ಬಿಗ್‍ಬಾಸ್ ಮನೆಯ ಕ್ಯೂಟ್ ಪೇರ್ ಅಂದರೆ ಅರವಿಂದ್, ದಿವ್ಯಾ ಉರುಡುಗ. ಕಳೆದ ಇನ್ನಿಂಗ್ಸ್ ವೇಳೆ ಈ ಮುದ್ದಾದ ಜೋಡಿ ನಡುವೆ ಇರುವ ಪ್ರೀತಿ, ಹೊಂದಾಣಿಕೆ ಹಾಗೂ ಕಾಳಜಿ ನೋಡಿ ಮನೆಮಂದಿಯೆಲ್ಲಾ ಇವರಿಬ್ಬರು ಒಂದಾದರೆ ಎಷ್ಟು ಚೆಂದ ಎಂದು ಮಾತನಾಡಿಕೊಂಡಿದ್ದರು.
ಇದೀಗ ಚಕ್ರವರ್ತಿ ಚಂದ್ರಚೂಡ್‍ರವರು ಅರವಿಂದ್, ದಿವ್ಯಾ ಬಗ್ಗೆ ತಮಗಿರುವ ಆಸೆಯನ್ನು ಹೊರಹಾಕಿದ್ದಾರೆ. ಎರಡನೇ ಇನ್ನಿಂಗ್ಸ್ ನ 9ನೇ ದಿನ ಬೆಡ್ ರೂಮ್ ಏರಿಯಾದಲ್ಲಿ ಅರವಿಂದ್, ದಿವ್ಯಾ ಉರುಡುಗ, ಚಕ್ರವರ್ತಿ, ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಕುಳಿತುಕೊಂಡಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್‍ರವರು ಸಿನಿಮಾ ಕಥೆಯನ್ನು ಹೇಳಿದ್ದಾರೆ.
ಅರವಿಂದ್, ದಿವ್ಯಾ ಉರುಡುಗ ಸಿನಿಮಾ ಮಾಡಬೇಕು. ಇವರಿಬ್ಬರಿಗೂ 10 ನಿಮಿಷದಲ್ಲಿ ಕಥೆ ಕೊಡುತ್ತೇನೆ. ಬೈಕ್ ಮೇಲೆಯೇ ಕಥೆ ಕೊಡುತ್ತೇನೆ. ನಾ ನಿನ್ನ ಮರೆಯಲಾರೆ ರೀತಿ ಇರಬೇಕು. ಎರಡು ತಿಂಗಳು ಇವರಿಬ್ಬರಿಗೂ ಟ್ರೈನಿಂಗ್ ನೀಡಿ ಮಾಡಿದರೆ ಸರಿಯಾಗಿ ಮಾಡಬಹುದು. ನಾನು ಸಿನಿಮಾವನ್ನು ನಿರ್ದೇಶಿಸುತ್ತೇನೆ. ಶಮಂತ್ ಸಂಗೀತಾ ನೀಡುತ್ತಾನೆ. ಪ್ರಶಾಂತ್ ನಿರ್ಮಾಣ ಮಾಡುತ್ತಾನೆ. ಇನ್ನೂ ಸಿನಿಮಾದ ಟೈಟಲ್ ‘ಅರ್ವಿಯಾ’ ಎಂದು ಹೇಳುತ್ತಾರೆ.
ಈ ವೇಳೆ ಶಮಂತ್ ನಾನು ಹೀರೋಯಿನ್ ತಮ್ಮ ಎಂದು ಹೇಳುತ್ತಾರೆ. ಆಗ ಚಕ್ರವರ್ತಿ ಚಂದ್ರಚೂಡ್ ನಾನು ನಿನಗೆ ಕ್ಯಾರೆಕ್ಟರ್ ನೀಡುತ್ತೇನೆ ಸುಮ್ಮನೆ ಇರು ಬಾಯಿ ಮುಚ್ಚಿಸುತ್ತಾರೆ. ಆಗ ಪ್ರಶಾಂತ್ ನಾನು ಹೀರೋ ಅಣ್ಣಾನಾ ಎಂದು ಕೇಳುತ್ತಾರೆ. ಕ್ಯಾರೆಕ್ಟರ್ ಬೇಕೆಂದರೆ ಕಥೆ ಆದ ನಂತರ ನನ್ನ ಬಳಿ ರಿಕ್ವೆಸ್ಟ್ ಮಾಡಿಕೊಂಡರೆ ಕೊಡುತ್ತೇನೆ ಎಂದು ಹೇಳುತ್ತಾ ನಗುತ್ತಾರೆ.
