತ್ತಾರೆ.

    ಸದ್ಯ ರಾಜ್ಯಾದ್ಯಂತ ಕೊರೊನಾ ಲಾಕ್‍ಡೌನ್ ಜಾರಿಯಲ್ಲಿರುವುದರಿಂದ ನಟ ದರ್ಶನ್‍ರವರ ತವರೂರಾದ ಸಾಂಸ್ಕøತಿಕ ನಗರಿ ಮೈಸೂರಿನ ದತ್ತಾನಗರದಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ ಆಶ್ರಮದಲ್ಲಿರುವ ಗಿಣಿಗಳನ್ನು ದರ್ಶನ್ ಆರೈಕೆ ಮಾಡುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಶ್ರಮದಲ್ಲಿನ ಶುಕವನಕ್ಕೆ ತೆರಳಿರುವ ದರ್ಶನ್, ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಕುಶಾಲೋಪರಿ ಮಾತುಕತೆ ನಡೆಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ. ಜನತಾ ಕಫ್ರ್ಯೂ ಆರಂಭವಾದಗಲಿಂದಲೂ ದರ್ಶನ್‍ರವರು ಮೈಸೂರಿನಲ್ಲಿಯೇ ನೆಲೆಸಿದ್ದಾರೆ.

  • ಕೊರೊನಾ ಲಸಿಕೆ ಪಡೆದ ರೋರಿಂಗ್ ಸ್ಟಾರ್ ಶ್ರೀಮುರಳಿ

    ಕೊರೊನಾ ಲಸಿಕೆ ಪಡೆದ ರೋರಿಂಗ್ ಸ್ಟಾರ್ ಶ್ರೀಮುರಳಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಇಂದು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ನಟ ಶ್ರೀ ಮುರುಳಿಯವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ನನ್ನ ಮೊದಲ ವ್ಯಾಕ್ಸಿನೇಷನ್ ಆಯ್ತು. ಇನೂ ಹಾಕಿಸಿಕೊಳ್ಳದವರು ತಡ ಮಾಡಬೇಡಿ, ನಿಮ್ಮ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ. ಕೊರೊನಾ ವಾರಿಯರ್ಸ್‍ಗೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by SriiMurali (@sriimurali)

    ಇತ್ತೀಚೆಗಷ್ಟೆ ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಶ್ರೀ ಮುರಳಿ ಮಾಡಿದ್ದಾರೆ. ನಗರದ ಕೆ.ಸಿ ಜನರಲ್ ಆಸ್ಪತ್ರೆ, ಇSI ರಾಜಾಜಿನಗರ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಸಿಬ್ಬಂದಿಗೆ ಮುರಳಿ ಊಟವನ್ನು ಕಳುಹಿಸಿಕೊಟ್ಟಿದ್ದರು.