Tag: ಪಬ್ಲಿಕ್ ಟಿವಿ Car

  • ಬೈಕ್, ಸ್ಕೂಟರ್‌ಗೆ ಕಾರು ಡಿಕ್ಕಿ – ಸವಾರರಿಗೆ ಗಂಭೀರ ಗಾಯ

    ಬೈಕ್, ಸ್ಕೂಟರ್‌ಗೆ ಕಾರು ಡಿಕ್ಕಿ – ಸವಾರರಿಗೆ ಗಂಭೀರ ಗಾಯ

    ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಬೈಕ್ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಕೊಡಗಿನ ವಿರಾಜಪೇಟೆಯ ಪಂಜರುಪೇಟೆಯಲ್ಲಿ ನಡೆದಿದೆ. ಸದ್ಯ ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರಿಗೂ ಬಲವಾಗಿ ಪೆಟ್ಟಾಗಿದ್ದು, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಬ್ಬರು ಪ್ರಥಮ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಗಿದೆ.

    ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆ ಹೋಗುತ್ತಿದ್ದ ಸ್ಕೂಟರ್ ಹಾಗೂ ಬೈಕ್‍ಗೆ, ಗೋಣಿಕೊಪ್ಪ ಕಡೆಯಿಂದ ಬರುತ್ತಿದ್ದ ಕಾರು, ಪಟ್ಟಣದ ಪಂಜಾರುಪೇಟೆಯಲ್ಲಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಕೂಟರ್ ಚಾಲಕ ಪೊನ್ನಂಪೇಟೆ ವಕೀಲ ಪಿ.ಕೆ.ರವಿಂದ್ರ ಅವರ ಎಡಗಾಲಿಗೆ ಬಲವಾದ ಪೆಟ್ಟಾಗಿದೆ.

    ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸಮೀಪದ ಕಿರುಮಕ್ಕಿಯ ನಿವಾಸಿಯಾದ ಬೈಕ್ ಸವಾರ ಅಶ್ವಿನ್ ಕುಮಾರ್ ಗೆ ಕಾಲು ಮತ್ತು ತಲೆ ಭಾಗಕ್ಕೆ ಪೆಟ್ಟಾಗಿದ್ದು ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

    ಈ ಸಂಬಂಧ ಪ್ರಕರಣ ದಾಖಲಿಸಿದ ವಿರಾಜಪೇಟೆ ನಗರ ಠಾಣೆ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರನ್ನು ವಶಪಡಿಸಿಕೊಂಡು ಕಾರು ಚಾಲಕ ಎಸ್.ವಿನೋದ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿರುವುದಾಗಿ ನಗರ ಠಾಣಾಧಿಕಾರಿ ಜಗದೀಶ್ ದೂಳ್‍ಶೆಟ್ಟಿ ತಿಳಿಸಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಸ್ಥಳದಲ್ಲೇ ಇಬ್ಬರ ಸಾವು

    ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಸ್ಥಳದಲ್ಲೇ ಇಬ್ಬರ ಸಾವು

    ಧಾರವಾಡ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡ ಸಮೀಪದ ಕೋಟೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.

    ಬೆಳಗಿನ ಜಾವ 3 ಗಂಟೆಗೆ ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು, ಏಕಾಎಕಿ ರಸ್ತೆ ಪಕ್ಕ ಪಲ್ಟಿಯಾಗಿದೆ. ಈ ವೇಳೆ ಧಾರವಾಡ ನಗರದ ಮುಜಮ್ಮಿಲ್ಲ ಹಾಗೂ ಮಹಝ ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಕಾರಿನಲ್ಲಿದ್ದ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಸಲಗುತ್ತಿದೆ. ಘಟನೆ ಸಂಬಂಧ ಇದೀಗ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಒಂದು ಬಾರಿ ಚಾರ್ಜ್ ಮಾಡಿದ್ರೆ 300 ಕಿ.ಮೀ – ಸೋಲಾರ್‌ ಕಾರ್ ಕಂಡು ಹಿಡಿದ ರೈತ

    ಭುವನೇಶ್ವರ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ರೈತನೋರ್ವ ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ನಾಲ್ಕು ಚಕ್ರದ ವಾಹನವನ್ನು ತಯಾರಿಸಿದ್ದಾರೆ.

