Tag: ಪಬ್ಲಿಕ್ ಟಿವಿ China

  • ಜುಲೈ ನಂತರ ಕೊರೊನಾ ತವರೂರಿನಲ್ಲಿ ವರದಿಯಾಗಿಲ್ಲ ಪ್ರಕರಣ

    ಜುಲೈ ನಂತರ ಕೊರೊನಾ ತವರೂರಿನಲ್ಲಿ ವರದಿಯಾಗಿಲ್ಲ ಪ್ರಕರಣ

    ಬೀಜಿಂಗ್: ಜುಲೈ ತಿಂಗಳ ನಂತರ ಮೊದಲ ಬಾರಿಗೆ ಸ್ಥಳೀಯವಾಗಿ ಹರಡುವ ಕೋವಿಡ್-19 ಪ್ರಕರಣಗಳು ಕಂಡು ಬಂದಿಲ್ಲ ಎಂದು ಚೀನಾದ ಆರೋಗ್ಯ ಪ್ರಾಧಿಕಾರ ಸೋಮವಾರ ತಿಳಿಸಿದೆ.

    ಇತ್ತೀಚೆಗೆ ಜುಲೈ 20ರಂದು ಪೂರ್ವ ನಗರವಾದ ನಾನ್ಜಿಂಗ್‍ನ ಕೆಲವು ವಿಮಾನ ನಿಲ್ದಾಣದ ಕಾರ್ಮಿಕರಲ್ಲಿ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಚೀನಾದಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ದೇಶಾದ್ಯಂತ ಸ್ಥಳೀಯ ಅಧಿಕಾರಿಗಳು ಲಕ್ಷಾಂತರ ಜನರಿಗೆ ಸಾಮೂಹಿಕ ಕೋವಿಡ್ ಟೆಸ್ಟ್ ಸೇರಿದಂತೆ, ಸೋಂಕನ್ನು ತಡೆಗಟ್ಟುವ ಕಠಿಣ ಕ್ರಮ, ಐಸೋಲೇಶನ್ ಮತ್ತು ಸೋಂಕಿತರಿಗೆ ಚಿಕಿತ್ಸೆ ಪಡೆಯಲು ಸೂಚಿಸಿದ್ದರು. ಇದನ್ನೂ ಓದಿ:ಡಿಸ್ಚಾರ್ಜ್ ಬಳಿಕವೂ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಉಚಿತ ಚಿಕಿತ್ಸೆ: ಬಸವರಾಜ್ ಬೊಮ್ಮಾಯಿ

    ಸದ್ಯ ಈವರೆಗೂ ಯಾವುದೇ ಸಾವಿನ ಪ್ರಕರಣಗಳು ಕೂಡ ಪತ್ತೆಯಾಗಿಲ್ಲ. ಅಲ್ಲದೇ ಶಾಂಘೈನ ಹಣಕಾಸು ಕೇಂದ್ರದ ಸಮೀಪವಿರುವ ಜಿಯಾಂಗ್ಸು ಪ್ರಾಂತ್ಯದ ನಾನ್ಜಿಂಗ್ ಮತ್ತ ಯಾಂಗ್‍ಜ್ಹು ನಗರಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದ್ದು, ಚೀನಾ ದೇಶಾದ್ಯಂತ ಆಗಸ್ಟ್ ಆರಂಭದ ನಂತರ ಹೊಸ ಸ್ಥಳೀಯ ಪ್ರಕರಣಗಳು ಕಳೆದ ವಾರ ಏಕ-ಅಂಕಿಗೆ ಇಳಿದಿದೆ.  ಇದನ್ನೂ ಓದಿ:ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

  • 3 ರಿಂದ 17 ವರ್ಷದವರಿಗೆ ಲಸಿಕೆ ಆರಂಭಿಸಿದ ಚೀನಾ

    3 ರಿಂದ 17 ವರ್ಷದವರಿಗೆ ಲಸಿಕೆ ಆರಂಭಿಸಿದ ಚೀನಾ

    ಬೀಜಿಂಗ್: ಚೀನಾ ದೇಶವು 3 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕೊರೊನಾವ್ಯಾಕ್ ಲಸಿಕೆ ನೀಡಲು ಅನುಮತಿ ನೀಡಿದೆ.