ಸಿನಿಮಾದಲ್ಲಿ ಬಿಗ್‍ಬಾಸ್ ಮನೆಯಲ್ಲಿ ರಿಂಗ್ ನೀಡಿ ಇಬ್ಬರು ಹೇಗೆ ಒಂದಾದರೋ ಅದೊಂದು ಎಪಿಸೋಡ್ ತೆಗೆದುಕೊಳ್ಳಬಹುದು. ನಾನು ಮಾಡೇ ಮಾಡುತ್ತೇನೆ. ಹೊರಗಡೆ ಹೋಗಿದ ತಕ್ಷಣ ನೀವು ಎರಡು ತಿಂಗಳಿನಲ್ಲಿ ರೆಡಿಯಾಗಬೇಕು. ಅರವಿಂದ್‍ಗೆ ಆ್ಯಕ್ಟಿಂಗ್ ಕ್ಲಾಸ್ ನಾನೇ ತೆಗೆದುಕೊಳ್ಳುತ್ತೇನೆ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ. ಇದನ್ನೂ ಓದಿ: ನೀನು ನನಗೆ ಅಡ್ವೈಸ್ ಮಾಡಬೇಡ: ನಿಧಿಗೆ ಶುಭಾ ಟಾಂಗ್
ಬಿಗ್‍ಬಾಸ್ ಸೀಸನ್-8ರ ವಾರದ ಸಂಚಿಕೆಯಲ್ಲಿ ಮೊದಲ ಬಾರಿಗೆ ದೊಡ್ಮನೆ ಹೊತ್ತಿ ಉರಿದಿದೆ. ಚಕ್ರವರ್ತಿ ಚಂದ್ರಚೂಡ್‍ರವರು ಲ್ಯಾಗ್ ಮಂಜು ವಿರುದ್ಧ ಕಿಚ್ಚನ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲನೇಯದಾಗಿ ಮಾತು ಆರಂಭಿಸಿದ ಚಕ್ರವರ್ತಿಯವರು, ನನಗೆ ಮೂರು ವಿಷಯ ಕಾಡುತ್ತಿದೆ. ಮಂಜುರವರು ಎಲಿಮಿನೇಷನ್ ವೇಳೆ ಹಳೆಯದನ್ನು ಯಾವುದನ್ನೂ ಮಾತನಾಡಬಾರದು ಬೆಂಕಿಯಲ್ಲಿ ಸುಟ್ಟಾಗಿದೆ ಎಂದರು. ನಂತರ ನನ್ನ ತಂದೆ, ತಾಯಿ ಹಳ್ಳಿಯ ಮುಗ್ಧ ಜನ ನನಗೆ ಅವರು ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಕೆಟ್ಟವರು ಅವರ ಜೊತೆ ಸೇರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ನಾನು ಅವರ ತಂದೆ, ತಾಯಿಗೆ ಗೌರವ ಕೊಡುತ್ತೇನೆ. ಅವರು ನನ್ನ ಜೊತೆ ಸೇರಬೇಡ ಎಂದ ಮೇಲೆ ಮಂಜುರವರು ನನಗೆ ಅಣ್ಣಾ ಎಂದು ಕರೆಯಬಾರದು ಎಂದು ಚಕ್ರವರ್ತಿಯವರು ಕೆಂಡಕಾರಿದ್ದಾರೆ.
ನನ್ನ ತಂದೆ ತಾಯಿ ಕೂಡ ನನಗೆ ಒಂದು ಹೇಳಿ ಕಳುಹಿಸಿದ್ದಾರೆ, ಎಲಿಮಿನೇಷನ್ ರೌಂಡ್ ವೇಳೆ ಹೇಳಬೇಕಾಗಿತ್ತು. ಆದರೆ ಈಗ ಟೈಮ್ ಬಂದಿದೆ ಎಂದು ಕೊಳ್ಳುತ್ತೇನೆ. ಕರ್ನಾಟಕದಲ್ಲಿ ಸುಮಾರು 363ಕ್ಕೂ ಹೆಚ್ಚು ಭಾಷೆಯ ಸೊಗಡುಗಳಿದೆ. ಈ ಎಲ್ಲ ಭಾಷೆಯ ಸೊಗಡಿನಲ್ಲಿಯು ನುಗ್ಗೆ ಕಾಯಿಗೂ ಹಾಗೂ ಮಾವಿನ ಹಣ್ಣಿಗೂ ಒಂದು ಸಂಬಂಧವಿದೆ. ಒಂದು ಹೆಣ್ಣು ಮಗಳಿಗೆ ನಿನ್ನೆ ನುಗ್ಗೆ ಕಾಯಿ ತಿನ್ನಿಸಿದೆ ಇಂದು ಮಾವಿನ ಹಣ್ಣು ತಿನ್ನಿಸುತ್ತಿದ್ದಾನೆ ಎಂದರೆ ಇದು ಸಿನಿಮಾದಲ್ಲಿ ಬಂದಿರುವುದು ಮಾತ್ರವಲ್ಲ ಒಂದು ಸೈಟಿಫಿಕ್ ರೀಸನ್ ಇದೆ. ಎಲ್ಲ ಪ್ರಾಂತ್ಯಗಳಲ್ಲಿಯೂ ಇದು ಗಂಡ ಹೆಂಡತಿಯರ ನಾಟಕ.
