Tag: ಪಬ್ಲಿಕ್ ಟಿವಿ Chicken Biryani

  • ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲಿ ವಾರಿಯರ್ಸ್ ಆಗಿ ಸೇವೆ ಮಾಡುತ್ತಿರುವವರಿಗೆ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ ಗಜೇಂದ್ರ ದಂಪತಿಗಳು ಇಂದು ಬಿರಿಯಾನಿ ಮಾಡಿ ವಿತರಿಸಿದ್ದಾರೆ.

    ಚಿಕ್ಕಬಳ್ಳಾಪುರದ ನಾಲ್ಕನೇ ವಾರ್ಡ್ ಸದಸ್ಯರಾಗಿರುವ ಗಜೇಂದ್ರರವರು ಕಳೆದೆರೆಡು ದಿನಗಳಿಂದ ಪೊಲೀಸರು, ಹೋಂ ಗಾಡ್ರ್ಸ್, ನಗರಸಭೆ ಹಾಗೂ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗೆ ಉಚಿತವಾಗಿ ಊಟ, ತಿಂಡಿ ಕೊಡುವ ಕೆಲಸ ಮಾಡುತ್ತಿದ್ದಾರೆ.

    ಇಂದು ವಿಶೇಷವಾಗಿ ಚಿಕನ್ ಬಿರಿಯಾನಿ ವಿತರಿಸಿ ಸಂಕಷ್ಟದ ದಿನಗಳಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುವ ವಾರಿಯರ್ಸ್‍ಗೆ ಜನ ಕೈಲಾದ ಸಹಾಯ ಮಾಡಬೇಕು. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಜನ ಸಹಕರಿಸಬೇಕೆಂದು ಮನವಿ ಮಾಡಿದರು. ಪ್ರತಿ ದಿನ ತಮ್ಮ ಮನೆ ಬಳಿಯೇ ಅಡುಗೆ ತಯಾರಿ ಮಾಡಿ ಪ್ಯಾಕ್ ಮಾಡಿ ನಗರದಲ್ಲಿ ಸಂಚಾರ ಮಾಡಿ ಆಸ್ಪತ್ರೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದವರಿಗೆ ಊಟ ವಿತರಣೆ ಮಾಡುತ್ತಿದ್ದಾರೆ.