    ಚೀನಾದ ಸಿನೊವ್ಯಾಕ್ ಕಂಪನಿ ಕೊರೊನಾವ್ಯಾಕ್ ಲಸಿಕೆಯನ್ನು ಕಂಡು ಹಿಡಿದಿದ್ದು, ಮೊದಲಿಗೆ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಕ್ಲಿನಿಕಲ್ ಸಂಶೋಧನೆ ನಡೆಸಿ, ಬಳಿಕ 17 ವರ್ಷ ಒಳಗಿನ ನೂರಾರು ಕೊರೊನಾ ವಾರಿಯರ್ಸ್ ಗಳ ಮೇಲೆ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ಸಂದರ್ಭದಲ್ಲಿ ಈ ಲಸಿಕೆ ಸುರಕ್ಷಿತ ಹಾಗೂ ಸೂಕ್ತವಾಗಿದೆ ಎಂದು ಸಿನೊವ್ಯಾಕ್ ಕಂಪನಿ ಅಧ್ಯಕ್ಷ ಯಿನ್ ವಿಯಿಡಾಂಗ್ ಖಚಿತಪಡಿಸಿದ್ದಾರೆ. ಇದನ್ನು ಓದಿ: ಏಲಕ್ಕಿ ಸೇವನೆಯಿಂದ ಸಿಗಲಿದೆ ಹಲವು ಪ್ರಯೋಜನ

    ಈ ಮುನ್ನ ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯೂಎಚ್‍ಒ ಸಿನೋಫಾರ್ಮಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡಿದ್ದ ಚೀನಾ, ಇದೀಗ ಸಿನೊವ್ಯಾಕ್ ಕಂಪನಿಯ ಕೊರೊನಾವ್ಯಾಕ್ ಲಸಿಕೆಗೆ ಅನುಮತಿ ನೀಡಿದೆ. ಅಲ್ಲದೆ ಸಿನೊವ್ಯಾಕ್ ಲಸಿಕೆ ಚೀನಾದ ಎರಡನೇ ವ್ಯಾಕ್ಸಿನ್ ಆಗಿದೆ. ಇದನ್ನು ಓದಿ: ಶಿಕಾರಿಗೆ ತೆರಳಿದ್ದ ಗೆಳೆಯರ ನಡುವೆ ಗಲಾಟೆ- ಕಾಲಿಗೆ ಗುಂಡು ಹೊಡೆದ ಸ್ನೇಹಿತ

    ರಾಜಕೀಯದ ದೃಷ್ಟಿಯಿಂದ ಚೀನಾ ಸಿನೊವ್ಯಾಕ್ ಲಸಿಕೆಯನ್ನು ಹಲವು ದೇಶಗಳಿಗೆ ದೇಣಿಗೆ ನೀಡುತ್ತಿದೆ.

  • ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರಿದ ಬಾಲಕ – ವಿಡಿಯೋ ವೈರಲ್

    ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರಿದ ಬಾಲಕ – ವಿಡಿಯೋ ವೈರಲ್

    ಬೀಜಿಂಗ್: ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿ ಮೇಲಕ್ಕೆ ಹಾರುವ ಭಯಾನಕ ಆಟವನ್ನು ಮಕ್ಕಳು ಆಡುತ್ತಿರುವ ವಿಚಾರ ದಕ್ಷಿಣ ಚೀನಾದಲ್ಲಿ ಬೆಳಕಿಗೆ ಬಂದಿದೆ.

    ವಿಡಿಯೋನಲ್ಲಿ ಮೂವರು ಮಕ್ಕಳು ಸೇರಿಕೊಂಡು ಮ್ಯಾನ್ ಹೋಲ್ ಒಳಗಡೆ ಪಟಾಕಿ ಸಿಡಿಸಿದ್ದಾರೆ. ಒತ್ತಡಕ್ಕೆ ಮ್ಯಾನ್ ಹೋಲ್ ಮುಚ್ಚಳ ಮೇಲಕ್ಕೆ ಹಾರಿದೆ. ಈ ವೇಳೆ ಮ್ಯಾನ್ ಹೋಲ್ ಮುಚ್ಚಳದ ಮೇಲಿದ್ದ ಬಾಲಕ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದಾನೆ.

