Tag: ಪಬ್ಲಿಕ್ ಟಿವಿ chennai

  • ಟೈಲ್ಸ್ ಮತ್ತು ಸ್ಯಾನಿಟರಿವೇರ್ ಹೆಸರಲ್ಲಿ ಅಕ್ರಮ – 220 ಕೋಟಿ ಕಪ್ಪು ಹಣ ಪತ್ತೆ

    ಟೈಲ್ಸ್ ಮತ್ತು ಸ್ಯಾನಿಟರಿವೇರ್ ಹೆಸರಲ್ಲಿ ಅಕ್ರಮ – 220 ಕೋಟಿ ಕಪ್ಪು ಹಣ ಪತ್ತೆ

    ಚೆನ್ನೈ: ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸುತ್ತಿದ್ದ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ 220 ಕೋಟಿ ರೂ ಕಪ್ಪು ಹಣ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.

    ಫೆಬ್ರವರಿ 26ರಂದು ತಮಿಳುನಾಡು, ಗುಜರಾತ್ ಕೋಲ್ಕತ್ತಾ ಸೇರಿದಂತೆ ಒಟ್ಟು 20 ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಟೈಲ್ಸ್ ಮತ್ತು ಸ್ಯಾನಿಟರಿವೇರ್ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಸಂಸ್ಥೆಯ ಮೇಲೆ ದಾಳಿ ನಡೆಸಲಾಗಿದ್ದು, 8.30 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿದೆ ಎಂದು ಸಿಬಿಡಿಟಿ ಹೇಳಿಕೆ ನೀಡಿದೆ.


    ದಾಳಿ ವೇಳೆ ರಹಸ್ಯ ಕೊಠಡಿಯಲ್ಲಿ ಬಚ್ಚಿಟ್ಟಿದ್ದ ಪುಸ್ತಕದಲ್ಲಿ ಮಾರಾಟ ಮತ್ತು ಖರೀದಿಸಿರುವ ಲೆಕ್ಕದ ಬಗ್ಗೆ ಪರಿಶೀಲನೆ ನಡೆಸಿದ್ದು, ಈ ವೇಳೆ ಶೇ.50 ರಷ್ಟು ಅಕ್ರಮ ವಹಿವಾಟು ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಹಿಂದಿನ ಲೆಕ್ಕಗಳನ್ನು ಪರಿಶೀಲಿಸಿದಾಗ 120 ಕೋಟಿ ರೂ. ಆದಾಯ ತೋರಿಸುತ್ತಿದ್ದು, ಹೊರಗೆ ನಡೆದ ವಹಿವಾಟಿನಲ್ಲಿ ಬಂದ 100 ಕೋಟಿ ಆದಾಯವನ್ನು ಮರೆಮಾಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟಾರೆ 220 ಕೋಟಿ ರೂ.ವನ್ನು ಶನಿವಾರ ರಾತ್ರಿ ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಲೆಕ್ಕವಿಲ್ಲದೇ ತಮಿಳಿನಾಡಿನಿಂದ ಪುದುಚೇರಿಗೆ ನಡುಯುತ್ತಿದ್ದ ವಹಿವಾಟುಗಳನ್ನು ಪತ್ತೆ ಹಚ್ಚಲು ಕೇಂದ್ರೀಯ ನೇರ ತೆರಿಗೆ ಮಂಡಳಿ ಈಗ ತನಿಖೆ ನಡೆಸಲು ಮುಂದಾಗಿದೆ.

  • ಕಾಲಿವುಡ್ ನಟ ಸೂರ್ಯಗೆ ಕೊರೊನಾ ನೆಗೆಟಿವ್

    ಕಾಲಿವುಡ್ ನಟ ಸೂರ್ಯಗೆ ಕೊರೊನಾ ನೆಗೆಟಿವ್

    ಚೆನ್ನೈ: ಕಾಲಿವುಡ್ ನಟ ಸೂರ್ಯರಿಗೆ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವುದಾಗಿ ಅವರ ಸಹೋದರ ನಟ ಕಾರ್ತಿಕ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಚಾರವಾಗಿ ಕಾರ್ತಿಕ್, ಅಣ್ಣ ಮನೆಗೆ ಹಿಂದಿರುಗಿದ್ದಾರೆ ಮತ್ತು ಎಲ್ಲರೂ ಕ್ಷೇಮವಾಗಿದ್ದಾರೆ. ಕೆಲವು ದಿನಗಳ ಕಾಲ ಕ್ವಾರೆಂಟೈನ್‍ನಲ್ಲಿಯೇ ಇರಲಿದ್ದಾರೆ. ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಹಾರೈಕೆಗಾಗಿ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನೂ ತಮಿಳಿನಲ್ಲಿ ಟ್ವೀಟ್ ಮಾಡಿರುವ ಸೂರ್ಯ, ಕೋವಿಡ್ ಪಾಸಿಟಿವ್ ವರದಿಯಿಂದ ಚಿಕಿತ್ಸೆಗೆ ಒಳಗಾಗಿದ್ದ ನಾನು ಇದೀಗ ಕ್ಷೇಮವಾಗಿದ್ದೇನೆ. ಕೊರೊನಾದಿಂದ ಜೀವನ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ನಾವು ಭಯದಿಂದ ಇರಲು ಸಾಧ್ಯವಿಲ್ಲ. ಜೀವನದಲ್ಲಿ ಬರುವುದನ್ನು ಸ್ವೀಕರಿಸೋಣ, ನಾವು ಇನ್ನೂ ಜಾಗರೂಕರೂಕತೆಯಿಂದ ಮತ್ತು ಸುರಕ್ಷತೆಯಿಂದ ಇರಬೇಕು. ಈ ಸಮಯದಲ್ಲಿ ನನ್ನ ಜೊತೆಯಾಗಿ ನಿಂತ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಪ್ರೀತಿಗೆ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಅಮೆಜಾನ್ ಪ್ರೈಮ್ ಸನಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿತ್ತು.

  • ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಮಹಿಳೆ!

    ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಬೆಂಕಿ ಹಚ್ಚಿಕೊಂಡ ಮಹಿಳೆ!

    ಚೆನ್ನೈ: ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ಬಂಧಿಸಲು ಬಂದ ವಿಚಾರ ತಿಳಿದ ಮಹಿಳೆ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವ ಘಟನೆ ತಮಿಳು ನಗರದ ಬೆಸೆಂಟ್ ನಗರದಲ್ಲಿ ನಡೆದಿದೆ. ಮಹಿಳೆಯನ್ನು ಇದೀಗ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮಹಿಳೆಯನ್ನು ಉಷಾ ಮತ್ತು ಆಕೆಯ ಪತಿಯನ್ನು ರತ್ನಂ ಎಂದು ಗುರುತಿಸಲಾಗಿದೆ. ಅಕ್ರಮ ಮದ್ಯ ಮಾರಾಟ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೂ 12ಕ್ಕೂ ಅಧಿಕ ಪ್ರಕರಣಗಳು ಈಗಾಗಲೇ ದಾಖಲಾಗಿದೆ. ಹಾಗಾಗಿ ಪೊಲೀಸರ ತಂಡ ಉಷಾಳನ್ನು ಬಂಧಿಸಲು ಒಡೈಕುಪ್ಪಂಗೆ ಹೋಗಿದೆ. ಈ ವಿಚಾರ ತಿಳಿದ ಮಹಿಳೆ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ತಾನು ಧರಿಸಿದ್ದ ಉಡುಪನ್ನು ಹರಿದು ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣ ಆಕೆಯ ಮೇಲೆ ಗೋಣಿ ಚೀಲವನ್ನು ಹೊದಿಸಿ ನೀರು ಸುರಿದಿದ್ದಾರೆ. ಈ ಮೂಲಕ ಬೆಂಕಿ ನಂದಿಸಿದ್ದಾರೆ.

    ಇದೀಗ ಆಕೆಗೆ ಕಿಲ್ಪಾಕ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹಿಳೆಯ ದೇಹ ಶೇ.50 ರಷ್ಟು ಭಾಗ ಸುಟ್ಟು ಹೋಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಘಟನೆಯಲ್ಲಿ ಪೊಲೀಸ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಮಹಿಳೆ ಮನೆಯಲ್ಲಿದ್ದ 37ಕ್ಕೂ ಅಧಿಕ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗುದನಾಳದಲ್ಲಿ ಚಿನ್ನ ಇಟ್ಕೊಂಡು ಬಂದವರು ಅರೆಸ್ಟ್

    ಗುದನಾಳದಲ್ಲಿ ಚಿನ್ನ ಇಟ್ಕೊಂಡು ಬಂದವರು ಅರೆಸ್ಟ್

    ಚೆನ್ನೈ: 1.42 ಕಿಲೋ ಗ್ರಾಂ ಚಿನ್ನ ಸೇರಿದಂತೆ 85 ಲಕ್ಷ ಮೌಲ್ಯದ ವಸ್ತುಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

    ಚೆನ್ನೈ ಏರ್ ಕಸ್ಟಮ್ಸ್ ಪ್ರಕಾರ ಆರೋಪಿಗಳ ಬಳಿ ಇದ್ದ 72.6 ಲಕ್ಷ ಬೆಲೆಬಾಳುವ 1.42 ಕೆಜಿ ಚಿನ್ನ ಸೇರಿದಂತೆ ಸಿಗರೇಟುಗಳು, ಸ್ಮಾರ್ಟ್ ಫೋನ್‍ಗಳನ್ನು, ಲ್ಯಾಪ್‍ಟಾಪ್ ಹಾಗೂ ಮದ್ಯ ಒಟ್ಟಾರೆ 12.4 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಫ್ಲೈಟ್ 6 ಇ 8246ನಲ್ಲಿ ದುಬೈನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಈ ಇಬ್ಬರು ಆರೋಪಿಗಳು ತಮ್ಮ ಗುದನಾಳದ ಒಳಗೆ ಚಿನ್ನದ ಪೇಸ್ಟ್‍ನನ್ನು ಮರೆಮಾಚಿಕೊಂಡಿರೋದು ಪರಿಶೀಲನೆ ನಡೆಸಿದಾಗ ತಿಳಿದು ಬಂದಿದೆ. ಜೊತೆಗೆ ಆರೋಪಿಗಳ ಲಗೇಜ್‍ನಲ್ಲಿ ಇದ್ದ ಮತ್ತಷ್ಟು ವಸ್ತುಗಳನ್ನ ಸಹ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.