Tag: ಪಬ್ಲಿಕ್ ಟಿವಿ Corona

  • ಮೂರನೇ ಅಲೆ ಭೀತಿ – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು

    ಮೂರನೇ ಅಲೆ ಭೀತಿ – ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು

    ಬೆಂಗಳೂರು: ಮೂರನೇ ಅಲೆಯ ಭೀತಿ ಹೆಚ್ಚುತ್ತಿದ್ದಂತೆ, ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಅಂತರ್ ಜಿಲ್ಲೆ, ಅಂತರ್ ರಾಜ್ಯಗಳಿಂದ ಬರುವ ಪ್ರತಿ ಪ್ರಯಾಣಿಕರ ಮೇಲೂ ನಿಗಾ ವಹಿಸಲಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ.

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಬೆಳಗಿನ ಜಾವ 4 ಗಂಟೆಯಿಂದ 15ಕ್ಕೂ ಹೆಚ್ಚು ತಂಡಗಳಿಂದ ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಎಂಟ್ರಿ, ಎಕ್ಸಿಟ್ ಭಾಗಗಳಲ್ಲಿ ಪ್ರತಿ ಪ್ರಯಾಣಿಕರ ಮೇಲೂ ಆರೋಗ್ಯ ಸಿಬ್ಬಂದಿ ನಿಗಾ ವಹಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಒಟ್ಟು 30 ತಂಡಗಳಿಂದ ತಲಾ 300 ಜನರಿಗೆ ನಿತ್ಯ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಮಾರ್ಷಲ್ಸ್ ಗಳು ಕೂಡ ಪ್ರಯಾಣಿಕರ ಮೇಲೆ ನಿಗಾ ವಹಿಸಿತ್ತಿದ್ದೂ ಮಾಸ್ಕ್ ಹಾಕದವರಿಗೆ ದಂಡವನ್ನು ವಿಧಿಸಲಾಗುತ್ತಿದೆ.

    ಆಟೋ ಚಾಲಕರ ಹಾವಳಿ:
    ಅಂತರ್ ರಾಜ್ಯ, ಅಂತರ್ ಜಿಲ್ಲೆಯ ಪ್ರಯಾಣಿಕರಿಗೆ ಆರೋಗ್ಯ ಸಿಬ್ಬಂದಿ ಕೋವಿಡ್ ಪರೀಕ್ಷೆ ಮಾಡುತ್ತಿದ್ದಾರೆ. ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಆತುರದಲ್ಲಿ ಆರೋಗ್ಯ ಸಿಬ್ಬಂದಿಗೆ ಆಟೋ ಚಾಲಕರು ಕಿರಿಕಿರಿ ಮಾಡುತ್ತಿದ್ದಾರೆ. ಸರಿಯಾಗಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿಯಾಗಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಆವರಣದಲ್ಲಿ ಓಡಾಡುತ್ತಿದ್ದಾರೆ. ಮಾಸ್ಕ್ ಹಾಕಿ ಎಂದು ಮಾರ್ಷಲ್ಸ್ ಗಳು ಪ್ರಶ್ನೆ ಮಾಡಿದರೆ, ಮಾರ್ಷಲ್ಸ್ ಗಳ ಮೇಲೆಯೇ ಆಟೋ ಚಾಲಕರು ಗಲಾಟೆ ಮಾಡುತ್ತಿದ್ದಾರೆ ಎಂದು ಮಾರ್ಷಲ್ಸ್ ಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ:ಮುಂದಿನ ಚುನಾವಣೆ ಜವಾಬ್ದಾರಿ ನನ್ನ ಮೇಲಿದೆ: ಸಿಎಂ ಬಿಎಸ್‍ವೈ

  • ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಅನ್‍ಲಾಕ್ ಆದ ಮೊದಲ ಭಾನುವಾರ ಕೆ.ಆರ್ ಮಾರ್ಕೆಟ್ ನಲ್ಲಿ ಜನಜಾತ್ರೆ

    ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಬ್ರೇಕ್ ಹಾಕಲು ಸರ್ಕಾರ ಅನಿವಾರ್ಯವಾಗಿ ಇಡೀ ರಾಜ್ಯಕ್ಕೆ ಲಾಕ್ ಡೌನ್ ಜಾರಿಗೆ ತಂದಿತ್ತು. ಬಳಿಕ ಕೊರೊನಾ ಕೇಸ್‍ಗಳ ಸಂಖ್ಯೆ ಕಡಿಮೆ ಆಗುವುದಕ್ಕೆ ಶುರುವಾದ ನಂತರ ಸರ್ಕಾರ ಹಂತ ಹಂತವಾಗಿ ಅನ್‍ಲಾಕ್ ಘೋಷಿಸುತ್ತಾ ಬಂದಿದೆ.