    ಇದೀಗ ಈ ಘಟನೆ ವಿಚಾರವಾಗಿ ಪೋಷಕರು ಮತ್ತು ಚೀನಾದ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಜನವರಿ ತಿಂಗಳಿನಲ್ಲಿ ಇಂತಹ 5 ಮ್ಯಾನ್ ಹೋಲ್‍ಗಳು ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.

    ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಜನರು, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ನಿಬಂಧನೆ ಮತ್ತು ಮಾರ್ಗಸೂಚಿಗಳನ್ನು ಹಾಕಬೇಕೆಂದು ಆಗ್ರಹಿಸಿದ್ದಾರೆ.

  • ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಸೆಕ್ಸ್ ಡಾಲ್ ಜೊತೆ ನಿಶ್ಚಿತಾರ್ಥ – ಮಹಿಳೆಯರಿಗಿಂತ ಡಾಲ್ ಉತ್ತಮ ಅಂದ

    ಬೀಜಿಂಗ್: ವ್ಯಕ್ತಿಯೊಬ್ಬ ನಿಜವಾದ ಮಹಿಳೆಯೊಂದಿಗೆ ಡೇಟ್ ಮಾಡುವುದಕ್ಕಿಂತ ಸೆಕ್ಸ್ ಡಾಲ್ ಜೊತೆ ಇರುವುದು ಉತ್ತಮ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದೀಗ ಆತ ನಿಶ್ಚಿತಾರ್ಥ ಮಾಡಿಕೊಂಡ ಸೆಕ್ಸ್ ಡಾಲ್ ಹಾಗೂ ಅವರ ಬೇಬಿ ಡಾಲ್ ಜೊತೆ ಹಾಂಕಾಂಗ್‍ನಲ್ಲಿ ವಾಸವಾಗಿದ್ದಾನೆ.

    ಕ್ಸಿ ಟಿಯನ್‍ರಾಂಗ್(35) ಎಂಬಾತ ಮೋಚಿ ಎಂಬ ಗೊಂಬೆಯೊಂದಿಗೆ ಈ ತಿಂಗಳ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಅಲ್ಲದೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆತನ ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು.

    ಇಲ್ಲಿಯವರೆಗೆ ನಾನು ಡಾಲನ್ನು ಚುಂಬಿಸಿಲ್ಲ ಎಂದು ಹೇಳಿದ್ದಾನೆ. ಯಾಕೆ ಚುಂಬಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, ಚುಂಬಿಸಿದರೆ ಆಕೆಯ ಸೂಕ್ಷ್ಮವಾದ ತ್ವಚೆಗೆ ಎಲ್ಲಿ ಹಾನಿಯಾಗಬಹುದು ಎಂಬ ಉತ್ತರವನ್ನು ನೀಡಿದ್ದಾನೆ.

    ಹಾಂಕಾಂಗ್‍ನಲ್ಲಿ ಚಿಲ್ಲರೆ ಅಂಗಡಿಗಳಲ್ಲಿ ಇರುತ್ತಿದ್ದ ಗೊಂಬೆಗಳ ವೀಕ್ಷಿಸುತ್ತಿದ್ದ ಕ್ಸಿ ಕಳೆದ 10 ವರ್ಷಗಳಿಂದ ಅದರ ಮೇಲೆ ಆಕರ್ಷಣೆಗೆ ಒಳಗಾಗಿದ್ದಾನೆ. ಆಗ ಒಂದು ಗೊಂಬೆಯ ಬೆಲೆ 80,000 ಯುವಾನ್(ಅಂದಾಜು 9.7 ಲಕ್ಷ) ಇತ್ತು. ಆದರೆ ಆ ಸಮಯದಲ್ಲಿ ದುಡ್ಡು ಇರದ ಕಾರಣ ಖರೀದಿಸಲು ಸಾಧ್ಯವಾಗಿರಲಿಲ್ಲ.