ನಂತರ ಬಾರೇ ಸರಸಕ್ಕೆ ಎಂದು ಸ್ನೇಹಿತರನ್ನು ಕರೆಯುವುದಿಲ್ಲ. ಅಲ್ಲದೇ ನನ್ನನ್ನೇ ಸ್ವಲ್ಪದಿನ ಭಾವನಾಗಿ ಮಾಡಿಕೊಂಡಿದ್ದರು. ನನ್ನ ಜೊತೆ ಕೊಟ್ಟು ತೆಗೆದುಕೊಳ್ಳುವ ವಿಷಯ ಕೂಡ ನಡೆದಿತ್ತು. ಲೇ ಹೆಂಡ್ತಿ ಬಾರೇ ಎಂದು ಮಾತನಾಡಿದ್ದು, ಇದನ್ನು ಜಗತ್ತು ಮಾತನಾಡಿದೆ, ಕರ್ನಾಟಕವೂ ಮಾತನಾಡಿದೆ, ನಾನು ಮಾತನಾಡಿದ್ದೇನೆ. ಒಂದು ಹೆಣ್ಣನ್ನು ಒಂದು ಶೋ ಗೋಸ್ಕರ ಈ ಮನುಷ್ಯ ಹೇಗೆ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ? ಅವರರವರ ಇಷ್ಟ ಇರಬಹುದು, ಆದರೆ ನಾವು ಅದರ ಪಾಲುದಾರರಲ್ಲ. ಆದರೆ ನಾನು ಸದಸ್ಯ ಎಂದ ಮೇಲೆ ನಾನು ನನ್ನ ಅಭಿಪ್ರಾಯವನ್ನು ಒಳಗಡೆಯು ಹೇಳಿದ್ದೇನೆ. ಇದು ಕೃತಕವಾಗಿ ಕಾಣಿಸುತ್ತಿದೆ ಅಂತ ಅದನ್ನೇ ಹೊರಗಡೆಯು ಹೇಳಿದ್ದೇನೆ.
ಇದೇ ಮಂಜು ಪಾವಗಡರವರಿಗೆ ನೀನು ಹಳ್ಳಿ ಹಕ್ಕಿ, ಹಳ್ಳಿ ಪ್ರತಿಭೆ ತೆನಾಲಿ ರಾಮ ಆಗಬೇಕು. ಇದನ್ನು ಮಾಡಬೇಡ ಎಂದು ಹೇಳಿದ್ದೇನೆ. ಅಲ್ಲದೇ ನಿನ್ನೆಯಿಂದ ನನಗೆ ನೀನು ಹಾಗೇ ಹೋಗಿ ಬಿಡು ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಗ್‍ಬಾಸ್ ಯಾರಪ್ಪನ ಆಸ್ತಿ. ಬಿಗ್‍ಬಾಸ್‍ನನ್ನು ಯಾರು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಕೆಂಡಕಾರಿದ್ದಾರೆ.
ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್‍ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ. ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ. ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.
ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್‍ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.