    ಮೂರನೇ ಹಂತದ ಅನ್‍ಲಾಕ್ ಪ್ರಕ್ರಿಯೆ ಕಳೆದ ಸೋಮವಾರದಿಂದ ಜಾರಿಗೆ ಬಂದಿದೆ. ಬಹುತೇಕ ಶೇ 90ರಷ್ಟು ಚಟುವಟಿಕೆಗಳು ಈಗ ಮುಕ್ತವಾಗಿದೆ. ಇಂದು ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆಯ ಮೊದಲ ಭಾನುವಾರವಾಗಿದ್ದು, ಕೆ.ಆರ್ ಮಾರ್ಕೆಟ್ ನಲ್ಲಿ ಬೆಳ್ಳಂಬೆಳಗ್ಗೆಯೇ ಹೂವಿನ ವ್ಯಾಪಾರ ಜೋರಾಗಿ ನಡೆದಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಕೊರೊನಾ ನಿಯಮವಾಗಿರುವ ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತು ವ್ಯಾಪಾರದಲ್ಲಿ ತೊಡಗಿದ್ದಾರೆ.

    ಬೆಳಗ್ಗೆಯೇ ಮಾರ್ಷಲ್ ಗಳು ಸಹ ಕಾರ್ಯಾರಂಭ ಮಾಡಿದ್ದು, ಮಾರ್ಷಲ್ ಗಳನ್ನು ನೋಡಿದ ಕೂಡಲೇ ಮಾಸ್ಕ್ ಸರಿಯಾಗಿ ಹಾಕಿಕೊಳ್ಳುವ ಕಡೆ ಜನ ಗಮನ ವಹಿಸಿದ್ದಾರೆ. ಮಾರ್ಷಲ್ ಇದ್ದಾರೆ ಎಂಬ ಕಾರಣಕ್ಕೆ ನಿಯಮ ಪಾಲನೆ ಮಾಡುವುದಲ್ಲ, ಜನ ಸ್ವಪ್ರೇರಣೆಯಿಂದ ಕೊರೊನಾ ನಿಯಮಗಳ ಪಾಲನೆ ಮಾಡಬೇಕಾಗಿದೆ. ಇಲ್ಲವಾದಲ್ಲಿ ಮತ್ತೆ ಕೊರೊನಾ ರಣಕೇಕೆ ಶುರುವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪತ್ನಿಯ ಮೂಗು ಕತ್ತರಿಸಿದ ಪತಿ

  • ಲಾಕ್‍ಡೌನ್ ಎಫೆಕ್ಟ್- ಕೊಡಗು ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ನಷ್ಟ

    ಲಾಕ್‍ಡೌನ್ ಎಫೆಕ್ಟ್- ಕೊಡಗು ಪ್ರವಾಸೋದ್ಯಮಕ್ಕೆ ಕೋಟಿ ಕೋಟಿ ನಷ್ಟ

    ಮಡಿಕೇರಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರ ತಾಣವಾಗಿರುವ ಕೊಡಗು ಜಿಲ್ಲೆಗೆ ಪ್ರವಾಸಿಗರು ಭೇಟಿ ನೀಡದೇ ಹಿನ್ನೆಲೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.

    ದಕ್ಷಿಣ ಕಾಶ್ಮೀರ, ಭಾರತದ ಸ್ಕಾಟ್‍ಲ್ಯಾಂಡ್ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ರಾಜ್ಯದ ಪ್ರವಾಸಿಗರೇ ಅಷ್ಟೇ ಅಲ್ಲ ದೇಶ, ವಿದೇಶದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವಾಸಿಗರ ಹಾಟ್ ಸ್ಪಾಟ್ ಎನಿಸಿರುವ ಮಂಜಿನನಗರಿ ಮಡಿಕೇರಿಯಲ್ಲಿರುವ ರಾಜಾಸೀಟನ ಸೌಂದರ್ಯಕ್ಕೆ ಮರುಳಾಗದವರಿಲ್ಲ. ಮೋಡವೇ ಧರೆಗಿಳಿವ ಮುಗಿಲು ಪೇಟೆ ಎಂದು ಹೆಸರಾದ ಮಾಂದಲಪಟ್ಟಿ, ಧುಮ್ಮುಕ್ಕಿ ಹರಿವ ಅಬ್ಬಿಜಲಪಾತ ಹೀಗೆ ಸಾಲು ಸಾಲು ಪ್ರವಾಸಿ ತಾಣಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಈ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಪ್ರವಾಸಿಗರು ಬರದೇ ಇರುವ ಕಾರಣ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನೂರಾರು ಕೋಟಿ ನಷ್ಟ ಆಗಿದೆ. ಇದನ್ನೂ ಓದಿ:ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ಕೊಡಗು ಜಿಲ್ಲೆಯಲ್ಲಿರುವ 300ಕ್ಕೂ ಹೆಚ್ಚು ರೆಸಾರ್ಟ್, 500ಕ್ಕೂ ಹೆಚ್ಚು ಹೋಟೆಲ್ ಮತ್ತು 3000 ಕ್ಕೂ ಹೆಚ್ಚು ಹೋಂಸ್ಟೇಗಳು ಸಾವಿರಾರು ಪ್ರವಾಸಿಗರಿಗೆ ಊಟ ವಸತಿಯೊಂದಿಗೆ ವಿಶೇಷ ಆತಿಥ್ಯ ನೀಡುವ ಮೂಲಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದವು. ಅಲ್ಲದೇ ಪ್ರವಾಸಿ ತಾಣಗಳ ಎಂಟ್ರಿ ಫೀಜ್ ಗಾಗಿ ಪ್ರವಾಸೋದ್ಯಮ ಇಲಾಖೆ ಸಂಗ್ರಹಿಸುತ್ತಿದ್ದ ಶುಲ್ಕವೇ ಸರ್ಕಾರಕ್ಕೆ ಹತ್ತಾರು ಲಕ್ಷ ರೂಪಾಯಿ ಆದಾಯ ತಂದುಕೊಡುತಿತ್ತು. ಆದರೆ ಜಿಲ್ಲೆಯಲ್ಲಿ ಲಾಕ್‍ಡೌನ್ ಆದ ಪರಿಣಾಮ ಎಲ್ಲಾ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೇ ಬಣಗುಡುತ್ತಿವೆ. ಹೋಂ ಸ್ಟೆ, ರೆಸಾರ್ಟ್, ಹೊಟೇಲ್ ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಎಲ್ಲವೂ ಬಂದ್ ಆಗಿದ್ದರಿಂದ ಕೊಡಗಿನ ಆರ್ಥಿಕತೆಗೆ ಮೂರು ತಿಂಗಳಲ್ಲಿ ಕನಿಷ್ಠ 250 ಕೋಟಿ ನಷ್ಟವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಈಶ್ವರ್ ಕುಮಾರ್ ಖಂಡು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹೊರಗಿನವರಿಗಿಲ್ಲ ಬ್ರೇಕ್ – ಕೊಡಗಿನಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ

    ಮತ್ತೊಂದೆಡೆ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಕುಟುಂಬಗಳು ಇಂದು ದಿಕ್ಕು ತೋಚದಂತೆ ಕಂಗಾಲಾಗಿವೆ. ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಾ ಜೀವನ ಕಂಡುಕೊಂಡಿದ್ದವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇನ್ನು ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ಮಾಲೀಕರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಮೂರೂವರೆ ತಿಂಗಳಿಂದ ಬೆಡ್ಡು, ಬೆಡ್ ಕವರ್ ಸೇರಿದಂತೆ ಯಾವುದನ್ನು ಬಳಸದೇ ಎಲ್ಲವೂ ಕೊಡಗಿನ ಪರಿಸರದಲ್ಲಿ ಬೂಸ್ಟ್ ಹಿಡಿದು ಹಾಳಾಗಿವೆ. ಇವುಗಳನ್ನು ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊಸದಾಗಿ ಎಲ್ಲವನ್ನೂ ಕೊಂಡುಕೊಳ್ಳಬೇಕಾದ ಸ್ಥಿತಿ ಇದೆ ಎಂದು ಹೋಂಸ್ಟೇ ಮಾಲೀಕರ ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಜುಲೈ 5ರ ಬಳಿಕವೂ ಅನ್‍ಲಾಕ್ ಡೌಟ್- ಬೋಪಯ್ಯ ಸುಳಿವು

    ಜಿಲ್ಲೆಗೆ ಬರುತ್ತಿದ್ದ ಸಾವಿರಾರು ಪ್ರವಾಸಿಗರ ನಂಬಿ ನೂರಾರು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಬದುಕು ಕಟ್ಟಿಕೊಂಡಿದ್ದರು. ಈಗ ಅವರ ಬದುಕು ಕೂಡ ಬೀದಿಗೆ ಬಂದಿದೆ. ಒಟ್ಟಿನಲ್ಲಿ ಪ್ರವಾಸೋದ್ಯಮ ಬಂದ್ ಆಗಿದ್ದರಿಂದ ಜಿಲ್ಲೆಯಲ್ಲಿ 250 ಕೋಟಿಯಷ್ಟು ವಹಿವಾಟು ನಷ್ಟವಾಗಿದ್ದು, ಸಾವಿರಾರು ಕುಟುಂಬಗಳು ಬದುಕಿನ ಅತಂತ್ರ ಸ್ಥಿತಿ ಅನುಭವಿಸುತ್ತಿವೆ. ಇದನ್ನೂ ಓದಿ:ಕೊಡಗಿನಲ್ಲಿ ಮತ್ತೆ ಒಂದು ವಾರ ಲಾಕ್‍ಡೌನ್ ಮುಂದುವರಿಕೆ ಸುಳಿವು ನೀಡಿದ ಡಿಸಿ

  • ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಸೋಮವಾರದಿಂದ ದೇವಾಲಯಕ್ಕೆ ಭಕ್ತರಿಗೆ ಅವಕಾಶ ಸಾಧ್ಯತೆ – ದೇವಾಲಯದ ಶುದ್ಧಿ ಕಾರ್ಯ

    ಬೆಂಗಳೂರು: ಅನ್‍ಲಾಕ್ 3.ಓ ನಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಓಪನ್ ಮಾಡುವ ಪ್ಲಾನ್ ನಲ್ಲಿ ರಾಜ್ಯ ಸರ್ಕಾರವಿದೆ. ಇಂದು ನಡೆಯುವ ಮಹತ್ವದ ಸಭೆಯ ಬಳಿಕ ಸೋಮವಾರದಿಂದ ಅನ್‍ಲಾಕ್ ಮೂರನೇ ಹಂತ ಜಾರಿಗೆ ಬರಲಿದೆ. ಮೂರನೇ ಹಂತದ ಅನ್‍ಲಾಕ್ ನಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಬರುವ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