    2019ರಲ್ಲಿ ಸಿಲಿಕೋನ್ ಡಾಲ್ ಇಂಟರ್‍ನೆಟ್‍ನಲ್ಲಿ ಮಾರಾಟಕ್ಕೆ ಇರುವುದನ್ನು ನೋಡಿ 1,0000 ಯುವಾನ್(11.34 ಲಕ್ಷ) ನೀಡಿ ಆನ್‍ಲೈನ್ ನಲ್ಲಿ ಆರ್ಡರ್ ಮಾಡಿ ಚೀನಾದಿಂದ ತರಿಸಿಕೊಂಡಿರುದಾಗಿ ತಿಳಿಸಿದ್ದಾನೆ. ಕ್ಸಿ ಟಿಯನ್‍ರಾಂಗ್ ರಾತ್ರಿ ಮಲಗಿರುವ ವೇಳೆ ಮೋಚಿ ಕುರ್ಚಿ ಮೇಲೆ ಕುಳಿತಿರುತ್ತಾಳೆ. ಅಲ್ಲದೆ ನಾನು ಆಕೆಯನ್ನು ಒದ್ದೆ ಬಟ್ಟೆಯಿಂದ ಸ್ನಾನ ಮಾಡಿಸಿ ಟಾಲ್ಕಮ್ ಪೌಡರ್ ಹಾಕುತ್ತೇನೆ ಎಂದು ತಿಳಿಸಿದ್ದಾನೆ.

    ಈ ಮೊದಲು ನನಗೆ ಗರ್ಲ್‍ಫ್ರೆಂಡ್ ಇದ್ದಳು. ಆದರೆ ನಾನು ಮೋಚಿಯನ್ನು ಗೌರವಿಸುತ್ತೇನೆ. ನನ್ನ ಗಮನ ಈಗ ಏನಿದ್ದರೂ ಮೋಚಿ ಮೇಲೆ ಮಾತ್ರ. ಇಲ್ಲಿಯವರೆಗೂ ನಾನು ಮೋಚಿಯೊಂದಿಗೆ ಲೈಂಗಿಕ ಸಂಬಂಧವನ್ನು ಕೂಡ ಹೊಂದಿಲ್ಲ. ಹಿಂದೆ ನನ್ನ ಗರ್ಲ್ ಫ್ರೆಂಡ್ ಯಾವಾಗಲೂ ನನಗೆ ಏನಾದರೂ ಕೊಡಿಸುವಂತೆ ಪೀಡಿಸುತ್ತಿದ್ದಳು. ಇಲ್ಲಿಯವರೆಗೂ ಮೋಚಿ ಮಾತ್ರ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾನೆ.

    ನನ್ನ ಹಳೆಯ ಗೆಳತಿ ಮೊಬೈಲ್‍ನನ್ನು ನೋಡುತ್ತಾ ನನ್ನ ಮೇಲೆ ಗಮನ ನೀಡುತ್ತಿರಲಿಲ್ಲ. ಆದರೆ ಮೋಚಿ ಹಾಗೇ ಮಾಡುವುದಿಲ್ಲ. ಅವಳ ಎಲ್ಲ ಗಮನವನ್ನು ನನ್ನ ಮೇಲೆ ಹರಿಸುತ್ತಾಳೆ. ಹಾಗಾಗಿ ನಿಜವಾದ ಮಹಿಳೆಗಿಂತ ಸೆಕ್ಸ್ ಡಾಲ್ ಜೊತೆ ಡೇಟ್ ಮಾಡುವುದು ಉತ್ತಮ ಎಂದು ಹೇಳಿದ್ದಾನೆ. ಮೋಚಿಗೆ ಮುದ್ದಾದ ಬಟ್ಟೆ ತೊಡಿಸಿ ಫೋಟೋವನ್ನು ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾನೆ.