ನನಗೆ ಈ ಮನೆಯಲ್ಲಿ ಮುದ್ದಾದ ಪ್ರೀತಿಯ ಜೋಡಿ ಕಂಡಿದೆ. ಒಂದು ಮುದ್ದಾದ ಸ್ನೇಹದ ಜೋಡಿ ಕಂಡಿದೆ, ಒಂದಷ್ಟು ವಿಶ್ವಾಸಗಳು ಕಂಡಿದೆ, ತಂಗಿ ಕಂಡಿದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ ಆಟದ ಕಾರಣಕ್ಕೆ ನನ್ನ ಮಾನವೀಯತೆಯನ್ನು ನನ್ನ ಓದನ್ನು ನನ್ನ ಜ್ಞಾನವನ್ನು ಕಳೆದುಕೊಳ್ಳಲು ತಯಾರಿಲ್ಲ. ಅವರ ತಂದೆ, ತಾಯಿ ಹೇಳಿ ಕಳುಹಿಸಿದ್ದಾರೆ ಅಲ್ವಾ ಸರ್ ನಾನು ಎಷ್ಟು ಸಂಗಡ ಈ ಮನೆಯಲ್ಲಿ ಇರುತ್ತೇನೋ ಅಷ್ಟು ಹೊತ್ತು ನನ್ನ ಸಂಗಡ ಮಾಡಬಾರದು. ಗೌರವವಾರ್ಥವಾಗಿ ಹೇಳುತ್ತಿದ್ದೇನೆ ಬಿಗ್‍ಬಾಸ್ ಮನೆ ಯಾರಿಗೂ ಸೇರಿದ್ದಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್‍ರವರು ಈ ಮನೆಯ ಸದಸ್ಯರು, ಈ ಮನೆಯಲ್ಲಿ ಯಾವುದೇ ಕೃತಕತೆ ನಡೆದರೂ ನನ್ನ ಯುದ್ಧ ಆರಂಭ. ಅದು ಒಂದು ಕ್ಷಣ ಇದ್ದರೂ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಇಲ್ಲಿವರೆಗೂ ಅವರನ್ನು ಏಕವಚನದಲ್ಲಿ ಕರೆದಿಲ್ಲ – ದಿವ್ಯಾ
ರಾಜಕೀಯದಲ್ಲಿ ಖಾತೆ ಹಂಚಿಕೆ ಸರ್ವೇಸಾಮಾನ್ಯವಾಗಿ ನಡೆಯುತ್ತದೆ. ಆದ್ರೆ ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್‍ರವರು ಮನೆಯ ಸ್ಪರ್ಧಿಗಳಿಗೆ ಯಾವ ಖಾತೆ ಸೂಟ್ ಆಗುತ್ತದೆ ಎಂದು ತಿಳಿಸಿದ್ದಾರೆ.
ಕಣ್ಮಣಿ ಬಿಗ್‍ಬಾಸ್ ಸಂಪುಟದಲ್ಲಿ ಯಾವ ಖಾತೆ ಯಾರಿಗೆ ಕೊಡಬಹುದು ಎಂದು ಚಕ್ರವರ್ತಿಯವರಿಗೆ ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಪ್ರಿಯಾಂಕರಿಂದ ಶುರು ಮಾಡಿದ ಚಕ್ರವರ್ತಿಯವರು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಗೆ ನೀಡುತ್ತೇನೆ ಏಕೆಂದರೆ ಅವರು ತುಂಬಾ ಸಂಸ್ಕøತಿ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ವಸತಿ ಮತ್ತು ಆಹಾರ ಇಲಾಖೆಯನ್ನು ಶುಭಾಗೆ ನೀಡುತ್ತೇನೆ ಕಾರಣ ಇವರು ವಸತಿ ಕಡೆಗೂ ಜಾಸ್ತಿ ಹೋಗುವುದಿಲ್ಲ ಹಾಗೂ ಆಹಾರದ ಕಡೆಗೂ ಜಾಸ್ತಿ ಹೋಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಅದು ಅತೀ ದೊಡ್ಡ ಖಾತೆಯಾಗಿರುವುದರಿಂದ ಅದು ಅವರಿಗಿರಲಿ ಎಂದು ಬಯಸುತ್ತೇನೆ.
ಧರ್ಮದತ್ತಿ ಅಂದರೆ ಧಾರ್ಮಿಕ ಇಲಾಖೆಯನ್ನೇ ವೈಷ್ಣವಿಗೆ ನೀಡುತ್ತೇನೆ. ಜೀವನ ಶೂನ್ಯ, ದೇವಸ್ಥಾನ ಮುಜರಾಯಿ ಇಲಾಖೆಯನ್ನು ನೀಡಬೇಕಾಗುತ್ತದೆ. ಕಂದಾಯ ಇಲಾಖೆಯನ್ನು ನಿಧಿಗೆ ನೀಡುತ್ತೇನೆ. ಅವರ ಮೈಂಡ್ ಯಾವಾಗಲೂ ರೆವೆನ್ಯೂ, ಲೆಕ್ಕಾಚಾರನ್ನೇಲ್ಲಾ ಬಹಳ ಚೆನ್ನಾಗಿ ಮಾಡುತ್ತಾರೆ. ಇನ್ನೂ ಶಮಂತ್‍ಗೆ ಖಾತೆ ಕೊಡದೇ ಸದ್ಯಕ್ಕೆ ಬೀಜ ನಿಗಮ ನಿಯಮಿತ ನೀಡುತ್ತೇನೆ. ಇವನು ಕೃಷಿ, ಬೀಜ ಹೇಗೆ ಹಾಕಬೇಕು, ಹೇಗೆ ಬೆಳೆಸಬೇಕು ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುತ್ತಾರೆ.