    ದೇವಾಲಯಳಿಗೆ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಮೂರನೇ ಹಂತದಲ್ಲಿ ದೇವಾಲಯಕ್ಕೆ ಭಕ್ತರಿಗೆ ಮುಕ್ತಗೊಳಿಸುವ ಚಿಂತನೆ ನಡೆದಿದೆ. ಈ ಹಿನ್ನೆಲೆ ಸೋಮವಾರದಿಂದ ಭಕ್ತರು ದೇವಾಲಯಕ್ಕೆ ಬರುವ ಸಾಧ್ಯತೆ ಹಚ್ಚಾಗಿದೆ. ಹಾಗಾಗಿ ದೇವಾಲಯವನ್ನು ಶುದ್ಧಗೊಳಿಸಿಕೊಳ್ಳುವ ಕಾರ್ಯಕ್ಕೆ ಸಿಬ್ಬಂದಿ ಮುಂದಾಗಿದ್ದಾರೆ.

    ಬೆಂಗಳೂರಿನ ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಒಳ ಆವರಣವನ್ನು ನೀರಿನ ಮೂಲಕ ತೊಳೆದು ಸ್ಯಾನಿಟೈಸರ್ ಮಾಡುವ ಕಾರ್ಯದಲ್ಲಿ ದೇವಾಲಯದ ಸಿಬ್ಬಂದಿ ನಿರತರಾಗಿದ್ದಾರೆ.

    ಸರ್ಕಾರ ನೀಡುವ ಮಾರ್ಗಸೂಚಿಯ ಅನುಸಾರ ದೇವಾಲಯಕ್ಕೆ ಭಕ್ತರು ಬರಬೇಕಾಗುತ್ತದೆ. ಸರ್ಕಾರ ಸೋಮವಾರದಿಂದ ದೇವಾಲಯಗಳಲ್ಲಿ ಭಕ್ತರಿಗೆ ಅವಕಾಶ ನೀಡುವ ನಿರೀಕ್ಷೆಯಿಂದ ನಾವೂ ಇಂದೇ ಶುದ್ಧತೆಯ ಕಾರ್ಯವನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಆರ್ಚಕರು ಹೇಳಿದ್ದಾರೆ. ಇದನ್ನೂ ಓದಿ : ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

  • ಕೊರೊನಾ ರೂಪಾಂತರಿ ವೈರಸ್ ಮಿಸ್ಸಿಗೆ 5 ವರ್ಷದ ಮಗು ಬಲಿ

    ಕೊರೊನಾ ರೂಪಾಂತರಿ ವೈರಸ್ ಮಿಸ್ಸಿಗೆ 5 ವರ್ಷದ ಮಗು ಬಲಿ

    ದಾವಣಗೆರೆ: ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿಯಿಂದ 5 ವರ್ಷದ ಮಗು ಮೃತಪಟ್ಟಿದೆ.

    ಕೊರೊನಾ ಈಗಾಗಲೇ ಜನರ ನೆಮ್ಮದಿಯನ್ನು ಕಸಿದುಕೊಂಡಿದೆ. ಆದರೆ ಇದೀಗ ಮಹಾಮಾರಿ ಕೊರೊನಾ ಸೋಂಕಿನ ರೂಪಾಂತರಿ ವೈರಸ್ ಮಿಸ್ಸಿ ಮಕ್ಕಳನ್ನು ಕಾಡುತ್ತಿದ್ದು, ಇಡೀ ಮಕ್ಕಳ ಕುಲವನ್ನೇ ಆತಂಕಕ್ಕೆ ದೂಡಿದೆ. ರಾಜ್ಯಾದ್ಯಂತ ಸಾಕಷ್ಟು ಮಕ್ಕಳಿಗೆ ಮಿಸ್ಸಿ ಎಂಬ ರೂಪಾಂತರಿ ವೈರಾಣು ಕಾಣಿಸಿಕೊಂಡಿದ್ದು, ಚಿಕಿತ್ಸೆ ಕೂಡ ಆಯಾಯ ಜಿಲ್ಲಾಸ್ಪತ್ರೆಯಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಇದನ್ನೂ ಓದಿ : ಕೋವಿಡ್‍ನಿಂದ ಗುಣಮುಖರಾದವರಲ್ಲಿ ಪತ್ತೆಯಾಗುವ ಅಪರೂಪದ ANEC ಪ್ರಕರಣ ದಾವಣಗೆರೆಯಲ್ಲಿ ಪತ್ತೆ

    ಆದರೆ ಮಿಸ್ಸಿ ಎಂಬ ಮಹಾಮಾರಿ ಕ್ರೌರ್ಯಕ್ಕೆ ದಾವಣಗೆರೆಯಲ್ಲಿ ಮೊದಲ ಮಗು ಬಲಿಯಾಗಿದೆ. ಎಸ್.ಎಸ್.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ವರ್ಷದ ಹೆಣ್ಣು ಮಗು ಕೊನೆಯುಸಿರೆಳೆದಿದ್ದಾಳೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ದಾರೆ.