    ಮಯೂರ್ ಭಂಜ್‍ನ ಕಾರಂಜಿಯಾ ಉಪವಿಭಾಗದ ಸುಶೀಲ್ ಅಗರ್‍ವಾಲ್ ಎಂಬವರು 850 ವ್ಯಾಟ್ಸ್ ಮೋಟಾರ್ ಹಾಗೂ 100 ಎಎಚ್/54 ವೋಲ್ಟ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಕಾರನ್ನು ತಯಾರಿಸಿದ್ದಾರೆ. ಅಲ್ಲದೆ ಒಂದು ಬಾರಿ ಚಾರ್ಜ್ ಮಾಡಿದರೆ ಈ ವಾಹನ 300 ಕಿ.ಮೀವರೆಗೂ ಚಲಿಸುತ್ತದೆ.

    ಪುಸ್ತಕಗಳನ್ನು ಮತ್ತು ಯೂಟ್ಯೂಬ್ ವೀಡಿಯೋಗಳನ್ನು ನೋಡುವ ಮೂಲಕ ಲಾಕ್‍ಡೌನ್ ಸಮಯದಲ್ಲಿ ಸುಶೀಲ್ ಅಗರ್‍ವಾಲ್ ಈ ಕಾರನ್ನು ಮನೆಯಲ್ಲಿಯೇ ತಯಾರಿಸಿದ್ದಾರೆ. ಜೊತೆಗೆ ಕಾರಿನ ಬ್ಯಾಟರಿಯನ್ನು ಎಂಟೂವರೆ ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ತಿಳಿಸಿದ್ದಾರೆ.

    ನಾನು ಮನೆಯಲ್ಲಿಯೇ ವರ್ಕ್ ಶಾಪ್ ಹೊಂದಿದ್ದು, ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಕಾರನ್ನು ತಯಾರಿಸಲು ಆರಂಭಿಸಿದೆ. ಇದು 300 ಕಿಮೀ ವರೆಗೂ ಚಲಿಸುತ್ತದೆ. ಅಲ್ಲದೆ ಈ ವಾಹನದ ಬ್ಯಾಟರಿಯು ನಿಧಾನವಾಗಿ ಚಾರ್ಜ್ ಆಗುತ್ತದೆ. ಅಲ್ಲದೆ ಈ ಬ್ಯಾಟರಿ ಹತ್ತು ವರ್ಷ ಗ್ಯಾರಂಟಿ ಹೊಂದಿದೆ ಎಂದು ಸುಶೀಲ್ ಅಗರ್‍ವಾಲ್ ಹೇಳಿದ್ದಾರೆ. ಅಲ್ಲದೆ ತಮ್ಮ ಮನೆಯಲ್ಲಿರುವ ವರ್ಕ್‍ಶಾಪ್‍ನಲ್ಲಿ ಮೋಟಾರ್ ವಿಂಡಿಂಗ್, ಎಲೆಕ್ಟ್ರಿಕಲ್ ಫಿಟ್ಟಿಂಗ್ ಮತ್ತು ಚಾಸಿಸ್ ಎಲ್ಲ ಕೆಲಸಗಳನ್ನು ಇಬ್ಬರು ಮೆಕಾನಿಕ್ಸ್ ಮತ್ತು ಸ್ನೇಹಿತರೊಬ್ಬರ ಸಹಾಯದಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಲಾಕ್‍ಡೌನ್ ವೇಳೆ ನಾನು ಮನೆಯಲ್ಲೇ ಇದ್ದಿದ್ದರಿಂದ ಬೇಸರವಾಗುತ್ತಿತ್ತು ಈ ವೇಳೆ ಕಾರನ್ನು ನಿರ್ಮಿಸಲು ಯೋಚಿಸಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಇಂಧನ ಬೆಲೆ ಹೆಚ್ಚಾಗುತ್ತದೆ ಎಂದು ನನಗೆ ತಿಳಿದಿತ್ತು. ಹಾಗಾಗಿ ನಾನು ಸೋಲಾರ್ ಬ್ಯಾಟರಿ ಮೂಲಕ ಚಲಿಸುವ ಕಾರನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ನುಡಿದರು.