ರಘುಗೆ ಶೇ. 100 ಅಬಕಾರಿಯನ್ನು ನೀಡುತ್ತೇನೆ. ಬೇರೆ ಚೇಂಜ್ ಮಾಡುವುದಕ್ಕೆ ಹೋಗುವುದಿಲ್ಲ. ಅವರ ಮಾತು, ನಡೆ, ನುಡಿ ಕಣ್ಣೋಟ ಇಲ್ಲದರಲ್ಲಿಯೂ ನಶೆ ತುಂಬಿರುತ್ತದೆ. ಮಂಜುಗೆ ಮನೆಯನ್ನೆಲ್ಲಾ ಸಂಬಾಳಿಸಿ ಯಾವುದಾದರೂ ತಪ್ಪು ನಡೆದರೂ ಸರಿ ಮಾಡಿಕೊಂಡು, ವಾಕಿಂಗ್ ಸ್ಟಿಕ್‍ನಲ್ಲಿ ಏನು ಮಾಡಬೇಕು, ಹಾಲ್‍ನಲ್ಲಿ ಏನು ಮಾಡಬೇಕು, ಎಲ್ಲಿ ಏನು ಮಾಡಬೇಕು ಎಂಬುವುದನ್ನೆಲ್ಲಾ ಬಹಳ ಚೆನ್ನಾಗಿ ನಿಭಾಯಿಸುತ್ತಾರೆ ಹೀಗಾಗಿ ಅವರಿಗೆ ಗೃಹ ಇಲಾಖೆ ಖಾತೆ ನೀಡುತ್ತೇನೆ.
ದಿವ್ಯಾ ಸುರೇಶ್‍ರವರಿಗೆ ಪ್ರವಾಸೋದ್ಯಮ ನೀಡುತ್ತೇನೆ. ಅವರದ್ದು ಪೂರ್ತಿ ಪ್ರವಾಸವಿರುತ್ತದೆ. ಹುಡುಕಿದರೂ ಕಾಣುವುದಿಲ್ಲ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಿಗರಿ ಮರಿ ತರ ನಡೆಯುತ್ತಿರುತ್ತದೆ. ನಮ್ಮ ಪ್ರಶಾಂತ್‍ಗೆ ಕಾನೂನು ಮತ್ತು ಸಂಸದೀಯ ಮಂಡಳಿ. ಬೇರೆ ಖಾತೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಅವರಿಗೆ ಕಾನೂನು ಹಾಗೂ ಸಂಸದೀಯ ಮಂಡಳಿ. ಅರವಿಂದ್ ಕೆಪಿಗೆ ಐದರೂ ಖಾತೆ ನೀಡಿ ಉಪಮುಖ್ಯಮಂತ್ರಿ ಮಾಡುತ್ತೇನೆ. ಯಾವಾಗ ಯಾವ ಖಾತೆಗೆ ಬೇಕಾದರೂ ಜಂಪ್ ಆಗಬಹುದು.
ಕೊನೆಯದಾಗಿ ನನಗೆ ಮಹಿಳಾ ಮತ್ತು ಮಕ್ಕಳಾ ಇಲಾಖೆಯನ್ನು ಕೊಟ್ಟುಕೊಳ್ಳುತ್ತೇನೆ. ನಾನು ಅದರಲ್ಲಿ ಬಹಳ ಎಕ್ಸ್‍ಪರ್ಟ್ ಆಗಿದ್ದೇನೆ. ಮುಖ್ಯಮಂತ್ರಿ ಸ್ಥಾನವನ್ನು ಬಿಗ್‍ಬಾಸ್‍ಗೆ ಬಿಟ್ಟಿದ್ದೇನೆ. ಅವರೊಟ್ಟಿಗೆ ನನಗೆ ಫೈಟ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.