    ಸೋಂಕಿನಿಂದ ಬಳಲುತ್ತಿದ್ದ ಮಗುವಿನಲ್ಲಿ ಮಿಸ್ಸಿ ಕಂಡು ಬಂದಿದ್ದು, ಶಿರಾದಿಂದ ಹಿರಿಯೂರು ಹಾಗೂ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತ್ತು, ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗದಿಂದ ರೆಫರ್ ಆಗಿ ದಾವಣಗೆರೆ ಬಂದಿದ್ದು, ಮಿಸ್ಸಿ ಕಾಯಿಲೆ ಇರುವ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಬೆಳಗಿನ ಜಾವ 3 ಗಂಟೆಗೆ ಮಗು ಸಾವನ್ನಪ್ಪಿದೆ. ಕಳೆದ ವರ್ಷದಿಂದ ಹತ್ತು ಮಿಸ್ಸಿ ಪ್ರಕರಣಗಳು ದಾವಣಗೆರೆಯಲ್ಲಿ ದಾಖಲಾಗಿದ್ದು, 2 ಮಿಸ್ಸಿ ಅಕ್ಟಿವ್ ಕೇಸ್ ಗಳು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ. ಇದನ್ನೂ ಓದಿ : 5 ವರ್ಷ ಮಗನನ್ನು ಎತ್ತಿಕೊಂಡು 90 ಕಿಲೋಮೀಟರ್ ನಡೆದ ತಾಯಿ..!

     

     

  • ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ಕೊರೊನಾ ತಡೆಗಾಗಿ ಅಕ್ಕಿ ತೊಳೆದ ನೀರು ಕುಡಿಯುತ್ತಿರುವ ಮಹಿಳೆಯರು

    ಕೊಪ್ಪಳ: ಸಾಮಾನ್ಯವಾಗಿ ಅಡುಗೆ ಮಾಡುವ ಮುನ್ನ ಅಕ್ಕಿಯನ್ನು ಚೆನ್ನಾಗಿ ತೊಳೆದು, ತೊಳೆದ ಅಕ್ಕಿಯ ನೀರು ವೆಸ್ಟ್ ಎಂದು ಚೆಲ್ಲುವುದು ವಾಡಿಕೆ. ಆದರೆ ಈಗ ತೊಳೆದ ಅಕ್ಕಿ ನೀರನ್ನು ಯಾರು ಚೆಲ್ಲಬೇಡಿ ಬದಲಾಗಿ ಕುಡಿಯಿರಿ ಎಂದು ವೈದ್ಯರು ಹೇಳುತ್ತಿದ್ದಾರೆ.

    ಭತ್ತದ ಕಣಜವಾಗಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ಭಾಗದಲ್ಲಿ ಈಗ ಹೊಸ ಟ್ರೆಂಡ್ ಆರಂಭವಾಗಿದೆ. ಮಹಿಳೆಯರು ಅಡುಗೆಯ ಮುನ್ನ ಅಕ್ಕಿಯನ್ನು ತೊಳೆದು ಅದೇ ನೀರನ್ನು ಕುಡಿಯುತ್ತಿದ್ದಾರೆ. ಈ ನೀರು ಕುಡಿಯುವುದರಿಂದ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತೆ ಅನ್ನೋ ಸುದ್ದಿ ಹರಿದಾಡುತ್ತಿದೆ.

    ಈ ನೀರು ಕುಡಿಯುವುದರಿಂದ ನೆಗಡಿ, ಕೆಮ್ಮು, ಜ್ವರ ಮತ್ತು ವೈರಲ್ ಸೋಂಕು ಬರುವುದಿಲ್ಲ. ಅಷ್ಟೇ ಅಲ್ಲದೇ ಕೊರೊನಾ ಬರದಂತೆ ಕೂಡ ಎಚ್ಚರವಹಿಸಬಹುದಾಗಿದೆ. ಇದೇ ನೀರನ್ನು ಮುಖಕ್ಕೆ ಹಾಕಿಕೊಂಡರೆ ಮುಖದಲ್ಲಿ ಕಾಂತಿ ಹೆಚ್ಚಿಸುತ್ತದೆ ಎಂದು ಗಂಗಾವತಿಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ ಹೇಳುತ್ತಾರೆ.

    ಅಕ್ಕಿಯ ಮೇಲ್ಪದರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಮ್ ಅಧಿಕವಾಗಿರುತ್ತದೆ. ಅಕ್ಕಿ ತೊಳೆದಾಗ ಮೇಲ್ಪದರಿನಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ತೊಳೆದುಕೊಂಡು ವ್ಯರ್ಥವಾಗುತ್ತದೆ. ಅದಕ್ಕಾಗಿ ಅಡುಗೆ ಮಾಡುವ ಮಹಿಳೆಯರು ಅಕ್ಕಿ ತೊಳೆದ ನೀರನ್ನು ಚೆಲ್ಲದೆ ಕುಡಿಯಿರಿ. ದೇಹದಲ್ಲಿ ಇಮ್ಯುನಿಟಿ ಬೆಳೆಯುವುದರಿಂದ ದೇಹದಲ್ಲಿ ಕೊರೊನಾ ಸೋಂಕು ನಿಯಂತ್ರಸಿಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ :ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