  • 30 ನಿಮಿಷಲ್ಲಿ 30 ಕೆಜಿ ಕಿತ್ತಳೆ ಹಣ್ಣು ತಿಂದ ನಾಲ್ವರು- ಪರಿಣಾಮ ಏನಾಯ್ತು ಗೊತ್ತಾ?

    30 ನಿಮಿಷಲ್ಲಿ 30 ಕೆಜಿ ಕಿತ್ತಳೆ ಹಣ್ಣು ತಿಂದ ನಾಲ್ವರು- ಪರಿಣಾಮ ಏನಾಯ್ತು ಗೊತ್ತಾ?

    ಬೀಜಿಂಗ್: ಎಲ್ಲರಿಗೂ ತಿಳಿದಿರುವಂತೆ ವಿಮಾನಯಾನವು ದುಬಾರಿ ಸಾರಿಗೆ ವ್ಯವಸ್ಥೆಯಾಗಿದೆ. ವಿಮಾನ ಸಂಸ್ಥೆಯು ತನ್ನದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಹೊಂದಿರುತ್ತದೆ. ಉದಾಹರಣೆ ಪ್ರಯಾಣಿಕರು ತೆಗೆದುಕೊಂಡು ಹೋಗುವ ಲಗೇಜ್‍ಗಳ ಮಿತಿ ಇಷ್ಟೇ ಇರಬೇಕು ಎಂಬ ನಿಯಮವಿರುತ್ತದೆ. ಲಗೇಜ್ ಮಿತಿಮೀರಿದರೆ ಯಾವುದೇ ಪ್ರಯಾಣಿಕರಾದರು ಸಹ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಹೆಚ್ಚಿನ ಶುಲ್ಕ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹೋಗಿ ನಾಲ್ವರು ಪ್ರಯಾಣಿಕರು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ.

    ಇತ್ತೀಚೆಗೆ 4 ಮಂದಿ ಪ್ರಯಾಣಿಕರು 30 ಕೆಜಿ ಕಿತ್ತಳೆ ಹಣ್ಣಿನ ಡಬ್ಬಗಳ ಲಗೇಜ್‍ಗೆ ಹೆಚ್ಚು ಹಣ ಪಾವತಿಸಬೇಕೆಂದು 30 ಕೆಜಿ ಹಣ್ಣನ್ನು 30 ನಿಮಿಷದಲ್ಲಿ ತಿಂದಿರುವ ಘಟನೆ ನೈರುತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕುನ್ಮಿಂಗ್‍ನಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ವಿಮಾನ ನಿಲ್ದಾಣಕ್ಕೆ 30 ಕೆಜಿ ಕಿತ್ತಳೆ ಹಣ್ಣನ್ನು ತೆಗೆದುಕೊಂಡು ಹೋಗಿದ್ದ ವಾಂಗ್ ಮತ್ತು ಆತನ ಸಹೋದ್ಯೋಗಿಗಳು ಕಿತ್ತಳೆ ಹಣ್ಣಿನ ಹೆಚ್ಚುವರಿ ಲಗೇಜ್‍ಗೆ 300 ಯುವಾನ್(3,384 ರೂ) ಶುಲ್ಕ ಪಾವತಿಸಬೇಕೆಂದು ಕಿತ್ತಳೆ ಹಣ್ಣುಗಳನ್ನು ತಿನ್ನಲು ನಿರ್ಧರಿಸಿ, ಕೇವಲ 30 ನಿಮಿಷಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಎಲ್ಲಾ ಕಿತ್ತಳೆ ಹಣ್ಣುಗಳನ್ನು ತಿಂದು ಖಾಲಿ ಮಾಡಿದ್ದಾರೆ.

    ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ಒಂದೇ ಬಾರಿಗೆ ಅಧಿಕ ಹಣ್ಣುಗಳನ್ನು ತಿಂದ ಪರಿಣಾಮ ಇದೀಗ 4 ಮಂದಿ ಕೂಡ ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಆ ನಾಲ್ವರ ಮೂರ್ಖತನವನ್ನು ನೋಡಿ ವ್ಯಂಗ್ಯ ಮಾಡುತ್ತಿದ್ದಾರೆ.