  • ಮೂರನೇ ಅಲೆಯಲ್ಲಿ ಯಾರು ಇರ್ತಾರೋ ಯಾರು ಹೋಗ್ತಾರೋ ಗೊತ್ತಿಲ್ಲ: ಜಯಚಂದ್ರ

    ಮೂರನೇ ಅಲೆಯಲ್ಲಿ ಯಾರು ಇರ್ತಾರೋ ಯಾರು ಹೋಗ್ತಾರೋ ಗೊತ್ತಿಲ್ಲ: ಜಯಚಂದ್ರ

    ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ವರ್ಷ ಬಾಕಿ ಇದೆ. ಅಷ್ಟರಲ್ಲಿ ಕೊರೊನಾ ಮೂರನೇ ಅಲೆ ಬಂದು ಯಾರು ಇರುತ್ತಾರೋ ಯಾರು ಹೋಗುತ್ತಾರೋ ಗೊತ್ತಿಲ್ಲ. ಈ ನಡುವೆ ಕಾಂಗ್ರೆಸ್ ನಲ್ಲಿ ಸಿಎಂ ಗಾದಿ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದು ಮಾಜಿ ಸಚಿವ ಟಿ.ಬಿ ಜಯಚಂದ್ರ ಹೇಳಿದ್ದಾರೆ.

    ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮಲ್ಲಿ ಈಗ ಸಿಎಂ ಯಾರು ಎಂಬ ಪ್ರಶ್ನೆ ಅಪ್ರಸ್ತುತ. 2023ರಲ್ಲಿ 125ಕ್ಕೂ ಹೆಚ್ಚು ಸ್ಥಾನ ಪಡೆದರೆ ಆಗ ಅಂದು ಆಯ್ಕೆಯಾದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಅಷ್ಟರಲ್ಲಿ ಸಿಎಂ ಅಭ್ಯರ್ಥಿ ಯಾರೂ ಅನ್ನುವ ಚರ್ಚೆ ಬೇಡ ಎಂದಿದ್ದಾರೆ.

    ಜತೆಗೆ ಕಾಂಗ್ರೆಸ್ ನಲ್ಲಿ ಯಾವ ಬಣನೂ ಇಲ್ಲ, ಗುಂಪುಗಾರಿಕೆನೂ ಇಲ್ಲ, ಅದು ಕೇವಲ ಮಾಧ್ಯಮದ ಸೃಷ್ಟಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ನಾನು ಓಪನ್ ಹಾರ್ಟೆಡ್ ಏನೇ ಹೇಳಿದ್ರೂ ಓಪನ್ ಆಗಿ ಹೇಳ್ತೀನಿ: ಜಮೀರ್

  • ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    – ಗ್ರಾಮೀಣ ಜನರಿಗೆ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಮಾಸ್ಟರ್ ಪ್ಲಾನ್

    ಯಾದಗಿರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆಗಾಗಿ ಬಡಿದಾಡಿಕೊಳ್ಳುತ್ತಿದ್ದರೆ, ಯಾದಗಿರಿಯಲ್ಲಿ ಮಾತ್ರ ಮನೆಗೆ ಹೋಗಿ ಲಸಿಕೆ ಕೊಟ್ಟರೂ ಜನ ಮಾತ್ರ ಲಸಿಕೆ ಪಡೆಯಿತ್ತಿಲ್ಲ. ಇನ್ನೂ ಗ್ರಾಮೀಣ ಭಾಗದ ಜನ ಬೆಳಗ್ಗೆ ಜಮೀನು ಕೆಲಸಕ್ಕೆ ಹೋದರೆ ಮತ್ತೆ ರಾತ್ರಿಯೇ ಮನೆಗೆ ಸೇರುತ್ತಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಲಸಿಕೆ ವಿತರಣೆ ಕುಂಠಿತವಾಗಿದೆ.

    ಯಾದಗಿರಿ ಆರೋಗ್ಯ ಸಿಬ್ಬಂದಿ ಮಾತ್ರ ಜನರಿಗೆ ಶತಾಗತಾಯ ಲಸಿಕೆ ನೀಡಲು ಹರಸಹಾಸ ಪಡುತ್ತಿದ್ದಾರೆ. ಸೀದಾ ರೈತರ ಜಮೀನುಗಳಿಗೆ ತೆರಳಿ ಸಿಬ್ಬಂದಿ ಜಮೀನುಗಳಲ್ಲಿಯೇ ಲಸಿಕೆ ವಿತರಣೆ ಮಾಡುತ್ತಿದ್ದಾರೆ. ಮರದ ಕೆಳಗೆ, ರಸ್ತೆಯಲ್ಲಿ, ಬೆಳೆಗಳ ಮಧ್ಯೆ ಹೀಗೆ ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ ಹಾಕಲಾಗುತ್ತಿದೆ.

    ಡಾ.ಲಕ್ಷ್ಮಿಕಾಂತ್ ಮತ್ತು ಅವರ ತಂಡ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಲಸಿಕೆ ಪಡೆಯಲು ಕುಂಟು ನೆಪ ಹೇಳಿ, ಜಮೀನಿಗೆ ಹೋಗತ್ತಿದ್ದ ಜನ ಆರೋಗ್ಯ ಸಿಬ್ಬಂದಿ ಪ್ಲಾನ್ ಗೆ ಥಂಡಾ ಹೊಡೆದಿದ್ದಾರೆ. ಇದನ್ನೂ ಓದಿ:ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ

  • ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    – ಮಗು ಖುಷಿ ಕಸಿದುಕೊಂಡ ಕೊರೊನಾ ಮಹಾಮಾರಿ
    – 2 ವರ್ಷದ ಹಿಂದೆ ತಾಯಿ ನಿಧನ

    ಶಿವಮೊಗ್ಗ: ಈ ಕೊರೊನಾ ಮಹಾಮಾರಿ ಎಲ್ಲರ ಜೀವ, ಜೀವನದ ಜೊತೆ ಚೆಲ್ಲಾಟವಾಡಿದೆ. ಹಲವರ ಖುಷಿ ಕಸಿದುಕೊಂಡಿದೆ. ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿವೆ. ಹಾಗೆಯೇ ಪುಟಾಣಿಯೊಬ್ಬಳು ಅಪ್ಪನಿಗೆ ನಿತ್ಯವೂ ಹಲವು ಬಾರಿ ಫೋನ್ ಮಾಡುವ ಪ್ರಯತ್ನ ಮಾಡುತ್ತಾಳೆ. ಇಂತಹ ಒಂದು ಮನ ಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಈ ಪುಟಾಣಿ ಸಮ್ಯಾ(3) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶರಣ್ ಎಂಬವರ ಪುತ್ರಿ. ಸಮ್ಯಾ ತಾಯಿ ಇಹಲೋಕ ತ್ಯಜಿಸಿದಾಗ ಈ ಪುಟಾಣಿಗೆ ಒಂದು ವರ್ಷವಾಗಿತ್ತು. ಒಂದು ವರ್ಷದವಳಾಗಿದ್ದಾಗಲೇ ಈ ಪುಟಾಣಿ ತಾಯಿಯನ್ನು ಕಳೆದುಕೊಂಡಿತ್ತು. ಈ ಪುಟಾಣಿಯ ತಂದೆ ಶರಣ್ ಅವರೇ ತಾಯಿ ತಂದೆ ಎರಡು ಆಗಿ ಮಗಳನ್ನು ಪೋಷಿಸುತ್ತಿದ್ದರು.

    ಶರಣ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದರು. ಆದರೆ ಕಳೆದ ಬಾರಿ ಕೊರೊನಾ ವಕ್ಕರಿಸಿದ್ದರಿಂದ ಮೊದಲ ಬಾರಿ ಲಾಕ್ ಡೌನ್ ಜಾರಿಯಾಯ್ತು. ಲಾಕ್ ಡೌನ್ ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡಿದ್ದರು. ಕೆಲಸದ ಜೊತೆ ಜೊತೆಗೆ ಸಂಸ್ಕøತಿ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು.

    ಕೊರೊನಾ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲಿ ಶರಣ್ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸುಮಾರು 10 ಸಾವಿರ ಮಂದಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ಕಿಟ್ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ, ಶರಣ್ ಗೆ ಸೋಂಕು ತಗುಲಿ ಕಳೆದ ಒಂದು ತಿಂಗಳ ಹಿಂದೆ ಮಹಾಮಾರಿಗೆ ಬಲಿಯಾದರು. ಇದೀಗ ಶರಣ್ ಪುತ್ರಿ ಸಮ್ಯಾ ಅಪ್ಪನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

    ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ. ಅಮ್ಮ ಹೋದ ಬಳಿಕ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಆದರೆ ಈ ಕಂದಮ್ಮನಿಗೆ ಅಪ್ಪ ಇಲ್ಲ ಎಂಬ ಸತ್ಯವೇ ತಿಳಿದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಪ್ಪನ ನಂಬರಿಗೆ ಕರೆ ಮಾಡುತ್ತಾಳೆ. ಅಪ್ಪ ಯಾಕೋ ಬ್ಯೂಸಿ ಇರಬೇಕು ಎಂದು ಅವಳೇ ಅಂದುಕೊಂಡು ಸುಮ್ಮನಾಗುತ್ತಾಳಂತೆ.

    ಅಖಿಲಾ ಅವರಿಗೂ ಒಬ್ಬಳು ಮಗಳಿದ್ದಾಳೆ. ಇದೀಗ ಸಮ್ಯಾ ಸೇರಿ ನಮಗೆ ಇಬ್ಬರು ಮಕ್ಕಳು. ಸಮ್ಯಾ ಕೂಡಾ ನಮ್ಮ ಮಗಳೇ. ಸಮ್ಯಾಳಿಗೆ ಅಪ್ಪ ಅಮ್ಮ ಇಲ್ಲ ಎನ್ನುವ ಕೊರಗು ಬಾರದ ರೀತಿ ನೋಡಿಕೊಳ್ಳುತ್ತೇವೆ. ಇಬ್ಬರು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತೇವೆ. ಸದಾ ಅವಳಿಗೆ ನೆರಳಾಗಿ ಇರುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಮೊದಲೇ ತಾಯಿ ಕಳೆದುಕೊಂಡಿದ್ದ ಪುಟಾಣಿ ಇದೀಗ ಮಹಾಮಾರಿಗೆ ತಂದೆಯನ್ನು ಕಳೆದುಕೊಂಡಿದೆ. ಏಯ್ ವಿಧಿಯೇ ನೀನೆಷ್ಟು ಕ್ರೂರಿ ನಿನಗೆ ಧಿಕ್ಕಾರವಿರಲಿ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆಯಾಗಿದೆ: ಶ್ರೀರಾಮುಲು

  • ಕೊರೊನಾ ಮಾರ್ಗಸೂಚಿ ಉಲ್ಲಂಘನೆ – 24 ಲಕ್ಷ ದಂಡ ವಿಧಿಸಿದ ಪೊಲೀಸರು

    ಕೊರೊನಾ ಮಾರ್ಗಸೂಚಿ ಉಲ್ಲಂಘನೆ – 24 ಲಕ್ಷ ದಂಡ ವಿಧಿಸಿದ ಪೊಲೀಸರು

    ಕೊಪ್ಪಳ: ಜಿಲ್ಲಾದ್ಯಂತ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿ ರಸ್ತೆಗಿಳಿದ ವಾಹನ ಸವಾರರಿಗೆ ಜಿಲ್ಲಾ ಪೊಲೀಸ್ ಇಲಾಖೆ ಶಾಕ್ ನೀಡಿದ್ದು, ಕಳೆದ 27 ದಿನದಲ್ಲಿ ದಾಖಲೆ ಪ್ರಮಾಣದ 24,49,160 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.

    ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ದಿನದಿಂದ ದಿನಕ್ಕೆ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂಬ ಆದೇಶದನ್ವಯ ಪೊಲೀಸ್ ಇಲಾಖೆ ದಾಖಲೆ ಪ್ರಮಾಣದಲ್ಲಿ ಪ್ರಕರಣ ದಾಖಲಿಸಿ, ವಾಹನ ಸವಾರರಿಗೆ ದಂಡ ವಿಧಿಸಿದೆ. ಜಿಲ್ಲಾದ್ಯಂತ ರಸ್ತೆ ನಿಯಮ ಉಲ್ಲಂಘಿಸಿ ಸಂಚರಿಸುವ ವಾಹನ ಸವಾರರು, ಮಾಸ್ಕ್ ಧರಿಸದೇ ಇರುವವರು, ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವವರನ್ನು ಹಿಡಿದು ಮೇ.10ರಿಂದ ಜೂ.7ರವರೆಗೆ ಬರೋಬ್ಬರಿ 13,608 ಪ್ರಕರಣ ದಾಖಲಿಸಿ 24,49,160 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಸೋಂಕಿತರು ಐಸೋಲೇಶನ್, ಕ್ವಾರಂಟೈನ್ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ ಪರಿಣಾಮ ಅವರ ಮೇಲೂ ಕರ್ನಾಟಕ ಸೋಂಕು ಪ್ರತಿಬಂಧಕ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಸಾವನ್ನಪ್ಪಿದವರ ಸದ್ಗತಿಗಾಗಿ ತ್ರಿಮತಸ್ಥರಿಂದ ಹೋಮ

    ಜಿಲ್ಲಾದ್ಯಂತ 1,866 ವಾಹನ ಜಪ್ತಿ: ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರೂ, ಸಹ ಅನೇಕ ಜನರು ಅನಗತ್ಯವಾಗಿ ರಸ್ತೆಗಿಳಿದು ಗೊಂದಲ ಸೃಷ್ಟಿಸುತ್ತಿದ್ದರು. ಅಲ್ಲದೇ ಕೆಲವರು ಪೊಲೀಸರಿಗೆ ಸುಳ್ಳು ನೆಪ ಹೇಳಿ ನಗರದಲ್ಲಿ ತಿರುಗಾಡುತ್ತಿದ್ದರು. ಹೀಗಾಗಿ ಪೊಲೀಸರು
    ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಅನಗತ್ಯವಾಗಿ ರಸ್ತೆಗೆ ಇಳಿದು ಸಂಚರಿಸುವ ವಾಹನಗಳನ್ನು ಯಾವುದೇ ಮುಲಾಜಿಲ್ಲದೆ ವಶಪಡಿಸಿಕೊಂಡು, ದಂಡ ವಿಧಿಸಿದ್ದಾರೆ. ಜಿಲ್ಲೆಯಲ್ಲಿ ಮೇ.10ರಿಂದ ಜೂ.7ರವೆರೆಗ 1,866 ವಾಹನಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ.

    ವಾಹನ ಪಡೆಯಲು ಪರದಾಟ: ಜಪ್ತಿಗೊಂಡ ವಾಹನ ಮರಳಿ ಪಡೆಯಲು ವಾಹನ ಸವಾರರು ವಕೀಲರು ಮತ್ತು ನ್ಯಾಯಾಲಯಕ್ಕೆ ಎಡತಾಕುತ್ತಿದ್ದಾರೆ. ಅಲ್ಲದೇ ಕೆಲವರು ಪ್ರಭಾವಿ ವ್ಯಕ್ತಿಗಳ ಮುಖಾಂತರ ಪೊಲೀಸರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಾಹನ ಬಿಡುಗಡೆಗೊಳಿಸುವಂತೆ ಒತ್ತಡ ಹೇರುತ್ತಿದ್ದಾರೆ. ಇದನ್ನೂ ಓದಿ:  ಲಾಕ್ ವಿಸ್ತರಣೆಯಾದ ಜಿಲ್ಲೆಗಳಲ್ಲಿ ಕಂಟ್ರೋಲ್‍ಗೆ ಬಾರದ ಪಾಸಿಟಿವಿಟಿ ರೇಟ್